ಶಾಂತಿ ಮತ್ತು ಸರಳತೆಯಿಂದ ನಡೆದ ಈದ್ ಮಿಲಾದ್

0
558

ಕೊಟ್ಟೂರು: ಮುಸ್ಲಿಂ ಧರ್ಮಗುರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಈದ್ ಮಿಲಾದ್ ಹಬ್ಬವನ್ನು ಗುರುವಾರ ಆಚರಣೆ ಮಾಡಿದರು. ಪಟ್ಟಣದ ಬಳ್ಳಾರಿ ಕ್ಯಾಂಪ್‌ನ ಶಾದಿಮಹಲ್‌ನಲ್ಲಿ ನಡೆಯಿತು. ಶಾಂತಿ, ಸರಳತೆಯಿಂದ ಎಲ್ಲಾ ಮುಸ್ಲಿಂ ಹಾಗೂ ಹಿಂದೂ ಬಾಂಧವರು ಪಾಲ್ಗೊಂಡು ಸೌಹಾರ್ದತೆಯಿಂದ ಕಾರ್ಯಕ್ರಮವನ್ನು ಆಚರಿಸಿದರು.

ಪ್ರವಾದಿಗಳು ಸಂಪೂರ್ಣ ಮನುಕುಲ ಒಂದೇ ಎಂದು ಸಾರಿ, ಸಮಾನತೆಯ ಆದೇಶವಿತ್ತು, ಪರಸ್ಪರ ಪ್ರೀತಿಯೇ ಧರ್ಮದ ಸಾರವೆಂದು ಸಾರಿದ ಮಾನವತಾವಾದಿ. ಮನುಷ್ಯರು ಪರಸ್ಪರ ಸಹೋದರರಂತೆ ಬಾಳಬೇಕೆಂದು ಪ್ರೇರಣೆಯನ್ನಿತ್ತವರು. ಪ್ರವಾದಿಗಳು ತತ್ವಜ್ಞಾನಿಗಳು, ಸಮಾಜ ಸುಧಾರಕರು. ಅವರು ದಯಾಪರತೆ, ಔದಾರ್ಯ, ಸಂವೇದನಾಶೀಲತೆ, ದೈವಭಕ್ತಿ, ಪರಿಶ್ರಮ, ಪ್ರಾಮಾಣಿಕತೆಗಳೆಂಬ ಗುಣಗಳ ಒಡೆಯರಾಗಿದ್ದರು. ತಮ್ಮ ಶತ್ರುಗಳನ್ನೂ ಗೌರವದಿಂದ ಕಾಣುತ್ತಿದ್ದರು. ಜ್ಞಾನಾರ್ಜನೆ ಪ್ರತಿ ಮುಸ್ಲಿಂ ಸ್ತ್ರೀ-ಪುರುಷರ ಕರ್ತವ್ಯವಾಗುವ ಮೂಲಕ ಶಿಕ್ಷಣದ ಮಹತ್ವವನ್ನು ಅವರು ಎತ್ತಿಹಿಡಿದಿದ್ದಾರೆ ಎಂದು ಮುಸ್ಲಿಂ ಧರ್ಮ ಗುರುಗಳಾದ ಮುಫ್ತಿ ಯಾಸೀನ್ ಮೌಲಾನ ತಿಳಿಸಿದರು.
ಮಹಿಳೆಯರಿಗೆ ಸಂಪೂರ್ಣ ಗೌರವ ಹಾಗೂ ಮುಕ್ತ ಸ್ವಾತಂತ್ರ್ಯವನ್ನು ಘೋಷಿಸಿದವರು ಪ್ರವಾದಿಗಳು. ಎಲ್ಲರೂ ತಮ್ಮ ನೆರೆಹೊರೆಯವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕೆಂದು ಸೂಚಿಸುತ್ತಾರೆ. ಜೀವನದ ಪ್ರತಿ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ನಿರ್ವಹಿಸಬೇಕು; ಏನೇ ಸಂಕಷ್ಟ ಎದುರಾದರೂ ಸತ್ಯವನ್ನೇ ನುಡಿಯಬೇಕು ಎಂದಿದ್ದಾರೆ ಎಂದು ಹಾಫಿಸ್ ಮೊಹಮ್ಮದ್ ಇಮ್ರಾನ್ ಮಾತನಾಡಿದರು.

ಪ್ರವಾದಿಗಳ ಜನ್ಮದಿನೋತ್ಸವ ಎಂದರೆ ಪರಸ್ಪರ ವೈಮನಸುಗಳನ್ನು ದೂರವಿಟ್ಟು, ನೆರೆಹೊರೆಯವರ ಜೊತೆ ಶಾಂತಿ, ಸೌಹಾರ್ದತೆ, ಪರಸ್ಪರ ಪ್ರೀತಿಯಿಂದ ಬದುಕುವುದು; ಬಡವರು, ರೋಗಿಗಳು, ವೃದ್ಧರು, ಅನಾಥರು, ತಬ್ಬಲಿಗಳ, ಹಸಿದವರ ಸೇವೆಯೇ ಪರಮೋಚ್ಚ ಸೇವೆಯೆಂದು ನಂಬುವುದು ಎಂದು ಮೌಲಾನ ಸಾಜಿದ್ ಧರ್ಮ ಗುರುಗಳು ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಜೀವನದ ಹಾದಿಯಲ್ಲಿ ನಡೆಯಬೇಕೆಂದು ತಿಳಿಸಿದರು.
ಪ್ರವಾದಿ ಮೊಹಮ್ಮದ್ ಪೈಗಂಬರ್‌ರವರ ಜೀವನ ಚರಿತ್ರೆ, ಹಾದಿ ಮತ್ತು ಇಸ್ಲಾಂ ನಮ್ಮನ್ನು ಪರಿಚಯಿಸಿ ಕೊಟ್ಟು ಇಡೀ ಜಗತ್ತಿನಲ್ಲಿ ಶಾಂತಿ ಮತ್ತು ಪ್ರೀತಿಯ ಹೂವನ್ನು ಅರಳಿಸಿದವರು ನಾವು ಅವರದ್ದೇ ಆದ ಹಾದಿಯಲ್ಲಿ ನಡೆಯಬೇಕೆಂದು ಕಾರ್ಯಕ್ರಮದಲ್ಲಿ ಮುಖ್ಯವಾಗಿ ಉಪಸ್ಥಿತರಿದ್ದ ಧರ್ಮಗುರುಗಳು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಮೆರುಗು ನೀಡಿದ ಜಾಮಿಯಾ ಮಸೀದಿಯ ಮುತವಲ್ಲಿ ಆಯೊಬ್ ಖಾನ್ ಹಾಗೂ ಹಿರಿಯ ನಾಗರೀಕರ ಜನರಿಗೆ ನೌಜವಾನ ಖಿದ್ಮತ್ ಗ್ರೂಪ್, ನೌಜವಾನ್ ಖಿದ್ಮತ್ ಗ್ರೂಪ್‌ನ ಜಬ್ಬೀರ್ ಅಹ್ಮದ್, ಅನ್ಸಾರ್ ಅಹ್ಮದ್, ಗೌಸ್ಸ್ ಮಹಮ್ಮದ್, ತನ್ಸೀರ್ ಖಾನ್, ನೂರ್ ಮಹಮ್ಮದ್, ಖಾಜಾ, ಗೌಸ್ ಮಲ್ಡಿ, ಚಂದ್ರಶೇಖರ್ (ಚಾಂದು) ಕರೀಂ, ಸಮೀರ್, ಇರ್ಫಾನ್ ಹಾಗೂ ಹಿಂದೂ ಸಮಾಜದ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here