ಮೈಸೂರು ವಿವಿಯ 6 ಗೋಲ್ಡ್ ಮೆಡಲ್ ಪಡೆದ ಬೆಳಗಾವಿ ಬಾಲಕಿ

0
368

ಅಥಣಿ – ಸಾಧಿಸುವ ಛಲವಿದ್ದರೆ ಎಲ್ಲವನ್ನು ಮೆಟ್ಟಿ ನಿಂತು ಗೆಲುವು ಸಾಧಿಸಬಹುದು ಎಂಬುದಕ್ಕೆ ಅಥಣಿಯ ಪ್ರತಿಭಾವಂತ ವಿದ್ಯಾರ್ಥಿನಿ ಸ್ನೇಹಾ ನಾರಾಯಣ ಕುಲಕರ್ಣಿ ಅಪೂರ್ವ ನಿದರ್ಶನವಾಗಿದ್ದಾಳೆ.

ಮೈಸೂರು ವಿ.ವಿ. ಟಾಪರ್ ಆಗಿ ಹೊರಹೊಮ್ಮಿರುವ ಸ್ನೇಹಾ ಎಂ.ಎಸ್ಸಿ ಭೌತಶಾಸ್ತ್ರದಲ್ಲಿ 6 ಗೋಲ್ಡ್ ಮೆಡಲ್ ಪಡೆದಿದ್ದಾಳೆ. ತನ್ನ ಸಾಧನೆಗೆ ಅಮ್ಮನೆ ಸ್ಪೂರ್ತಿ ಎನ್ನುವ ಸ್ನೇಹಾ ನಿಶ್ಚಿತ ಗುರಿಯೊಂದಿಗೆ ಸಾಧನೆಯ ಕಡೆಗೆ ಹೆಜ್ಜೆ ಇಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಾಳೆ.

ಬಾಲ್ಯದ ದಿನಗಳನ್ನು ಆರ್ಥಿಕ ತೊಂದರೆಯಲ್ಲಿ ಸವೆಸುತ್ತಾ ಶಿಕ್ಷಣದ ಒಂದೊಂದೇ ಮೆಟ್ಟಿಲೇರುತ್ತಾ
ಇಂದು ಎಂ.ಎಸ್ಸಿ. ಭೌತಶಾಸ್ತ್ರ ವಿಷಯದಲ್ಲಿ ೬ ಬಂಗಾರದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದು ಯುನಿವರ್ಸಿಟಿ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ.

ಮೈಸೂರಿನ ಪ್ರತಿಷ್ಟಿತ ಮಹಾರಾಣಿ ಕಾಲೇಜಿನಲ್ಲಿ ಎಂ.ಎಸ್ಸಿ. ಓದಿದ ಸ್ನೇಹಾಗೆ ಅ.೧೯ರಂದು ನಡೆದ ಮೈಸೂರು ವಿ.ವಿ. ೧೦೦ನೇ ಘಟಿಕೋತ್ಸವದಲ್ಲಿ ಕುಲಪತಿ ಪೊ.ಜಿ.ಹೇಮಂತಕುಮಾರ್ ಪ್ರಶಸ್ತಿ
ಹಾಗೂ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿದರು.

ಪಿ.ಎಚ್.ಡಿ ಮಾಡುವ ಉತ್ಸಾಹದಲ್ಲಿರುವ ಸ್ನೇಹಾ ಕುಲಕರ್ಣಿ ನನ್ನ ಈ ಸಾಧನೆಗೆ ಅಮ್ಮನೇ ಸ್ಪೂರ್ತಿ. ಕಷ್ಟದ ದಿನಗಳಲ್ಲಿ ಆತ್ಮಸ್ಥೈರ್ಯ ತುಂಬಿ ಬೆಳೆಸಿದ್ದಾಳೆ. ನನ್ನ ಇಡೀ ಯಶಸ್ಸು ಅವಳಿಗೆ ಸಲ್ಲುತ್ತದೆ ಎನ್ನುತ್ತಾಳೆ.

ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಅತ್ಯುತ್ತಮ ಉಪನ್ಯಾಸಕಿಯಾಗಬೇಕು ಎಂಬುದು ನನ್ನ ಆಸೆ.ನನ್ನಂತೆ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂಬುದು ನನ್ನ ಮಹತ್ವಾಕಾಂಕ್ಷೆಯಾಗಿದೆ ಎನ್ನುತ್ತಾಳೆ ಸ್ನೇಹಾ.

LEAVE A REPLY

Please enter your comment!
Please enter your name here