ಬೃಹತ್ ಇ-ಲೋಕ ಅದಾಲತ್: 32ಕೋಟಿ ರೂ.ಸಂದಾಯ. ಬಳ್ಳಾರಿಯಲ್ಲಿ 1929 ವ್ಯಾಜ್ಯಗಳ ಇತ್ಯರ್ಥ

0
85

ಬಳ್ಳಾರಿ,ಸೆ.21: ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಂತೆ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಬೃಹತ್ ಇ-ಲೋಕ ಅದಾಲತ್(ಮೇಘಾ ಇ-ಅದಾಲತ್) ಅತ್ಯಂತ ಸುಸೂತ್ರವಾಗಿ ನಡೆಯಿತು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೃಷ್ಣ ‌ಬಿ.ಅಸೋಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಬೃಹತ್ ಇ-ಲೋಕ ಅದಾಲತ್ ನಲ್ಲಿ 1929 ಪ್ರಕರಣಗಳು ಇತ್ಯರ್ಥಪಡಿಸಲಾಯಿತು.

ಇದೇ ಮೊದಲ ಬಾರಿಗೆ ನಡೆದ ಆನ್ ಲೈನ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ರಾಜೀ ಸಂಧಾನದ ಮೂಲಕ ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಮೋಟಾರ್ ವಾಹನ ಅಪಘಾತ ಪ್ರಕರಣಗಳು, ವಿಮಾ ಕಂಪನಿಗಳ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು,ಕಾರ್ಮಿಕ ಸಂಬಂಧಿತ ವಿವಾದಗಳು, ಬ್ಯಾಂಕ್ ವಿಷಯಗಳು,ಚೆಕ್ ಬೌನ್ಸ್, ಹಣವಸೂಲಾತಿ ಪ್ರಕರಣಗಳು, ಕ್ರಿಮಿನಲ್ ಕಂಪೌಂಡೇಬಲ್ ಅಪರಾಧಗಳು,ಎಂಎಸಿಟಿ ಪ್ರಕರಣಗಳು,ಭೂಸ್ವಾಧೀನ,ವಿದ್ಯುತ್,ಎಂಎಂಡಿಆರ್ ಕಾಯ್ದೆ, ಸಿವಿಲ್ ಪ್ರಕರಣಗಳು, ಜನನ ಮತ್ತು ಮರಣ, ನೋಂದಣಿ,ಪಿಸಿ ಪ್ರಕರಣಗಳು ಸೇರಿದಂತೆ ಇನ್ನೀತರ ವಿಷಯಗಳಲ್ಲಿ ಅನೇಕ ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಯಿತು.

ಸುಮಾರು 32ಕೋಟಿ ರೂ. ಹಣ ಸಂದಾಯ ಮಾಡಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೃಷ್ಣ ಬಿ.ಅಸೋಡೆ ಅವರು ತಿಳಿಸಿದರು.ಈ ಸಂದರ್ಭದಲ್ಲಿ ನ್ಯಾಯಾಧೀಶರು ಹಾಗೂ ಕೋರ್ಟ್ ಸಿಬ್ಬಂದಿ ಇದ್ದರು.

LEAVE A REPLY

Please enter your comment!
Please enter your name here