“ಅಖಿಲ ಭಾರತ ಪ್ರತಿಭಟನಾ ಸಪ್ತಾಹ” ದ ಅಂಗವಾಗಿ AIUTUC ಜಿಲ್ಲಾ ಸಮಿತಿ ವತಿಯಿಂದ ಪೋಸ್ಟರ್ ಬಿಡುಗಡೆ

0
136

ಬಳ್ಳಾರಿ:ಅ:25:-ದಿನಾಂಕ:ರಿಂದ 31 ರವರೆಗೆ ಅಖಿಲ ಬಾರತ ಪ್ರತಿಭಟನಾ ಸಪ್ತಾಹದ ಅಂಗವಾಗಿ ಬಳ್ಳಾರಿಯಲ್ಲಿ AIUTUC ಜಿಲ್ಲಾ ಸಮಿತಿ ವತಿಯಿಂದ ಕಚೇರಿಯಲ್ಲಿ ಪೋಸ್ಟರ್ ಬಿಡುಗಡೆಯನ್ನು ಮಾಡಿದರು.
*ಕಾರ್ಮಿಕ ವಿರೋಧಿ 04 ಲೇಬರ್ ಕೋಡ್ ಗಳ ವಿರುದ್ಧ
*ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳ ವಿರುದ್ಧ
*ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ಮಾರಾಟದ ವಿರುದ್ಧ
*ಬೆಲೆ ಏರಿಕೆ ವಿರುದ್ಧ
*ಸ್ಕೀಮ್ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರಂದು ಪರಿಗಣಿಸಲು ಒತ್ತಾಯಿಸಿ
*ಮಾಸಿಕ ರೂ. 21 ಸಾವಿರ ಕನಿಷ್ಠ ವೇತನ, EPF & ESI ಗಾಗಿ
*ಗುತ್ತಿಗೆ – ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗಾಗಿ
*ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಆಗ್ರಹಿಸಿ

ಈ ಸಂದರ್ಭದಲ್ಲಿ AIUTUC ರಾಜ್ಯ ಉಪಾಧ್ಯಕ್ಷರಾದ ಕಾಮ್ರೇಡ್ ಡಿ.ನಾಗಲಕ್ಷಿ. ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್.ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಎ.ಶಾಂತ . ಪಿ.ಶರ್ಮಾಸ್ ಉಪಸ್ತಿತರಿದ್ದರು.
“ಕಾರ್ಮಿಕ ವಿರೋಧಿ, ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮವನ್ನು ಉಗ್ರವಾಗಿ ಖಂಡಿಸಿದ ಅವರು, ಈ ನೀತಿಗಳನ್ನು ಸೋಲಿಸಲು ಅಕ್ಟೋಬರ್ 25 ರಿಂದ 31 ರ ವರೆಗೆ ಗ್ರಾಮ, ಗ್ರಾಮ ಪಂಚಾಯತಿ, ಹೋಬಳಿ, ಪಟ್ಟಣ, ತಾಲೂಕ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳು, ಮನವಿ ಪತ್ರ ಸಲ್ಲಿಸುವುದು, ವ್ಯಾಪಕ ಕರಪತ್ರ ಹಂಚಿಕೆ ಮಾಡುವುದು, ಪೋಸ್ಟರ್, ಬೀದಿ ಬದಿ ಸಭೆಗಳು, ಗುಂಪು ಚರ್ಚೆಗಳು ಸೇರಿದಂತೆ ವಿವಿಧ ರೀತಿಯಲ್ಲಿ ಈ ಒಂದು ವಾರಗಳ ಕಾಲ ನಡೆಯುವ ಹೋರಾಟದಲ್ಲಿ ಎಲ್ಲಾ ಕಾರ್ಮಿಕರು ಹಾಗೂ ದುಡಿಯುವ ಜನತೆ ತೊಡಗಿಸಿಕೊಳ್ಳಬೇಕು ಮತ್ತು ಆ ಮೂಲಕ ಸರ್ಕಾರಗಳ ಕಾರ್ಮಿಕ ವಿರೋಧಿ – ಜನ ವಿರೋಧಿ ನೀತಿಗಳನ್ನು ಸೋಲಿಸಬೇಕು ಎಂದು ಕರೆ ನೀಡಿದರು.

LEAVE A REPLY

Please enter your comment!
Please enter your name here