ಪೊಲೀಸ್ ಇಲಾಖೆಗೆ ಹೊಸ ಸವಾಲುಗಳು ಎದುರಾಗುತ್ತಿವೆ,ಇಂದು ಹುತಾತ್ಮ ಪೊಲೀಸ್ ಅಧಿಕಾರಿಗಳನ್ನು ಸ್ಮರಿಸುವ ಸುದಿನ -ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

0
93

ಹುಬ್ಬಳ್ಳಿ: ಅ.21: ಎಲ್ಲಾ ಪೊಲೀಸ್ ಹುತಾತ್ಮರನ್ನು ಸ್ಮರಿಸುವ ದಿನ ಇದಾಗಿದೆ. ಚೀನಾ ಗಡಿ ಕಾರ್ಯಾಚರಣೆ ಮಾಡುತ್ತಿದ್ದ ವೇಳೆಯಲ್ಲಿ 10 ಜನ ಪೊಲೀಸ್ ಅಧಿಕಾರಿಗಳು ಹುತಾತ್ಮರ ದಿನವಿಂದು. ಇಂದು ನಾವು ಹೆಮ್ಮೆಯಿಂದ ನೆನಪಿಸಿಕೊಳ್ಳುವ ದಿನವಾಗಿದೆ. ಪೊಲೀಸ್ ಇಲಾಖೆಯು ಇಂದು ಶಾಂತಿ ಸುವ್ಯವಸ್ಥೆ ಕಾಪಾಡಲು, ಸಾರ್ವಜನಿಕ ಆಸ್ತಿಪಾಸ್ತಿ, ಜನರ ಜೀವ ರಕ್ಷಣೆ, ಟ್ರಾಫಿಕ್ ಸಮಸ್ಯೆ ನಿವಾರಣೆ, ಸೈಬರ್ ಕ್ರೈಂ, ಮಕ್ಕಳ ಮೇಲೆ ಹಲ್ಲೆ ಸೇರಿದಂತೆ ವಿವಿಧ ಹೊಸ ಸವಾಲುಗಳು ಪೊಲೀಸ್ ಇಲಾಖೆಗೆ ಎದುರಾಗುತ್ತಿವೆ. ಅಪರಾಧಗಳನ್ನು ತಡೆಗಟ್ಟಲು ಹೊಸ ಹೆಜ್ಜೆಗಳನ್ನು ಇಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಇಂದು ಹಳೇ ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಆಯೋಜಿಸಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹುಬ್ಬಳ್ಳಿಯಲ್ಲಿ ಎಫ್.ಎಸ್.ಎಲ್. ಕೆಂದ್ರವನ್ನು ತೆರಯಲಾಗಿದೆ.ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಅಭಿವೃದ್ಧಿ ಹೊಂದಬೇಕಾಗಿರುವುದು ಅವಶ್ಯವಾಗಿದೆ ಎಂದು ತಿಳಿಸಿದರು.

ಪೊಲೀಸ್ ಕಮೀಷನರ್ ಲಾಭೂರಾಮ್ ಮಾತನಾಡಿ, ಪ್ರತಿ ವರ್ಷ ಪೊಲೀಸ್ ಸಂಸ್ಮರಣ ದಿನವನ್ನು ಅಕ್ಟೋಬರ್ 21 ರಂದು ಆಚರಣೆ ಮಾಡಲಾಗುವುದು. 1959ರಲ್ಲಿ ಚೀನಾ ಗಡಿಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರಾಣ ತ್ಯಾಗ ಮಾಡಿದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಕಳೆದ ವರ್ಷದಿಂದ 264 ಪೊಲೀಸ್ ಅಧಿಕಾರಿಗಳು ಸೇವೆಯಲ್ಲಿರುವಾಗ ಮೃತರಾಗಿದ್ದಾರೆ. ಅದರಲ್ಲಿ ರಾಜ್ಯದ 11 ಜನರಲ್ಲಿ ಜಿಲ್ಲೆಯ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ನಿಂಗಪ್ಪ ಭೂಷಣ್ಣನವರ , ಪಂಡಿತ ಕಾಸರ್ ಅವರು ಪ್ರಾಣ ತ್ಯಾಗ ಮಾಡಿದರು ಎಂದರು.

ವಿವಿಧ ಗಣ್ಯರು, ಅತಿಥಿಗಳು ಹಾಗೂ ಸಾರ್ವಜನಿಕರು ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಸೇವೆಯಲ್ಲಿರುವಾಗ ಮೃತರಾದ ನಿಂಗಪ್ಪ ಭೂಷಣ್ಣನವರ ಅವರ ಪತ್ನಿ ಸಂಗೀತಾ ಭೂಷಣ್ಣನವರ ಪುಷ್ಪ ನಮನ ಅರ್ಪಿಸಿದರು. ಕೆಎಸ್ ಆರ್ ಪಿ 10 ನೇ ತುಕಡಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಿಸಲಾಯಿತು. ಕವಾಯತು ಕಮಾಂಡರ್ ವಿಶ್ವನಾಥ ನಾಯಕ, ಐ.ಎನ್. ಕಲಾದಗಿ, ಎಡ್ವಿನ್ ಡಿಸೋಜಾ ಅವರ ನೇತೃತ್ವದಲ್ಲಿ ಕೆಎಸ್ ಆರ್ ಪಿ 10 ನೇ ತುಕಡಿ ಹಾಗೂ ಪೊಲೀಸ್ ವಾದ್ಯ ವೃಂದದವರು ಗೌರವ ಸಲ್ಲಿಸಿದರು.

ವಿಧಾನ ಪರಿಷತ್ಯ ಸದಸ್ಯ ಬಸವರಾಜ ಹೊರಟ್ಟಿ, ರೈಲ್ವೆ ಐಜಿಪಿ ಅಲೋಕಕುಮಾರ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ, ಉಪ ಮೇಯರ್ ಉಮಾ ಮುಕುಂದ, ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲಕೃಷ್ಣ ಬ್ಯಾಕೋಡ, ನಿವೃತ್ತ ಡಿಐಜಿ ರವಿ ನಾಯಕ, ಹುಬ್ಬಳ್ಳಿ ವಿಮಾನ ನಿಲ್ದಾಣಗಳ ನಿರ್ದೇಶಕ ಪ್ರಮೋದಕುಮಾರ ಠಾಕ್ರೆ, ಎಸಿಪಿಗಳಾದ ಆರ್.ಕೆ. ಪಾಟೀಲ, ಪಿ.ಎಸ್. ದೊಡಮನಿ, ಎಸ್.ಬಿ. ಯಾದವ, ಪೊಲೀಸ್ ಇನ್ಸಪೆಕ್ಟರ್ ಶ್ಯಾಮರಾವ ಸಜ್ಜನ, ಅಶೋಕ ಬಿ.ಎಸ್. ಎಎಸ್ ಐ ಎಂ.ಆರ್. ಮಲ್ಲಿಗವಾಡ, ಬಿ.ಆರ್. ತಳವಾರ, ಗೃಹ ರಕ್ಷಕ ದಳದ ಕೃಷ್ಣಾ ಬ್ಯಾಡಗಿ, ಆರ್.ಜಿ. ಅಂಗಡಿ, ವಿಧಿವಿಜ್ಞಾನದ ನಿರ್ದೇಶಕ ಡಾ. ಚಂದ್ರಶೇಖರ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಕುಟುಂಬಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here