ಒಂದೇ ಬ್ಯಾಂಕ್‌ನಲ್ಲಿ 30 ಉದ್ಯೋಗಿಗಳಿಗೆ ಕರೋನ ಪಾಸಿಟಿವ್

0
261

ತಿರುಚಿರಾಪಳ್ಳಿ : ನಗರದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮೆಕ್ಡೊನಾಲ್ಡ್ಸ್ ರಸ್ತೆಯಲ್ಲಿರುವ ಆಡಳಿತ ಕಚೇರಿ ಮುಖ್ಯ ಶಾಖೆಯ 30 ಉದ್ಯೋಗಿಗಳಿಗೆ ಕರೋನ ಪಾಸಿಟಿವ್ ದೃಢವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಬ್ಯಾಂಕ್‌ಗೆ ಭೇಟಿ ನೀಡಿದ ಗ್ರಾಹಕರಿಂದ ಸೋಂಕು ವ್ಯಾಪಿಸಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಇದೇ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಕರೋನದಿಂದ ಬಳಲುತ್ತಿದ್ದರು.

ಇತ್ತೀಚೆಗೆ ಬ್ಯಾಂಕಿನಲ್ಲಿ ಸಾಮೂಹಿಕ ವೈದ್ಯಕೀಯ ತಪಾಸಣೆ ನಡೆಸಿದಾಗ 30 ಉದ್ಯೋಗಿಗಳಿಗೆ ಕರೋನ ಪಾಸಿಟಿವ್ ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ನಂತರ ದೇಶದಲ್ಲಿ ಅತಿ ಹೆಚ್ಚು ವೈರಸ್ ಪ್ರಕರಣಗಳನ್ನು ಹೊಂದಿರುವ ತಮಿಳುನಾಡು, ಶನಿವಾರದ ವೇಳೆಗೆ 2,06,737 ಪ್ರಕರಣಗಳು ವರದಿಯಾಗಿದೆ.

LEAVE A REPLY

Please enter your comment!
Please enter your name here