ದೀಪದಿಂದ ದೀಪಾವಳಿ ಅನಾಥ ಮಕ್ಕಳ ಜ್ಞಾನದ ಜ್ಯೋತಿ ಬೆಳಗಲಿ

0
46

ಸಂಡೂರು ತಾಲೂಕಿನ ಅಮ್ಮಾ ಸಂಸ್ಥೆಯ ವತಿಯಿಂದ ದಿನಾಂಕ 11.11.2023 ರಂದು ಶನಿವಾರ ಸಂಪೂರ್ಣ ಶಿಕ್ಷಣಕ್ಕಾಗಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಓದುತ್ತಿರುವ ತಂದೆ ತಾಯಿಗಳೇ ಇಲ್ಲದ ಸಂಬಂಧಿಕರ ಮನೆ ಹಾಗೂ ಹಾಸ್ಟೆಲ್ ನಲ್ಲಿ ವಾಸಿಸುತ್ತಿರುವ 16 ಅನಾಥ ಮಕ್ಕಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳನ್ನು ಹೃದಯವಂತ ಧಾನಿಗಳಾದ

ಕುಮಾರಿ H.M.ಪಾರ್ವತಮ್ಮ ನಿವೃತ್ತ ಶಿಕ್ಷಕರು ಮತ್ತು ಹನುಮಂತಪ್ಪ ವಾಲೇಕರ್ ಗಜೇಂದ್ರಗಡ ಇವರ ಧನ ಸಹಾಯದಿಂದ ಸಂಸ್ಥೆಯ ಪದಾಧಿಕಾರಿಗಳಾದ: ಎಂ.ರುದ್ರಗೌಡ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳು, ಜಿ.ರಾಘವೇಂದ್ರ ಉಪಾಧ್ಯಕ್ಷರು, ಆರ್.ಶಿವಪ್ರಸಾದ್ ಖಜಾಂಚಿ, ಸದಸ್ಯರಾದ ಅಜಯ್, ಪಾಂಡುರಂಗ ಯಾದವ್, ಶ್ರೀಮತಿ ಪುಷ್ಪಲತಾ ಇವರ ನೇತೃತ್ವದಲ್ಲಿ ಮುಖ್ಯ ಶಿಕ್ಷಕರುಗಳಾದ ಹನುಮಂತಪ್ಪ, ಬೀರಲಿಂಗಪ್ಪ, ಜಂಬಯ್ಯ ಹಾಗೂ ಸಹಶಿಕ್ಷಕರಾದ ಅಜಯ್ , ಭಾಷಾ ಸಾರ್ ಇವರ ಸಮ್ಮುಖದಲ್ಲಿ..
1)ಬೊಮ್ಮಗಟ್ಟ:-08
2)ಸಿಕೆ ಹಳ್ಳಿ :-೦1
3)ಹೆಚ್.ಕೆ.ಹಳ್ಳಿ:-೦2
4)ಜೋಗ:-೦1
5) ಚಿಕ್ಕ ಅಂತಾಪುರ:-02
6) ದೊಡ್ಡ ಅಂತಾಪುರ:-೦1
7) ಸಂಡೂರು APMC:-01 ಹೀಗೆ ಒಟ್ಟು 16ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ಶಿಕ್ಷಣ ದೇಶಕ್ಕೆ ಲಕ್ಷಣ ಎಂಬಂತೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ ಮಕ್ಕಳ ಖಿನ್ನತೆಯನ್ನು ದೂರಮಾಡುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು,

LEAVE A REPLY

Please enter your comment!
Please enter your name here