ಕೌಶಲ್ಯಾಭಿವೃದ್ಧಿ ಪ್ರತಿಯೊಬ್ಬ ವ್ಯಕ್ತಿಯ ಜೀವನೋಪಾಯಕ್ಕೆ ಬಳಕೆಗೆ ಬರಬೇಕು –ಡಾ|| ಆರ್.ಸೆಲ್ವಮಣಿ

0
87

ಕೋಲಾರ,: ಕೌಶಲ್ಯಾಭಿವೃದ್ಧಿ ತರಬೇತಿಯು 10ನೇ ತರಗತಿ ತೇರ್ಗಡೆ ಆಗಿರುವವರು, ಐ.ಟಿ.ಐ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೂ ತಮ್ಮ ಜೀವನದಲ್ಲಿ ವೃತ್ತಿ ಪರವಾಗಿ ಸಹಾಯವಾಗಬೇಕು. ಜೀವನೋಪಾಯಕ್ಕಾಗಿ ಕೌಶಲ್ಯಾಭಿವೃದ್ಧಿ ಪ್ರತಿಯೊಬ್ಬ ವ್ಯಕ್ತಿಗೂ ಬಳಕೆಗೆ ಬರಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ|| ಆರ್.ಸೆಲ್ವಮಣಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಟೆಕ್ಸಾಕ್ ವತಿಯಿಂದ ಉದ್ಯಮಶೀಲಾತಾಭಿವೃದ್ಧಿ ಕಾರ್ಯಕ್ರಮ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಹಿಳಾ ಉದ್ಯೋಗದಾರರಿಗೆ ಯಾವ ರೀತಿಯ ಉದ್ಯಮಶೀಲತಾಭಿವೃದ್ಧಿ ಕೌಶಲ್ಯವನ್ನು ಕಲಿತುಕೊಂಡರೆ ಒಳಿತು ಹಾಗೂ ಅವರು ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡಬೇಕು ಎಂಬ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ಮುಖ್ಯ ಕಾರ್ಯವಾಗಬೇಕು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಉತ್ಸಾಹಭರಿತ ಆಹಾರ ಕೆಲಸದ ಚಟುವಟಿಕೆಗಳು (ಐiveಟಥಿ ಜಿooಜ ತಿoಡಿಞ ಂಛಿಣiviಣies) ತುಂಬಾ ಕಡಿಮೆ ಆಗಿದೆ. ಅದರ ಬದಲಾಗಿ ಸೂಕ್ಷ್ಮ ಹಣಕಾಸು ಚಟುವಟಿಕೆಗಳು (ಒiಛಿಡಿo ಜಿiಟಿಚಿಟಿಛಿe ಂಛಿಣiviಣies) ಹೆಚ್ಚಾಗಿದೆ. ಆದರೆ ಆಂಧ್ರ, ಕೇರಳ, ತಮಿಳು ನಾಡು, ಬಿಹಾರ್‍ಗಳಲ್ಲಿ ಉತ್ಸಾಹಭರಿತ ಆಹಾರ ಕೆಲಸದ ಚಟುವಟಿಕೆಗಳು ಹೆಚ್ಚಾಗಿದೆ. ಅದೇ ತರ ಕರ್ನಾಟಕದಲ್ಲೂ ಎಲ್ಲಾ ವರ್ಗದವರಿಗೂ ಕೌಶಲ್ಯಾಭಿವೃದ್ಧಿ ಮಾಡಿದರೆ ಅವರ ಯೋಚನಾ ವಿಧಾನದಲ್ಲಿ ಬದಲಾವಣೆ ಬಂದು ಅವರು ಉತ್ಸಾಹಭರಿತ ಆಹಾರ ಕೆಲಸದ ಚಟುವಟಿಕೆಗಳು ನಡೆಸುತ್ತಾರೆ ಎಂದು ತಿಳಿಸಿದರು.
ಟೆಕ್ಸಾಕ್‍ನ ಮುಖ್ಯ ಮಾರ್ಗದರ್ಶಿಗಳಾದ ಡಾ|| ಗುರುರಾಜ್ ಅವರು ಮಾತನಾಡಿ, ಕರ್ನಾಟಕದಾದ್ಯಂತ ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರೇರಣೆ ಸಿಗುತ್ತದೆ. ಯಶಸ್ವಿಯಾಗಿ ಅವರವರ ವ್ಯವಹಾರ, ವ್ಯಾಪಾರಗಳನ್ನು ನಡೆಸಲು ಅಂತರ್ಗತವಾಗಿ ಬೇಕಾಗುವ ಅರ್ಹತೆ ಹಾಗೂ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಸಾಲವನ್ನು ಹೇಗೆ ಪಡೆಯಬೇಕು ಎಂಬ ಮಾರ್ಗದರ್ಶನವನ್ನು ನೀಡಲಾಗುವುದು. ಇದರಿಂದ ನಿರುದ್ಯೋಗ ನಿವಾರಣೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಮೂರ್ತಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಮಹಮದ್ ಇರ್ಫಾನ್, ಉಪ ನಿರ್ದೇಶಕರಾದ ರವಿಚಂದ್ರನ್, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಪಂಕಜ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಆರ್ಮುಗಂ, ಮಿಷನ್ ಮ್ಯಾನೇಜರ್ ಗೋವಿಂದ ಮೂರ್ತಿ, ಡಾ|| ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಟೆರೆನ್ಸ್ ಫ್ರಾನ್ಸಿಸ್, ಅಧೀಕ್ಷಕರಾದ ಹರಿಪ್ರಸಾದ್, ಟೆಕ್ಸ್‍ಕ್‍ನ ಸಲಹೆಗಾರರಾದ ನಾಗರಾಜ್, ಸೌಮ್ಯಶ್ರೀ, ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here