ಕೂಡ್ಲಿಗಿ ಪಪಂ:ಬೃಹತ್ ನೀರಿನ ಟ್ಯಾಂಕ್ ನಿಮಾ೯ಣಕ್ಕೆ ಜನಪ್ರತಿನಿಧಿಗಳಿಂದ ಸ್ಥಳಪರಿಶೀಲನೆ

0
243

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯೋಜನೆಯಡಿ.ಪಟ್ಟಣ ಪಂಚಾಯ್ತಿಯಿಂದ ಬೃಹತ್ ಮೇಲ್ಮಟ್ಟ ಸ್ಥರ ಜಲಸಂಗ್ರಹಗಾರ ಘಟಕ ನಿರ್ಮಾಣಕ್ಕೆ ಯೋಜನೆ ಸಿದ್ದಪಡಿಸಲಾಗಿದ್ದು,ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳ ಪರಿಶೀಲಿಸಿದರು.ಕ.ನೀ.ಸ. ಮತ್ತು ಒ.ಚ.ಮಂಡಳಿ ಹಾಗೂ ಪಪಂ ವತಿಯಿಂದ,5ಲಕ್ಷ ಲೀಟರ್ ಸಾಮಾರ್ಥ್ಯದ ಸುಮಾರು1ಕೋಟಿ50ಲಕ್ಷರೂ ವೆಚ್ಚದ.ಬೃಹತ್ ನೀರಿನ ಟ್ಯಾಂಕ್ ನಿಮಾ೯ಣಕ್ಕೆ ಸ್ಥಳ ಪರಿಶೀಲಿಸಲಾಯಿತು. ಪಟ್ಟಣದ 10ನೇ ವಾರ್ಡ್ ನಲ್ಲಿ ರುವ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಹತ್ತಿರದ ಬಯಲು ಜಾಗದಲ್ಲಿ,ಬೃಹತ್ ಸ್ಟ ವಾಟರ್ ಟ್ಯಾಂಕ್ ನ್ನು ನಿರ್ಮಿಸಲು ನಿರ್ಧರಿಸಲಾಗಿದೆ.ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷರಾದ ಶ್ರೀಮತಿ ಎಮ್.ಶಾರದಾಬಾಯಿ,ಉಪಾಧ್ಯಕ್ಷರಾದ ಶ್ರೀಮತಿ ಬಿ. ಊರಮ್ಮ,ಸದ್ಯರಾದ ಶ್ರೀಮತಿ ರೇಣುಕಮ್ಮ,ಸಿರಿಬಿ ಮಂಜುನಾಥ, ಕೆ.ಹೆಚ್.ಎಮ್.ಸಚಿನ್‌,ಚಂದ್ರು,ಕೆ.ಈಶಪ್ಪ,ಹಾಗೂ ವಾಲ್ಮೀಕಿ ಮುಖಂಡರಾದ ಬಿ.ಭೀಮೇಶ,ಬಾಣದ ಶಿವಮೂರ್ತಿ,ದಲಿತ ಮುಖಂಡ ಎಸ್.ದುರುಗೇಶ ಮತ್ತು ಕನೀಸ ಮತ್ತು ಒಚ ಮಂಡಳಿ ವರ್ಕ್ ಇನ್ಸ್ ಪೆಕ್ಟರ್ ಗುರುರಾಜ್,ಪಪಂ ನೋಡಲ್ ಅಧಿಕಾರಿ ಗಿರೀಶ್ ಸೇರಿದಂತೆ ಇತರರು ಇದ್ದರು.

✍️ ಕೆ. ಎಸ್. ಮುರಳೀಧರ. ಕೂಡ್ಲಿಗಿ

LEAVE A REPLY

Please enter your comment!
Please enter your name here