ದಲ್ಲಾಳಿಗಳು ರಾಗಿ/ಜೋಳ ಖರೀದಿ ಕೇಂದ್ರಗಳಿಗೆ ತಂದಲ್ಲಿ ಕ್ರಿಮಿನಲ್ ಕೇಸ್, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಖರೀದಿ : ಜಿಲ್ಲಾಧಿಕಾರಿ ನಕುಲ್

0
120

ಬಳ್ಳಾರಿ,ಡಿ.16 : ಜಿಲ್ಲಾಡಳಿತ ಮತ್ತು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ರಾಗಿ/ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಖರೀದಿಸಲು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ರಾಗಿ/ಜೋಳವನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಪ್ರೂಟ್ಸ್ ತಂತ್ರಾAಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ರಾಗಿ/ಜೋಳವನ್ನು ಮಾರಾಟ ಮಾಡಲು ನೋಂದಾಯಿಸಿಕೊಳ್ಳಬೇಕು. ಈ ರೀತಿ ಕೃಷಿ ಇಲಾಖೆ ಮತ್ತು ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊAಡ ರೈತರು ನೇರವಾಗಿ ರಾಗಿ ಹಾಗೂ ಬಿಳಿಜೋಳವನ್ನು ಖರೀದಿ ಕೇಂದ್ರಗಳಿಗೆ ನೇರವಾಗಿ ಸರಬರಾಜು ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರತಿ ಕ್ವಿಂಟಾಲ್ ರಾಗಿಗೆ 3295 ರೂ.ರಂತೆ ಖರೀದಿ ಮಾಡಲಾಗುವುದು. ಪ್ರತಿ ಕ್ವಿಂಟಾಲ್ ಹೈಬ್ರಿಡ್ ಜೋಳವನ್ನು 2620 ರೂ. ಹಾಗೂ ಮಾಲ್ದಂಡಿ ಜೋಳವನ್ನು ಪ್ರತಿ ಕ್ವಿಂಟಾಲ್‌ಗೆ 2640 ರೂ.ಗಳಂತೆ ಖರೀದಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಯೊಬ್ಬ ರೈತರು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ/ಜೋಳವನ್ನು ಮಾರಾಟ ಮಾಡಲು ರೈತರು ಕೃಷಿ ಇಲಾಖೆಯಲ್ಲಿ ಮೊದಲು ನೊಂದಾಯಿಸಿಕೊಳ್ಳಬೇಕು. ನೋಂದಣಿಗೆ 2021ರ ಜ.31 ರಂದು ಕೊನೆಯ ದಿನವಾಗಿರುತ್ತದೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜೋಳ/ರಾಗಿ ಖರೀದಿಸಲು ರೈತರು ಆಯಾ ತಾಲೂಕಿನ ಎಪಿಎಂಸಿ ಯಾರ್ಡ್ನಲ್ಲಿ ನೊಂದಣಿ ಮಾಡಿಕೊಳ್ಳಬೇಕು.
ರಾಗಿ /ಜೋಳವನ್ನು ನೊಂದಾಯಿಸಿಕೊAಡ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಮಾತ್ರ ರಾಗಿಯನ್ನು ಪ್ರತಿ ಎಕರೆಗೆ ಕನಿಷ್ಠ 10 ಕ್ವಿಂಟಲ್‌ನಿAದ ಗರಿಷ್ಠ 50 ಕ್ವಿಂಟಾಲ್‌ವರೆಗೆ ಮತ್ತು ಜೋಳವನ್ನು ಪ್ರತಿ ಎಕರೆಗೆ ಕನಿಷ್ಠ 15 ಕ್ವಿಂಟಾಲ್ ನಿಂದ ಗರಿಷ್ಠ 75ಕ್ವಿಂಟಾಲ್‌ವರೆಗೆ ಮಾತ್ರ ಖರೀದಿಸಲಾಗುವುದು. ಖರೀದಿಗೆ ನೊಂದಾಯಿಸಿಕೊAಡ ರೈತರು ತಹಶೀಲ್ದಾರ್ ಅಥವಾ ಅವರಿಂದ ಅಧಿಕೃತರಾದ ಅಧಿಕಾರಿಯಿಂದ ನಮೂನೆ-1 ರಲ್ಲಿ ಬೆಳೆ ದೃಢೀಕರಣ ಪತ್ರ ಮತ್ತು 2019-20ನೇ ಸಾಲಿನ ಕಂಪ್ಯೂಟರ್ ಪಹಣಿಯನ್ನು ನೊಂದಣಿ ಸಮಯದಲ್ಲಿ ಹಾಜರುಪಡಿಸಿ ನೊಂದಾಯಿಸಿಕೊಳ್ಳಬೇಕು.
ನೊಂದಾಯಿಸಿಕೊAಡ ರೈತರು ತಾವು ಸರಬರಾಜು ಮಾಡುವ ದಿನಾಂಕದ ಬಗ್ಗೆ ಖರೀದಿ ಕೇಂದ್ರದಿAದ ಸರಬರಾಜು ಚೀಟಿಯನ್ನು ನಮೂನೆ-3 ರಲ್ಲಿ ಪಡೆದು ರೈತರಿಗೆ ನಿಗಧಿಪಡಿಸಿರುವ ದಿನಾಂಕದAದು ಪಡೆಯಬೇಕು. ನೊಂದಾಯಿಸಿಕೊAಡ ರೈತರು ರಾಗಿ / ಬಿಳಿ ಜೋಳವನ್ನು ನಿಗಧಿಪಡಿಸುವ ದಿನಾಂಕದAದು ನೇರವಾಗಿ ಖರೀದಿ ಕೇಂದ್ರಕ್ಕೆ ಸರಬರಾಜು ಮಾಡಬೇಕು. ರೈತರು ಸರಬರಾಜು ಮಾಡುವ ರಾಗಿ/ಜೋಳವನ್ನು ಗುಣಮಟ್ಟವನ್ನು ಗುಣಮಟ್ಟ ಪರಿವೀಕ್ಷಕರು ಪರಿಶೀಲಿಸಿ ದೃಢೀಕರಿಸಿದ ನಂತರವೇ ಖರೀದಿಸಲಾಗುವುದು. ರೈತರು ತಮ್ಮ ಸ್ವಂತ ಖರ್ಚಿನಲ್ಲಿ ರಾಗಿ/ಜೋಳವನ್ನು ಖರೀದಿ ಕೇಂದ್ರಗಳಿಗೆ ನೇರವಾಗಿ ಮಾರಾಟ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
*ದಲ್ಲಾಳಿಗಳು ರಾಗಿ/ಜೋಳ ಖರೀದಿ ಕೇಂದ್ರಗಳಿಗೆ ತಂದಲ್ಲಿ ಕ್ರಿಮಿನಲ್ ಕೇಸ್ : ಈ ಬೆಂಬಲ ಬೆಲೆ ಯೋಜನೆ ಅಡಿ ಖರೀದಿಯಲ್ಲಿ ಮಧ್ಯವರ್ತಿಗಳು/ ಏಜೆಂಟ್‌ಗಳು ಭಾಗವಹಿಸುವುದು ಕಾನೂನು ಬಾಹಿರವಾಗಿದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿ ನಕುಲ್ ಅವರು ಮಧ್ಯವರ್ತಿಗಳು ಹಾಗೂ ಏಜೆಂಟರುಗಳು ಖರೀದಿ ಕೇಂದ್ರಗಳಿಗೆ ರಾಗಿ ಜೋಳ ತಂದಿದ್ದು ಕಂಡುಬAದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ರೈತರಿಂದ ಖರೀದಿಸುವ ರಾಗಿ/ಜೋಳವನ್ನು ಸರಕಿನ ಮೌಲ್ಯವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಫ್ ಅಥವಾ ನೆಫ್ಟ್ ಮೂಲಕ ಪಾವತಿಸಲಾಗುವುದು. ಏಜನ್ಸಿಗಳು ರೈತರಿಂದ ಖರೀದಿಸಿದ ರಾಗಿ ಮತ್ತು ಜೋಳವನ್ನು ತುಂಬಿಸಲು 50ಕೆ.ಜಿ ಸಾಮರ್ಥ್ಯದ ಒಮ್ಮೆ ಉಪಯೋಗಿಸಲ್ಪಟ್ಟ ಉತ್ತಮ ಗುಣಮಟ್ಟದ ಗೋಣಿ ಚೀಲಗಳನ್ನು ನ್ಯಾಯಬೆಲೆ ಅಂಗಡಿಗಳಿAದ ಪ್ರತಿ ಚೀಲಕ್ಕೆ 12 ರೂ. ದರದಲ್ಲಿ ಖರೀದಿಸಿ ಉಪಯೋಗಿಸಬೇಕು. 2021ರ ಮಾ.15 ರವರೆಗೆ ಮಾತ್ರ ಖರೀದಿ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್, ಆರ್.ಟಿ.ಸಿ (ಪಹಣಿ), ಇತ್ತೀಚಿಗೆ ರಾಷ್ಟಿçÃಕೃತ ಬ್ಯಾಂಕ್‌ನಲ್ಲಿ ತೆರೆದ ಬ್ಯಾಂಕ್ ಅಕೌಂಟ್ ಖಾತೆ ಸಂಖ್ಯೆ, ಫೋಟೊ ಮತ್ತು ಐ.ಎಫ್.ಎಸ್.ಸಿ ಕೋಡ್ ಹೊಂದಿರುವ ಪಾಸ್ ಬುಕ್‌ನ ಪ್ರತಿ, ಮೊಬೈಲ್ ಸಂಖ್ಯೆಯೊAದಿಗೆ ಅವಶ್ಯವಿದ್ದಲ್ಲಿ ರದ್ದಾದ ಮೂಲ ಚೆಕ್ ಪ್ರತಿಯೊಂದಿಗೆ ಖರೀದಿ ಕೇಂದ್ರಗಳಿಗೆ ಬಂದು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
*ಹೆಚ್ಚಿನ ಮಾಹಿತಿಗೆ ಇವರನ್ನು ಸಂಪರ್ಕಿಸಿ: ಹೆಚ್ಚಿನ ಮಾಹಿತಿಗೆ ಖರೀದಿ ಅಧಿಕಾರಿಗಳಾದ ಬಳ್ಳಾರಿ/ಕುರುಗೋಡು ಮೊ.ಸಂ.9483798215, ಗ್ರೇಡರ್ ಅವರ ಮೊ.ಸಂ. 8277934299, ಸಿರುಗುಪ್ಪ ಮೊ.ಸಂ. 9448755122, ಗ್ರೇಡರ್ ಅವರ ಮೊ.ಸಂ. 8277930431, ಸಂಡೂರು ಮೊ.ಸಂ. 9380937990/9980450713, ಗ್ರೇಡರ್ ಅವರ ಮೊ.ಸಂ. 6362337223, ಕೊಟ್ಟೂರು ಮೊ.ಸಂ. 9945006241, ಗ್ರೇಡರ್ ಅವರ ಮೊ.ಸಂ. 7338018787, ಹೊಸಪೇಟೆ ಮೊ.ಸಂ. 9535627707, ಗ್ರೇಡರ್ ಅವರ ಮೊ.ಸಂ. 8277930447, ಕಂಪ್ಲಿ ಮೊ.ಸಂ. 9341258729, ಗ್ರೇಡರ್ ಅವರ ಮೊ.ಸಂ. 8277928159, ಹೆಚ್.ಬಿ.ಹಳ್ಳಿ ಮೊ.ಸಂ. 9986606310, ಗ್ರೇಡರ್ ಅವರ ಮೊ.ಸಂ. 9449763036, ಹಡಗಲಿ ಮೊ.ಸಂ. 9886734876 ಗ್ರೇಡರ್ ಅವರ ಮೊ.ಸಂ. 8277934310, ಹರಪನಹಳ್ಳಿ ಮೊ.ಸಂ. 8147738412, ಗ್ರೇಡರ್ ಅವರ ಮೊ.ಸಂ. 8277931192 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here