ಕನ್ನಡ ಕಲರವ – ಆನ್ಲೈನ್ ಸಾಹಿತ್ಯ ಕೂಟ ಮತ್ತು’ಅವ್ವ’ ಪುಸ್ತಕಾಲಯ ಸಹಯೋಗದಲ್ಲಿ “ಸೃಜನಶೀಲ ಸಾಹಿತಿ ಪ್ರಶಸ್ತಿ – 2020”

0
192

ಕನ್ನಡ ಕಲರವ ಸಾಹಿತ್ಯಾಸಕ್ತರ ತಂಡದಿಂದ 2020ನೇ ಸಾಲಿನ ಸೃಜನಶೀಲ ಸಾಹಿತಿ ಪ್ರಶಸ್ತಿಗಾಗಿ ಕನ್ನಡದ ಪ್ರಕಟಿತ ಕೃತಿಗಳನ್ನು ಆಹ್ವಾನಿಸಿದೆ.

ಜನವರಿ 2015 ರಿಂದ ಆಗಸ್ಟ್ 2020ರ ಒಳಗೆ ಪ್ರಕಟವಾಗಿರುವ ಕನ್ನಡ ಕಥಾಸಂಕಲನ/ಕವನ ಸಂಕಲನ/ಕಾದಂಬರಿ/ನಾಟಕ/ಅಂಕಣ ಬರಹಗಳು ಅಥವಾ ಯಾವ ಪ್ರಕಾರದ ಕೃತಿಗಳನ್ನಾದರೂ ಕೂಡ ಕಳಿಸಬಹುದು. ಅನುವಾದಿತ ಕೃತಿಗಳು ಮತ್ತು ಡಾಕ್ಟರೇಟ್ ಪದವಿಗಾಗಿ ರಚಿಸಿದ ಪ್ರಬಂಧ ಕೃತಿಗಳಿಗೆ ಅವಕಾಶವಿಲ್ಲ. ಒಬ್ಬ ಸಾಹಿತಿ ತನ್ನ ಬೇರೆ ಬೇರೆ ಮೂರು ಕೃತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಪ್ರಕಟಿತ ಕೃತಿಯ ಮೂರು ಪ್ರತಿಗಳನ್ನು ಈ ಕೆಳಗಂಡ ಅಂಚೆ ವಿಳಾಸಕ್ಕೆ ಅಂಚೆಯ ಮೂಲಕವೇ ರಿಜಿಸ್ಟರ್ ಫೋಸ್ಟ್ ಮಾಡಿ ಡಿಸೆಂಬರ್ 25ರ ಒಳಗೆ ನಮ್ಮನ್ನು ತಲುಪುವಂತೆ ಕಳುಹಿಸಬೇಕು.

ಆಗಸ್ಟ್-31-2020 ಕ್ಕೆ ಸಾಹಿತಿಯ ವಯಸ್ಸು 50 ಮೀರಿರಬಾರದು. ಹಸ್ತಪ್ರತಿಯೊಂದಿಗೆ ಸಾಹಿತಿಯ ಆಧಾರ್ ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ನಕಲು ಪ್ರತಿಯನ್ನು ತಪ್ಪದೆ ಕಳುಹಿಸಬೇಕು.

ಅನಂತ
ಅಧ್ಯಕ್ಷರು, ಕನ್ನಡ ಕಲರವ
189, ಅವ್ವ ಪುಸ್ತಕಾಲಯ
ಕೆಂಚನಹಳ್ಳಿ ಅಂಚೆ, ಹೆಚ್.ದುರ್ಗ ಹೋಬಳಿ
ಕುಣಿಗಲ್ ತಾಲ್ಲೂಕು, ತುಮಕೂರು-572123
9742029908, 8548948660

ಆಯ್ಕೆಯಾದ ಮೂವರಿಗೆ ನಗದು ಬಹುಮಾನದ ಜೊತೆ ಪ್ರಶಸ್ತಿ ಪುರಸ್ಕಾರವಿರುತ್ತದೆ. ಪ್ರತಿ ಕಳಿಸಿಕೊಟ್ಟ ಎಲ್ಲರಿಗೂ ಈ-ಪ್ರಮಾಣಪತ್ರ ತಲುಪಿಸಲಾಗುತ್ತದೆ.

ಹಸ್ತಪ್ರತಿ ಜೊತೆಗೆ ಪ್ರತ್ಯೇಕ ಹಾಳೆಯಲ್ಲಿ ನಿಮ್ಮ ಸಂಪೂರ್ಣ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಬರೆದು, ಇತ್ತಿಚಿನ ಒಂದು ಭಾವಚಿತ್ರವನ್ನು ಅಂಟಿಸಿ ಕಳುಹಿಸಿಕೊಡತಕ್ಕದ್ದು. ಅಥವಾ ಈ ಕೆಳಗಿನ ಲಿಂಕ್ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ನಿಖರವಾದ ಮಾಹಿತಿಗಳೊಂದಿಗೆ ಅರ್ಜಿಯನ್ನು ತುಂಬಿ ಕೃತಿಪ್ರತಿಗಳೊಂದಿಗೆ ಕಳುಹಿಸಿಕೊಡುಬೇಕೆಂದು ಕನ್ನಡ ಕಲರವ ಆನ್ಲೈನ್ ಸಾಹಿತ್ಯ ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಅನಂತ ಅವರು ತಿಳಿಸಿದ್ದಾರೆ.

ಅರ್ಜಿ ಲಿಂಕ್
https://drive.google.com/file/d/11-Vk_ZSVABMDGIGEtofECz8P97-p5Pls/view?usp=drivesdk

ನಮ್ಮ ಫೇಸ್ಬುಕ್ ತಂಡ ಸೇರುವ ಲಿಂಕ್
https://www.facebook.com/groups/3344469948953030/?ref=share

ಹೆಚ್ಚಿನ ಮಾಹಿತಿಗಾಗಿ
ಅನಂತ
9742029908 (WhatsApp only)
avvapustakaalaya@gmail.com

LEAVE A REPLY

Please enter your comment!
Please enter your name here