“ನಿವೇಶನ ಮತ್ತು ವಸತಿ ಕಲ್ಪಿಸುವಂತೆ ಮನವಿ”

0
52

ಕೊಟ್ಟೂರು: ನಿವೇಶನ ರಹಿತ ಮತ್ತು ವಸತಿ, ತಾಲೂಕು ಸಮಿತಿ ಕೊಟ್ಟೂರು ಇವರಿಂದ ಬಸ್ ಸ್ಟಾಂಡ್ ಹತ್ತಿರದ ಬಸವಣ್ಣನ ದೇವಸ್ಥಾನದಿಂದ ಪಟ್ಟಣ ಪಂಚಾಯತಿ ಯವರಿಗೂ ಕಾರ್ಯಕರ್ತರು ಘೋಷಣೆ ಕೂಗುತ್ತಾ ಪ್ರತಿಭಟನಾ ರ್ಯಾಲಿ ನಡೆಯಿತು.

ವಸತಿ ಮತ್ತು ನಿವೇಶನದ ರೈತ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷರು ಎಚ್ ವೀರಣ್ಣ, ಮಾತನಾಡಿ
ದುಡಿಯುವ ಕೈಗಳಿಗೆ ಉದ್ಯೋಗ ಉಣ್ಣಲು ಹೊಟ್ಟೆತುಂಬ ಊಟ ನೆಮ್ಮದಿಯಿದ ನಿದ್ರಿಸಲು ಸ್ವಂತದ ಒಂದು ಸೂರು ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಆದರೆ ಇಂದು
ನಮ್ಮದೇಶದಲ್ಲಿ ನಮ್ಮನ್ನು ಆಳುತ್ತಿರುವ ಸರ್ಕಾರಗಳು ದುಡಿಯುವ ಕೈಗಳಿಗೆ ಉದ್ಯೋಗವನ್ನು ನೀಡದೇ ಹೊಟ್ಟೆ ತುಂಬಾ ಅನ್ನ ಸಿಗದಂತೆ ಮಾಡಿ, ಹಸಿವಿನಿಂದ ನರಳುತ್ತಾ, ಮಲಗಲು ಕೂಡ ಸ್ವಂತ ಮನೆ ಇಲ್ಲದ ಸ್ಥಿತಿಗೆ ಜನರನ್ನು ಸರ್ಕಾರಗಳು ದೂಡಿದೆ.ಎಂದರು

ವಸತಿ ಮತ್ತು ನಿವೇಶನದ ರೈತ ಹೋರಾಟ ಸಮಿತಿ ರಾಜ್ಯ ಮಹಿಳೆ ಉಪಾಧ್ಯಕ್ಷೆ ಕೆ ರೇಣುಕಮ್ಮ, ಮಾತನಾಡಿ ಭಾರತದ ಸಿರಿವಂತ ಕಾರ್ಪೋರೇಟ್ ಕಂಪನಿಗಳ ಮಾಲೀಕರು ಮಾತ್ರ ಪ್ರಪಂಚದ ಅತಿ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದು. ದಿನ ನಿತ್ಯ ನಮ್ಮ ಜಲ ನೆಲ ಹಾಗೂ ಜನರಿಗೆ ಸೇರಬೇಕಾದ ಸಾರ್ವಜನಿಕ ಸಂಪತ್ತನ್ನು ಹೆಗ್ಗಿಲ್ಲದೇ ಲೂಟಿಯನ್ನು ಮಾಡುವುದಕ್ಕೆ ನಮ್ಮ ಸರ್ಕಾರಗಳು ಕಾನೂನು ಬದ್ಧ ಅವಕಾಶಗಳನ್ನು ಮಾಡಿಕೊಡುತ್ತಿದೆ.ಅದರೆ ಇಲ್ಲಿಯವರೆಗೂ ಕಡುಬಡವರಿಗೆ ಒಂದು ಸೋರು ಕಲ್ಪಿಸಿಲ್ಲ ಎಂದು ಹೇಳಿದರು.

ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಿಗೆ ಬುಧವಾರ ರಂದು ವಸತಿ ಮತ್ತು ನಿವೇಶನದ ರೈತ ಹೋರಾಟ ಸಮಿತಿ ರಾಜ್ಯ ಹಾಗೂ ತಾಲೂಕಿನ ಮಹಿಳಾ ಕಾರ್ಯಕರ್ತರ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು

ಕಡುಬಡವರಿಗೆ ಸೋರು ಕಲ್ಪಿಸಿಕೊಂಡುವಂತೆ ಮನವಿಯ ಪಾತ್ರವನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ ನಸರುಲ್ಲಾ ಅವರು ಹೇಳಿದರು

ಈ ಸಂದರ್ಭದಲ್ಲಿ ಗುಡಿಹಳ್ಳಿ ಹಾಲೇಶ ವಸತಿ ಮತ್ತು ನಿವೇಶನದ ರೈತ ಹೋರಾಟ ಹರವನಹಳ್ಳಿ ,ತಾಲೂಕು ಹಲಗಿ ಸುರೇಶ ವಸತಿ ಮತ್ತು ನಿವೇಶನದ ರೈತ ಹೋರಾಟ ಹಡಗಲಿ , ರಾಜು ಗೌಡ, ತಿಮ್ಮಪ್ಪ ,ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here