ಸಂಡೂರು ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯದಿಂದ ಸಮರ್ಪಕ ನೀರು ಸರಬರಾಜುಗೆ ತೊಂದರೆ ಸಮಸ್ಯೆಗಳನ್ನು ಪರಿಹರಿಸಲು ಜನ ಸಂಗ್ರಾಮ್ ಪರಿಷತ್ ಮನವಿ.

0
203

ಇತ್ತಿಚಿನ ದಿನಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯ ಉಂಟಾಗುತ್ತಿರುವುದರಿಂದ ನಾಗರೀಕರು ರೋಸಿ ಹೋಗಿದ್ದಾರೆ ಇದಕ್ಕೆ ಕಾರಣ ಐಪಿಡಿಎಸ್ ಯೋಜನೆಯಡಿಯಲ್ಲಿ ಎಳೆದಿರುವಂತಹ ಎಬಿಸಿ ಕೇಬಲ್ ಗಳು (ಎಫ್4) ಮರಾಠ ಸಮಾಜದ ಹತ್ತಿರ, (ಎಫ್7) ಜೆಸ್ಮಾಂ ಕಛೇರಿ ಹಿಂಬಾಗ ಮತ್ತು (ಎಫ್2) ಎಸ್‍ಬಿಐ ಬ್ಯಾಂಕ್ ಹತ್ತಿರ ಸುಟ್ಟು ಹೋಗಿರುವುದರಿಂದ ಈ ಮೂರು ಮಾರ್ಗದ ಕೇಬ¯ನ್ನು ಬದಲಾಯಿಸದೆ/ದುರಸ್ಥಿಗೊಳಿಸದೆ ಎಫ್2 ಮತ್ತು ಎಫ್4 ಮೇಲೆ ಲೋಡ್ ಹಾಕಿರುವುದರಿಂದ ಲೈನ್ ಫಾಲ್ಟ್ ಬಂದಾಗ/ಎಲ್‍ಸಿ ತೆಗೆದುಕೊಂಡಾಗ ಇಡೀ ಅರ್ಧ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ ಕೂಡಲೆ ಸುಟ್ಟು ಹೋಗಿರುವ 3 ಕೇಬಲ್ ಗಳನ್ನು ದುರಸ್ಥಿಗೊಳಿಸಬೇಕು

ಇನ್ನು ಪಟ್ಟಣಕ್ಕೆ ತಾರಾನಗರದಲ್ಲಿರುವ ನಾರಿಹಳ್ಳ ಜಲಾಶಯದಿಂದ ನೀರು ಸರಬರಾಜು ಮಾಡುವ ನೀರು ಶುದ್ದಿಕರಣ ಘಟಕಕ್ಕೆ ತೋರಣಗಲ್ಲು ಸ್ಟೇಷನ್‍ನಿಂದ ಎಕ್ಸ್‍ಪ್ರೆಸ್ ಫೀಡರ್ ನ್ನು ಎಂ.ವೈ.ಘೋರ್ಪಡೆಯವರು ಪ್ರತ್ಯೇಕವಾಗಿ ಲೈನನ್ನು ಎಳೆಸಿ ಈ ಘಟಕಕ್ಕಾಗಿ ಮೀಸಲಿಡುವಂತೆ ಆದೇಶಿಸಿದ್ದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ಎಕ್ಸಪ್ರೆಸ್ ಫೀಡರ್ ನಿಂದ ಬನ್ನಿಹಟ್ಟಿ, ತಾಳೂರು, ಗಂಗಲಾಪುರ ಭಾಗದಲ್ಲಿನ ಕರ್ಮಷಿಯಲ್, ಉದ್ದಿಮೆಗಳಿಗೆ ಇದೇ ಫೀಡರ್‍ಗೆ ಸಂಪರ್ಕ ನೀಡಿರುವುದರಿಂದ ಪದೇ ಪದೇ ಲೈನ್ ಫಾಲ್ಟ್ ಬರುತ್ತಿದ್ದುದರಿಂದ ಪಟ್ಟಣಕ್ಕೆ ಸಮರ್ಪಕವಾಗಿ ನೀರು ಸರಬಾರಜು ಆಗುತ್ತಿಲ್ಲ, ಕೂಡಲೆ ತಾವುಗಳು ಕುಡಿಯುವ ನೀರಿನ ಘಟಕಕ್ಕೆ ಮೀಸಲಿರಿಸಿದ ಫೀಡರ್ ಮಾರ್ಗಕ್ಕೆ ಜೋಡಣೆ ಮಾಡಿದ ಎಲ್ಲಾ ಸಂಪರ್ಕಗಳಿಗೆ ಪ್ರತ್ಯೆಕ ಮಾರ್ಗವನ್ನು ಹಾಕಬೇಕು ಅಲ್ಲಿಯವೆರೆಗೆ ಈ ಎಲ್ಲಾ ಸಂಪರ್ಕಗಳನ್ನು ಬೇರೆಯ ಫೀಡರ್ ಗೆ ಬದಲಾಯಿಸಿದರೆ ಸಂಡೂರು ಪಟ್ಟಣಕ್ಕೆ ನಿರಂತರವಾಗಿ ನೀರು ಸರಬರಾಜು ಆಗುತ್ತದೆಯಲ್ಲದೆ ಪಟ್ಟಣದಲ್ಲಿ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ

ಈ ಮೇಲಿನ ಎರಡು ಅಂಶಗಳನ್ನು ತಕ್ಷಣಕ್ಕೆ ತಾವುಗಳು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಪರಿಹರಿಸಿದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಪಟ್ಟಣದಲ್ಲಿ ಪದೇ ಪದೇ ವಿದ್ಯುತ್ ಸಮಸ್ಯೆಗೆ ಪರಿಹಾರವಾದಂತಾಗುತ್ತದೆ.
ಈಗಾಗಲೆ ಪಟ್ಟಣದ ಸಾರ್ವಜನಿಕರು ರೋಸಿ ಹೋಗಿದ್ದು ಒಂದು ವೇಳೆ ಎರಡು ಅಂಶಗಳನ್ನು ತುರ್ತಾಗಿ 15 ದಿನಗಳೊಳಗಾಗಿ ಪರಿಹರಿಸದೇ ಹೋದಲ್ಲಿ ತಮ್ಮ ಕಛೇರಿಯೆದುರು ಪಟ್ಟಣದ ಸಾರ್ವಜನಿಕರೊಂದಿಗೆ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆಯೆಂದು ಸಂಡೂರು ಜನ ಸಂಗ್ರಾಮ್ ಪರಿಷತ್ ಪದಾಧಿಕಾರಿಗಳಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು
ಗು.ವಿ.ಸ.ಕಂಪನಿ
ಸಂಡೂರು,ಇವರಿಗೆ ಮನವಿಪತ್ರವನ್ನು ಸಲ್ಲಿಸಿದ್ದಾರೆ

LEAVE A REPLY

Please enter your comment!
Please enter your name here