ವಾರ್ಡ್ ಸಮಿತಿ ರಚಿಸುವ ಕುರಿತು ತಿಳುವಳಿಕೆ ಕಾರ್ಯಾಗಾರ; ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ-ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ

0
93

ಹುಬ್ಬಳ್ಳಿ : ಏ.22: ಗ್ರಾಮೀಣ ಜನರಿಗೆ ಆಡಳಿತದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಗ್ರಾಮಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ ಸಾಧಿಸಲಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಶಂಕರಾನಂದ ಬನಶಂಕರಿ ಹೇಳಿದರು.

ಹುಬ್ಬಳ್ಳಿಯ ಆದರ್ಶನಗರದ ಡಾ.ಡಿ.ಎಸ್.ಕರ್ಕಿ ಕನ್ನಡ‌ ಭವನದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ವಾರ್ಡ್ ಸಮಿತಿ ರಚಿಸುವ ಕುರಿತು ತಿಳುವಳಿಕೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ನೆಹರೂ ಸರ್ಕಾರ 1952ರಲ್ಲಿ ಗಾಂಧಿ ಜಯಂತಿಯಂದು ಸಮುದಾಯ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೊಳಿಸಿತು. ಬಲವಂತರಾಯ್ ಸಮಿತಿಯು ಗ್ರಾಮ, ಬ್ಲಾಕ್ ಹಾಗೂ ಜಿಲ್ಲಾ ಪಂಚಾಯತ ಎಂಬ ಮೂರು ಹಂತದ ಪಂಚಾಯತ ವ್ಯವಸ್ಥೆಯನ್ನು ಜಾರಿಗೆ ತಂದಿತು. ರಾಜಸ್ಥಾನದ ನಾಗೂರನಲ್ಲಿ ದೇಶದ ಮೊದಲ ಗ್ರಾಮ ಪಂಚಾಯತಿಯನ್ನು ಸ್ಥಾಪಿಸಲಾಯಿತು. ವೇದಗಳಲ್ಲಿ ಸಭಾ ಮತ್ತು ಸಮಿತಿ ಹಾಗೂ ಚೋಳರ ಕಾಲದಲ್ಲಿ ಪಂಚರ ವ್ಯವಸ್ಥೆ ಜಾರಿಯಲ್ಲಿದ್ದವು. ಲಾರ್ಡ್ ರಿಪ್ಪನ್ ಅವರು ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಮಹತ್ವ ನೀಡಿದ್ದರಿಂದ ಅವರನ್ನು ಸ್ಥಳೀಯ ಸಂಸ್ಥೆಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಗಾಂಧೀಜಿಯವರು ಕಂಡ ಕನಸು ನನಸಾಗಲು ಗ್ರಾಮಗಳ ಉದ್ಧಾರವಾಗಬೇಕು. ಕಸ ಸಂಗ್ರಹಣ ವಾಹನಗಳ ಜಿಂಗಲ್, ಎಚ್ ಡಿಎಂಸಿ ಟೆಲಿಗ್ರಾಮ್ ಗ್ರುಪ್, ಮಾಧ್ಯಮಗಳ ಮೂಲಕ ವಾರ್ಡ್ ಸಮಿತಿ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಸಂತೋಷ ನರಗುಂದ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆ ಪ್ರಭುಗಳು. ಪ್ರಜೆಗಳು ಅಧಿಕಾರದ ಮೂಲವಾಗಿರುತ್ತಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ವಾರ್ಡ್ ಸಮಿತಿಗಳ ಮೂಲಕ ಅಭಿವೃದ್ಧಿ ಸಾಧಿಸಲಾಗುತ್ತಿದೆ. ವಾರ್ಡ್ ಸಮಿತಿ ಮೂಲಕ ತಮ್ಮ ವಾರ್ಡ್ ಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಳ್ಳಬಹುದು. ವಾರ್ಡ್ ಸಮಸ್ಯೆಗಳನ್ನು ಬೇಗನೆ ಪರಿಗಹರಿಸಿಕೊಳ್ಳಬಹುದಾಗಿದೆ. ರಸ್ತೆ, ಒಳಚರಂಡಿ, ಉದ್ಯಾನ, ಪುಟಪಾತ್ ಸೇರಿದಂತೆ ಮೂಲ ಸೌಕರ್ಯಗಳ ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು. ಸಮಗ್ರ ಅಭಿವೃದ್ಧಿ ಸಾಧಿಸಲು ನೆರವಾಗಲಿದೆ. ಪ್ರತಿ ತಿಂಗಳು ಸಭೆ ನಡೆಸಿ ತಮ್ಮ‌ ವಾರ್ಡಿನ ಸರ್ವಾಂಗೀಣ ಅಭಿವೃದ್ಧಿಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೀರ್ಮಾನಿಸಬಹುದು. ವಾರ್ಡ್ ಸಮಿತಿ ರಚನೆ ಕುರಿತು ಜನರಿಗೆ ಅರಿವು ಮೂಡಿಸಬೇಕಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ‌ಭಾಗವಹಿಸಬೇಕು. ತಮ್ಮ‌ ವಾರ್ಡನ್ನು ಆದರ್ಶ ವಾರ್ಡನ್ನಾಗಿ ಮಾಡಲು ನೆರವಾಗಲಿದೆ. ಹುಬ್ಬಳ್ಳಿಯಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಲು ಮುಂದಾಗಬೇಕು. ಅಧಿಕಾರಿಗಳ ಜೊತೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಸ್ವಚ್ಛ ವಾತಾವರಣ ನಿರ್ಮಿಸಬಹುದು ಎಂದರು. ‌

ಅಶೋಕ‌ಕುಮಾರ ಬೆಸ್ತ, ಗುರುರಾಜ ಕುಲಕರ್ಣಿ, ಸಂಜೀವ ಧುಮಕನಾಳ, ಸಂಜಯ್, ಮಹೇಶ ಚಂದರಗಿ, ಅವಿನಾಶ್ ಕುಲಕರ್ಣಿ, ಜಿ.ಎಸ್.ಪಾಟೀಲ್, ಶಿವಶಂಕರ, ವೀರು ಉಪ್ಪಿನ, ಗೋವಿಂದ ಕುಲಕರ್ಣಿ ಸೇರಿದಂತೆ ಸಾರ್ವಜನಿಕರ ವಾರ್ಡ್ ಸಮಿತಿ ರಚನೆ ಕುರಿತು ಪ್ರಶ್ನೆಗಳಿಗೆ ಹೆಚ್ಚುವರಿ ಆಯುಕ್ತರು ಉತ್ತರಿಸಿದರು.

ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಮಂಜುನಾಥ ಬುರ್ಲಿ, ಶೀಲಾ ಕಾಟಕರ, ಪಾಲಿಕೆಯ ವಲಯ ಅಧಿಕಾರಿಗಳಾದ ಆನಂದ ಕಾಂಬ್ಳೆ, ಬಸವರಾಜ ಜಿದ್ದಿ, ರಮೇಶ ನೂಲ್ವಿ ಸೇರಿದಂತೆ ಇತರರು ಇದ್ದರು.

ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ್ ತಳವಾರ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here