Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಹುಬ್ಬಳ್ಳಿ Archives - Hai Sandur kannada fortnightly news paper https://haisandur.com/category/ಹುಬ್ಬಳ್ಳಿ/ Hai Sandur News.Karnataka India Fri, 30 Dec 2022 12:35:42 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಹುಬ್ಬಳ್ಳಿ Archives - Hai Sandur kannada fortnightly news paper https://haisandur.com/category/ಹುಬ್ಬಳ್ಳಿ/ 32 32 ಮಹದಾಯಿ ಆದೇಶ ‘ನಿರ್ಗತಿಕ ಕೂಸು’: ಎಚ್ಕೆ ಪಾಟೀಲ್ https://haisandur.com/2022/12/30/%e0%b2%ae%e0%b2%b9%e0%b2%a6%e0%b2%be%e0%b2%af%e0%b2%bf-%e0%b2%86%e0%b2%a6%e0%b3%87%e0%b2%b6-%e0%b2%a8%e0%b2%bf%e0%b2%b0%e0%b3%8d%e0%b2%97%e0%b2%a4%e0%b2%bf%e0%b2%95-%e0%b2%95%e0%b3%82/ https://haisandur.com/2022/12/30/%e0%b2%ae%e0%b2%b9%e0%b2%a6%e0%b2%be%e0%b2%af%e0%b2%bf-%e0%b2%86%e0%b2%a6%e0%b3%87%e0%b2%b6-%e0%b2%a8%e0%b2%bf%e0%b2%b0%e0%b3%8d%e0%b2%97%e0%b2%a4%e0%b2%bf%e0%b2%95-%e0%b2%95%e0%b3%82/#respond Fri, 30 Dec 2022 12:35:39 +0000 https://haisandur.com/?p=30929 ಹುಬ್ಬಳ್ಳಿ, ಡಿ:೩೦: ಮಹದಾಯಿ ಸಮಗ್ರ ಯೋಜನಾ ವರದಿಗೆ (ಡಿ.ಪಿ.ಆರ್) ಕೇಂದ್ರ ಜಲ ಆಯೋಗದ ಅನುಮೋದನೆ ದೊರೆತಿದೆ ಎಂದು ಬಿಜೆಪಿ ವರಸೆ ತೆಗೆದಿದೆ. ಆದರೆ ಈ ಕುರಿತಾದ ಆದೇಶದಲ್ಲಿ ಎಲ್ಲಿಯೂ ದಿನಾಂಕ ನಮೂದಿಸಲಾಗಿಲ್ಲ ಇದು ನಿರ್ಗತಿಕ ಕೂಸಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ ಹೇಳಿದ್ದಾರೆ.ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಆದೇಶ, ದಾಖಲೆ ಪತ್ರಕ್ಕೆ ದಿನಾಂಕ ನಮೂದಿತವಾಗಿರಬೇಕು, ಆದರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ದಾಖಲೆಗಳಿಗೆ ದಿನಾಂಕವೇ ಇಲ್ಲ. ಅದು ಅಧಿಕೃತತೆ […]

The post ಮಹದಾಯಿ ಆದೇಶ ‘ನಿರ್ಗತಿಕ ಕೂಸು’: ಎಚ್ಕೆ ಪಾಟೀಲ್ appeared first on Hai Sandur kannada fortnightly news paper.

]]>
ಹುಬ್ಬಳ್ಳಿ, ಡಿ:೩೦: ಮಹದಾಯಿ ಸಮಗ್ರ ಯೋಜನಾ ವರದಿಗೆ (ಡಿ.ಪಿ.ಆರ್) ಕೇಂದ್ರ ಜಲ ಆಯೋಗದ ಅನುಮೋದನೆ ದೊರೆತಿದೆ ಎಂದು ಬಿಜೆಪಿ ವರಸೆ ತೆಗೆದಿದೆ. ಆದರೆ ಈ ಕುರಿತಾದ ಆದೇಶದಲ್ಲಿ ಎಲ್ಲಿಯೂ ದಿನಾಂಕ ನಮೂದಿಸಲಾಗಿಲ್ಲ ಇದು ನಿರ್ಗತಿಕ ಕೂಸಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಆದೇಶ, ದಾಖಲೆ ಪತ್ರಕ್ಕೆ ದಿನಾಂಕ ನಮೂದಿತವಾಗಿರಬೇಕು, ಆದರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ದಾಖಲೆಗಳಿಗೆ ದಿನಾಂಕವೇ ಇಲ್ಲ. ಅದು ಅಧಿಕೃತತೆ ಇಲ್ಲದ ನಿರ್ಗತಿಕ ಕೂಸು ಎಂದು ನುಡಿದರು.

ಮಹದಾಯಿ, ನೆಲ, ಜಲ ಇತ್ಯಾದಿ ರಕ್ಷಣೆಗೆ ಜನವರಿ ೨ ರಂದು ಕಾಂಗ್ರೆಸ್‌ನಿಂದ ಜನಾಂದೋಲನ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಇಂಥ ಹೋರಾಟದ ಸಿದ್ಧತೆ ಆರಂಭವಾದ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿದೆ ಎಂದು ಅವರು ಟೀಕಿಸಿದರು.

ಮುಗ್ಧ ರೈತರಿಗೆ ಸುಳ್ಳು ಹೇಳುವುದು,ಮೋಸ ಮಾಡುವುದು ಬಿಜೆಪಿಯ ವರಸೆ ಎಂದ ಅವರು, ಚುನಾವಣೆ ಬಂದಾಗ ಬಿಜೆಪಿಯವರು ಇಂಥದ್ದನ್ನೆ ಮಾಡುತ್ತಾರೆ ಎಂದು ಪ್ರಹಾರ ಮಾಡಿದರು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿರುವ ಏಳು ಪುಟಗಳ ದಾಖಲೆಗೆ ಒಂದು ಕಡೆಯೂ ದಿನಾಂಕವನ್ನೇ ನಮೂದಿಸಲಾಗಿಲ್ಲ, ಇದು ಅನುಮತಿ ದೊರೆತಿದೆ ಎಂದು ರಾಜ್ಯಕ್ಕೆ ಮಾಡಲಾಗುತ್ತಿರುವ ದ್ರೋಹ ಎಂದು ಅವರು ಆರೋಪಿಸಿದರು.

ನಮ್ಮ ಅಧಿಕಾರಾವಧಿಯಲ್ಲಿ ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಕುಡಿಯುವ ನೀರಿಗಾಗಿ ಬಳಕೆ ಎನ್ನುವ ಅನುಮತಿಯೂ ದೊರೆತಿತ್ತು. ಗೋವಾ ಮುಖ್ಯಮಂತ್ರಿ ತಪ್ಪು ಮಾಹಿತಿಯಿಂದ ನಮಗೆ ದೊರೆತಿದ್ದ ಕ್ಲಿಯರೆನ್ಸ್ ಸ್ಥಗಿತಗೊಂಡಿತ್ತು. ಗೋವಾದವರಿಂದ ಸಭೆಗಳ ಮುಂದೂಡಿಕೆ ಕಾರ್ಯ ನಡೆದು ನ್ಯಾಯಾಲಯದ ಮೆಟ್ಟಿಲೇರಿ ನಂತರ ಟ್ರಿಬ್ಯುನಲ್ ಸ್ಥಾಪನೆ ಆಯ್ತು, ಅಲ್ಲಿಂದ ಇಲ್ಲಿಯವರೆಗೂ ಏನೂ ಮಾಡಿರದ ಬಿಜೆಪಿ ನವಂಬರ್‌ನಲ್ಲಿ ಡಿಪಿಆರ್ ಸಿದ್ಧ ಮಾಡಿಕೊಂಡಿತ್ತು ಎಂದು ಪಾಟೀಲರು ಎಳೆ ಎಳೆಯಾಗಿ ವಿಷಯ ಬಿಚ್ಚಿಟ್ಟರು. ಬಿಜೆಪಿಯವರು ಮಲಪ್ರಭಾ ಭಾಗದ ಮುಗ್ಧ ರೈತರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

The post ಮಹದಾಯಿ ಆದೇಶ ‘ನಿರ್ಗತಿಕ ಕೂಸು’: ಎಚ್ಕೆ ಪಾಟೀಲ್ appeared first on Hai Sandur kannada fortnightly news paper.

]]>
https://haisandur.com/2022/12/30/%e0%b2%ae%e0%b2%b9%e0%b2%a6%e0%b2%be%e0%b2%af%e0%b2%bf-%e0%b2%86%e0%b2%a6%e0%b3%87%e0%b2%b6-%e0%b2%a8%e0%b2%bf%e0%b2%b0%e0%b3%8d%e0%b2%97%e0%b2%a4%e0%b2%bf%e0%b2%95-%e0%b2%95%e0%b3%82/feed/ 0
ವಿವೇಕ ಯೋಜನೆಯಡಿ ಶಾಲೆಗಳ ಕೊಠಡಿ ನಿರ್ಮಾಣ; ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲಿ-ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ https://haisandur.com/2022/11/14/%e0%b2%b5%e0%b2%bf%e0%b2%b5%e0%b3%87%e0%b2%95-%e0%b2%af%e0%b3%8b%e0%b2%9c%e0%b2%a8%e0%b3%86%e0%b2%af%e0%b2%a1%e0%b2%bf-%e0%b2%b6%e0%b2%be%e0%b2%b2%e0%b3%86%e0%b2%97%e0%b2%b3-%e0%b2%95%e0%b3%8a/ https://haisandur.com/2022/11/14/%e0%b2%b5%e0%b2%bf%e0%b2%b5%e0%b3%87%e0%b2%95-%e0%b2%af%e0%b3%8b%e0%b2%9c%e0%b2%a8%e0%b3%86%e0%b2%af%e0%b2%a1%e0%b2%bf-%e0%b2%b6%e0%b2%be%e0%b2%b2%e0%b3%86%e0%b2%97%e0%b2%b3-%e0%b2%95%e0%b3%8a/#respond Mon, 14 Nov 2022 15:08:29 +0000 https://haisandur.com/?p=30343 ಹುಬ್ಬಳ್ಳಿ: ನ.14: ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗಬೇಕು. ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳು ದೊರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.ಇಂದು ಹೊಸುರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹುಬ್ಬಳ್ಳಿ ಶಹರ, ಹೊಸುರ ಸರಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿವೇಕ ಯೋಜನೆಯಡಿ ರೂ. 82 ಲಕ್ಷ ವೆಚ್ಚದಲ್ಲಿ 5 ಶಾಲಾ ಕೊಠಡಿಗಳ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮವನ್ನು ಉದ್ದೇಶಿಸಿ […]

The post ವಿವೇಕ ಯೋಜನೆಯಡಿ ಶಾಲೆಗಳ ಕೊಠಡಿ ನಿರ್ಮಾಣ; ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲಿ-ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ appeared first on Hai Sandur kannada fortnightly news paper.

]]>
ಹುಬ್ಬಳ್ಳಿ: ನ.14: ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗಬೇಕು. ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳು ದೊರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ಇಂದು ಹೊಸುರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹುಬ್ಬಳ್ಳಿ ಶಹರ, ಹೊಸುರ ಸರಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿವೇಕ ಯೋಜನೆಯಡಿ ರೂ. 82 ಲಕ್ಷ ವೆಚ್ಚದಲ್ಲಿ 5 ಶಾಲಾ ಕೊಠಡಿಗಳ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ವಿವೇಕ ಯೋಜನೆ ಜಾರಿಗೆ ತರಲಾಗಿದೆ. ಶೈಕ್ಷಣಿಕ ಗುಣಮಟ್ಟ ಜಾಸ್ತಿಯಾದಾಗ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಳವಾಗಲಿದೆ. ಸರ್ಕಾರ ಮತ್ತು ಸಮಾಜ ಕೂಡಿದಾಗ ಶಿಕ್ಷಣವೂ ಬೆಳೆಯುತ್ತದೆ. ಶೀಘ್ರದಲ್ಲಿ ಕೊಠಡಿ ನಿರ್ಮಾಣ ಮಾಡಿ, ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು. ಲೋಕೋಪಯೋಗಿ ಇಲಾಖೆಯಿಂದ ಉತ್ತಮ ಕೊಠಡಿಗಳು ನಿರ್ಮಾಣವಾಗಲಿವೆ ಎಂದು ಭರವಸೆ ನೀಡಿದರು.
ಇಂದು ಜವಾಹರಲಾಲ್ ನೆಹರು ಅವರ ಜನ್ಮದಿನವಿದ್ದು, ಮಕ್ಕಳಿಗಾಗಿ ಯೋಗ್ಯ ಕಟ್ಟಡವನ್ನು ನಿರ್ಮಿಸಲಾಗುವುದು. ವಿವೇಕ ಯೋಜನೆಯಡಿ ಶಾಲೆಗಳ ಕೊಠಡಿಗಳನ್ನು ನಿರ್ಮಾಣ ಮಾಡಿ ಕೊಡಲಾಗುತ್ತದೆ. ಸರಕಾರಿ ಸೌಲಭ್ಯಗಳು ಹೆಚ್ಚಿದಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ಮಾಡಲು ಸಾಧ್ಯ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಪ್ರತಿ ವರ್ಷ ಮಹಿಳೆಯರಿಂದ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಹೊರ ಹೊಮ್ಮುತ್ತದೆ. ಸರ್ಕಾರಿ ಶಾಲೆಗಳು ಉನ್ನತ್ತ ಮಟ್ಟಕ್ಕೆ ಬೆಳೆಯಬೇಕಾಗಿದೆ. ಈಗಾಗಲೇ ಪ್ರತಿ ತಾಲೂಕಿನಲ್ಲಿ ಪದವಿ ಪೂರ್ವ ಕಾಲೇಜ್ ನಿರ್ಮಾಣ ಮಾಡಲಾಗಿದೆ. ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಎಸ್.ಎಸ್. ಕೆಳದಿಮಠ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಪಂಡಿತ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಜಿ.ಸಿ. ಕೋಲಕಾರ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಶಾಲೆಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಜಗದೀಶ್ ಶೆಟ್ಟರ್, ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಉಪ ಮೇಯರ್ ಉಮಾ ಮುಕುಂದ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಮೀನಾಕ್ಷಿ ವಂಟಮೂರಿ, ಮುಖಂಡರಾದ ಮಲ್ಲಿಕಾರ್ಜುನ ಸಾವುಕಾರ, ಸಿದ್ದಣ್ಣ ಮೊಗಲಿಶೆಟ್ಟರ, ವಿನಾಯಕ ದೋಂಗಡಿ, ಎ.ಎಸ್. ಮಠದ, ಲೋಕೋಪಯೋಗಿ ಇಲಾಖೆಯ ಸಹಾಯಕ ಮುಖ್ಯ ಅಭಿಯಂತರರಾದ ಎಚ್.ಜಿ. ಗುಂಡಳ್ಳಿ, ಶಶಿಧರ ಕುಂಬಾರ, ಶಿಕ್ಷಕಿಯರಾದ ನಿರ್ಮಲಾ ಶೆಟ್ಟರ, ವಿದ್ಯಾ ಬಿಲ್ಲೂರ, ಕಮಲಾ ಸಾಲಿಮಠ, ಸಮ್ರೀನ, ರಾಜಶ್ರೀ ಐ ದುಡ್ಡಿ ಸೇರಿದಂತೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿ ಹಾಜರಿದ್ದರು.
ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪ ಗೌಡ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಶಿವಳ್ಳಿಮಠ ವಂದಿಸಿದರು. ಶಿಕ್ಷಕಿ ವಿ.ಜಿ. ಗಲಭಿ ನಿರೂಪಿಸಿದರು.

The post ವಿವೇಕ ಯೋಜನೆಯಡಿ ಶಾಲೆಗಳ ಕೊಠಡಿ ನಿರ್ಮಾಣ; ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲಿ-ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ appeared first on Hai Sandur kannada fortnightly news paper.

]]>
https://haisandur.com/2022/11/14/%e0%b2%b5%e0%b2%bf%e0%b2%b5%e0%b3%87%e0%b2%95-%e0%b2%af%e0%b3%8b%e0%b2%9c%e0%b2%a8%e0%b3%86%e0%b2%af%e0%b2%a1%e0%b2%bf-%e0%b2%b6%e0%b2%be%e0%b2%b2%e0%b3%86%e0%b2%97%e0%b2%b3-%e0%b2%95%e0%b3%8a/feed/ 0
ಅ.29 ರಂದು ಸರ್ಕಾರಿ ಶಾಲೆ, ಕಾಲೇಜುಗಳಿಗೆ ಬಣ್ಣ ಹಚ್ಚುವ ಬಣ್ಣದರ್ಪಣೆ ಅಭಿಯಾನಕ್ಕೆ ಚಾಲನೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ https://haisandur.com/2022/10/28/%e0%b2%85-29-%e0%b2%b0%e0%b2%82%e0%b2%a6%e0%b3%81-%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%b6%e0%b2%be%e0%b2%b2%e0%b3%86-%e0%b2%95%e0%b2%be%e0%b2%b2%e0%b3%87%e0%b2%9c/ https://haisandur.com/2022/10/28/%e0%b2%85-29-%e0%b2%b0%e0%b2%82%e0%b2%a6%e0%b3%81-%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%b6%e0%b2%be%e0%b2%b2%e0%b3%86-%e0%b2%95%e0%b2%be%e0%b2%b2%e0%b3%87%e0%b2%9c/#respond Fri, 28 Oct 2022 13:19:39 +0000 https://haisandur.com/?p=30107 ಹುಬ್ಬಳ್ಳಿ; ಅ.28: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆಯೊಂದಿಗೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರ ಲೋಕಸಭಾ ಕ್ಷೇತ್ರದಲ್ಲಿ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಬಣ್ಣ ಹಚ್ಚುವ ಬಣ್ಣದರ್ಪಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಹುಬ್ಬಳ್ಳಿಯ ಹೋಟೆಲ್ ಅನಂತ ರೆಸಿಡೆನ್ಸಿ ಕೃಷ್ಣಾ ಸಭಾಂಗಣದಲ್ಲಿಂದು ಸರ್ಕಾರಿ ಶಾಲೆಗಳಿಗೆ ಬಣ್ಣದರ್ಪಣೆ ಬಣ್ಣ ನಮ್ಮದು ಸೇವೆ ನಿಮ್ಮದು ವಿನೂತನ ಅಭಿಯಾನ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು […]

The post ಅ.29 ರಂದು ಸರ್ಕಾರಿ ಶಾಲೆ, ಕಾಲೇಜುಗಳಿಗೆ ಬಣ್ಣ ಹಚ್ಚುವ ಬಣ್ಣದರ್ಪಣೆ ಅಭಿಯಾನಕ್ಕೆ ಚಾಲನೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ appeared first on Hai Sandur kannada fortnightly news paper.

]]>
ಹುಬ್ಬಳ್ಳಿ; ಅ.28: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆಯೊಂದಿಗೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರ ಲೋಕಸಭಾ ಕ್ಷೇತ್ರದಲ್ಲಿ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಬಣ್ಣ ಹಚ್ಚುವ ಬಣ್ಣದರ್ಪಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯ ಹೋಟೆಲ್ ಅನಂತ ರೆಸಿಡೆನ್ಸಿ ಕೃಷ್ಣಾ ಸಭಾಂಗಣದಲ್ಲಿಂದು ಸರ್ಕಾರಿ ಶಾಲೆಗಳಿಗೆ ಬಣ್ಣದರ್ಪಣೆ ಬಣ್ಣ ನಮ್ಮದು ಸೇವೆ ನಿಮ್ಮದು ವಿನೂತನ ಅಭಿಯಾನ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಲೋಕಸಭಾ ಕ್ಷೇತ್ರದ 1,177 ಶಾಲಾ ಕಾಲೇಜುಗಳಿಗೆ ಬಣ್ಣ ಹಾಗೂ ಇತರ ಸಾಮಾಗ್ರಿಗಳನ್ನು ವಿತರಿಸಲಾಗುತ್ತದೆ. ಶಾಲೆಗಳಲ್ಲಿ ಅಧ್ಯಯನ ಮಾಡಿದವರು, ಎಸ್.ಡಿ.ಎಂ.ಸಿ ಸದಸ್ಯರು, ಸಾರ್ವಜನಿಕರು ತಮ್ಮ ಕೈಲಾದ ಸೇವೆಯನ್ನು ಶಾಲೆಗಳಿಗೆ ನೀಡಬೇಕು. ಅಕ್ಟೋಬರ್ 29 ರಂದು ಸಂಜೆ 6 ಗಂಟೆಗೆ ಕುಂದಗೋಳದ ಶ್ರೀ ಹರಭಟ್ಟ ಶಾಲಾ ಮೈದಾನದಲ್ಲಿ ಅಭಿಯಾನಕ್ಕೆ ಅಧೀಕೃತವಾಗಿ ಚಾಲನೆ ನೀಡಲಾಗುತ್ತಿದೆ. ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅವರು ಭಾಗವಹಿಸಲಿದ್ದಾರೆ. ಅತ್ಯುತ್ತಮ ಬಣ್ಣದ ಬಳಿದ ಮೊದಲ ಮೂರು ಸ್ಥಾನ ಪಡೆದ ಶಾಲೆಗಳಿಗೆ ಬಹುಮಾನವನ್ನು ವಿತರಿಸಲಾಗುತ್ತದೆ. ರೂ. 60 ಕೋಟಿ ಅನುದಾನದಲ್ಲಿ ಈ ಅಭಿಯಾನ ಕೈಗೊಳ್ಳಲಾಗುವುದು. ಪ್ರತಿ ತಿಂಗಳು 100 ಶಾಲೆಗಳಿಗೆ ಬಣ್ಣ ಹಚ್ಚುವ ಯೋಜನೆ ಹಾಕಿಕೊಳ್ಳಲಾಗಿದೆ. 12 ತಿಂಗಳಲ್ಲಿ ಲೋಕಸಭಾ ಕ್ಷೇತ್ರದ ‌ಎಲ್ಲಾ ಶಾಲಾ ಕಾಲೇಜುಗಳಿಗೆ ಬಣ್ಣ ಬಳಿಯುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಸ್ಮಾರ್ಟ್ ಕ್ಲಾಸ್, ಡೆಸ್ಕ್ ಹಾಗೂ ಅತ್ಯಾಧುನಿಕ ಶೌಚಾಲಯಗಳನ್ನು ನಿರ್ಮಿಸಲಾಗಿರುತ್ತದೆ. 480 ಕೊಠಡಿಗಳ ಕೊರತೆಯಿದ್ದು, 160 ಕೊಠಡಿಗಳನ್ನು ಸರ್ಕಾರ ಮಂಜೂರು ಮಾಡಲಿದೆ. ಉಳಿದ 320 ಕೊಠಡಿಗಳನ್ನು ಸಿ.ಎಸ್. ಆರ್ ಅನುದಾನದ ಮೂಲಕ ನಿರ್ಮಾಣ ಮಾಡಲಾಗುವುದು. 42 ಶಾಲಾ ಕಾಲೇಜುಗಳು ಈಗಾಗಲೇ ನೋಂದಣಿಯಾಗಿವೆ ಎಂದು ಮಾಹಿತಿ ಒದಗಿಸಿದರು.

ಮುಖಂಡರಾದ ಸಂಜಯ್ ಕಪಾಟಕರ,
ಬಸವರಾಜ, ಲಿಂಗರಾಜ ಪಾಟೀಲ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

The post ಅ.29 ರಂದು ಸರ್ಕಾರಿ ಶಾಲೆ, ಕಾಲೇಜುಗಳಿಗೆ ಬಣ್ಣ ಹಚ್ಚುವ ಬಣ್ಣದರ್ಪಣೆ ಅಭಿಯಾನಕ್ಕೆ ಚಾಲನೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ appeared first on Hai Sandur kannada fortnightly news paper.

]]>
https://haisandur.com/2022/10/28/%e0%b2%85-29-%e0%b2%b0%e0%b2%82%e0%b2%a6%e0%b3%81-%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%b6%e0%b2%be%e0%b2%b2%e0%b3%86-%e0%b2%95%e0%b2%be%e0%b2%b2%e0%b3%87%e0%b2%9c/feed/ 0
ಪೊಲೀಸ್ ಇಲಾಖೆಗೆ ಹೊಸ ಸವಾಲುಗಳು ಎದುರಾಗುತ್ತಿವೆ,ಇಂದು ಹುತಾತ್ಮ ಪೊಲೀಸ್ ಅಧಿಕಾರಿಗಳನ್ನು ಸ್ಮರಿಸುವ ಸುದಿನ -ಜಿಲ್ಲಾಧಿಕಾರಿ ಗುರುದತ್ತ ಹೆಗಡೆ https://haisandur.com/2022/10/21/%e0%b2%aa%e0%b3%8a%e0%b2%b2%e0%b3%80%e0%b2%b8%e0%b3%8d-%e0%b2%87%e0%b2%b2%e0%b2%be%e0%b2%96%e0%b3%86%e0%b2%97%e0%b3%86-%e0%b2%b9%e0%b3%8a%e0%b2%b8-%e0%b2%b8%e0%b2%b5%e0%b2%be%e0%b2%b2%e0%b3%81/ https://haisandur.com/2022/10/21/%e0%b2%aa%e0%b3%8a%e0%b2%b2%e0%b3%80%e0%b2%b8%e0%b3%8d-%e0%b2%87%e0%b2%b2%e0%b2%be%e0%b2%96%e0%b3%86%e0%b2%97%e0%b3%86-%e0%b2%b9%e0%b3%8a%e0%b2%b8-%e0%b2%b8%e0%b2%b5%e0%b2%be%e0%b2%b2%e0%b3%81/#respond Fri, 21 Oct 2022 11:33:54 +0000 https://haisandur.com/?p=29978 ಹುಬ್ಬಳ್ಳಿ: ಅ.21: ಎಲ್ಲಾ ಪೊಲೀಸ್ ಹುತಾತ್ಮರನ್ನು ಸ್ಮರಿಸುವ ದಿನ ಇದಾಗಿದೆ. ಚೀನಾ ಗಡಿ ಕಾರ್ಯಾಚರಣೆ ಮಾಡುತ್ತಿದ್ದ ವೇಳೆಯಲ್ಲಿ 10 ಜನ ಪೊಲೀಸ್ ಅಧಿಕಾರಿಗಳು ಹುತಾತ್ಮರ ದಿನವಿಂದು. ಇಂದು ನಾವು ಹೆಮ್ಮೆಯಿಂದ ನೆನಪಿಸಿಕೊಳ್ಳುವ ದಿನವಾಗಿದೆ. ಪೊಲೀಸ್ ಇಲಾಖೆಯು ಇಂದು ಶಾಂತಿ ಸುವ್ಯವಸ್ಥೆ ಕಾಪಾಡಲು, ಸಾರ್ವಜನಿಕ ಆಸ್ತಿಪಾಸ್ತಿ, ಜನರ ಜೀವ ರಕ್ಷಣೆ, ಟ್ರಾಫಿಕ್ ಸಮಸ್ಯೆ ನಿವಾರಣೆ, ಸೈಬರ್ ಕ್ರೈಂ, ಮಕ್ಕಳ ಮೇಲೆ ಹಲ್ಲೆ ಸೇರಿದಂತೆ ವಿವಿಧ ಹೊಸ ಸವಾಲುಗಳು ಪೊಲೀಸ್ ಇಲಾಖೆಗೆ ಎದುರಾಗುತ್ತಿವೆ. ಅಪರಾಧಗಳನ್ನು ತಡೆಗಟ್ಟಲು ಹೊಸ ಹೆಜ್ಜೆಗಳನ್ನು ಇಡಲಾಗುತ್ತಿದೆ […]

The post ಪೊಲೀಸ್ ಇಲಾಖೆಗೆ ಹೊಸ ಸವಾಲುಗಳು ಎದುರಾಗುತ್ತಿವೆ,ಇಂದು ಹುತಾತ್ಮ ಪೊಲೀಸ್ ಅಧಿಕಾರಿಗಳನ್ನು ಸ್ಮರಿಸುವ ಸುದಿನ -ಜಿಲ್ಲಾಧಿಕಾರಿ ಗುರುದತ್ತ ಹೆಗಡೆ appeared first on Hai Sandur kannada fortnightly news paper.

]]>
ಹುಬ್ಬಳ್ಳಿ: ಅ.21: ಎಲ್ಲಾ ಪೊಲೀಸ್ ಹುತಾತ್ಮರನ್ನು ಸ್ಮರಿಸುವ ದಿನ ಇದಾಗಿದೆ. ಚೀನಾ ಗಡಿ ಕಾರ್ಯಾಚರಣೆ ಮಾಡುತ್ತಿದ್ದ ವೇಳೆಯಲ್ಲಿ 10 ಜನ ಪೊಲೀಸ್ ಅಧಿಕಾರಿಗಳು ಹುತಾತ್ಮರ ದಿನವಿಂದು. ಇಂದು ನಾವು ಹೆಮ್ಮೆಯಿಂದ ನೆನಪಿಸಿಕೊಳ್ಳುವ ದಿನವಾಗಿದೆ. ಪೊಲೀಸ್ ಇಲಾಖೆಯು ಇಂದು ಶಾಂತಿ ಸುವ್ಯವಸ್ಥೆ ಕಾಪಾಡಲು, ಸಾರ್ವಜನಿಕ ಆಸ್ತಿಪಾಸ್ತಿ, ಜನರ ಜೀವ ರಕ್ಷಣೆ, ಟ್ರಾಫಿಕ್ ಸಮಸ್ಯೆ ನಿವಾರಣೆ, ಸೈಬರ್ ಕ್ರೈಂ, ಮಕ್ಕಳ ಮೇಲೆ ಹಲ್ಲೆ ಸೇರಿದಂತೆ ವಿವಿಧ ಹೊಸ ಸವಾಲುಗಳು ಪೊಲೀಸ್ ಇಲಾಖೆಗೆ ಎದುರಾಗುತ್ತಿವೆ. ಅಪರಾಧಗಳನ್ನು ತಡೆಗಟ್ಟಲು ಹೊಸ ಹೆಜ್ಜೆಗಳನ್ನು ಇಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಇಂದು ಹಳೇ ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಆಯೋಜಿಸಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹುಬ್ಬಳ್ಳಿಯಲ್ಲಿ ಎಫ್.ಎಸ್.ಎಲ್. ಕೆಂದ್ರವನ್ನು ತೆರಯಲಾಗಿದೆ.ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಅಭಿವೃದ್ಧಿ ಹೊಂದಬೇಕಾಗಿರುವುದು ಅವಶ್ಯವಾಗಿದೆ ಎಂದು ತಿಳಿಸಿದರು.

ಪೊಲೀಸ್ ಕಮೀಷನರ್ ಲಾಭೂರಾಮ್ ಮಾತನಾಡಿ, ಪ್ರತಿ ವರ್ಷ ಪೊಲೀಸ್ ಸಂಸ್ಮರಣ ದಿನವನ್ನು ಅಕ್ಟೋಬರ್ 21 ರಂದು ಆಚರಣೆ ಮಾಡಲಾಗುವುದು. 1959ರಲ್ಲಿ ಚೀನಾ ಗಡಿಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರಾಣ ತ್ಯಾಗ ಮಾಡಿದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಕಳೆದ ವರ್ಷದಿಂದ 264 ಪೊಲೀಸ್ ಅಧಿಕಾರಿಗಳು ಸೇವೆಯಲ್ಲಿರುವಾಗ ಮೃತರಾಗಿದ್ದಾರೆ. ಅದರಲ್ಲಿ ರಾಜ್ಯದ 11 ಜನರಲ್ಲಿ ಜಿಲ್ಲೆಯ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ನಿಂಗಪ್ಪ ಭೂಷಣ್ಣನವರ , ಪಂಡಿತ ಕಾಸರ್ ಅವರು ಪ್ರಾಣ ತ್ಯಾಗ ಮಾಡಿದರು ಎಂದರು.

ವಿವಿಧ ಗಣ್ಯರು, ಅತಿಥಿಗಳು ಹಾಗೂ ಸಾರ್ವಜನಿಕರು ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಸೇವೆಯಲ್ಲಿರುವಾಗ ಮೃತರಾದ ನಿಂಗಪ್ಪ ಭೂಷಣ್ಣನವರ ಅವರ ಪತ್ನಿ ಸಂಗೀತಾ ಭೂಷಣ್ಣನವರ ಪುಷ್ಪ ನಮನ ಅರ್ಪಿಸಿದರು. ಕೆಎಸ್ ಆರ್ ಪಿ 10 ನೇ ತುಕಡಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಿಸಲಾಯಿತು. ಕವಾಯತು ಕಮಾಂಡರ್ ವಿಶ್ವನಾಥ ನಾಯಕ, ಐ.ಎನ್. ಕಲಾದಗಿ, ಎಡ್ವಿನ್ ಡಿಸೋಜಾ ಅವರ ನೇತೃತ್ವದಲ್ಲಿ ಕೆಎಸ್ ಆರ್ ಪಿ 10 ನೇ ತುಕಡಿ ಹಾಗೂ ಪೊಲೀಸ್ ವಾದ್ಯ ವೃಂದದವರು ಗೌರವ ಸಲ್ಲಿಸಿದರು.

ವಿಧಾನ ಪರಿಷತ್ಯ ಸದಸ್ಯ ಬಸವರಾಜ ಹೊರಟ್ಟಿ, ರೈಲ್ವೆ ಐಜಿಪಿ ಅಲೋಕಕುಮಾರ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ, ಉಪ ಮೇಯರ್ ಉಮಾ ಮುಕುಂದ, ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲಕೃಷ್ಣ ಬ್ಯಾಕೋಡ, ನಿವೃತ್ತ ಡಿಐಜಿ ರವಿ ನಾಯಕ, ಹುಬ್ಬಳ್ಳಿ ವಿಮಾನ ನಿಲ್ದಾಣಗಳ ನಿರ್ದೇಶಕ ಪ್ರಮೋದಕುಮಾರ ಠಾಕ್ರೆ, ಎಸಿಪಿಗಳಾದ ಆರ್.ಕೆ. ಪಾಟೀಲ, ಪಿ.ಎಸ್. ದೊಡಮನಿ, ಎಸ್.ಬಿ. ಯಾದವ, ಪೊಲೀಸ್ ಇನ್ಸಪೆಕ್ಟರ್ ಶ್ಯಾಮರಾವ ಸಜ್ಜನ, ಅಶೋಕ ಬಿ.ಎಸ್. ಎಎಸ್ ಐ ಎಂ.ಆರ್. ಮಲ್ಲಿಗವಾಡ, ಬಿ.ಆರ್. ತಳವಾರ, ಗೃಹ ರಕ್ಷಕ ದಳದ ಕೃಷ್ಣಾ ಬ್ಯಾಡಗಿ, ಆರ್.ಜಿ. ಅಂಗಡಿ, ವಿಧಿವಿಜ್ಞಾನದ ನಿರ್ದೇಶಕ ಡಾ. ಚಂದ್ರಶೇಖರ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಕುಟುಂಬಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.

The post ಪೊಲೀಸ್ ಇಲಾಖೆಗೆ ಹೊಸ ಸವಾಲುಗಳು ಎದುರಾಗುತ್ತಿವೆ,ಇಂದು ಹುತಾತ್ಮ ಪೊಲೀಸ್ ಅಧಿಕಾರಿಗಳನ್ನು ಸ್ಮರಿಸುವ ಸುದಿನ -ಜಿಲ್ಲಾಧಿಕಾರಿ ಗುರುದತ್ತ ಹೆಗಡೆ appeared first on Hai Sandur kannada fortnightly news paper.

]]>
https://haisandur.com/2022/10/21/%e0%b2%aa%e0%b3%8a%e0%b2%b2%e0%b3%80%e0%b2%b8%e0%b3%8d-%e0%b2%87%e0%b2%b2%e0%b2%be%e0%b2%96%e0%b3%86%e0%b2%97%e0%b3%86-%e0%b2%b9%e0%b3%8a%e0%b2%b8-%e0%b2%b8%e0%b2%b5%e0%b2%be%e0%b2%b2%e0%b3%81/feed/ 0
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಾಲಾ ಕಾಲೇಜು ಸಂಸ್ಥೆಗಳನ್ನು ಹಸಿರು ಆವರಣ ಮಾಡಲು ಮುಂದಾಗಿ -ನಿವೃತ್ತ ನ್ಯಾ. ಸುಭಾಸ ಆಡಿ https://haisandur.com/2022/10/17/%e0%b2%b0%e0%b3%88%e0%b2%b2%e0%b3%8d%e0%b2%b5%e0%b3%86-%e0%b2%a8%e0%b2%bf%e0%b2%b2%e0%b3%8d%e0%b2%a6%e0%b2%be%e0%b2%a3-%e0%b2%ac%e0%b2%b8%e0%b3%8d-%e0%b2%a8%e0%b2%bf%e0%b2%b2%e0%b3%8d%e0%b2%a6/ https://haisandur.com/2022/10/17/%e0%b2%b0%e0%b3%88%e0%b2%b2%e0%b3%8d%e0%b2%b5%e0%b3%86-%e0%b2%a8%e0%b2%bf%e0%b2%b2%e0%b3%8d%e0%b2%a6%e0%b2%be%e0%b2%a3-%e0%b2%ac%e0%b2%b8%e0%b3%8d-%e0%b2%a8%e0%b2%bf%e0%b2%b2%e0%b3%8d%e0%b2%a6/#respond Mon, 17 Oct 2022 12:37:51 +0000 https://haisandur.com/?p=29917 ಹುಬ್ಬಳ್ಳಿ: ಅ.17: ನಮ್ಮ ನಗರ ಸ್ವಚ್ಛ ನಗರ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಾಲಾ ಕಾಲೇಜು ಸಂಸ್ಥೆಗಳನ್ನು ಹಸಿರು ಆವರಣ ( ಗ್ರೀನ್ ಕ್ಯಾಂಪಸ್) ಮಾಡಲು ಮುಂದಾಗಬೇಕಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾ. ಸುಭಾಸ ಆಡಿ ಅವರು ಹೇಳಿದರು. ಇಂದು ಸರ್ಕ್ಯೂಟ್ ಹೌಸ್ ನಲ್ಲಿ ಘನ‌ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವ […]

The post ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಾಲಾ ಕಾಲೇಜು ಸಂಸ್ಥೆಗಳನ್ನು ಹಸಿರು ಆವರಣ ಮಾಡಲು ಮುಂದಾಗಿ -ನಿವೃತ್ತ ನ್ಯಾ. ಸುಭಾಸ ಆಡಿ appeared first on Hai Sandur kannada fortnightly news paper.

]]>
ಹುಬ್ಬಳ್ಳಿ: ಅ.17: ನಮ್ಮ ನಗರ ಸ್ವಚ್ಛ ನಗರ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಾಲಾ ಕಾಲೇಜು ಸಂಸ್ಥೆಗಳನ್ನು ಹಸಿರು ಆವರಣ ( ಗ್ರೀನ್ ಕ್ಯಾಂಪಸ್) ಮಾಡಲು ಮುಂದಾಗಬೇಕಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾ. ಸುಭಾಸ ಆಡಿ ಅವರು ಹೇಳಿದರು.

ಇಂದು ಸರ್ಕ್ಯೂಟ್ ಹೌಸ್ ನಲ್ಲಿ ಘನ‌ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವ ಕುರಿತ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿಲ್ದಾಣಗಳಲ್ಲಿ ಹಸಿ ಕಸ, ಒಣ ಕಸ ಹಾಕಲು ಕಸದ ಡಬ್ಬಿಗಳನ್ನು ಅಳವಡಿಸಬೇಕು. ಜಿಲ್ಲಾ ಪಂಚಾಯತಿಯ ಐಇಸಿ ಕಾರ್ಯಕ್ರಮವನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಮುಂದಾಗಬೇಕಾಗಿದೆ. ರೈಲ್ವೆ ಬೋಗಿ ಹಾಗೂ ಬಸ್ ಗಳಲ್ಲಿ ಕಸದ ಡಬ್ಬಗಳನ್ನು ಅಳವಡಿಸಬೇಕು. ಪ್ರಯಾಣಿಕರು ಕಸವನ್ನು ಕಡ್ಡಾಯವಾಗಿ ಡಬ್ಬಿಗಳಲ್ಲಿ ಹಾಕುವಂತೆ ನಿರ್ವಾಹಕರು ನಿರ್ದೇಶನ ನೀಡಬೇಕು. ಕಸವನ್ನು ಬಸ್ಸಿನ ಕಸದ ಡಬ್ಬಗಳಲ್ಲಿ ಹಾಕದಿದ್ದಲ್ಲಿ ನಿರ್ವಾಹಕರು ದಂಡ ವಿಧಿಸಬಹುದು. ಅಲ್ಲದೇ ಕಿಟಕಿಗಳಲ್ಲಿ ಉಗಳುವುದನ್ನು ನಿಷೇಧ ಮಾಡಬೇಕು. ಕಿಟಕಿಗಳಲ್ಲಿ ಉಗುಳುವವರಿಗೆ ದಂಡ ಹಾಕಬೇಕು. ಕಸವನ್ನು ಬಸ್ ಡಿಪೋಗಳಲ್ಲಿ ಸಂಗ್ರಹಿಸಿ, ಕಸದ ವಾಹನಗಳಿಗೆ ಹಾಕಬೇಕು. ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರು ಒದಗಿಸಬೇಕು. ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕಾಗಿದೆ. ವಾರ್ಡ್ ಸದಸ್ಯರು ತಮ್ಮ ವಾರ್ಡ್ ಗಳನ್ನು ಸ್ವಚ್ಛವಾಗಿಡಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಮುನ್ನೆಡದಾಗ ಮಾತ್ರ ಇಂಧೋರ್ ನಗರದಂತೆ ನಮ್ಮ ಅವಳಿ ನಗರಗಳು ಸ್ವಚ್ಛಂದವಾಗಲಿವೆ ಎಂದು ತಿಳಿಸಿದರು.

ಆಸ್ಪತ್ರೆ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ ಕಾಲೇಜು, ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶಾಲಾ ಕಾಲೇಜುಗಳನ್ನು ಹಸಿರು ಆವರಣ ( ಗ್ರೀನ್ ಕ್ಯಾಂಪಸ್) ಮಾಡಲು ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಪಾಲ್ಗೊಳ್ಳುವಂತೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಬ್ಲಾಕ್ ಹಾಗೂ ವಾರ್ಡ್ ಗಳ ಪ್ರತಿ ಮನೆಗಳಿಂದ ಮೊದಲು ತ್ಯಾಜ್ಯವನ್ನು ಸಂಗ್ರಹಿಸಿ, ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ನಮ್ಮ ನಗರದ ತ್ಯಾಜ್ಯ ನಿರ್ವಹಣೆ ನಮ್ಮ ಕರ್ತವ್ಯ ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲರೂ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡುವುದು ನಮ್ಮ ಜವಾಬ್ದಾರಿಯಾಗಿದೆ.‌ ಸಸಿಗಳನ್ನು ನೆಡಲು ಮುಂದಾಗಬೇಕಾಗಿದೆ ಎಂದರು.

ಖಾಲಿ ಜಾಗದಲ್ಲಿ ಕಸವನ್ನು ಹಾಕಲಾಗುತ್ತಿದೆ. ಜಾಗದ ಮಾಲೀಕರು ಖಾಲಿ ಜಾಗದ ಸುತ್ತಲೂ ಕಾಂಪೌಂಡ್ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಲು ಕ್ರಮ ವಹಿಸಬೇಕು. ಅಪಾರ್ಟ್‌ಮೆಂಟ್ ಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ. ಜನರಲ್ಲಿ ಅವರ ಜವಾಬ್ದಾರಿ ಕುರಿತು ತಿಳುವಳಿಕೆ ಮೂಡಿಸಬೇಕು. ಸಾರ್ವಜನಿಕ ಸ್ಥಳ, ಫುಟಪಾತ್ ಅತಿಕ್ರಮಣ ಮಾಡಿಕೊಂಡರೆ ಮೊದಲು ನೋಟೀಸ್ ನೀಡಿರಿ. ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ದಂಡ ವಿಧಿಸಿ, ಲೈಸೆನ್ಸ್ ರದ್ದುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಹೋಟೆಲ್ ಹಾಗೂ ವ್ಯಾಪಾರಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡಬಾರದು. ಅಲ್ಲದೇ ಕಾಟನ್ ಬ್ಯಾಗ್ ಬಳಸುವಂತೆ ಅಧಿಕಾರಿಗಳು ನಿರ್ದೇಶನ ನೀಡುವುದು ಮುಖ್ಯ. ಕಾಟನ್ ಬ್ಯಾಗ್ ನಿಂದಾಗಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಉದ್ಯೋಗಾವಕಾಶ ದೊರೆಯಲಿವೆ. ಡಿಸೆಂಬರ್ ತಿಂಗಳಿನಿಂದ 120 ಮೈಕ್ರಾನ್‌ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಉಪಮೇಯರ್ ಉಮಾ ಮುಕುಂದ ಮಾತನಾಡಿ, ವಾರ್ಡ್ ಗಳಲ್ಲಿ ರಂಗೋಲಿ ಬಿಡಿಸಿ, ಕಸ ಹಾಕದಂತೆ ಜಾಗೃತಿ ಮೂಡಿಸಲಾಗಿದೆ. ಕಸ ಹಾಕಿದವರಿಗೆ ದಂಡ ವಿಧಿಸಲಾಗುವುದು. ನಗರವನ್ನು ಸ್ವಚ್ಛವಾಗಿಸಲು ಪಾಲಿಕೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಈ ಹಿಂದೆ ಫುಟಪಾತ ತೆರವುಗೊಳಿಸಿದರೂ ಸಹ ಪುನಃ ಮೊದಲಿನ ಸ್ಥಿತಿಯಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ ಎಂದು ದೂರಿದರು.

ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ಮಾತನಾಡಿ, 30 ದಿನಗಳಲ್ಲಿ ಬ್ಯಾನರ್, ಪ್ಲೇಕ್ಸ್ ಗಳನ್ನು ತೆರವುಗೊಳಿಸಲಾಗುವುದು. ಮಾರುಕಟ್ಟೆಯನ್ನು ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲಾಗುವುದು. ಕಸ ಸಂಗ್ರಹಣೆ ಮಾಡಲು 30 ಹೊಸ ಮತ್ತು 54 ಹೊರಗುತ್ತಿಗೆ ಆಧಾರದ ಮೇಲೆ ಟ್ರ್ಯಾಕ್ಟರ್ ಗಳನ್ನು ತೆಗೆದುಕೊಳ್ಳಲಾಗುವುದು. ಡಿಜಿಟಲ್ ಬೋರ್ಡ್ ಮೂಲಕ ಜಾಹೀರಾತು ಬಿತ್ತರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ನೈರುತ್ಯ ರೈಲ್ವೆಯ ಸಹಾಯಕ ಮುಖ್ಯ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಹಿರಿಯ ಪರಿಸರ ಅಧಿಕಾರಿ ಸಯ್ಯದ್ ಖಾಜಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ, ಪರಿಸರ ಅಧಿಕಾರಿ ಶೋಭಾ ಪೋಳ, ಬಿಆರ್ ಟಿಸಿ ಸಂಸ್ಥೆಯ ಸಹಾಯಕ ಮುಖ್ಯ ಇಂಜಿನಿಯರ್ ಮುಸ್ತಾಕ ಬಿಜಾಪುರಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಎಸ್.ಬಿ. ಚನ್ನಪ್ಪಗೌಡರ, ಟಿ.ಎಲ್. ಶ್ರೀನಾಥ್, ಕಿರಣಕುಮಾರ ಬಸಾಪುರ, ಪ್ರವೀಣ, ಮುಖ್ಯ ಕಾಮಗಾರಿ ಅಭಿಯಂತರಾದ ಪ್ರಕಾಶ ಕಬಾಡಿ, ಸೋಮಶೇಖರ ಹಿರೇಗೌಡ್ರ, ಎಸ್.ಆರ್. ಪಾಟೀಲ, ಆನಂದ ಕಲ್ಲೋಳಿಕರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿವಿಧ ವಲಯಗಳ ಆಯುಕ್ತರು, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.

The post ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಾಲಾ ಕಾಲೇಜು ಸಂಸ್ಥೆಗಳನ್ನು ಹಸಿರು ಆವರಣ ಮಾಡಲು ಮುಂದಾಗಿ -ನಿವೃತ್ತ ನ್ಯಾ. ಸುಭಾಸ ಆಡಿ appeared first on Hai Sandur kannada fortnightly news paper.

]]>
https://haisandur.com/2022/10/17/%e0%b2%b0%e0%b3%88%e0%b2%b2%e0%b3%8d%e0%b2%b5%e0%b3%86-%e0%b2%a8%e0%b2%bf%e0%b2%b2%e0%b3%8d%e0%b2%a6%e0%b2%be%e0%b2%a3-%e0%b2%ac%e0%b2%b8%e0%b3%8d-%e0%b2%a8%e0%b2%bf%e0%b2%b2%e0%b3%8d%e0%b2%a6/feed/ 0
ನವಲಗುಂದ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳ ಭೇಟಿ. https://haisandur.com/2022/05/13/%e0%b2%a8%e0%b2%b5%e0%b2%b2%e0%b2%97%e0%b3%81%e0%b2%82%e0%b2%a6%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%95%e0%b2%be%e0%b2%a8%e0%b3%82%e0%b2%a8%e0%b3%81-%e0%b2%b8%e0%b3%87/ https://haisandur.com/2022/05/13/%e0%b2%a8%e0%b2%b5%e0%b2%b2%e0%b2%97%e0%b3%81%e0%b2%82%e0%b2%a6%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%95%e0%b2%be%e0%b2%a8%e0%b3%82%e0%b2%a8%e0%b3%81-%e0%b2%b8%e0%b3%87/#respond Fri, 13 May 2022 15:21:47 +0000 https://haisandur.com/?p=27135 ಹುಬ್ಬಳ್ಳಿ : ಮೇ.13: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತಾ ಸಿ.ಎಂ. ಅವರು ಇಂದು ನವಲಗುಂದಕ್ಕೆ ಭೇಟಿ ನೀಡಿ, ತರಹದ ಕಚೇರಿ,ತಾಲೂಕು ಆಸ್ಪತ್ರೆ,ಪೊಲೀಸ್ ಠಾಣೆ,ಶಿಶು ಅಭಿವೃದ್ಧಿ ಯೋಜನಾಧಿಕಾರಿ,ತಾಲೂಕು ಪಂಚಾಯತ ಕಾರ್ಯಾಲಯ ಹಾಗೂ ತಹಸೀಲ್ದಾರ ಕಚೇರಿಗಳಿಗೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೇಲುಗಳಿಗೆ ಆಕಸ್ಮಿಕ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸಿದರು. ಕೌಟುಂಬಿಕ ದೌರ್ಜನ್ಯ ಕಾಯ್ದೆ ಪ್ರಕರಣಗಳಲ್ಲಿ ವರದಿಗಳನ್ನು ನ್ಯಾಯಾಲಯಗಳಿಗೆ ತ್ವರಿತವಾಗಿ ತಲುಪಿಸಲು ಸಿಡಿಪಿಓ ಅವರಿಗೆ ನಿರ್ದೇಶನ ನೀಡಿದರು‌.ತಾಲೂಕು ಸಾರ್ವಜನಿಕ […]

The post ನವಲಗುಂದ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳ ಭೇಟಿ. appeared first on Hai Sandur kannada fortnightly news paper.

]]>
ಹುಬ್ಬಳ್ಳಿ : ಮೇ.13: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತಾ ಸಿ.ಎಂ. ಅವರು ಇಂದು ನವಲಗುಂದಕ್ಕೆ ಭೇಟಿ ನೀಡಿ, ತರಹದ ಕಚೇರಿ,ತಾಲೂಕು ಆಸ್ಪತ್ರೆ,ಪೊಲೀಸ್ ಠಾಣೆ,ಶಿಶು ಅಭಿವೃದ್ಧಿ ಯೋಜನಾಧಿಕಾರಿ,ತಾಲೂಕು ಪಂಚಾಯತ ಕಾರ್ಯಾಲಯ ಹಾಗೂ ತಹಸೀಲ್ದಾರ ಕಚೇರಿಗಳಿಗೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೇಲುಗಳಿಗೆ ಆಕಸ್ಮಿಕ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸಿದರು.

ಕೌಟುಂಬಿಕ ದೌರ್ಜನ್ಯ ಕಾಯ್ದೆ ಪ್ರಕರಣಗಳಲ್ಲಿ ವರದಿಗಳನ್ನು ನ್ಯಾಯಾಲಯಗಳಿಗೆ ತ್ವರಿತವಾಗಿ ತಲುಪಿಸಲು ಸಿಡಿಪಿಓ ಅವರಿಗೆ ನಿರ್ದೇಶನ ನೀಡಿದರು‌.ತಾಲೂಕು ಸಾರ್ವಜನಿಕ ಆಸ್ಪತ್ರೆಯ ಒಳ ಮತ್ತು ಹೊರ ಭಾಗಗಳಲ್ಲಿ ನೈರ್ಮಲ್ಯ ಕಾಪಾಡುವುದು,ರೋಗಿಗಳಿಗೆ ಸಮರ್ಪಕ ಚಿಕಿತ್ಸೆ, ಔಷಧೋಪಚಾರ ಕಲ್ಪಿಸಲು ಸೂಚಿಸಿದರು. ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರಿಗೆ ಕಾನೂನು ಸೇವಾ ಸಮಿತಿಗಳ ಪ್ಯಾನಲ್ ವಕೀಲರ ಉಚಿತ ನೆರವು ಪಡೆಯಲು ಸೂಕ್ತ ಮಾರ್ಗದರ್ಶನ ಒದಗಿಸಬೇಕು. ತಹಸೀಲ್ದಾರ ಕಚೇರಿಗೆ ಬರುವ ಸಾರ್ವಜನಿಕರಿಗೆ ಆಡಳಿತಾಂಗ ತ್ವರಿತ ಸ್ಪಂದನೆ ನೀಡಲು ತಿಳಿಸಿದರು.ಹಾಸ್ಟೆಲುಗಳಲ್ಲಿ ಮಕ್ಕಳ ಅಹವಾಲುಗಳನ್ನು ಆಲಿಸಿದರು.

ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ವಕೀಲರ ಸಂಘದ ಸಭಾಂಗಣದಲ್ಲಿ ಮುಂಬರುವ ಲೋಕ ಅದಾಲತ್‌ ಕುರಿತು ಚರ್ಚಿಸಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಶ್ರಮಿಸಲು ಕೋರಿದರು.

The post ನವಲಗುಂದ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳ ಭೇಟಿ. appeared first on Hai Sandur kannada fortnightly news paper.

]]>
https://haisandur.com/2022/05/13/%e0%b2%a8%e0%b2%b5%e0%b2%b2%e0%b2%97%e0%b3%81%e0%b2%82%e0%b2%a6%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%95%e0%b2%be%e0%b2%a8%e0%b3%82%e0%b2%a8%e0%b3%81-%e0%b2%b8%e0%b3%87/feed/ 0
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ: ಉದ್ಯಾನವನ,ಸಂಗೀತ ಕಾರಂಜಿ,ಪಜಲ್ ಪಾರ್ಕಿಂಗ್,ಪುಟಾಣಿ ರೈಲು ಯೋಜನೆಗಳ ಲೋಕಾರ್ಪಣೆ https://haisandur.com/2022/04/30/%e0%b2%b9%e0%b3%81%e0%b2%ac%e0%b3%8d%e0%b2%ac%e0%b2%b3%e0%b3%8d%e0%b2%b3%e0%b2%bf-%e0%b2%a7%e0%b2%be%e0%b2%b0%e0%b2%b5%e0%b2%be%e0%b2%a1-%e0%b2%b8%e0%b3%8d%e0%b2%ae%e0%b2%be%e0%b2%b0%e0%b3%8d%e0%b2%9f/ https://haisandur.com/2022/04/30/%e0%b2%b9%e0%b3%81%e0%b2%ac%e0%b3%8d%e0%b2%ac%e0%b2%b3%e0%b3%8d%e0%b2%b3%e0%b2%bf-%e0%b2%a7%e0%b2%be%e0%b2%b0%e0%b2%b5%e0%b2%be%e0%b2%a1-%e0%b2%b8%e0%b3%8d%e0%b2%ae%e0%b2%be%e0%b2%b0%e0%b3%8d%e0%b2%9f/#respond Sat, 30 Apr 2022 15:46:10 +0000 https://haisandur.com/?p=26938 ಹುಬ್ಬಳ್ಳಿ: ಏ.30: ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅನುದಾನದ ಅಡಿಯಲ್ಲಿ ಪೂರ್ಣಗೊಂಡ ಮಹಾತ್ಮ ಗಾಂಧಿ ಉದ್ಯಾನವನ, ಇಂದಿರಾ ಗಾಜಿನ‌ಮನೆ,ಸಂಗೀತ ಕಾರಂಜಿ,ಪಜಲ್ ಪಾರ್ಕಿಂಗ್, ಪುಟಾಣಿ ರೈಲು,ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳು ಇ‌ಂದು ಲೋಕಾರ್ಪಣೆಗೊಂಡವು. ಮಹಾತ್ಮಾ ಗಾಂಧಿ ಉದ್ಯಾನವನ ಅಭಿವೃದ್ಧಿ ಯೋಜನೆ:ಉದ್ಯಾನವನದ 21 ಎಕರೆ ಪ್ರದೇಶವನ್ನು 5 ವರ್ಷಗಳ ಕಾರ್ಯಚರಣೆ ಮತ್ತು ನಿರ್ವಹಣೆ ಸೇರಿ 10.96 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಯನ್ನು ಲೋಕಾರ್ಪಣೆ ಮಾಡಲಾಯಿತು. 1.6 ಕಿ.ಮೀ. ಕಾಲುದಾರಿ, 200 ಚ. ಮೀ. ಪ್ರದೇಶದಲ್ಲಿ 350 ಜನ ಕುಳಿತಕೊಳ್ಳಲು ಸ್ಥಳಾವಕಾಶವಿರುವ ಆ್ಯಂಪಿಥಿಯೇಟರ್, […]

The post ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ: ಉದ್ಯಾನವನ,ಸಂಗೀತ ಕಾರಂಜಿ,ಪಜಲ್ ಪಾರ್ಕಿಂಗ್,ಪುಟಾಣಿ ರೈಲು ಯೋಜನೆಗಳ ಲೋಕಾರ್ಪಣೆ appeared first on Hai Sandur kannada fortnightly news paper.

]]>
ಹುಬ್ಬಳ್ಳಿ: ಏ.30: ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅನುದಾನದ ಅಡಿಯಲ್ಲಿ ಪೂರ್ಣಗೊಂಡ ಮಹಾತ್ಮ ಗಾಂಧಿ ಉದ್ಯಾನವನ, ಇಂದಿರಾ ಗಾಜಿನ‌ಮನೆ,ಸಂಗೀತ ಕಾರಂಜಿ,ಪಜಲ್ ಪಾರ್ಕಿಂಗ್, ಪುಟಾಣಿ ರೈಲು,ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳು ಇ‌ಂದು ಲೋಕಾರ್ಪಣೆಗೊಂಡವು.

ಮಹಾತ್ಮಾ ಗಾಂಧಿ ಉದ್ಯಾನವನ ಅಭಿವೃದ್ಧಿ ಯೋಜನೆ:
ಉದ್ಯಾನವನದ 21 ಎಕರೆ ಪ್ರದೇಶವನ್ನು 5 ವರ್ಷಗಳ ಕಾರ್ಯಚರಣೆ ಮತ್ತು ನಿರ್ವಹಣೆ ಸೇರಿ 10.96 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಯನ್ನು ಲೋಕಾರ್ಪಣೆ ಮಾಡಲಾಯಿತು. 1.6 ಕಿ.ಮೀ. ಕಾಲುದಾರಿ, 200 ಚ. ಮೀ. ಪ್ರದೇಶದಲ್ಲಿ 350 ಜನ ಕುಳಿತಕೊಳ್ಳಲು ಸ್ಥಳಾವಕಾಶವಿರುವ ಆ್ಯಂಪಿಥಿಯೇಟರ್, 450 ಚ.ಮೀ.ನಲ್ಲಿ ಮಕ್ಕಳ ಆಟದ ಪ್ರದೇಶ, 8 ಫುಡ್ ಕಿಯೋಸ್ಕೋಗಳಿವೆ‌. 111 ಚ.ಮೀ. ವಿಸ್ತೀರ್ಣದಲ್ಲಿ ಸಣ್ಣ ಸಮಾರಂಭದ ಪ್ರದೇಶ,929 ಚ.ಮೀ. ವ್ಯಾಪ್ತಿಯಲ್ಲಿ ತೆರೆದ ಸಮಾರಂಭದ ಪ್ರದೇಶ, 95 ಚ.ಮೀ.ನಲ್ಲಿ ತೆರದ ವ್ಯಾಯಾಮ ಪ್ರದೇಶ, 34,000 ಚ. ಮೀ. ಪ್ರದೇಶದ ಉದ್ಯಾನವನ, ಧ್ಯಾನ ಮಂದಿರ, ತುಂತುರು ನೀರಾವರಿ ಕ್ಷೇತ್ರ,ಸ್ಕೇಟಿಂಗ್ ಮೈದಾನ ಅಭಿವೃದ್ಧಿ ಪಡಿಸಲಾಗಿದೆ. ಎರಡು ಗಜಿಬೋ, 29 ಶಿಲ್ಪಕಲೆಗಳ ದುರಸ್ತಿ ಹಾಗೂ ಮಳೆ ನೀರು ಚರಂಡಿ ನಿರ್ಮಾಣ,ಎರೆಹುಳು ಗೊಬ್ಬರ, 3 ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ದ್ವಿಚಕ್ರ ವಾಹನ ಪಾರ್ಕಿಂಗ್ ಹಾಗೂ ಡಿಸೇಲ್ ಜನರೇಟರ್ ಸೆಟ್ ಅಳವಡಿಸಲಾಗಿದೆ.

ಇಂದಿರಾ ಗಾಜಿನ ಮನೆಯ ಅಭಿವೃದ್ಧಿ

ಮಹಾತ್ಮಾ ಗಾಂಧಿ ಉದ್ಯಾನದಲ್ಲಿ 1600 ಚ.ಮೀ. ವಿಸ್ತೀರ್ಣದಲ್ಲಿ ರೂ. 1.71 ಕೋಟಿ ರೂ. ವೆಚ್ಚದಲ್ಲಿ ಇಂದಿರಾ ಗಾಜಿನ ಮನೆಗೆ ಎಂ.ಎಸ್. ಟ್ರಸ್, ಜಿ.ಐ. ಶೀಟ್ ಅಳವಡಿಕೆ, ಪೇಟಿಂಗ್ , ಸ್ಲೈಡಿಂಗ್ ಗೇಟ್, ಟಫಂಡ್ ಗ್ಲಾಸ್, ವಿದ್ಯುದ್ದೀಪಗಳ ಅಳವಡಿಕೆ ಮಾಡಲಾಗಿದೆ.

ಸಂಗೀತ ಕಾರಂಜಿ ಮಹಾತ್ಮಾ ಗಾಂಧಿ ಉದ್ಯಾನದಲ್ಲಿ 220 ಚ.ಮೀ. ಪ್ರದೇಶದಲ್ಲಿ 4.67 ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿ, ಲೇಸರ್ ಷೋ, 150 ಸಂಖ್ಯೆ ನಾಜಲಗಳು, ಲೇಸರ್ ಷೋಗಾಗಿ ನೀರಿನ ಪರದೆ ಅಳವಡಿಸಲಾಗಿದೆ.ಪ್ರತಿ ದಿ‌ನ 30 ನಿಮಿಷಗಳ ಅವಧಿಯ 2 ಪ್ರದರ್ಶನಗಳು ನಡೆಯಲಿವೆ.

ಪಜಲ್ ಪಾರ್ಕಿಂಗ್ ಯೋಜನೆ:
80 ಚ.ಮೀ. ಪ್ರದೇಶದಲ್ಲಿ ರೂ.4.59 ಕೋಟಿ ವೆಚ್ಚದಲ್ಲಿ 6 ಹಂತದ 36 ಕಾರುಗಳ ಪಾರ್ಕಿಂಗ್ ಸೌಲಭ್ಯ ಹಾಗೂ 25 ಕಿಲೋ ವ್ಯಾಟ್ ಡಿಸೆಲ್ ಜನರೇಟರ್ ಸೆಟ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪುಟಾಣಿ ರೈಲು ಅಭಿವೃದ್ಧಿ:

ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ರೂ 4.2 ಕೋಟಿ ವೆಚ್ಚದಲ್ಲಿ 960 ಮೀಟರ್ ಟ್ರ್ಯಾಕ್ ಹೊಂದಿರುವ ಪುಟಾಣಿ ರೈಲನ್ನು ಅಭಿವೃದ್ಧಿ ಪಡಿಸಲಾಗಿದೆ. 2 ಇಂಜಿನ್‌ಗಳು, 4 ಹವಾನಿಯಂತ್ರಿತ ಕೋಚ್ ಹಾಗೂ 2 ನಿಲ್ದಾಣಗಳನ್ನು ಹೊಂದಿವೆ. ಸಿ.ಸಿ.ಟಿವಿ ಕ್ಯಾಮೆರಾ ಹಾಗೂ ಆಟೋ ಮ್ಯಾಟಿಕ್ ಬಾಗಿಲು ತೆರೆಯುವ ವ್ಯವಸ್ಥೆ ಮತ್ತು ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಸ್ಮೋಕ್ ಡಿಟೆಕ್ಟರ್ ಹಾಗೂ ಬೆಂಕಿ ನಂದಿಸುವ ವ್ಯವಸ್ಥೆಗಳು ರೈಲಿನಲ್ಲಿವೆ. ಎಲ್‌ಇಡಿ ಸ್ಕ್ರೀನ್ ಗಳು ಮತ್ತು ಟಿವಿ ಸ್ಕ್ರೀನ್ ವ್ಯವಸ್ಥೆಯನ್ನು ಹೊಂದಿದೆ.
ಪುಟಾಣಿ ರೈಲಿನಲ್ಲಿ 48 ಜನ ವಯಸ್ಕರಿಗೆ ಅಥವಾ 60 ಮಕ್ಕಳಿಗೆ ಕಳಿತುಕೊಳ್ಳುವ ಸ್ಥಳಾವಕಾಶವಿದೆ.

ಗುಣಮಟ್ಟ ನಿಯಂತ್ರಣ ಪ್ರಯೋಗಾಲಯ

ಹೊಸೂರು ಕ್ರಾಸ್ ಹತ್ತಿರ 85 ಲಕ್ಷ ರೂ.ವೆಚ್ಚದಲ್ಲಿ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ. ಮಣ್ಣಿನ ಪರೀಕ್ಷೆ, ಸಿಬಿಆರ್ ಪರೀಕ್ಷೆ, ಕೋರ್ ಕಟಿಂಗ್ ಮಿಷನ್‌, ಆಸ್ಫಾಲ್ಟ್ ಪರೀಕ್ಷೆ, ಕೋರ್ಸ್ ಅಗ್ರಿಗೇಟ್ ಮತ್ತು ಫೈನ್ ಅಗ್ರಿಗೇಟ್ ಪರೀಕ್ಷೆ, ಸಿಮೆಂಟ್ ಪರೀಕ್ಷೆ, ಕಾಂಕ್ರೀಟ್ ಘನಗಳ ಪರೀಕ್ಷೆ ಮಾಡಲು ಅವಕಾಶವಿದೆ.

The post ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ: ಉದ್ಯಾನವನ,ಸಂಗೀತ ಕಾರಂಜಿ,ಪಜಲ್ ಪಾರ್ಕಿಂಗ್,ಪುಟಾಣಿ ರೈಲು ಯೋಜನೆಗಳ ಲೋಕಾರ್ಪಣೆ appeared first on Hai Sandur kannada fortnightly news paper.

]]>
https://haisandur.com/2022/04/30/%e0%b2%b9%e0%b3%81%e0%b2%ac%e0%b3%8d%e0%b2%ac%e0%b2%b3%e0%b3%8d%e0%b2%b3%e0%b2%bf-%e0%b2%a7%e0%b2%be%e0%b2%b0%e0%b2%b5%e0%b2%be%e0%b2%a1-%e0%b2%b8%e0%b3%8d%e0%b2%ae%e0%b2%be%e0%b2%b0%e0%b3%8d%e0%b2%9f/feed/ 0
ಕೋವಿಡ್ ಮಾರ್ಗಸೂಚಿಗಳ ಅನುಸಾರ ಬಸವ ಜಯಂತಿ-ತಹಶೀಲ್ದಾರ ಶಶಿಧರ್ ಮಾಡ್ಯಾಳ https://haisandur.com/2022/04/27/%e0%b2%95%e0%b3%8b%e0%b2%b5%e0%b2%bf%e0%b2%a1%e0%b3%8d-%e0%b2%ae%e0%b2%be%e0%b2%b0%e0%b3%8d%e0%b2%97%e0%b2%b8%e0%b3%82%e0%b2%9a%e0%b2%bf%e0%b2%97%e0%b2%b3-%e0%b2%85%e0%b2%a8%e0%b3%81%e0%b2%b8%e0%b2%be/ https://haisandur.com/2022/04/27/%e0%b2%95%e0%b3%8b%e0%b2%b5%e0%b2%bf%e0%b2%a1%e0%b3%8d-%e0%b2%ae%e0%b2%be%e0%b2%b0%e0%b3%8d%e0%b2%97%e0%b2%b8%e0%b3%82%e0%b2%9a%e0%b2%bf%e0%b2%97%e0%b2%b3-%e0%b2%85%e0%b2%a8%e0%b3%81%e0%b2%b8%e0%b2%be/#respond Wed, 27 Apr 2022 11:46:55 +0000 https://haisandur.com/?p=26855 ಹುಬ್ಬಳ್ಳಿ :ಏ.27: ಕೋವಿಡ್ ಮಾರ್ಗಸೂಚಿಗಳ ಜಾರಿ ಕುರಿತು ಪ್ರಧಾನಮಂತ್ರಿಗಳೊಂದಿಗೆ ಮುಖ್ಯಮಂತ್ರಿಗಳ ಸಭೆ ನಂತರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ. ಪರಿಷ್ಕೃತ ಕೋವಿಡ್ ನಿಯಮಗಳ ಅನುಸಾರ ಮೇ.3ರಂದು ಬಸವ ಜಯಂತಿಯನ್ನು ಆಚರಣೆ ಮಾಡಲಾಗುವುದು ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರ ಶಶಿಧರ್ ಮಾಡ್ಯಾಳ ಹೇಳಿದರು. ಹುಬ್ಬಳ್ಳಿಯ ಮಿನಿವಿಧಾನಸೌಧದ ತಹಶೀಲ್ದಾರ ಸಭಾಭವನದಲ್ಲಿ ಇಂದು ಬಸವ ಜಯಂತಿ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಲವು ಬಡಾವಣೆಗಳಲ್ಲಿ ಬಸವ ಜಯಂತಿಯನ್ನು ಆಚರಣೆ ಮಾಡಲಿವೆ. ಮೇ.3 ರಂದು ಬೆಳಿಗ್ಗೆ […]

The post ಕೋವಿಡ್ ಮಾರ್ಗಸೂಚಿಗಳ ಅನುಸಾರ ಬಸವ ಜಯಂತಿ<br>-ತಹಶೀಲ್ದಾರ ಶಶಿಧರ್ ಮಾಡ್ಯಾಳ appeared first on Hai Sandur kannada fortnightly news paper.

]]>
ಹುಬ್ಬಳ್ಳಿ :ಏ.27: ಕೋವಿಡ್ ಮಾರ್ಗಸೂಚಿಗಳ ಜಾರಿ ಕುರಿತು ಪ್ರಧಾನಮಂತ್ರಿಗಳೊಂದಿಗೆ ಮುಖ್ಯಮಂತ್ರಿಗಳ ಸಭೆ ನಂತರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ. ಪರಿಷ್ಕೃತ ಕೋವಿಡ್ ನಿಯಮಗಳ ಅನುಸಾರ ಮೇ.3ರಂದು ಬಸವ ಜಯಂತಿಯನ್ನು ಆಚರಣೆ ಮಾಡಲಾಗುವುದು ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರ ಶಶಿಧರ್ ಮಾಡ್ಯಾಳ ಹೇಳಿದರು.

ಹುಬ್ಬಳ್ಳಿಯ ಮಿನಿವಿಧಾನಸೌಧದ ತಹಶೀಲ್ದಾರ ಸಭಾಭವನದಲ್ಲಿ ಇಂದು ಬಸವ ಜಯಂತಿ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಲವು ಬಡಾವಣೆಗಳಲ್ಲಿ ಬಸವ ಜಯಂತಿಯನ್ನು ಆಚರಣೆ ಮಾಡಲಿವೆ. ಮೇ.3 ರಂದು ಬೆಳಿಗ್ಗೆ 10 ಗಂಟೆಗೆ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ, ಬೆಳಿಗ್ಗೆ 11 ಗಂಟೆಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ವಿದ್ಯಾರ್ಥಿಗಳಿಂದ ಬಸವಣ್ಣನವರ ವಚನಗಳ ವಾಚನ,ಗಾಯನ ಏರ್ಪಡಿಸಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ನಿಯಮಾನುಸಾರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಗೆ ಹಾಜರಾಗಿ ಸಲಹೆ ಸೂಚನೆಗಳನ್ನು ನೀಡಿದರು.

ಮುಖಂಡರಾದ ಚನ್ನಬಸಪ್ಪ ಧಾರವಾಡಶೆಟ್ಟರ್, ನಂದಕುಮಾರ ಪಾಟೀಲ, ನೀಲಕಂಠಯ್ಯ ತಡಸದಮಠ, ಗುರನಗೌಡ ಪಾಟೀಲ, ಬಸವರಾಜ ಜಾಬಿನ್, ನಿರ್ಮಲಾ ಹಿರೇಮಠ, ಬಸವರಾಜ ಯಕ್ಲಾಸಪುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

The post ಕೋವಿಡ್ ಮಾರ್ಗಸೂಚಿಗಳ ಅನುಸಾರ ಬಸವ ಜಯಂತಿ<br>-ತಹಶೀಲ್ದಾರ ಶಶಿಧರ್ ಮಾಡ್ಯಾಳ appeared first on Hai Sandur kannada fortnightly news paper.

]]>
https://haisandur.com/2022/04/27/%e0%b2%95%e0%b3%8b%e0%b2%b5%e0%b2%bf%e0%b2%a1%e0%b3%8d-%e0%b2%ae%e0%b2%be%e0%b2%b0%e0%b3%8d%e0%b2%97%e0%b2%b8%e0%b3%82%e0%b2%9a%e0%b2%bf%e0%b2%97%e0%b2%b3-%e0%b2%85%e0%b2%a8%e0%b3%81%e0%b2%b8%e0%b2%be/feed/ 0
ಸರ್ಕಾರಿ ಅಧಿಕಾರಿಗಳು ನೌಕರರು ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕ ಸೇವೆ ನೀಡಲಿ ಉಪಲೋಕಾಯುಕ್ತ ಬಿ.ಎಸ್.ಪಾಟೀಲ. https://haisandur.com/2022/04/25/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%85%e0%b2%a7%e0%b2%bf%e0%b2%95%e0%b2%be%e0%b2%b0%e0%b2%bf%e0%b2%97%e0%b2%b3%e0%b3%81-%e0%b2%a8%e0%b3%8c%e0%b2%95%e0%b2%b0%e0%b2%b0/ https://haisandur.com/2022/04/25/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%85%e0%b2%a7%e0%b2%bf%e0%b2%95%e0%b2%be%e0%b2%b0%e0%b2%bf%e0%b2%97%e0%b2%b3%e0%b3%81-%e0%b2%a8%e0%b3%8c%e0%b2%95%e0%b2%b0%e0%b2%b0/#respond Mon, 25 Apr 2022 13:33:35 +0000 https://haisandur.com/?p=26806 ಹುಬ್ಬಳ್ಳಿ:ಏ.25: ಜನ ಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ,ನೌಕರರು ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಉಪಲೋಕಾಯುಕ್ತ ಬಿ. ಎಸ್. ಪಾಟೀಲ ಹೇಳಿದರು. ನಗರದ ಸರ್ಕ್ಯೂಟ್ ಹೌಸನಲ್ಲಿ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಲೋಕಾಯುಕ್ತ ಪ್ರಕರಣಗಳು , ಸಾರ್ವಜನಿಕರ ದೂರುಗಳ ಮೇಲೆ ಕೈಗೊಂಡ ಕ್ರಮಗಳ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಜಿಲ್ಲೆಯಾದ್ಯಂತ ಪ್ರತಿ ತಾಲೂಕು ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಪ್ರತಿ ಹಂತದಲ್ಲೂ ನ್ಯಾಯಬದ್ಧವಾಗಿ ಒದಗಿಸಬೇಕು. ಪಂಚಾಯತ್ ರಾಜ್ […]

The post ಸರ್ಕಾರಿ ಅಧಿಕಾರಿಗಳು ನೌಕರರು ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕ ಸೇವೆ ನೀಡಲಿ ಉಪಲೋಕಾಯುಕ್ತ ಬಿ.ಎಸ್.ಪಾಟೀಲ. appeared first on Hai Sandur kannada fortnightly news paper.

]]>
ಹುಬ್ಬಳ್ಳಿ:ಏ.25: ಜನ ಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ,ನೌಕರರು ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಉಪಲೋಕಾಯುಕ್ತ ಬಿ. ಎಸ್. ಪಾಟೀಲ ಹೇಳಿದರು.

ನಗರದ ಸರ್ಕ್ಯೂಟ್ ಹೌಸನಲ್ಲಿ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಲೋಕಾಯುಕ್ತ ಪ್ರಕರಣಗಳು , ಸಾರ್ವಜನಿಕರ ದೂರುಗಳ ಮೇಲೆ ಕೈಗೊಂಡ ಕ್ರಮಗಳ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲೆಯಾದ್ಯಂತ ಪ್ರತಿ ತಾಲೂಕು ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಪ್ರತಿ ಹಂತದಲ್ಲೂ ನ್ಯಾಯಬದ್ಧವಾಗಿ ಒದಗಿಸಬೇಕು. ಪಂಚಾಯತ್ ರಾಜ್ ಅಧಿನಿಯಮದಡಿ ಸಿಗಬಹುದಾದ ಸೌಲಭ್ಯಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಸಕಾಲ ಯೋಜನೆಯಡಿ ನಿಗದಿತ ಕಾಲದಲ್ಲಿ ಕಡತಗಳ ವಿಲೇವಾರಿಯನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳು, ನೌಕರರು ಕರ್ತವ್ಯ ನಿಷ್ಠೆಯನ್ನು ಪಾಲಿಸಬೇಕು, ಯಾವುದೇ ಒತ್ತಡಕ್ಕೆ ಮಣಿಯದೆ ಸೇವೆಯನ್ನು ನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಜಿಲ್ಲೆಯ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಪ್ರಗತಿ ಪಥದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಮೃತರಾದ ಕುಟುಂಬಕ್ಕೆ ಪರಿಹಾರ ವಿತರಿಸಲಾಗಿದೆ. ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳ ಕುಟುಂಬಗಳಿಗೆ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೋಷಕತ್ವ ನಿರ್ವಹಣೆಗೆ ನೆರವು ನೀಡಲಾಗುತ್ತಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ. ಬಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಸ್ವಚ್ಛತೆಯ ಸಲಕರಣೆಗಳನ್ನು ಪೌರಕಾರ್ಮಿಕರಿಗೆ ಒದಗಿಸಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಪೋಲಿಸ್ ಆಯುಕ್ತ ಲಾಭೂರಾಮ್ ಮಾತನಾಡಿ ಅವಳಿನಗರದಲ್ಲಿ ಕಾನೂನು ಉಲ್ಲಂಘನೆ ಯಾಗದಂತೆ ಸೂಕ್ತ ಕ್ರಮವಹಿಸಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಉಲ್ಲಂಘಿಸಿದವರ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ‌ಸುರೇಶ್. ಇಟ್ನಾಳ, ಡಿಸಿಪಿ ಸಾಹಿಲ್ ಬಾಗ್ಲಾ,ಲೋಕಾಯುಕ್ತ ಎಸ್.ಪಿ.ವಿಜಯಕುಮಾರ್ ಬಿಸನಳ್ಳಿ,ಡಿಎಸ್‌ಪಿ ಹುಸೇನ್‌ಖಾನ್ ಪಠಾಣ, ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ.ಚೌಡಣ್ಣವರ, ಹುಬ್ಬಳ್ಳಿ ಶಹರ ತಹಶಿಲ್ದಾರ ಶಶಿಧರ್ ಮಾಡ್ಯಾಳ, ಗ್ರಾಮೀಣ ತಹಶಿಲ್ದಾರ ಪ್ರಕಾಶ್ ನಾಶಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

The post ಸರ್ಕಾರಿ ಅಧಿಕಾರಿಗಳು ನೌಕರರು ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕ ಸೇವೆ ನೀಡಲಿ ಉಪಲೋಕಾಯುಕ್ತ ಬಿ.ಎಸ್.ಪಾಟೀಲ. appeared first on Hai Sandur kannada fortnightly news paper.

]]>
https://haisandur.com/2022/04/25/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%85%e0%b2%a7%e0%b2%bf%e0%b2%95%e0%b2%be%e0%b2%b0%e0%b2%bf%e0%b2%97%e0%b2%b3%e0%b3%81-%e0%b2%a8%e0%b3%8c%e0%b2%95%e0%b2%b0%e0%b2%b0/feed/ 0
ವಾರ್ಡ್ ಸಮಿತಿ ರಚಿಸುವ ಕುರಿತು ತಿಳುವಳಿಕೆ ಕಾರ್ಯಾಗಾರ; ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ-ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ https://haisandur.com/2022/04/22/%e0%b2%b5%e0%b2%be%e0%b2%b0%e0%b3%8d%e0%b2%a1%e0%b3%8d-%e0%b2%b8%e0%b2%ae%e0%b2%bf%e0%b2%a4%e0%b2%bf-%e0%b2%b0%e0%b2%9a%e0%b2%bf%e0%b2%b8%e0%b3%81%e0%b2%b5-%e0%b2%95%e0%b3%81%e0%b2%b0%e0%b2%bf/ https://haisandur.com/2022/04/22/%e0%b2%b5%e0%b2%be%e0%b2%b0%e0%b3%8d%e0%b2%a1%e0%b3%8d-%e0%b2%b8%e0%b2%ae%e0%b2%bf%e0%b2%a4%e0%b2%bf-%e0%b2%b0%e0%b2%9a%e0%b2%bf%e0%b2%b8%e0%b3%81%e0%b2%b5-%e0%b2%95%e0%b3%81%e0%b2%b0%e0%b2%bf/#respond Fri, 22 Apr 2022 13:52:56 +0000 https://haisandur.com/?p=26726 ಹುಬ್ಬಳ್ಳಿ : ಏ.22: ಗ್ರಾಮೀಣ ಜನರಿಗೆ ಆಡಳಿತದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಗ್ರಾಮಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ ಸಾಧಿಸಲಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಶಂಕರಾನಂದ ಬನಶಂಕರಿ ಹೇಳಿದರು. ಹುಬ್ಬಳ್ಳಿಯ ಆದರ್ಶನಗರದ ಡಾ.ಡಿ.ಎಸ್.ಕರ್ಕಿ ಕನ್ನಡ‌ ಭವನದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ವಾರ್ಡ್ ಸಮಿತಿ ರಚಿಸುವ ಕುರಿತು ತಿಳುವಳಿಕೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ನೆಹರೂ ಸರ್ಕಾರ 1952ರಲ್ಲಿ ಗಾಂಧಿ ಜಯಂತಿಯಂದು ಸಮುದಾಯ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೊಳಿಸಿತು. […]

The post ವಾರ್ಡ್ ಸಮಿತಿ ರಚಿಸುವ ಕುರಿತು ತಿಳುವಳಿಕೆ ಕಾರ್ಯಾಗಾರ; ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ-ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ appeared first on Hai Sandur kannada fortnightly news paper.

]]>
ಹುಬ್ಬಳ್ಳಿ : ಏ.22: ಗ್ರಾಮೀಣ ಜನರಿಗೆ ಆಡಳಿತದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಗ್ರಾಮಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ ಸಾಧಿಸಲಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಶಂಕರಾನಂದ ಬನಶಂಕರಿ ಹೇಳಿದರು.

ಹುಬ್ಬಳ್ಳಿಯ ಆದರ್ಶನಗರದ ಡಾ.ಡಿ.ಎಸ್.ಕರ್ಕಿ ಕನ್ನಡ‌ ಭವನದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ವಾರ್ಡ್ ಸಮಿತಿ ರಚಿಸುವ ಕುರಿತು ತಿಳುವಳಿಕೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ನೆಹರೂ ಸರ್ಕಾರ 1952ರಲ್ಲಿ ಗಾಂಧಿ ಜಯಂತಿಯಂದು ಸಮುದಾಯ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೊಳಿಸಿತು. ಬಲವಂತರಾಯ್ ಸಮಿತಿಯು ಗ್ರಾಮ, ಬ್ಲಾಕ್ ಹಾಗೂ ಜಿಲ್ಲಾ ಪಂಚಾಯತ ಎಂಬ ಮೂರು ಹಂತದ ಪಂಚಾಯತ ವ್ಯವಸ್ಥೆಯನ್ನು ಜಾರಿಗೆ ತಂದಿತು. ರಾಜಸ್ಥಾನದ ನಾಗೂರನಲ್ಲಿ ದೇಶದ ಮೊದಲ ಗ್ರಾಮ ಪಂಚಾಯತಿಯನ್ನು ಸ್ಥಾಪಿಸಲಾಯಿತು. ವೇದಗಳಲ್ಲಿ ಸಭಾ ಮತ್ತು ಸಮಿತಿ ಹಾಗೂ ಚೋಳರ ಕಾಲದಲ್ಲಿ ಪಂಚರ ವ್ಯವಸ್ಥೆ ಜಾರಿಯಲ್ಲಿದ್ದವು. ಲಾರ್ಡ್ ರಿಪ್ಪನ್ ಅವರು ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಮಹತ್ವ ನೀಡಿದ್ದರಿಂದ ಅವರನ್ನು ಸ್ಥಳೀಯ ಸಂಸ್ಥೆಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಗಾಂಧೀಜಿಯವರು ಕಂಡ ಕನಸು ನನಸಾಗಲು ಗ್ರಾಮಗಳ ಉದ್ಧಾರವಾಗಬೇಕು. ಕಸ ಸಂಗ್ರಹಣ ವಾಹನಗಳ ಜಿಂಗಲ್, ಎಚ್ ಡಿಎಂಸಿ ಟೆಲಿಗ್ರಾಮ್ ಗ್ರುಪ್, ಮಾಧ್ಯಮಗಳ ಮೂಲಕ ವಾರ್ಡ್ ಸಮಿತಿ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಸಂತೋಷ ನರಗುಂದ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆ ಪ್ರಭುಗಳು. ಪ್ರಜೆಗಳು ಅಧಿಕಾರದ ಮೂಲವಾಗಿರುತ್ತಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ವಾರ್ಡ್ ಸಮಿತಿಗಳ ಮೂಲಕ ಅಭಿವೃದ್ಧಿ ಸಾಧಿಸಲಾಗುತ್ತಿದೆ. ವಾರ್ಡ್ ಸಮಿತಿ ಮೂಲಕ ತಮ್ಮ ವಾರ್ಡ್ ಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಳ್ಳಬಹುದು. ವಾರ್ಡ್ ಸಮಸ್ಯೆಗಳನ್ನು ಬೇಗನೆ ಪರಿಗಹರಿಸಿಕೊಳ್ಳಬಹುದಾಗಿದೆ. ರಸ್ತೆ, ಒಳಚರಂಡಿ, ಉದ್ಯಾನ, ಪುಟಪಾತ್ ಸೇರಿದಂತೆ ಮೂಲ ಸೌಕರ್ಯಗಳ ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು. ಸಮಗ್ರ ಅಭಿವೃದ್ಧಿ ಸಾಧಿಸಲು ನೆರವಾಗಲಿದೆ. ಪ್ರತಿ ತಿಂಗಳು ಸಭೆ ನಡೆಸಿ ತಮ್ಮ‌ ವಾರ್ಡಿನ ಸರ್ವಾಂಗೀಣ ಅಭಿವೃದ್ಧಿಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೀರ್ಮಾನಿಸಬಹುದು. ವಾರ್ಡ್ ಸಮಿತಿ ರಚನೆ ಕುರಿತು ಜನರಿಗೆ ಅರಿವು ಮೂಡಿಸಬೇಕಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ‌ಭಾಗವಹಿಸಬೇಕು. ತಮ್ಮ‌ ವಾರ್ಡನ್ನು ಆದರ್ಶ ವಾರ್ಡನ್ನಾಗಿ ಮಾಡಲು ನೆರವಾಗಲಿದೆ. ಹುಬ್ಬಳ್ಳಿಯಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಲು ಮುಂದಾಗಬೇಕು. ಅಧಿಕಾರಿಗಳ ಜೊತೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಸ್ವಚ್ಛ ವಾತಾವರಣ ನಿರ್ಮಿಸಬಹುದು ಎಂದರು. ‌

ಅಶೋಕ‌ಕುಮಾರ ಬೆಸ್ತ, ಗುರುರಾಜ ಕುಲಕರ್ಣಿ, ಸಂಜೀವ ಧುಮಕನಾಳ, ಸಂಜಯ್, ಮಹೇಶ ಚಂದರಗಿ, ಅವಿನಾಶ್ ಕುಲಕರ್ಣಿ, ಜಿ.ಎಸ್.ಪಾಟೀಲ್, ಶಿವಶಂಕರ, ವೀರು ಉಪ್ಪಿನ, ಗೋವಿಂದ ಕುಲಕರ್ಣಿ ಸೇರಿದಂತೆ ಸಾರ್ವಜನಿಕರ ವಾರ್ಡ್ ಸಮಿತಿ ರಚನೆ ಕುರಿತು ಪ್ರಶ್ನೆಗಳಿಗೆ ಹೆಚ್ಚುವರಿ ಆಯುಕ್ತರು ಉತ್ತರಿಸಿದರು.

ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಮಂಜುನಾಥ ಬುರ್ಲಿ, ಶೀಲಾ ಕಾಟಕರ, ಪಾಲಿಕೆಯ ವಲಯ ಅಧಿಕಾರಿಗಳಾದ ಆನಂದ ಕಾಂಬ್ಳೆ, ಬಸವರಾಜ ಜಿದ್ದಿ, ರಮೇಶ ನೂಲ್ವಿ ಸೇರಿದಂತೆ ಇತರರು ಇದ್ದರು.

ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ್ ತಳವಾರ ನಿರೂಪಿಸಿ, ವಂದಿಸಿದರು.

The post ವಾರ್ಡ್ ಸಮಿತಿ ರಚಿಸುವ ಕುರಿತು ತಿಳುವಳಿಕೆ ಕಾರ್ಯಾಗಾರ; ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ-ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ appeared first on Hai Sandur kannada fortnightly news paper.

]]>
https://haisandur.com/2022/04/22/%e0%b2%b5%e0%b2%be%e0%b2%b0%e0%b3%8d%e0%b2%a1%e0%b3%8d-%e0%b2%b8%e0%b2%ae%e0%b2%bf%e0%b2%a4%e0%b2%bf-%e0%b2%b0%e0%b2%9a%e0%b2%bf%e0%b2%b8%e0%b3%81%e0%b2%b5-%e0%b2%95%e0%b3%81%e0%b2%b0%e0%b2%bf/feed/ 0