Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಕೋಲಾರ Archives - Hai Sandur kannada fortnightly news paper https://haisandur.com/category/ಕೋಲಾರ/ Hai Sandur News.Karnataka India Fri, 12 Nov 2021 13:48:00 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಕೋಲಾರ Archives - Hai Sandur kannada fortnightly news paper https://haisandur.com/category/ಕೋಲಾರ/ 32 32 ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಗೆ ಡಿಸೆಂಬರ್ 10 ರಂದು ಮತದಾನ; ಡಾ||ಆರ್.ಸೆಲ್ವಮಣಿ https://haisandur.com/2021/11/12/%e0%b2%b5%e0%b2%bf%e0%b2%a7%e0%b2%be%e0%b2%a8-%e0%b2%aa%e0%b2%b0%e0%b2%bf%e0%b2%b7%e0%b2%a4%e0%b3%8d-%e0%b2%a6%e0%b3%8d%e0%b2%b5%e0%b3%88%e0%b2%b5%e0%b2%be%e0%b2%b0%e0%b3%8d%e0%b2%b7%e0%b2%bf%e0%b2%95/ https://haisandur.com/2021/11/12/%e0%b2%b5%e0%b2%bf%e0%b2%a7%e0%b2%be%e0%b2%a8-%e0%b2%aa%e0%b2%b0%e0%b2%bf%e0%b2%b7%e0%b2%a4%e0%b3%8d-%e0%b2%a6%e0%b3%8d%e0%b2%b5%e0%b3%88%e0%b2%b5%e0%b2%be%e0%b2%b0%e0%b3%8d%e0%b2%b7%e0%b2%bf%e0%b2%95/#respond Fri, 12 Nov 2021 13:47:56 +0000 https://haisandur.com/?p=22111 ಕೋಲಾರ, ನವೆಂಬರ್ 12: ಕರ್ನಾಟಕ ವಿಧಾನ ಪರಿಷತ್‍ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ 6 ತಾಲ್ಲೂಕುಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲ್ಲೂಕುಗಳನ್ನು ಒಳಗೊಂಡಿರುತ್ತದೆ. ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಯ ಮತದಾನವನ್ನು ಡಿಸೆಂಬರ್ 10 ರಂದು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ||ಆರ್.ಸೆಲ್ವಮಣಿ ಅವರು ತಿಳಿಸಿದರು.ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಪರಷತ್ ನಂ.18ರ ಕೋಲಾರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ದ್ವೈವಾರ್ಷಿಕ ಚುನಾವಣೆ 2021 ರ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ […]

The post ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಗೆ ಡಿಸೆಂಬರ್ 10 ರಂದು ಮತದಾನ; ಡಾ||ಆರ್.ಸೆಲ್ವಮಣಿ appeared first on Hai Sandur kannada fortnightly news paper.

]]>
ಕೋಲಾರ, ನವೆಂಬರ್ 12: ಕರ್ನಾಟಕ ವಿಧಾನ ಪರಿಷತ್‍ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ 6 ತಾಲ್ಲೂಕುಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲ್ಲೂಕುಗಳನ್ನು ಒಳಗೊಂಡಿರುತ್ತದೆ. ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಯ ಮತದಾನವನ್ನು ಡಿಸೆಂಬರ್ 10 ರಂದು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ||ಆರ್.ಸೆಲ್ವಮಣಿ ಅವರು ತಿಳಿಸಿದರು.
ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಪರಷತ್ ನಂ.18ರ ಕೋಲಾರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ದ್ವೈವಾರ್ಷಿಕ ಚುನಾವಣೆ 2021 ರ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆಯ ಅಧಿಸೂಚನೆಯನ್ನು ನವೆಂಬರ್ 16 ರಂದು ಹೊರಡಿಸಲಾಗುವುದು. ನಾಮ ಪತ್ರಗಳನ್ನು ಸಲ್ಲಿಸಲು ನವೆಂಬರ್ 23 ಕೊನೆಯ ದಿನಾಂಕವಾಗಿದೆ. ನಾಮ ಪತ್ರಗಳ ಪರಿಶೀಲನೆಯನ್ನು ನವೆಂಬರ್ 24 ರಂದು ಮಾಡಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ನವೆಂಬರ್ 26 ಕೊನೆಯ ದಿನಾಂಕವಾಗಿದೆ. ಮತದಾನವು ಡಿಸೆಂಬರ್ 10 ರಂದು ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ನಡೆಯುತ್ತದೆ. ಮತಗಳ ಎಣಿಕೆಯನ್ನು ಡಿಸೆಂಬರ್ 14 ರಂದು ಮಾಡಲಾಗುವುದು ಹಾಗೂ ಡಿಸೆಂಬರ್ 16 ರಂದು ಚುನಾವಣೆ ಮುಕ್ತಾಯವಾಗುತ್ತದೆ ಎಂದು ಅವರು ತಿಳಿಸಿದರು.
ಕರ್ನಾಟಕ ವಿಧಾನ ಪರಿಷತ್‍ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮತದಾರರ ಪಟ್ಟಿಗಳನ್ನು ತಯಾರಿಸಲಾಗಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 5208 ಗ್ರಾಮ ಪಂಚಾಯ್ತಿ ಸದಸ್ಯರು, 372 ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು, ಇಬ್ಬರು ಲೋಕಸಭಾ ಸದಸ್ಯರು, 11 ವಿಧಾನಸಭಾ ಸದಸ್ಯರು ಮತ್ತು 5 ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 5598 ವ್ಯಕ್ತಿಗಳು ಚುನಾವಣೆಯಲ್ಲಿ ಮತದಾರರಾಗಿದ್ದಾರೆ ಎಂದು ಅವರು ತಿಳಿಸಿದರು.
ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿ 158 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ 163 ಮತದಾನ ಕೇಂದ್ರಗಳನ್ನು ಒಳಗೊಂಡಿದೆ. ಪ್ರತಿ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಕಛೇರಿಗಳು, ನಗರಸಭಾ, ಪುರಸಭಾ, ಪಟ್ಟಣ ಪಂಚಾಯ್ತಿ ಕಛೇರಿಗಳನ್ನು ಮತಗಟ್ಟೆಗಳನ್ನಾಗಿ ಮಾಡಲಾಗಿದೆ. ಮತ ಎಣಿಕಾ ಕೇಂದ್ರವನ್ನು ಕೋಲಾರದಲ್ಲಿ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಚುನಾವಣಾ ಸಂಬಂಧ ಜಿಲ್ಲೆಯಲ್ಲಿ ದೂರುಗಳನ್ನು ಸ್ವೀಕರಿಸಲು ಚುನಾವಣಾ ಶಾಖೆಯಲ್ಲಿ ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ದೂರವಾಣಿ ಸಂಖ್ಯೆ 243507 ರಲ್ಲಿ 24/7 ದೂರುಗಳನ್ನು ಸ್ವೀಕರಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದೇ ರೀತಿ ತಾಲ್ಲೂಕು ಕಛೇರಿಗಳಲ್ಲಿಯೂ ಸಹ ದೂರು ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‍ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಉಕೇಶ್ ಕುಮಾರ್, ಚುನಾವಣಾ ತಶೀಲ್ದಾರರಾದ ನಾಗವೇಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಉಪಸ್ಥಿತರಿದ್ದರು.

The post ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಗೆ ಡಿಸೆಂಬರ್ 10 ರಂದು ಮತದಾನ; ಡಾ||ಆರ್.ಸೆಲ್ವಮಣಿ appeared first on Hai Sandur kannada fortnightly news paper.

]]>
https://haisandur.com/2021/11/12/%e0%b2%b5%e0%b2%bf%e0%b2%a7%e0%b2%be%e0%b2%a8-%e0%b2%aa%e0%b2%b0%e0%b2%bf%e0%b2%b7%e0%b2%a4%e0%b3%8d-%e0%b2%a6%e0%b3%8d%e0%b2%b5%e0%b3%88%e0%b2%b5%e0%b2%be%e0%b2%b0%e0%b3%8d%e0%b2%b7%e0%b2%bf%e0%b2%95/feed/ 0
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಿ -ಎಂ.ಪಿ.ಕುಮಾರಸ್ವಾಮಿ https://haisandur.com/2021/11/09/%e0%b2%aa%e0%b2%b0%e0%b2%bf%e0%b2%b6%e0%b2%bf%e0%b2%b7%e0%b3%8d%e0%b2%9f-%e0%b2%9c%e0%b2%be%e0%b2%a4%e0%b2%bf-%e0%b2%b9%e0%b2%be%e0%b2%97%e0%b3%82-%e0%b2%aa%e0%b2%b0%e0%b2%bf%e0%b2%b6%e0%b2%bf/ https://haisandur.com/2021/11/09/%e0%b2%aa%e0%b2%b0%e0%b2%bf%e0%b2%b6%e0%b2%bf%e0%b2%b7%e0%b3%8d%e0%b2%9f-%e0%b2%9c%e0%b2%be%e0%b2%a4%e0%b2%bf-%e0%b2%b9%e0%b2%be%e0%b2%97%e0%b3%82-%e0%b2%aa%e0%b2%b0%e0%b2%bf%e0%b2%b6%e0%b2%bf/#respond Tue, 09 Nov 2021 14:32:17 +0000 https://haisandur.com/?p=22023 ಕೋಲಾರ, ನವೆಂಬರ್ 09:ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಜನಾಂಗಕ್ಕೆ ಮೀಸಲಿಟ್ಟ ಅನುದಾನವನ್ನು ಆ ವರ್ಷವೇ ಬಳಕೆ ಮಾಡಬೇಕು ಎಂದು ಅನುಸೂಚಿತ ಜಾತಿ ಮತ್ತು ಪಂಗಡದ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎಂ.ಪಿ.ಕುಮಾರಸ್ವಾಮಿ ಅವರು ತಿಳಿಸಿದರು. ಇಂದು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅನುಸೂಚಿತ ಜಾತಿ ಮತ್ತು ಪಂಗಡದ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ […]

The post ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಿ -ಎಂ.ಪಿ.ಕುಮಾರಸ್ವಾಮಿ appeared first on Hai Sandur kannada fortnightly news paper.

]]>
ಕೋಲಾರ, ನವೆಂಬರ್ 09:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಜನಾಂಗಕ್ಕೆ ಮೀಸಲಿಟ್ಟ ಅನುದಾನವನ್ನು ಆ ವರ್ಷವೇ ಬಳಕೆ ಮಾಡಬೇಕು ಎಂದು ಅನುಸೂಚಿತ ಜಾತಿ ಮತ್ತು ಪಂಗಡದ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎಂ.ಪಿ.ಕುಮಾರಸ್ವಾಮಿ ಅವರು ತಿಳಿಸಿದರು.

ಇಂದು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅನುಸೂಚಿತ ಜಾತಿ ಮತ್ತು ಪಂಗಡದ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬ್ಯಾಂಕ್‍ಗಳು ಪಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ನೀಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸಬಾರದು. ಪರಿಶಿಷ್ಡ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗಬೇಕು ಹಾಗೂ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರೆಯಬೇಕು. ವಿದವಾ ಪುರ್ನವಿವಾಹ ಗಾಂಧಿಜೀಯವರ ಕಲ್ಪನೆಯಾಗಿದ್ದು ವಿದವಾ ಪುರ್ನವಿವಾಹಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಅವರು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ದೊರೆಯುವ ಸರ್ಕಾರದ ಯೋಜನೆ, ಸೌಲಭ್ಯಗಳಲ್ಲಿ ಯಾವುದೇ ರೀತಿಯ ಆಕ್ರಮಗಳು ನಡೆಯಬಾರದು. 94ಸಿ ಅಡಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಶಿಘ್ರವಾಗಿ ಇತ್ಯರ್ಥ ಪಡಿಸಿ. ಜನರಿಗೆ ಪುನರ್ ವಸತಿ ಸೌಲಭ್ಯಗಳನ್ನು ಕಲ್ಪಿಸಬೇಕು ಹಾಗೂ ಜಿಲ್ಲೆಯಲ್ಲಿ ಸ್ಲಂಗಳು ಇಲ್ಲದಂತೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಅನುಸೂಚಿತ ಜಾತಿ ಮತ್ತು ಪಂಗಡದ ಕಲ್ಯಾಣ ಸಮಿತಿಯ ಸದಸ್ಯರಾದ ಹೆಚ್.ಕೆ.ಕುಮಾರಸ್ವಾಮಿ ಅವರು ಮಾತನಾಡಿ, ಜಿಲ್ಲೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿದೆ. ಜಿಲ್ಲೆಯಲ್ಲಿ ಎಸ್.ಸಿ ಮತ್ತು ಎಸ್.ಟಿ ಜನಾಂಗದ ಜನರು ಹೆಚ್ಚಾಗಿದ್ದಾರೆ. ಅಂರ್ತಜಾತಿ ವಿವಾಹವಾದ ಪ್ರತಿಯೊಬ್ಬರಿಗೂ ಪ್ರೋತ್ಸಾಹಧನ ಸಕಾಲದಲ್ಲಿ ವಿತರಿಸಿ. ಜಿಲ್ಲೆಯಲ್ಲಿ ನೀರು 1000 ದಿಂದ 1200 ಅಡಿಗೆ ದೊರೆಯುತ್ತಿದೆ, ಗಂಗಾ ಕಲ್ಯಾಣ ಯೋಜನೆಯಾಡಿ ನೀಡುವ ಅನುದಾನವನ್ನು ಹೆಚ್ಚಳ ಮಾಡಬೇಕು ಎಂದು ಅವರು ತಿಳಿಸಿದರು.
ಅನುಸೂಚಿತ ಜಾತಿ ಮತ್ತು ಪಂಗಡದ ಕಲ್ಯಾಣ ಸಮಿತಿಯ ಸದಸ್ಯರಾದ ಹೆಚ್.ಎಂ.ರಮೇಶ್‍ಗೌಡ ಅವರು ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಪ್ರತ್ಯೇಕ ಸ್ಮಶಾನ ಭೂಮಿ ನೀಡಲು ಅವಕಾಶವಿದ್ದು ಎಲ್ಲಾ ಗ್ರಾಮಗಳಲ್ಲಿ ಸ್ಮಶಾನಗಳಿಗೆ ಭೂಮಿಯನ್ನು ತಹಶೀಲ್ದಾರ್ ಅವರು ಗುರ್ತಿಸಿ ನೀಡಿ. 94ಸಿ ಅಡಿಯಲ್ಲಿ ಎಲ್ಲಾ ಬಡವರು ಅರ್ಜಿ ಸಲ್ಲಿಸಿರುತ್ತಾರೆ. ಯಾರು ಕಡು ಬಡವರಿರುತ್ತಾರೆ ಅವರನ್ನು ಗುರುತಿಸಿ ಸೌಲಭ್ಯಗಳನ್ನು ನೀಡಿ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ||ಆರ್.ಸೆಲ್ವಮಣಿ ಅವರು ಜಿಲ್ಲೆಗೆ ಎಸ್.ಸಿ.ಪಿ ಟಿ.ಎಸ್.ಪಿ ಅಡಿ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇಕಡ 95 ರಷ್ಟು ಅನುದಾನವನ್ನು ಬಳಕೆ ಮಾಡಲಾಗಿದೆ. ದೌರ್ಜನ್ಯ ಪ್ರಕರಣಗಳಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ ಪರಿಹಾರ ನೀಡಲಾಗಿದೆ. 2020-21 ನೇ ಸಾಲಿನಲ್ಲಿ 64 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸ್ಮಶಾನ ಭೂಮಿಯನ್ನು ನೀಡಲಾಗಿದೆ. ಕೋಲಾರ ಜಿಲ್ಲೆಯು 2019 ರಲ್ಲಿ ಬಯಲು ಬರ್ಹಿದೇಸೆ ಮುಕ್ತ ಜಿಲ್ಲೆಯಾಗಿದೆ. 156 ಗ್ರಾಮ ಪಂಚಾಯಿತಿಗಳಿಗೆ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡದ ಕಲ್ಯಾಣ ಸಮಿತಿಯ ಸದಸ್ಯರಾದ ಅವಿನಾಶ್ ಉಮೇಶ್ ಜಾವೇದ್, ಸಂಜೀವ ಮಠಂದೂರು, ಬಿ.ಹರ್ಷವರ್ಧನ್, ತಳವಾರ್ ಶಿವಣ್ಣ, ಅದೀನ ಕಾರ್ಯದರ್ಶಿಗಳಾದ ಪ್ರಶಾಂತ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಉಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ್ ಬಾಬು ಅವರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶಿಲ್ದಾರರು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

The post ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಿ -ಎಂ.ಪಿ.ಕುಮಾರಸ್ವಾಮಿ appeared first on Hai Sandur kannada fortnightly news paper.

]]>
https://haisandur.com/2021/11/09/%e0%b2%aa%e0%b2%b0%e0%b2%bf%e0%b2%b6%e0%b2%bf%e0%b2%b7%e0%b3%8d%e0%b2%9f-%e0%b2%9c%e0%b2%be%e0%b2%a4%e0%b2%bf-%e0%b2%b9%e0%b2%be%e0%b2%97%e0%b3%82-%e0%b2%aa%e0%b2%b0%e0%b2%bf%e0%b2%b6%e0%b2%bf/feed/ 0
ಮಕ್ಕಳ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ – ಡಾ.ಆರ್. ಜಿ. ಆನಂದ್. https://haisandur.com/2021/07/01/child-rights-protection/ https://haisandur.com/2021/07/01/child-rights-protection/#respond Thu, 01 Jul 2021 05:28:01 +0000 https://haisandur.com/?p=17230 ಕೋಲಾರ: ಮಕ್ಕಳಿಗೆ ಇರುವ ಮೂಲಭೂತ ಹಕ್ಕುಗಳನ್ನು ಒದಗಿಸಲು ಹಾಗು ಮಕ್ಕಳ ರಕ್ಷಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ರಾಷ್ಟೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಆರ್. ಜಿ ಆನಂದ್ ಅವರು ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಅವರು ಮಾತನಾಡಿದರು. ಈ ಸಭೆಯ ಮುಖ್ಯ ಉದ್ದೇಶ ಮಕ್ಕಳ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದಾಗಿದೆ ಎಂದು ಅವರು ಹೇಳಿದರು.ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಜಿಲ್ಲೆಯಲ್ಲಿ ಹೋಟೆಲ್‍ಗಳು, […]

The post ಮಕ್ಕಳ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ – ಡಾ.ಆರ್. ಜಿ. ಆನಂದ್. appeared first on Hai Sandur kannada fortnightly news paper.

]]>
ಕೋಲಾರ: ಮಕ್ಕಳಿಗೆ ಇರುವ ಮೂಲಭೂತ ಹಕ್ಕುಗಳನ್ನು ಒದಗಿಸಲು ಹಾಗು ಮಕ್ಕಳ ರಕ್ಷಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ರಾಷ್ಟೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಆರ್. ಜಿ ಆನಂದ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಅವರು ಮಾತನಾಡಿದರು. ಈ ಸಭೆಯ ಮುಖ್ಯ ಉದ್ದೇಶ ಮಕ್ಕಳ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದಾಗಿದೆ ಎಂದು ಅವರು ಹೇಳಿದರು.
ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಜಿಲ್ಲೆಯಲ್ಲಿ ಹೋಟೆಲ್‍ಗಳು, ಕಾರ್ಖಾನೆಗಳು, ಕಟ್ಟಡ ಕೆಲಸಗಳು ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುವ ಬಾಲಕಾರ್ಮಿಕರನ್ನು ಗುರುತಿಸಿ ಬಾಲಕಾರ್ಮಿಕ ಪದ್ದತಿಯಿಂದ ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಳಾದ ಡಾ.ಆರ್.ಸೆಲ್ವಮಣಿ ಅವರು ರಾಜ್ಯ ಸರ್ಕಾರವು ಬಾಲಕಾರ್ಮಿಕ ಪದ್ಧತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲೆಯಲ್ಲಿ ಇಟ್ಟಿಗೆ ಕಾರ್ಖಾನೆ, ಅಂಗಡಿಗಳು, ಗ್ಯಾರೇಜ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಕಾರ್ಮಿಕರನ್ನು ಗುರುತಿಸಿ ರಕ್ಷಿಸಲಾಗಿದೆ ಎಂದು ತಿಳಿಸಿದರು.
ಬಾಲ್ಯ ವಿವಾಹ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಆರ್.ಟಿ.ಐ ಯನ್ನು ಕಡ್ಡಾಯ ಶಿಕ್ಷಣದ ಭಾಗವಾಗಿ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ದಾಖಲಾತಿಯನ್ನು ಆರ್.ಟಿ.ಐ. ಅಡಿಯಲ್ಲಿ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 94 ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಿದ್ದು 91 ಪ್ರಕರಣಗಳನ್ನು ತಡೆಯಲಾಗಿದೆ, 3 ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲು ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಾದ ಎಂ.ಜಿ.ಪಾಲಿ ಅವರು ಸಭೆಗೆ ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಮಕ್ಕಳಿಗೆ ಕೋವಿಡ್ ಹರಡದಂತೆ ತಡೆಗಟ್ಟುವಲ್ಲಿ ಸಫಲವಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆಯನ್ನು ತಡೆಗಟ್ಟಲು ಜಿಲ್ಲಾಡಳಿತ ಉತ್ತಮ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 6 ಲಕ್ಷ ಮಕ್ಕಳಿದ್ದು 3 ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಕೋವಿಡ್ ಸೋಂಕು ಹರಡದಂತೆ ಜಿಲ್ಲಾಡಳಿತ ಕ್ರಮ ವಹಿಸಿದೆ. ಅಗತ್ಯ ಚಿಕಿತ್ಸೆ ಮತ್ತು ಬೆಡ್ ಗಳನ್ನು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಸಂವೇದನಾ ಸಹಾಯವಾಣಿ ಸಂಖ್ಯೆ 18001212830 ಯನ್ನು ರಾಷ್ಟ್ರದ್ಯಂತ ಪ್ರಾದೇಶಿಕ ಬಾಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಕೋವಿಡ್‍ಗೆ ತುತ್ತಾದರೆ ಅಥವಾ ಸಮಸ್ಯೆಗಳಿದ್ದರೆ ಪೋಷಕರು ಹಾಗು ಮಕ್ಕಳು ಸಹಾಯವಾಣಿಗೆ ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ಪೊಲೀಸ್ ವರಿಷ್ಠಾಧಿಕಾರಿಗಳಾದ. ಡೆಕ್ಕಾ ಕಿಶೋರ್ ಬಾಬು, ಕೆ. ಜಿ. ಎಫ್.ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್, ಶಿಕ್ಷಣ ಇಲಾಖೆಯ ಉಪನಿರ್ದೇಕರಾದ ಕೃಷ್ಣಮೂರ್ತಿ, ತಹಶೀಲ್ದಾರ್ ಶೋಭಿತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

The post ಮಕ್ಕಳ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ – ಡಾ.ಆರ್. ಜಿ. ಆನಂದ್. appeared first on Hai Sandur kannada fortnightly news paper.

]]>
https://haisandur.com/2021/07/01/child-rights-protection/feed/ 0
ಗಡಿ ಭಾಗದ ಕನ್ನಡಿಗರನ್ನು ಶೈಕ್ಷಣಿಕವಾಗಿ ಮತ್ತು ಸಾoಸ್ಕೃತಿಕವಾಗಿ ಅಭಿವೃದ್ಧಿ ಪಡಿಸಲಾಗುವುದು – ಡಾ.ಸಿ.ಸೋಮಶೇಖರ್ https://haisandur.com/2021/07/01/kannada-culture-on-the-border-side/ https://haisandur.com/2021/07/01/kannada-culture-on-the-border-side/#respond Thu, 01 Jul 2021 05:19:34 +0000 https://haisandur.com/?p=17226 ಕೋಲಾರ : ಗಡಿ ಭಾಗದಲ್ಲಿ ಕನ್ನಡ ಸಂಸ್ಕೃತಿಯನ್ನು ಬೆಳೆಸಲು ಅಲ್ಲಿನ ಕನ್ನಡಿಗರನ್ನು ಶೈಕ್ಷಣಿಕವಾಗಿ ಮತ್ತು ಸಾoಸ್ಕೃತಿಕವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ರವರು ತಿಳಿಸಿದರು.ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. 2010 ರಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಲಾಯಿತು ಇದರ ಮುಖ್ಯ ಆಶಯ ಗಡಿ ಭಾಗದ ಕನ್ನಡಿಗರ ಆಸ್ಮಿತೆ ಮತ್ತು ಸಂಸ್ಕೃತಿಯನ್ನು ಕಾಪಾಡುವುದು ಎಂದು ಅವರು ಹೇಳಿದರು.ಗಡಿ ಪ್ರದೇಶಗಳಲ್ಲಿ ಜನರು […]

The post ಗಡಿ ಭಾಗದ ಕನ್ನಡಿಗರನ್ನು ಶೈಕ್ಷಣಿಕವಾಗಿ ಮತ್ತು ಸಾoಸ್ಕೃತಿಕವಾಗಿ ಅಭಿವೃದ್ಧಿ ಪಡಿಸಲಾಗುವುದು – ಡಾ.ಸಿ.ಸೋಮಶೇಖರ್ appeared first on Hai Sandur kannada fortnightly news paper.

]]>
ಕೋಲಾರ : ಗಡಿ ಭಾಗದಲ್ಲಿ ಕನ್ನಡ ಸಂಸ್ಕೃತಿಯನ್ನು ಬೆಳೆಸಲು ಅಲ್ಲಿನ ಕನ್ನಡಿಗರನ್ನು ಶೈಕ್ಷಣಿಕವಾಗಿ ಮತ್ತು ಸಾoಸ್ಕೃತಿಕವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ರವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. 2010 ರಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಲಾಯಿತು ಇದರ ಮುಖ್ಯ ಆಶಯ ಗಡಿ ಭಾಗದ ಕನ್ನಡಿಗರ ಆಸ್ಮಿತೆ ಮತ್ತು ಸಂಸ್ಕೃತಿಯನ್ನು ಕಾಪಾಡುವುದು ಎಂದು ಅವರು ಹೇಳಿದರು.
ಗಡಿ ಪ್ರದೇಶಗಳಲ್ಲಿ ಜನರು ಬಹುಭಾಷಿತ ಬಹು ಸಂಸ್ಕೃತಿಯನ್ನು ಒಳಗೊಂಡಿರುತ್ತಾರೆ. ಅವರಿಗೆ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಗಡಿ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಶಾಲೆ, ಆಸ್ಪತ್ರೆ, ರಸ್ತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿ ಸರ್ಕಾರ ಅವರ ಜೊತೆ ಇದೆ ಎಂಬ ಧೈರ್ಯ ತುಂಬವ ಕಾರ್ಯ ನಡೆಯಬೇಕು ಎಂದು ಅವರು ಹೇಳಿದರು.
ಈ ಸಾಲಿನ ಅನುದಾನದಲ್ಲಿ ರಾಜ್ಯದ ಗಡಿ ಭಾಗದ 63 ತಾಲ್ಲೂಕುಗಳಲ್ಲಿ ಕನ್ನಡ ಸಂಸ್ಕೃತಿ ಉತ್ಸವ ಆಚರಿಸಲಾಗುವುದು. ಈ ಭಾರಿ ಶೈಕ್ಷಣಿಕವಾಗಿ ಹೆಚ್ಚಿನ ಒತ್ತು ಕೊಟ್ಟು ಗಡಿ ಭಾಗದಲ್ಲಿ ಶಾಲಾಕಟ್ಟಡ, ಶೌಚಾಲಯ ಮತ್ತು ಗ್ರಂಥಾಲಯಗಳ ನಿರ್ಮಿಸಲಾಗುವುದು. ಜಿಲ್ಲೆಯ ಐದು ತಾಲ್ಲೂಕುಗಳಾದ ಮುಳಬಾಗಿಲು, ಬಂಗಾರಪೇಟೆ, ಕೆಜಿಎಫ್, ಮಾಲೂರು ಮತ್ತು ಶ್ರೀನಿವಾಸಪುರದಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಗಡಿ ಭಾಗದ ಕನ್ನಡಿಗರ ಸಂಸ್ಕೃತಿಯನ್ನು ಬೆಳೆಸಲು ಕನ್ನಡ ಹೋರಾಟಗಾರರ ಮತ್ತು ದಾರ್ಶನಿಕರ ಸ್ಮಾರಕಗಳು, ಸಾಕ್ಷಾ ಚಿತ್ರಗಳನ್ನು ಹಾಗೂ ಗಡಿಭಾಗದ ಹೆದ್ದಾರಿಯಲ್ಲಿ ಸ್ವಾಗತ ಧ್ವಜಸ್ತಂಭ ಗಳನ್ನು ನಿರ್ಮಿಸಲಾಗುವುದು. ಗಡಿಭಾಗದ ಪ್ರೌಢ ಪ್ರಬಂಧಗಳನ್ನು ಬರೆದಿರುವವರ ಪುಸ್ತಕಗಳನ್ನು ಪ್ರಕಟಿಸಲು ಸಹಾಯ ಮಾಡಲಾಗುವುದು. ಉತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ಕೈಯಾರಕಿಯ್ಯಾಣ್ಣರೈ ಮತ್ತು ಜಯದೇವಿತಾಯಿ ಲಿಗಾಡೆ ಅವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಕನ್ನಡ ಮತ್ತು ಸoಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್, ತಹಶೀಲ್ದಾರರಾದ ಶೋಭಿತಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

The post ಗಡಿ ಭಾಗದ ಕನ್ನಡಿಗರನ್ನು ಶೈಕ್ಷಣಿಕವಾಗಿ ಮತ್ತು ಸಾoಸ್ಕೃತಿಕವಾಗಿ ಅಭಿವೃದ್ಧಿ ಪಡಿಸಲಾಗುವುದು – ಡಾ.ಸಿ.ಸೋಮಶೇಖರ್ appeared first on Hai Sandur kannada fortnightly news paper.

]]>
https://haisandur.com/2021/07/01/kannada-culture-on-the-border-side/feed/ 0
ಪಾಶ್ಚಾತ್ಯ ಸಂಸೃತಿಯ ಅಳವಡಿಕೆ ಮಾದಕ ವಸ್ತುಗಳ ಸೇವನೆಗೆ ಕಾರಣ; ಡಾ|| ಜಗದೀಶ್ https://haisandur.com/2021/07/01/western-culture-adapter/ https://haisandur.com/2021/07/01/western-culture-adapter/#respond Thu, 01 Jul 2021 05:09:58 +0000 https://haisandur.com/?p=17222 ಕೋಲಾರ : ಪಾಶ್ಚಾತ್ಯ ಸಂಸೃತಿ ಪಾರ್ಟಿ, ಹುಟ್ಟು ಹಬ್ಬ, ಬಡ್ತಿ ಇಂತಹ ಸಂತೋಷದ ಸಮಯದಲ್ಲಿ ಜನರು ಹೆಚ್ಚಾಗಿ ಪಾಶ್ಚಾತ್ಯ ಸಂಸೃತಿಯ ಅಳವಡಿಕೆಯಿಂದ ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಜಗದೀಶ್ ಅವರು ತಿಳಿಸಿದರು.ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಇವರ ಸಂಯುಕ್ರಾಶಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಬಗ್ಗೆ ಸತ್ಯ […]

The post ಪಾಶ್ಚಾತ್ಯ ಸಂಸೃತಿಯ ಅಳವಡಿಕೆ ಮಾದಕ ವಸ್ತುಗಳ ಸೇವನೆಗೆ ಕಾರಣ; ಡಾ|| ಜಗದೀಶ್ appeared first on Hai Sandur kannada fortnightly news paper.

]]>
ಕೋಲಾರ : ಪಾಶ್ಚಾತ್ಯ ಸಂಸೃತಿ ಪಾರ್ಟಿ, ಹುಟ್ಟು ಹಬ್ಬ, ಬಡ್ತಿ ಇಂತಹ ಸಂತೋಷದ ಸಮಯದಲ್ಲಿ ಜನರು ಹೆಚ್ಚಾಗಿ ಪಾಶ್ಚಾತ್ಯ ಸಂಸೃತಿಯ ಅಳವಡಿಕೆಯಿಂದ ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಜಗದೀಶ್ ಅವರು ತಿಳಿಸಿದರು.
ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಇವರ ಸಂಯುಕ್ರಾಶಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಬಗ್ಗೆ ಸತ್ಯ ಸಂಗತಿ ಹಂಚಿಕೊಳ್ಳಿ, ಜೀವ ಉಳಿಸಿ ಎಂಬ ಜಾಗೃತಿ ಘೋಷಣೆಯ ರೀತಿಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜನರು ದುಷ್ಚಟಗಳಿಗೆ ದಾಸಾರಾಗಿದ್ದಾರೆ. ಮಾದಕ ವಸ್ತುಗಳಿಗೆ ದಾಸರಾಗಿರುವುದು ಎಂದರೆ ಜೀವನವನ್ನು ನಾಶ ಮಾಡಿಕೊಳ್ಳುವುದು. ಯಾವುದೇ ಕಾರಣಕ್ಕೂ ಯುವಜನರು ಇಂಥ ದುಷ್ಚಟಗಳಿಗೆ ದಾಸರಾಗಬಾರದು. ಒಳ್ಳೆಯ ಮಾರ್ಗದಲ್ಲಿ ಮುನ್ನಡೆದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.
ಸಮಾಜದಲ್ಲಿ ಮಾದಕ ದ್ರವ್ಯಗಳಾದ ಹೊಗೆಸೊಪ್ಪು, ಸೀಗರೇಟ್, ಗುಟ್ಕಾ, ಗಾಂಜಾ, ಡ್ರಗ್ಸ್‍ಗಳನ್ನು ಹೆಚ್ಚು ಯುವಕರ ಮೇಲೆ ಪರಿಣಾಮ ಬೀರುತ್ತವೆ. ಪಾರ್ಟಿಗಳು ಹೆಚ್ಚು ಮಾದಕ ದ್ರವ್ಯಗಳ ಸೇವನೆಗೆ ಹೆಚ್ಚು ಅವಕಾಶ ಕಲ್ಪಿಸುತ್ತದೆ. ಡ್ರಗ್ಸ್‍ಗಳನ್ನು ಸಮಾಜದ ಒಳಿತಿಗಾಗಿ ಅಂದರೆ ಶಸ್ತ್ರಚಿಕಿತ್ಸೆ ಮಾಡುವಾಗ ನೋವಾಗದಂತೆ ಚುಚ್ಚುಮದ್ದಿನ ರೂಪದಲ್ಲಿ ಮನುಷ್ಯನ ದೇಹಕ್ಕೆ ಕೊಡಲಾಗುತ್ತದೆ ಇಂತಹ ಉಪಯೋಗಳಿಗೆ ಮಾತ್ರ ಮಾದಕಗಳನ್ನು ಬಳಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್ ಅವರು ಮಾತನಾಡಿ, ಧೂಮಪಾನ, ಗಾಂಜಾ ಸೇದುವುದು, ಜಗಿಯುವುದು, ಕುಡಿಯುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು ಮುಂತಾದ ಅನೇಕ ವಿಧಗಳಲ್ಲಿ ಮಾದಕ ದ್ರವ್ಯ ಬಳಕೆಯಾಗುತ್ತದೆ. ಇದು ಮೆದುಳಿನ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮನಸ್ಥಿತಿ ಏರುಪೇರು ಆಗುವುದರ ಜೊತೆಗೆ ಲೈಂಗಿಕ ದೌರ್ಬಲ್ಯಗಳು ಆಗುವಂತಹ ಸಾಧ್ಯತೆಗಳಿವೆ. ಇಂತಹ ವ್ಯಸನಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರ ಅಡಿಯಲ್ಲಿ ಎಲ್ಲಾ ಬಡಕುಟುಂಬಗಳಿಗೂ ಉಚಿತ ನೇರವು ದೊರೆಯುತ್ತದೆ. ಇಂತಹ ವ್ಯಸನಗಳಿಗೆ ಒಳಗಾಗಿರುವ ವ್ಯಕ್ತಿಗಳಿಗೂ ಹಾಗೂ ಒಳಗಾಗಿರುವಂತೆ ಮಾಡಿದ ವ್ಯಕ್ತಿಗಳಿಗೂ ಶಿಕ್ಷೆಗೆ ಒಳಗಾಗುತ್ತಾರೆ ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಧೀಶರಾದ ಅನಿತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಡನಾಡಿ ಮಾದಕ ವಸ್ತುಗಳನ್ನು ಮಾರಟ ಮಾಡುವವರಿಗೆ ಸಾಗಾಣಿಕೆ ಮಾಡುವರಿಗೆ ತಯಾರಿ ಮಾಡುವರರಿಗೆ ಮಾದಕ ವಸ್ತುಗಳ ಸೇವನೆ ಎನ್‍ಡಿಪಿಎಸ್ ಕಾಯ್ದೆ 1985 ಅಡಿಯಲ್ಲಿ ಶಿಕ್ಷಾರ್ಹರು ಆಗಿರುತ್ತಾರೆ. 1 ಕೆ.ಜಿ ಒಳಗೆ ಓಚಿಡಿಛಿoಣiಛಿ ಆಡಿug oಡಿ Psಥಿಛಿhoಣಡಿoಠಿiಛಿ Subsಣಚಿಟಿಛಿe ಇದ್ದರೆ ಅವರಿಗೆ 3 ವರ್ಷ ಜೈಲು ಶಿಕ್ಷೆ ಇರುತ್ತದೆ. ಅದಕ್ಕಿಂತ ಹೆಚ್ಚಿಗೆ ಇದ್ದರೆ ಅವರಿಗೆ 10 ರಿಂದ 20 ವರ್ಷ ಜೈಲು ಶಿಕ್ಷೆ ಜೊತೆಗೆ ದಂಡ ಸಹ ಇರುತ್ತದೆ ಎಂದು ತಿಳಿಸಿದರು.
ಕುಷ್ಠ ರೋಗ ನಿಯಂತ್ರಣಾಧಿಕಾರಿಗಳಾದ ಡಾ|| ನಾರಾಯಣಸ್ವಾಮಿ ಅವರು ಮಾತನಾಡಿ, ಮಾದಕ ವಸ್ತುಗಳನ್ನು ಕೆಮ್ಮು ಬಂದಾಗ ಸಿರಪ್ ತೆಗೆದುಕೊಳ್ಳಲು ವೈದ್ಯರು ಸೂಚನೆ ನೀಡುತ್ತಾರೆ ಹಾಗೂ ಕೆಲವರು ಖಿನ್ನತೆಗೆ ಒಳಗಾಗಿದ್ದರೆ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳವಂತೆ ಸಲಹೆ ನೀಡುತ್ತಾರೆ ಅದರೆ ಆ ಖಾಯಿಲೆ ವಾಸಿಯಾದ ನಂತರವು ಸಹ ಮಾದಕ ವಸ್ತುಗಳ ಬಳಕೆ ಮುಂದುವರೆಸುತ್ತಾರೆ. ಅದು ಇಲ್ಲ ಎಂದರೆ ಕೆಲಸ ಮಾಡಲಾಗುವುದಿಲ್ಲ ಹಾಗೂ ಬದುಕಲಾಗುವುದಿಲ್ಲ ಎಂಬ ಮನೋಭಾವನೆಗೆ ಬಂದು ಬಿಡುತ್ತಾರೆ. ಮಾದಕ ವಸ್ತಗಳ ಸೇವನೆಯಿಂದ ಕ್ರಮೇಣ ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸತೊಡಗುತ್ತದೆ ಹಾಗೂ ನಮ್ಮ ಮೆದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆ ಮೇಲೆ ಕಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಕೆ.ಪಿ.ಶಂಕರಪ್ಪ, ವಕೀಲರ ಸಂಘದ ಅಧ್ಯಕ್ಷರಾದ ಶೀಧರ್, ಮಲೇರಿಯಾ ನಿಯಂತ್ರಣಾಧಿಕಾರಿಗಳಾದ ಡಾ|| ಕಮಲ, ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

The post ಪಾಶ್ಚಾತ್ಯ ಸಂಸೃತಿಯ ಅಳವಡಿಕೆ ಮಾದಕ ವಸ್ತುಗಳ ಸೇವನೆಗೆ ಕಾರಣ; ಡಾ|| ಜಗದೀಶ್ appeared first on Hai Sandur kannada fortnightly news paper.

]]>
https://haisandur.com/2021/07/01/western-culture-adapter/feed/ 0
ಅಂತರ್ಜಲವನ್ನು ವೃದ್ಧಿಸಿ, ಸಂರಕ್ಷಿಸಲು ಅಟಲ್ ಭೂಜಲ ಯೋಜನೆ ಜಾರಿ –ಜೆ.ಸಿ.ಮಾಧುಸ್ವಾಮಿ https://haisandur.com/2021/06/23/%e0%b2%85%e0%b2%82%e0%b2%a4%e0%b2%b0%e0%b3%8d%e0%b2%9c%e0%b2%b2%e0%b2%b5%e0%b2%a8%e0%b3%8d%e0%b2%a8%e0%b3%81-%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%b8%e0%b2%bf-%e0%b2%b8/ https://haisandur.com/2021/06/23/%e0%b2%85%e0%b2%82%e0%b2%a4%e0%b2%b0%e0%b3%8d%e0%b2%9c%e0%b2%b2%e0%b2%b5%e0%b2%a8%e0%b3%8d%e0%b2%a8%e0%b3%81-%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%b8%e0%b2%bf-%e0%b2%b8/#respond Wed, 23 Jun 2021 08:57:41 +0000 https://haisandur.com/?p=16902 ಕೋಲಾರ : ಅಂತರ್ಜಲವನ್ನು ವೃದ್ಧಿಸಿ, ನೀರನ್ನು ಸಂರಕ್ಷಿಸಲು ಅಟಲ್ ಭೂಜಲ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಮಾನ್ಯ ಪ್ರಧಾನಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ, ಎಸ್.ಪಿ.ಎಮ್.ಯು. ಅಟಲ್ ಭೂಜಲ ಯೋಜನೆ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸುಸ್ಥಿರ ಅಂತರ್ಜಲ ನಿರ್ವಹಣೆಗಾಗಿ ಅಟಲ್ ಭೂಜಲ ಯೋಜನೆಯ ಅರಿವು ಮೂಡಿಸುವ […]

The post ಅಂತರ್ಜಲವನ್ನು ವೃದ್ಧಿಸಿ, ಸಂರಕ್ಷಿಸಲು ಅಟಲ್ ಭೂಜಲ ಯೋಜನೆ ಜಾರಿ –ಜೆ.ಸಿ.ಮಾಧುಸ್ವಾಮಿ appeared first on Hai Sandur kannada fortnightly news paper.

]]>
ಕೋಲಾರ : ಅಂತರ್ಜಲವನ್ನು ವೃದ್ಧಿಸಿ, ನೀರನ್ನು ಸಂರಕ್ಷಿಸಲು ಅಟಲ್ ಭೂಜಲ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಮಾನ್ಯ ಪ್ರಧಾನಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ, ಎಸ್.ಪಿ.ಎಮ್.ಯು. ಅಟಲ್ ಭೂಜಲ ಯೋಜನೆ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸುಸ್ಥಿರ ಅಂತರ್ಜಲ ನಿರ್ವಹಣೆಗಾಗಿ ಅಟಲ್ ಭೂಜಲ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವು 1000 ದಿಂದ 1200 ಅಡಿಗಳಿಗೆ ಇಳಿದಿದೆ. ಕೋಲಾರ ಜಿಲ್ಲೆಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಅಂತರ್ಜಲವನ್ನು 200 ರಿಂದ 300 ಅಡಿಗೆ ತರುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅಂತರ್ಜಲವನ್ನು ಹೆಚ್ಚಿಸಲು ಯಾವ ಕಾಮಗಾರಿಗಳನ್ನು ಮಾಡಬೇಕು ಎಂಬುದನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಲಾಗುವುದು. ಯೋಜನೆಯನ್ನು 3 ಹಂತಗಳಲ್ಲಿ ಅನುಷ್ಠಾನ ಮಾಡಲಾಗುವುದು. ಮೊದಲ ಹಂತದಲ್ಲಿ ನೀರಿನ ಲಭ್ಯತೆಯ ಬಗ್ಗೆ ಅಧ್ಯಯನ ನಡೆಸಿ ಅವಶ್ಯಕತೆಗೆ ಅನುಗುಣವಾಗಿ ಒಳಸುವಂತೆ ಮಾಡುವುದು. ಎರಡನೇ ಹಂತದಲ್ಲಿ ಕೃಷಿ ಹೊಂಡ, ಚೆಕ್ ಡ್ಯಾಂ, ಕುಂಟೆಗಳು, ನಿರ್ಮಾಣ ಮಾಡಿ ಸಂರಕ್ಷಣೆ ಮಾಡುವುದು. ನೀರಿನ ಆವಿ ಪ್ರಮಾಣ ತಗ್ಗಿಸುವುದು ಹಾಗೂ ವಾತಾವರಣದಲ್ಲಿ ತೇವಾಂಶವನ್ನು ಕಾಪಾಡುವುದು. ಮೂರನೆಯದಾಗಿ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ನೀರಿನ ಬಳಕೆ ಕಡಿಮೆ ಮಾಡಬಹುದಾಗಿದೆ ಎಂದರು.

ಹನಿ ನೀರಾವರಿ ಪದ್ದತಿಗಳ ಅಳವಡಿಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಎತ್ತಿನ ಹೊಳೆ ಯೋಜನೆಯ ಮೂಲಕ 24 ಟಿ.ಎಂ.ಸಿ ನೀರನ್ನು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಒದಗಿಸಲಾಗುವುದು. ಕೃಷ್ಣ ಜಲಾನಯನ ಪ್ರದೇಶಕ್ಕೆ ಹರಿಯುವ ವ್ಯರ್ಥ ನೀರನ್ನು ತಡೆದು ಇಂಗುವಂತೆ ಮಾಡುವ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್. ಮುನಿಸ್ವಾಮಿ ರವರು ಮಾತನಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ನೀರಿಗಾಗಿ ತುಂಬಾ ಕಷ್ಟ ಪಡುತ್ತಿದ್ದಾರೆ. ಕೆಲವು ಕಡೆ ಕೆ. ಸಿ. ವ್ಯಾಲಿ ನೀರು ಹರಿಸಿರುವುದರಿಂದ ಸ್ವಲ್ಪ ಮಟ್ಟಿಗೆ ಅಂರ್ತಜಲ ವೃದ್ಧಿಸಿದೆ. ಕೆರೆ ಕುಂಟೆ ಕಾಲುವೆಗಳನ್ನು ಸಂರಕ್ಷಿಸಿಬೇಕು. ಚೆಕ್ ಡ್ಯಾಮ್ ನಿರ್ಮಿಸಿ ನೀರು ಹರಿಯದಂತೆ ತಡೆದು ಅಂತರ್ಜಲ ವೃದ್ಧಿಸಬೇಕು. ರೈತರಿಗೆ ಅನುಕೂಲವಾಗುವಂತೆ ಅವರ ಆದಾಯ ದ್ವಿಗುಣಗೊಳಿಸುವ ಕಾರ್ಯ ಎಲ್ಲರೂ ಒಟ್ಟಾಗಿ ಮಾಡಬೇಕು. ಕೃಷಿಯಲ್ಲಿ ಕೋಲಾರ ಜಿಲ್ಲೆ ಇಸ್ರೇಲ್‍ಗೆ ಮಾದರಿಯಾಗುವಂತೆ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸುವ ಎತ್ತಿನ ಹೊಳೆ ಯೋಜನೆಯ ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಆರ್. ರಮೇಶ್ ಕುಮಾರ್ ರವರು ಮಾತನಾಡಿ ಸರ್ಕಾರ ನೀರನ್ನು ಖನಿಜ ಎಂದು ಪರಿಗಣಿಸಿ ಘೋಷಣೆ ಮಾಡಬೇಕು. ಹನಿ ನೀರಾವರಿ ಪದ್ದತಿಯನ್ನು ಕಡ್ಡಾಯ ಮಾಡಬೇಕು. ಎಲ್ಲಾ ಕಲ್ಯಾಣಿಗಳನ್ನು ಪುರ್ನಜೀವಗೊಳಿಸಬೇಕು. ಕೆರೆ, ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಬೇಕು. ನೀಲಗಿರಿ ಅಕೇಶಿಯಾ, ಬಳ್ಳಾರಿ ಜಾಲಿ, ಕರಿ ಜಾಲಿ, ಪಾರ್ಥೇನಿಯಂ ಗಿಡಗಳನ್ನು ತೆಗಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಗ್ರಾಮ ಸಭೆಯಲ್ಲಿ ಗ್ರಾಮದ ಹಿತ ಇರಬೇಕು ಪಾರದರ್ಶಕವಾಗಿ ನೀರನ್ನು ತಡೆದು ಅಂತರ್ಜಲ ವೃದ್ಧಿಸಿ ರೈತರಿಗೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನೀರು ಇರುವಲ್ಲಿ ನೀರು ವ್ಯರ್ಥ ಮಾಡುತ್ತೇವೆ, ನೀರು ಇಲ್ಲದ ಕಡೆ ನೀರಿಗೆ ಪರದಾಡುತ್ತೇವೆ ಎಂದು ಅವರು ತಿಳಿಸಿದರು.
ಕೆ.ಜಿ.ಫ್ ವಿಧಾನಸಭಾ ಕ್ಷೇತ್ರದ ಶಾಸಕಾರದ ರೂಪ ಕಲಾ ಶಶಿಧರ್ ರವರು ಮಾತನಾಡಿ ಜಿಲ್ಲೆಯ ರೈತರು ಕೃಷಿ ಮತ್ತು ಹೈನುಗಾರಿಕೆಯನ್ನು ನಂಬಿಕೊಂಡಿದ್ದಾರೆ. ಬಹಳ ವರ್ಷಗಳಿಂದ ನೀರು ಬರುತ್ತದ್ದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಅವರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು ಭೂ ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ರೈತರು ಒಳ್ಳೆಯ ಜೀವನ ಕಟ್ಟಿಕೊಳ್ಳುವ ಸನ್ನಿವೇಶ ನಿರ್ಮಿಸಬೇಕು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯರಾದ ವೈ. ಎ. ನಾರಾಯಣಸ್ವಾಮಿ ರವರು ಮಾತನಾಡಿ ರೈತರ ಜೀವನ ಹಸನಾಗಿಸಬೇಕು. ಅಂತರ್ಜಾಲ ಹೆಚ್ಚಿಸಿ ಜಿಲ್ಲೆಯ ಜನತೆಯ ಆಶಯ ಈಡೇರಿಸಬೇಕು. ಜಿಲ್ಲೆಯ ರೈತರು ಸುಮಾರು 1400 ಅಡಿಗಳ ಆಳದಿಂದ ನೀರು ತಂದು ಬೆಳೆ ಬೆಳೆದು ಬದಕು ಕಟ್ಟಿ ತೋರಿಸಿದ್ದಾರೆ. ನೀರನ್ನು ತುಪ್ಪದಂತೆ ಬಳಸಬೇಕು ಜೇನಿನಂತೆ ಸವಿಯಬೇಕು ಎಂದ ಅವರು ಕೆ ಸಿ ವ್ಯಾಲಿ 2ನೇ ಹಂತದ ನೀರನ್ನು ಶೀಘ್ರವಾಗಿ ಜಿಲ್ಲೆಗೆ ಹರಿಸಿ ಎಂದು ಸಚಿವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್, ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜ್, ನಜೀರ್ ಅಹಮ್ಮದ್, ಸಣ್ಣ ನೀರಾವರಿ ಮತ್ತು ಅಂರ್ತಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಮೃತ್ಯಂಜಯ, ಜಿಲ್ಲಾಧಿಕಾರಿಗಳಾದ ಡಾ|| ಆರ್. ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ತಹಶೀಲ್ದಾರರಾದ ಶೋಭಿತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

The post ಅಂತರ್ಜಲವನ್ನು ವೃದ್ಧಿಸಿ, ಸಂರಕ್ಷಿಸಲು ಅಟಲ್ ಭೂಜಲ ಯೋಜನೆ ಜಾರಿ –ಜೆ.ಸಿ.ಮಾಧುಸ್ವಾಮಿ appeared first on Hai Sandur kannada fortnightly news paper.

]]>
https://haisandur.com/2021/06/23/%e0%b2%85%e0%b2%82%e0%b2%a4%e0%b2%b0%e0%b3%8d%e0%b2%9c%e0%b2%b2%e0%b2%b5%e0%b2%a8%e0%b3%8d%e0%b2%a8%e0%b3%81-%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf%e0%b2%b8%e0%b2%bf-%e0%b2%b8/feed/ 0
ಕಿಸಾನ್ ಸ್ಪೆಷಲ್ ಪಾರ್ಸೆಲ್ ರೈಲ್‍ಗೆ ಸಂಸದರಿಂದ ಚಾಲನೆ https://haisandur.com/2021/06/20/%e0%b2%95%e0%b2%bf%e0%b2%b8%e0%b2%be%e0%b2%a8%e0%b3%8d-%e0%b2%b8%e0%b3%8d%e0%b2%aa%e0%b3%86%e0%b2%b7%e0%b2%b2%e0%b3%8d-%e0%b2%aa%e0%b2%be%e0%b2%b0%e0%b3%8d%e0%b2%b8%e0%b3%86%e0%b2%b2%e0%b3%8d/ https://haisandur.com/2021/06/20/%e0%b2%95%e0%b2%bf%e0%b2%b8%e0%b2%be%e0%b2%a8%e0%b3%8d-%e0%b2%b8%e0%b3%8d%e0%b2%aa%e0%b3%86%e0%b2%b7%e0%b2%b2%e0%b3%8d-%e0%b2%aa%e0%b2%be%e0%b2%b0%e0%b3%8d%e0%b2%b8%e0%b3%86%e0%b2%b2%e0%b3%8d/#respond Sun, 20 Jun 2021 01:00:33 +0000 https://haisandur.com/?p=16771 ಕೋಲಾರ, ದೊಡ್ಡನತ್ತ ರೈಲ್ವೆ ನಿಲ್ದಾಣದಲ್ಲಿ, ಚಿಂತಾಮಣಿಯಿಂದ ದೆಹಲಿಯ ಆದರ್ಶನಗರಕ್ಕೆ ಮೊಟ್ಟ ಮೊದಲ ಬಾರಿಗೆ ಪ್ರಯಾಣ ಬೆಳೆಸುವ ಕಿಸಾನ್ ಸ್ಪೆಷಲ್ ಪಾರ್ಸೆಲ್ ರೈಲಿಗೆ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಚಾಲನೆ ನೀಡಿದರು.ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿರುವ ಕಿಸಾನ್ ಸ್ಪೆಷಲ್ ಪಾರ್ಸೆಲ್ ರೈಲಿನಲ್ಲಿ ತರಕಾರಿ ಮತ್ತು ಹಣ್ಣನ್ನು ಸಾಗಿಸಲಾಗುತ್ತಿದೆ. ವಾರಕ್ಕೊಮ್ಮೆ ತರಕಾರಿ-ಹಣ್ಣು ಸಾಗಿಸಲಿರುವ ಈ ರೈಲನ್ನು ಬೇಡಿಕೆಯ ಆಧಾರದ ಮೇಲೆ ಇದರ ಆವರ್ತನ (ಜಿಡಿequeಟಿಛಿಥಿ) ಹೆಚ್ಚು ಮಾಡುವ ಪ್ರಸ್ತಾವನೆಯೂ ಇದೆ ಎಂದರು.ಕಿಸಾನ್ ಸ್ಪೆಷಲ್ ಪಾರ್ಸೆಲ್ ಟ್ರೈನ್ […]

The post ಕಿಸಾನ್ ಸ್ಪೆಷಲ್ ಪಾರ್ಸೆಲ್ ರೈಲ್‍ಗೆ ಸಂಸದರಿಂದ ಚಾಲನೆ appeared first on Hai Sandur kannada fortnightly news paper.

]]>
ಕೋಲಾರ, ದೊಡ್ಡನತ್ತ ರೈಲ್ವೆ ನಿಲ್ದಾಣದಲ್ಲಿ, ಚಿಂತಾಮಣಿಯಿಂದ ದೆಹಲಿಯ ಆದರ್ಶನಗರಕ್ಕೆ ಮೊಟ್ಟ ಮೊದಲ ಬಾರಿಗೆ ಪ್ರಯಾಣ ಬೆಳೆಸುವ ಕಿಸಾನ್ ಸ್ಪೆಷಲ್ ಪಾರ್ಸೆಲ್ ರೈಲಿಗೆ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಚಾಲನೆ ನೀಡಿದರು.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿರುವ ಕಿಸಾನ್ ಸ್ಪೆಷಲ್ ಪಾರ್ಸೆಲ್ ರೈಲಿನಲ್ಲಿ ತರಕಾರಿ ಮತ್ತು ಹಣ್ಣನ್ನು ಸಾಗಿಸಲಾಗುತ್ತಿದೆ. ವಾರಕ್ಕೊಮ್ಮೆ ತರಕಾರಿ-ಹಣ್ಣು ಸಾಗಿಸಲಿರುವ ಈ ರೈಲನ್ನು ಬೇಡಿಕೆಯ ಆಧಾರದ ಮೇಲೆ ಇದರ ಆವರ್ತನ (ಜಿಡಿequeಟಿಛಿಥಿ) ಹೆಚ್ಚು ಮಾಡುವ ಪ್ರಸ್ತಾವನೆಯೂ ಇದೆ ಎಂದರು.
ಕಿಸಾನ್ ಸ್ಪೆಷಲ್ ಪಾರ್ಸೆಲ್ ಟ್ರೈನ್ ನಿಂದ ಸಾಗಾಣಿಕಾ ವೆಚ್ಚ ಮತ್ತು ಸಮಯದ ಉಳಿತಾಯವನ್ನು ಮಾಡಬಹುದಾಗಿದ್ದು, ರಸ್ತೆಯ ಮೂಲಕ ತರಕಾರಿ-ಹಣ್ಣು ಸಾಗಿಸಲು 4 ದಿನ ಬೇಕಾಗಿದ್ದು, ಈ ವಿಶೇಷ ಟ್ರೈನ್ ನಿಂದ ಕೇವಲ 40 ಗಂಟೆಗಳಲ್ಲಿ ದೆಹಲಿಗೆ ತಲುಪಿಸಬಹುದಾಗಿದೆ. ರಸ್ತೆಯ ಮೂಲಕ ಸಾಗಿಸಬೇಕಾಗಿದ್ದಲ್ಲಿ ಪ್ರತಿ ಕೆ.ಜಿ.ಗೆ 6 ರಿಂದ 7 ರೂ. ಸಾಗಾಣಿಕಾ ವೆಚ್ಚ ಆಗಲಿದ್ದು, ಈ ವಿಶೇಷ ರೈಲಿನಲ್ಲಿ ಕೇವಲ 2.50 ರಿಂದ 3.00 ರೂ. ಪ್ರತಿ ಕೆ.ಜಿ.ಗೆ ಆಗಲಿದ್ದು, ರೈತರು ಹಾಗೂ ಗ್ರಾಹಕರಿಗೆ ಲಾಭದಾಯಕವಾಗಲಿದೆ ಎಂದು ಸಂಸದರು ತಿಳಿಸಿದರು.
ಈ ಸಂದರ್ಭದಲ್ಲಿ ಚಿಂತಾಮಣಿ ಶಾಸಕರಾದ ಜೆ.ಕೆ.ಕೃಷ್ಣಾ ರೆಡ್ಡಿ, ನೈಋತ್ಯ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ (ಡಿ.ಆರ್.ಎಂ.) ಅಶೋಕ್ ವರ್ಮ, ವಾಣಿಜ್ಯ ವಿಭಾಗದ ಡಿ.ಆರ್.ಎಂ ಶ್ರೀಕೃಷ್ಣ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

The post ಕಿಸಾನ್ ಸ್ಪೆಷಲ್ ಪಾರ್ಸೆಲ್ ರೈಲ್‍ಗೆ ಸಂಸದರಿಂದ ಚಾಲನೆ appeared first on Hai Sandur kannada fortnightly news paper.

]]>
https://haisandur.com/2021/06/20/%e0%b2%95%e0%b2%bf%e0%b2%b8%e0%b2%be%e0%b2%a8%e0%b3%8d-%e0%b2%b8%e0%b3%8d%e0%b2%aa%e0%b3%86%e0%b2%b7%e0%b2%b2%e0%b3%8d-%e0%b2%aa%e0%b2%be%e0%b2%b0%e0%b3%8d%e0%b2%b8%e0%b3%86%e0%b2%b2%e0%b3%8d/feed/ 0
ಮಾರ್ಕಂಡೇಯ ಡ್ಯಾಮ್‍ನಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು – ಎಸ್.ಅಂಗಾರ https://haisandur.com/2021/06/17/%e0%b2%ae%e0%b2%be%e0%b2%b0%e0%b3%8d%e0%b2%95%e0%b2%82%e0%b2%a1%e0%b3%87%e0%b2%af-%e0%b2%a1%e0%b3%8d%e0%b2%af%e0%b2%be%e0%b2%ae%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae/ https://haisandur.com/2021/06/17/%e0%b2%ae%e0%b2%be%e0%b2%b0%e0%b3%8d%e0%b2%95%e0%b2%82%e0%b2%a1%e0%b3%87%e0%b2%af-%e0%b2%a1%e0%b3%8d%e0%b2%af%e0%b2%be%e0%b2%ae%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae/#respond Thu, 17 Jun 2021 15:22:55 +0000 https://haisandur.com/?p=16726 ಕೋಲಾರ, ಜೂನ್ 17 : ಬೂದಿಕೋಟೆ ಮಾರ್ಕಂಡೇಯ ಡ್ಯಾಮ್‍ನಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ತಿಳಿಸಿದರು. ಇಂದು ಬೂದಿಕೋಟೆಯ ಮಾರ್ಕಂಡೇಯ ಡ್ಯಾಮ್ ಮತ್ತು ಮಾಕರ್ಂಡೇಯ ಮೀನು ಮರಿ ಉತ್ಪಾದನಾ ಕೇಂದ್ರಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ನಂತರ ಅವರು ಮಾತನಾಡಿ ಶ್ರೀಘ್ರದಲ್ಲೇ ವರುಣನ ಕೃಪೆಯಿಂದ ಹಾಗೂ ಕೆಸಿ ವ್ಯಾಲಿ ನೀರಿನಿಂದ ಮಾಕರ್ಂಡೇಯ […]

The post ಮಾರ್ಕಂಡೇಯ ಡ್ಯಾಮ್‍ನಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು – ಎಸ್.ಅಂಗಾರ appeared first on Hai Sandur kannada fortnightly news paper.

]]>
ಕೋಲಾರ, ಜೂನ್ 17 : ಬೂದಿಕೋಟೆ ಮಾರ್ಕಂಡೇಯ ಡ್ಯಾಮ್‍ನಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ತಿಳಿಸಿದರು.

ಇಂದು ಬೂದಿಕೋಟೆಯ ಮಾರ್ಕಂಡೇಯ ಡ್ಯಾಮ್ ಮತ್ತು ಮಾಕರ್ಂಡೇಯ ಮೀನು ಮರಿ ಉತ್ಪಾದನಾ ಕೇಂದ್ರಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ನಂತರ ಅವರು ಮಾತನಾಡಿ ಶ್ರೀಘ್ರದಲ್ಲೇ ವರುಣನ ಕೃಪೆಯಿಂದ ಹಾಗೂ ಕೆಸಿ ವ್ಯಾಲಿ ನೀರಿನಿಂದ ಮಾಕರ್ಂಡೇಯ ಡ್ಯಾಮನ್ನು ತುಂಬಿಸಲಾಗುವುದು ಎಂದು ತಿಳಿಸಿದರು.
ಮೀನುಮರಿ ಉತ್ಪಾದನೆ ಮತ್ತು ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಮೀನುಮರಿ ಉತ್ಪಾದನೆಯಲ್ಲಿ ಕರಾವಳಿ ಮತ್ತು ಒಳನಾಡು ಎಂದು ಎರಡು ವಿಧವಾಗಿ ಉತ್ಪಾದಿಸಲಾಗುತ್ತದೆ. ಒಳನಾಡು ಮೀನುಮರಿ ಉತ್ಪಾದನೆಯಲ್ಲಿ ಯಾವ ತಳಿ ಮೀನುಮರಿಗಳನ್ನು ಉತ್ಪಾದಿಸಬಹುದು ಎಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಪಡಿಸುತ್ತೇವೆ ಎಂದು ಅವರು ತಿಳಿಸಿದರು.
ಈ ಭಾಗದಲ್ಲಿ ಕರಾವಳಿ ಮೀನಿನ ಬೇಡಿಕೆ ಹೆಚ್ಚಾಗಿದೆ ಆದ್ದರಿಂದ ಗ್ರಾಹಕರಿಗೆ ಉತ್ತಮ ಗುಣ ಮಟ್ಟದ ಮೀನುಗಳನ್ನು ಮಾರಾಟಮಾಡಲು ಹಾಗೂ ಮೀನುಗಾರರಿಗೆ ಅನುಕೂಲವಾಗುವಂತೆ ಶೀತಲ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಕೆರೆಗಳಿವೆ. ಕೆಸಿ ವ್ಯಾಲಿ ನೀರಿನಿಂದ ಅನೇಕ ಕೆರೆಗಳು ತುಂಬಿವೆ. ಮಳೆಯು ಚೆನ್ನಾಗಿ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ, ಜನರಿಗೆ ಹಾಗೂ ಸರ್ಕಾರಕ್ಕೆ ಅನುಕೂಲವಾಗುವಂತೆ ಹೆಚ್ಚಿನ ಮೀನು ಸಾಕಾಣಿಕೆ ಮತ್ತು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಸಚಿವರಲ್ಲಿ ಮನವಿ ಮಾಡಿದರು.
ಕರೋನಾ ಸಂದರ್ಭದಲ್ಲಿ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಿರುವವರಿಗೆ ಮೀನು ಮಾರಾಟ ಮಾಡಲು ಇನ್ನೂ ಸ್ವಲ್ಪ ದಿನ ಕಾಲಾವಕಾಶ ಮಾಡಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಮಾಕರ್ಂಡೇಯ ಡ್ಯಾಮನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿನ ಗತವೈಭವ ಮರುಕಳಿಸಲಿದೆ. ಎಲ್ಲರೂ ಒಟ್ಟಾಗಿ ಸೇರಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಹೇಶ್, ಜಿಲ್ಲಾ ಮೀನುಗಾರಿಕೆ ಇಲಾಖೆಯ ನಿರ್ದೇಶಕರಾದ ಡಾ|| ಸಿ.ಎಸ್.ಅನಂತ, ಬೇತಮಂಗಲ ಮೀನುಮರಿ ಉತ್ಪಾದನೆ ಕೇಂದ್ರದ ಸಹಾಯಕ ನಿರ್ದೇಶಕರಾದ ಲಕ್ಷ್ಮಿಕಾಂತ್, ಶ್ರೀನಿವಾಸಪುರದ ಮೀನುಮರಿ ಉತ್ಪಾದನೆ ಕೇಂದ್ರದ ಸಹಾಯಕ ನಿರ್ದೇಶಕರಾದ ಮಾನಯ್ಯ, ಮಾರ್ಕಂಡೇಯ ಮೀನು ಮರಿ ಉತ್ಪಾದನೆ ಕೇಂದ್ರದ ಸಹಾಯಕ ನಿರ್ದೇಶಕರಾದ ಸತೀಶ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಜವರೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

The post ಮಾರ್ಕಂಡೇಯ ಡ್ಯಾಮ್‍ನಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು – ಎಸ್.ಅಂಗಾರ appeared first on Hai Sandur kannada fortnightly news paper.

]]>
https://haisandur.com/2021/06/17/%e0%b2%ae%e0%b2%be%e0%b2%b0%e0%b3%8d%e0%b2%95%e0%b2%82%e0%b2%a1%e0%b3%87%e0%b2%af-%e0%b2%a1%e0%b3%8d%e0%b2%af%e0%b2%be%e0%b2%ae%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae/feed/ 0
ಮಾವು ಬೆಳೆಗಾರರ ನಷ್ಟ ತಪ್ಪಿಸಲು ಮಾವು ಸಂಸ್ಕರಣಾ ಮತ್ತು ಶೀತಲ ಸಂಗ್ರಹ ಘಟಕಗಳ ಸ್ಥಾಪನೆ – ಆರ್.ಶಂಕರ್ https://haisandur.com/2021/06/16/%e0%b2%ae%e0%b2%be%e0%b2%b5%e0%b3%81-%e0%b2%ac%e0%b3%86%e0%b2%b3%e0%b3%86%e0%b2%97%e0%b2%be%e0%b2%b0%e0%b2%b0-%e0%b2%a8%e0%b2%b7%e0%b3%8d%e0%b2%9f-%e0%b2%a4%e0%b2%aa%e0%b3%8d%e0%b2%aa%e0%b2%bf/ https://haisandur.com/2021/06/16/%e0%b2%ae%e0%b2%be%e0%b2%b5%e0%b3%81-%e0%b2%ac%e0%b3%86%e0%b2%b3%e0%b3%86%e0%b2%97%e0%b2%be%e0%b2%b0%e0%b2%b0-%e0%b2%a8%e0%b2%b7%e0%b3%8d%e0%b2%9f-%e0%b2%a4%e0%b2%aa%e0%b3%8d%e0%b2%aa%e0%b2%bf/#respond Wed, 16 Jun 2021 00:24:29 +0000 https://haisandur.com/?p=16690 ಕೋಲಾರ,: ಮಾವು ಬೆಳೆದ ರೈತರಿಗೆ ಬೆಲೆ ನಷ್ಟ ಆಗದಂತೆ ಸರ್ಕಾರದಿಂದ ಶೇ. 50ರಷ್ಟು ಅನುದಾನದೊಂದಿಗೆ ಹೆಚ್ಚಿನ ಮಾವು ಸಂಸ್ಕರಣಾ ಘಟಕಗಳನ್ನು ಮತ್ತು ಶೀತಲ ಸಂಗ್ರಹ ಘಟಕಗಳನ್ನು ಸ್ಥಾಪಿಸಬೇಕು. ಈ ಘಟಕಗಳ ಸದುಪಯೋಗದಿಂದ ರೈತರಿಗೆ ಬೆಲೆ ಕುಸಿತ ಆಗುವುದಿಲ್ಲ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವರಾದ ಆರ್.ಶಂಕರ್ ಅವರು ತಿಳಿಸಿದರು.ಇಂದು ಶ್ರೀನಿವಾಸಪುರದ ಸನ್ ಸಿಪ್ ಮಾವು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ರೈತರಿದ್ದಾರೆ. […]

The post ಮಾವು ಬೆಳೆಗಾರರ ನಷ್ಟ ತಪ್ಪಿಸಲು ಮಾವು ಸಂಸ್ಕರಣಾ ಮತ್ತು ಶೀತಲ ಸಂಗ್ರಹ ಘಟಕಗಳ ಸ್ಥಾಪನೆ – ಆರ್.ಶಂಕರ್ appeared first on Hai Sandur kannada fortnightly news paper.

]]>
ಕೋಲಾರ,: ಮಾವು ಬೆಳೆದ ರೈತರಿಗೆ ಬೆಲೆ ನಷ್ಟ ಆಗದಂತೆ ಸರ್ಕಾರದಿಂದ ಶೇ. 50ರಷ್ಟು ಅನುದಾನದೊಂದಿಗೆ ಹೆಚ್ಚಿನ ಮಾವು ಸಂಸ್ಕರಣಾ ಘಟಕಗಳನ್ನು ಮತ್ತು ಶೀತಲ ಸಂಗ್ರಹ ಘಟಕಗಳನ್ನು ಸ್ಥಾಪಿಸಬೇಕು. ಈ ಘಟಕಗಳ ಸದುಪಯೋಗದಿಂದ ರೈತರಿಗೆ ಬೆಲೆ ಕುಸಿತ ಆಗುವುದಿಲ್ಲ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವರಾದ ಆರ್.ಶಂಕರ್ ಅವರು ತಿಳಿಸಿದರು.
ಇಂದು ಶ್ರೀನಿವಾಸಪುರದ ಸನ್ ಸಿಪ್ ಮಾವು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ರೈತರಿದ್ದಾರೆ. ಈ ವರ್ಷ ಕೋವಿಡ್ ಸಂಕಷ್ಟದಿಂದ ಮಾವು ಬೆಳೆಯ ಬೆಲೆ ಕುಸಿತಗೊಂಡಿದೆ. ವಿಶೇಷವಾಗಿ ತೋತಾಪುರಿ ಮಾವಿನ ಕಾಯಿಗೆ ಸರಿಯಾದ ಬೆಲೆ ಸಿಗದೆ ರೈತರಿಗೆ ತುಂಬಾ ತೊಂದರೆಯಾಗಿದೆ ಎಂದು ತಿಳಿಸಿದರು.
ಶ್ರೀನಿವಾಸಪುರ ಮಾವು ಉತ್ಪನ್ನ ಸಂಸ್ಥೆಯನ್ನು ಸಾವಿರಾರು ರೈತರು ಸೇರಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಮೂಲಕ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ರೈತರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಸಂಸ್ಥೆಯವರಿಗೆ ಮಾವು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಬೇಕಾಗುವ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು. ಈ ಸಂಸ್ಥೆಯಿಂದ ಸ್ಥಳೀಯ ರೈತರು ಬೆಳೆದ ಮಾವು ಬೆಳೆಗಳನ್ನು ರೈತರೇ ಸಂಸ್ಕರಣೆ ಮಾಡಿ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1200 ರಿಂದ 1800 ಅಡಿ ಅಂತರ್ಜಲ ಕುಸಿತ ಆಗಿರುವುದರಿಂದ ಹನಿ ನೀರಾವರಿಗೆ
ಶೇ. 90 ರಷ್ಟು ಸಬ್ಸಿಡಿ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಯದರೂರು ಎನ್.ಹೆಚ್.ಎಂ ಪಾಲಿಹೌಸ್‍ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ ಮತ್ತು ಸಮುದಾಯ ಕೃಷಿ ಹೊಂಡದ ವೀಕ್ಷಣೆ ಮಾಡಿ ನೀರಾವರಿ ವ್ಯವಸ್ಥೆ ಇನ್ನಷ್ಟು ಅಭಿವೃದ್ಧಿಪಡಿಸಲು ರೈತರಿಗೆ ಸೂಚಿಸಿದರು.
ಹೊಸಹಳ್ಳಿ ರೈತರ ಮಾವು ಹಣ್ಣು ಮಾಗಿಸುವ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿ.ನಾರಾಯಣಗೌಡ ತೋಟಗಾರಿಕಾ ಕ್ಷೇತ್ರಕ್ಕೆ ಭೇಟಿ ನೀಡಿ ರೇಷ್ಮೆ ಇಲಾಖೆಯಡಿಯಲ್ಲಿ ಸಹಾಯಧನ ಪಡೆದ ರೈತರ ತಾಕುಗಳ ಸಮಸ್ಯೆಗಳನ್ನು ಆಲಿಸಿ ರೈತರೊಂದಿಗೆ ಮಾತನಾಡಿದರು.
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ (ಹನಿ ನೀರಾವರಿ) ಕದಿರೇಗೌಡ, ಬೆಂಗಳೂರು ವಿಭಾಗೀಯ ತೋಟಗಾರಿಕೆ ಜಂಟಿ ನಿರ್ದೇಶಕರಾದ ಎಂ.ವಿಶ್ವನಾಥ್, ರೇಷ್ಮೆ ಇಲಾಖೆಯ ಅಪರ ನಿರ್ದೇಶಕರಾದ ಬಿ.ಆರ್.ನಾಗಭೂಷಣ್, ಬೆಂಗಳೂರು ವಿಭಾಗೀಯ ರೇಷ್ಮೆ ಜಂಟಿ ನಿರ್ದೇಶಕರಾದ ಟಿ.ಹೆಚ್.ಭೈರಪ್ಪ, ಕೋಲಾರ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಗಾಯಿತ್ರಿ, ಮಾವು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಕೆ.ವಿ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕರಾದ ಡಾ|| ನಾಗರಾಜ್, ಶ್ರೀನಿವಾಸಪುರ ತಹಶೀಲ್ದಾರರಾದ ಎಸ್.ಎನ್.ಶ್ರೀನಿವಾಸ್, ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಭೈರರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

The post ಮಾವು ಬೆಳೆಗಾರರ ನಷ್ಟ ತಪ್ಪಿಸಲು ಮಾವು ಸಂಸ್ಕರಣಾ ಮತ್ತು ಶೀತಲ ಸಂಗ್ರಹ ಘಟಕಗಳ ಸ್ಥಾಪನೆ – ಆರ್.ಶಂಕರ್ appeared first on Hai Sandur kannada fortnightly news paper.

]]>
https://haisandur.com/2021/06/16/%e0%b2%ae%e0%b2%be%e0%b2%b5%e0%b3%81-%e0%b2%ac%e0%b3%86%e0%b2%b3%e0%b3%86%e0%b2%97%e0%b2%be%e0%b2%b0%e0%b2%b0-%e0%b2%a8%e0%b2%b7%e0%b3%8d%e0%b2%9f-%e0%b2%a4%e0%b2%aa%e0%b3%8d%e0%b2%aa%e0%b2%bf/feed/ 0
ಕೌಶಲ್ಯಾಭಿವೃದ್ಧಿ ಪ್ರತಿಯೊಬ್ಬ ವ್ಯಕ್ತಿಯ ಜೀವನೋಪಾಯಕ್ಕೆ ಬಳಕೆಗೆ ಬರಬೇಕು –ಡಾ|| ಆರ್.ಸೆಲ್ವಮಣಿ https://haisandur.com/2021/06/16/%e0%b2%95%e0%b3%8c%e0%b2%b6%e0%b2%b2%e0%b3%8d%e0%b2%af%e0%b2%be%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf-%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%af%e0%b3%8a/ https://haisandur.com/2021/06/16/%e0%b2%95%e0%b3%8c%e0%b2%b6%e0%b2%b2%e0%b3%8d%e0%b2%af%e0%b2%be%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf-%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%af%e0%b3%8a/#respond Wed, 16 Jun 2021 00:20:51 +0000 https://haisandur.com/?p=16687 ಕೋಲಾರ,: ಕೌಶಲ್ಯಾಭಿವೃದ್ಧಿ ತರಬೇತಿಯು 10ನೇ ತರಗತಿ ತೇರ್ಗಡೆ ಆಗಿರುವವರು, ಐ.ಟಿ.ಐ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೂ ತಮ್ಮ ಜೀವನದಲ್ಲಿ ವೃತ್ತಿ ಪರವಾಗಿ ಸಹಾಯವಾಗಬೇಕು. ಜೀವನೋಪಾಯಕ್ಕಾಗಿ ಕೌಶಲ್ಯಾಭಿವೃದ್ಧಿ ಪ್ರತಿಯೊಬ್ಬ ವ್ಯಕ್ತಿಗೂ ಬಳಕೆಗೆ ಬರಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ|| ಆರ್.ಸೆಲ್ವಮಣಿ ಅವರು ತಿಳಿಸಿದರು.ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಟೆಕ್ಸಾಕ್ ವತಿಯಿಂದ ಉದ್ಯಮಶೀಲಾತಾಭಿವೃದ್ಧಿ ಕಾರ್ಯಕ್ರಮ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಹಿಳಾ ಉದ್ಯೋಗದಾರರಿಗೆ ಯಾವ ರೀತಿಯ ಉದ್ಯಮಶೀಲತಾಭಿವೃದ್ಧಿ ಕೌಶಲ್ಯವನ್ನು ಕಲಿತುಕೊಂಡರೆ ಒಳಿತು […]

The post ಕೌಶಲ್ಯಾಭಿವೃದ್ಧಿ ಪ್ರತಿಯೊಬ್ಬ ವ್ಯಕ್ತಿಯ ಜೀವನೋಪಾಯಕ್ಕೆ ಬಳಕೆಗೆ ಬರಬೇಕು –ಡಾ|| ಆರ್.ಸೆಲ್ವಮಣಿ appeared first on Hai Sandur kannada fortnightly news paper.

]]>
ಕೋಲಾರ,: ಕೌಶಲ್ಯಾಭಿವೃದ್ಧಿ ತರಬೇತಿಯು 10ನೇ ತರಗತಿ ತೇರ್ಗಡೆ ಆಗಿರುವವರು, ಐ.ಟಿ.ಐ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೂ ತಮ್ಮ ಜೀವನದಲ್ಲಿ ವೃತ್ತಿ ಪರವಾಗಿ ಸಹಾಯವಾಗಬೇಕು. ಜೀವನೋಪಾಯಕ್ಕಾಗಿ ಕೌಶಲ್ಯಾಭಿವೃದ್ಧಿ ಪ್ರತಿಯೊಬ್ಬ ವ್ಯಕ್ತಿಗೂ ಬಳಕೆಗೆ ಬರಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ|| ಆರ್.ಸೆಲ್ವಮಣಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಟೆಕ್ಸಾಕ್ ವತಿಯಿಂದ ಉದ್ಯಮಶೀಲಾತಾಭಿವೃದ್ಧಿ ಕಾರ್ಯಕ್ರಮ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಹಿಳಾ ಉದ್ಯೋಗದಾರರಿಗೆ ಯಾವ ರೀತಿಯ ಉದ್ಯಮಶೀಲತಾಭಿವೃದ್ಧಿ ಕೌಶಲ್ಯವನ್ನು ಕಲಿತುಕೊಂಡರೆ ಒಳಿತು ಹಾಗೂ ಅವರು ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡಬೇಕು ಎಂಬ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ಮುಖ್ಯ ಕಾರ್ಯವಾಗಬೇಕು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಉತ್ಸಾಹಭರಿತ ಆಹಾರ ಕೆಲಸದ ಚಟುವಟಿಕೆಗಳು (ಐiveಟಥಿ ಜಿooಜ ತಿoಡಿಞ ಂಛಿಣiviಣies) ತುಂಬಾ ಕಡಿಮೆ ಆಗಿದೆ. ಅದರ ಬದಲಾಗಿ ಸೂಕ್ಷ್ಮ ಹಣಕಾಸು ಚಟುವಟಿಕೆಗಳು (ಒiಛಿಡಿo ಜಿiಟಿಚಿಟಿಛಿe ಂಛಿಣiviಣies) ಹೆಚ್ಚಾಗಿದೆ. ಆದರೆ ಆಂಧ್ರ, ಕೇರಳ, ತಮಿಳು ನಾಡು, ಬಿಹಾರ್‍ಗಳಲ್ಲಿ ಉತ್ಸಾಹಭರಿತ ಆಹಾರ ಕೆಲಸದ ಚಟುವಟಿಕೆಗಳು ಹೆಚ್ಚಾಗಿದೆ. ಅದೇ ತರ ಕರ್ನಾಟಕದಲ್ಲೂ ಎಲ್ಲಾ ವರ್ಗದವರಿಗೂ ಕೌಶಲ್ಯಾಭಿವೃದ್ಧಿ ಮಾಡಿದರೆ ಅವರ ಯೋಚನಾ ವಿಧಾನದಲ್ಲಿ ಬದಲಾವಣೆ ಬಂದು ಅವರು ಉತ್ಸಾಹಭರಿತ ಆಹಾರ ಕೆಲಸದ ಚಟುವಟಿಕೆಗಳು ನಡೆಸುತ್ತಾರೆ ಎಂದು ತಿಳಿಸಿದರು.
ಟೆಕ್ಸಾಕ್‍ನ ಮುಖ್ಯ ಮಾರ್ಗದರ್ಶಿಗಳಾದ ಡಾ|| ಗುರುರಾಜ್ ಅವರು ಮಾತನಾಡಿ, ಕರ್ನಾಟಕದಾದ್ಯಂತ ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರೇರಣೆ ಸಿಗುತ್ತದೆ. ಯಶಸ್ವಿಯಾಗಿ ಅವರವರ ವ್ಯವಹಾರ, ವ್ಯಾಪಾರಗಳನ್ನು ನಡೆಸಲು ಅಂತರ್ಗತವಾಗಿ ಬೇಕಾಗುವ ಅರ್ಹತೆ ಹಾಗೂ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಸಾಲವನ್ನು ಹೇಗೆ ಪಡೆಯಬೇಕು ಎಂಬ ಮಾರ್ಗದರ್ಶನವನ್ನು ನೀಡಲಾಗುವುದು. ಇದರಿಂದ ನಿರುದ್ಯೋಗ ನಿವಾರಣೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಮೂರ್ತಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಮಹಮದ್ ಇರ್ಫಾನ್, ಉಪ ನಿರ್ದೇಶಕರಾದ ರವಿಚಂದ್ರನ್, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಪಂಕಜ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಆರ್ಮುಗಂ, ಮಿಷನ್ ಮ್ಯಾನೇಜರ್ ಗೋವಿಂದ ಮೂರ್ತಿ, ಡಾ|| ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಟೆರೆನ್ಸ್ ಫ್ರಾನ್ಸಿಸ್, ಅಧೀಕ್ಷಕರಾದ ಹರಿಪ್ರಸಾದ್, ಟೆಕ್ಸ್‍ಕ್‍ನ ಸಲಹೆಗಾರರಾದ ನಾಗರಾಜ್, ಸೌಮ್ಯಶ್ರೀ, ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

The post ಕೌಶಲ್ಯಾಭಿವೃದ್ಧಿ ಪ್ರತಿಯೊಬ್ಬ ವ್ಯಕ್ತಿಯ ಜೀವನೋಪಾಯಕ್ಕೆ ಬಳಕೆಗೆ ಬರಬೇಕು –ಡಾ|| ಆರ್.ಸೆಲ್ವಮಣಿ appeared first on Hai Sandur kannada fortnightly news paper.

]]>
https://haisandur.com/2021/06/16/%e0%b2%95%e0%b3%8c%e0%b2%b6%e0%b2%b2%e0%b3%8d%e0%b2%af%e0%b2%be%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf-%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%af%e0%b3%8a/feed/ 0