ಪಾಶ್ಚಾತ್ಯ ಸಂಸೃತಿಯ ಅಳವಡಿಕೆ ಮಾದಕ ವಸ್ತುಗಳ ಸೇವನೆಗೆ ಕಾರಣ; ಡಾ|| ಜಗದೀಶ್

0
98

ಕೋಲಾರ : ಪಾಶ್ಚಾತ್ಯ ಸಂಸೃತಿ ಪಾರ್ಟಿ, ಹುಟ್ಟು ಹಬ್ಬ, ಬಡ್ತಿ ಇಂತಹ ಸಂತೋಷದ ಸಮಯದಲ್ಲಿ ಜನರು ಹೆಚ್ಚಾಗಿ ಪಾಶ್ಚಾತ್ಯ ಸಂಸೃತಿಯ ಅಳವಡಿಕೆಯಿಂದ ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಜಗದೀಶ್ ಅವರು ತಿಳಿಸಿದರು.
ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಇವರ ಸಂಯುಕ್ರಾಶಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಬಗ್ಗೆ ಸತ್ಯ ಸಂಗತಿ ಹಂಚಿಕೊಳ್ಳಿ, ಜೀವ ಉಳಿಸಿ ಎಂಬ ಜಾಗೃತಿ ಘೋಷಣೆಯ ರೀತಿಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜನರು ದುಷ್ಚಟಗಳಿಗೆ ದಾಸಾರಾಗಿದ್ದಾರೆ. ಮಾದಕ ವಸ್ತುಗಳಿಗೆ ದಾಸರಾಗಿರುವುದು ಎಂದರೆ ಜೀವನವನ್ನು ನಾಶ ಮಾಡಿಕೊಳ್ಳುವುದು. ಯಾವುದೇ ಕಾರಣಕ್ಕೂ ಯುವಜನರು ಇಂಥ ದುಷ್ಚಟಗಳಿಗೆ ದಾಸರಾಗಬಾರದು. ಒಳ್ಳೆಯ ಮಾರ್ಗದಲ್ಲಿ ಮುನ್ನಡೆದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.
ಸಮಾಜದಲ್ಲಿ ಮಾದಕ ದ್ರವ್ಯಗಳಾದ ಹೊಗೆಸೊಪ್ಪು, ಸೀಗರೇಟ್, ಗುಟ್ಕಾ, ಗಾಂಜಾ, ಡ್ರಗ್ಸ್‍ಗಳನ್ನು ಹೆಚ್ಚು ಯುವಕರ ಮೇಲೆ ಪರಿಣಾಮ ಬೀರುತ್ತವೆ. ಪಾರ್ಟಿಗಳು ಹೆಚ್ಚು ಮಾದಕ ದ್ರವ್ಯಗಳ ಸೇವನೆಗೆ ಹೆಚ್ಚು ಅವಕಾಶ ಕಲ್ಪಿಸುತ್ತದೆ. ಡ್ರಗ್ಸ್‍ಗಳನ್ನು ಸಮಾಜದ ಒಳಿತಿಗಾಗಿ ಅಂದರೆ ಶಸ್ತ್ರಚಿಕಿತ್ಸೆ ಮಾಡುವಾಗ ನೋವಾಗದಂತೆ ಚುಚ್ಚುಮದ್ದಿನ ರೂಪದಲ್ಲಿ ಮನುಷ್ಯನ ದೇಹಕ್ಕೆ ಕೊಡಲಾಗುತ್ತದೆ ಇಂತಹ ಉಪಯೋಗಳಿಗೆ ಮಾತ್ರ ಮಾದಕಗಳನ್ನು ಬಳಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್ ಅವರು ಮಾತನಾಡಿ, ಧೂಮಪಾನ, ಗಾಂಜಾ ಸೇದುವುದು, ಜಗಿಯುವುದು, ಕುಡಿಯುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು ಮುಂತಾದ ಅನೇಕ ವಿಧಗಳಲ್ಲಿ ಮಾದಕ ದ್ರವ್ಯ ಬಳಕೆಯಾಗುತ್ತದೆ. ಇದು ಮೆದುಳಿನ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮನಸ್ಥಿತಿ ಏರುಪೇರು ಆಗುವುದರ ಜೊತೆಗೆ ಲೈಂಗಿಕ ದೌರ್ಬಲ್ಯಗಳು ಆಗುವಂತಹ ಸಾಧ್ಯತೆಗಳಿವೆ. ಇಂತಹ ವ್ಯಸನಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರ ಅಡಿಯಲ್ಲಿ ಎಲ್ಲಾ ಬಡಕುಟುಂಬಗಳಿಗೂ ಉಚಿತ ನೇರವು ದೊರೆಯುತ್ತದೆ. ಇಂತಹ ವ್ಯಸನಗಳಿಗೆ ಒಳಗಾಗಿರುವ ವ್ಯಕ್ತಿಗಳಿಗೂ ಹಾಗೂ ಒಳಗಾಗಿರುವಂತೆ ಮಾಡಿದ ವ್ಯಕ್ತಿಗಳಿಗೂ ಶಿಕ್ಷೆಗೆ ಒಳಗಾಗುತ್ತಾರೆ ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಧೀಶರಾದ ಅನಿತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಡನಾಡಿ ಮಾದಕ ವಸ್ತುಗಳನ್ನು ಮಾರಟ ಮಾಡುವವರಿಗೆ ಸಾಗಾಣಿಕೆ ಮಾಡುವರಿಗೆ ತಯಾರಿ ಮಾಡುವರರಿಗೆ ಮಾದಕ ವಸ್ತುಗಳ ಸೇವನೆ ಎನ್‍ಡಿಪಿಎಸ್ ಕಾಯ್ದೆ 1985 ಅಡಿಯಲ್ಲಿ ಶಿಕ್ಷಾರ್ಹರು ಆಗಿರುತ್ತಾರೆ. 1 ಕೆ.ಜಿ ಒಳಗೆ ಓಚಿಡಿಛಿoಣiಛಿ ಆಡಿug oಡಿ Psಥಿಛಿhoಣಡಿoಠಿiಛಿ Subsಣಚಿಟಿಛಿe ಇದ್ದರೆ ಅವರಿಗೆ 3 ವರ್ಷ ಜೈಲು ಶಿಕ್ಷೆ ಇರುತ್ತದೆ. ಅದಕ್ಕಿಂತ ಹೆಚ್ಚಿಗೆ ಇದ್ದರೆ ಅವರಿಗೆ 10 ರಿಂದ 20 ವರ್ಷ ಜೈಲು ಶಿಕ್ಷೆ ಜೊತೆಗೆ ದಂಡ ಸಹ ಇರುತ್ತದೆ ಎಂದು ತಿಳಿಸಿದರು.
ಕುಷ್ಠ ರೋಗ ನಿಯಂತ್ರಣಾಧಿಕಾರಿಗಳಾದ ಡಾ|| ನಾರಾಯಣಸ್ವಾಮಿ ಅವರು ಮಾತನಾಡಿ, ಮಾದಕ ವಸ್ತುಗಳನ್ನು ಕೆಮ್ಮು ಬಂದಾಗ ಸಿರಪ್ ತೆಗೆದುಕೊಳ್ಳಲು ವೈದ್ಯರು ಸೂಚನೆ ನೀಡುತ್ತಾರೆ ಹಾಗೂ ಕೆಲವರು ಖಿನ್ನತೆಗೆ ಒಳಗಾಗಿದ್ದರೆ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳವಂತೆ ಸಲಹೆ ನೀಡುತ್ತಾರೆ ಅದರೆ ಆ ಖಾಯಿಲೆ ವಾಸಿಯಾದ ನಂತರವು ಸಹ ಮಾದಕ ವಸ್ತುಗಳ ಬಳಕೆ ಮುಂದುವರೆಸುತ್ತಾರೆ. ಅದು ಇಲ್ಲ ಎಂದರೆ ಕೆಲಸ ಮಾಡಲಾಗುವುದಿಲ್ಲ ಹಾಗೂ ಬದುಕಲಾಗುವುದಿಲ್ಲ ಎಂಬ ಮನೋಭಾವನೆಗೆ ಬಂದು ಬಿಡುತ್ತಾರೆ. ಮಾದಕ ವಸ್ತಗಳ ಸೇವನೆಯಿಂದ ಕ್ರಮೇಣ ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸತೊಡಗುತ್ತದೆ ಹಾಗೂ ನಮ್ಮ ಮೆದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆ ಮೇಲೆ ಕಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಕೆ.ಪಿ.ಶಂಕರಪ್ಪ, ವಕೀಲರ ಸಂಘದ ಅಧ್ಯಕ್ಷರಾದ ಶೀಧರ್, ಮಲೇರಿಯಾ ನಿಯಂತ್ರಣಾಧಿಕಾರಿಗಳಾದ ಡಾ|| ಕಮಲ, ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here