ವೈದ್ಯರು ಹೆಚ್ಚಿನ ಕಾಳಜಿ ವಹಿಸಿ ಚಿಕಿತ್ಸೆ ನೀಡಲು ಕರೆ

0
110

ಹಾಸನ ಮೇ ; ವೈದ್ಯರ ಹುದ್ದೆ ಬೇಗ ಭರ್ತಿ ಮಾಡುವುದರ ಜೊತೆಗೆ ಅಗತ್ಯ ಸೌಲಭ್ಯ ಒದಗಿಸಲಾಗು ವುದು ವೈದ್ಯರು ಹೆಚ್ಚಿನ ಕಾಳಜಿ ವಹಿಸಿ ಚಿಕಿತ್ಸೆ ನೀಡಿ ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಕರೆ ನೀಡಿದ್ದಾರೆ.

ಹೊಳೆನರಸೀಪುರದಲ್ಲಿ ಇಂದು ಕೋವಿಡ್ ಪರಿಸ್ಥಿತಿ ಕುರಿತು ಸಭೆ ನಡೆಸಿದ ಅವರು ಹಳ್ಳಿಗಳಲ್ಲಿ ಹೋಮ ಕ್ವಾರಂಟೈನ್ ಇರಲು ಸೌಲಭ್ಯ ಇಲ್ಲದಿದ್ದವರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಲೇ ಬೇಕು ಈ ಬಗ್ಗೆ ಸರ್ಕಾರಿ ಆದೇಶವೂ ಹೊರ ಬೀಳಲಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ 15 ದಿನ ಕಠಿಣ ಕ್ರಮಕೈಗೊಳ್ಳಿ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರದಲ್ಲಿ ಇರಿಸಿ ಪ್ರತಿದಿನ ಎರೆಡು ಬಾರಿ ವೈದ್ಯರು ತಪಾಸಣೆ ಮಾಡ ಬೇಕು .ಸೋಂಕಿತರಿಗೆ ಸಲಹೆ ನೀಡಿ ಧೈರ್ಯ ತುಂಬಬೇಕು ಎಂದರು.

ಮನೆಯಲ್ಲಿ ಸೌಲಭ್ಯ ಇಲ್ಲದ ಜನರ ಮನವೊಲಿಸಿ,ಪಾಸಿಟಿವ್ ಬಂದವರಿಗೆ ಕೆಲವೇ ಗಂಟೆ ಗಳಲ್ಲಿ ಮಾತ್ರೆ ತಲುಪಿಸಿ.ಆತ್ಮ ವಿಶ್ವಾಸ ತುಂಬಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕು ಪೊಲೀಸ್ ಇಲಾಖೆ ಈ ಬಗ್ಗೆ ನಿಗಾವಹಿಸಿ.ಕೋವಿಡ್ ಸೋಂಕಿತರು ಪಡಿತರ ಪಡೆಯಲು ಬರದಿದ್ದರೆ ಅವರ ಮನೆಗೆ ತಲುಪಿಸಿ ಆಯಾ ಗ್ರಾಮ ಪಂಚಾಯಿತಿ ಹಂತದಲ್ಲಿ ನ್ಯಾಯಬೆಲೆ ಅಂಗಡಿವಾರು ಮಾಹಿತಿ ಸಂಗ್ರಹಿಸಿ ಪಡಿತರ ಕಳಿಸಿಕೊಡಿ.ಪಿ.ಡಿ.ಓ ಗಳು ಈ ಬಗ್ಗೆ ಗಮನಹರಿಸಬೇಕು.

ಶಾಸಕರಾದ ರೇವಣ್ಣ ಅವರು ಮಾತನಾಡಿ ಸಚಿವರು ಹಾಗೂ ಜಿಲ್ಲಾಡಳಿತ ಸಹಕಾರ ನೀಡುತ್ತಿದೆ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕು ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ವೃದ್ದಿಯಾಗಬೇಕು ಆಮ್ಲಜನಕ ಸಿಲಿಂಡರ್ ಪೂರೈಕೆ ಹೆಚ್ಚಿಸ ಬೇಕು, ಅರ್.ಟಿ.ಪಿ.ಸಿ.ಆರ್ ತಪಾಸಣೆ ಜಾಸ್ತಿ ಮಾಡಿ ಎಲ್ಲಾ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ನೀಡಿ ಖಾಲಿ ಇರುವ ವೈದ್ಯರು ಹಾಗೂ ಸಿಬ್ಬಂದಿ ಬೇಗನೆ ಭರ್ತಿ ಮಾಡಿ ಎಂದರು.

ಹಾಸನದಲ್ಲಿ ಇರುವ ಖಾಲಿ ಹುದ್ದೆಗಳನ್ನು ವೈದ್ಯರ ಕೌನ್ಸಿಲಿಂಗ್ ವೇಳೆ ಪ್ರದರ್ಶಿಸಬೇಕು ಎಂದು ಶಾಸಕರು ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ವಾರ್ ರೂಂ ಮಾಡಲಾಗಿದೆ.ಹೆಲ್ಪ್ ಲೈನ್ ಪ್ರಾರಂಭಿಸಲಾಗಿದೆ .ಈಗ ಹೊಳೆನರಸೀಪುರ ಆಸ್ಪತ್ರೆ ಯಲ್ಲಿ 150 ಕೋವಿಡ್ ಹಾಸಿಗೆಗಳಿವೆ ಮಹಿಳೆಯರು ಮತ್ತು ಮಕ್ಕಳ ವಾರ್ಡ್ ಗಳನ್ಮು ಪ್ರತ್ಯೇಕ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಇನ್ನೂ ಮುನ್ನೂರು ಬೆಡ್ ಹೆಚ್ಚು ಮಾಡಲು ಕ್ರಮವಹಿಸಲಾ ಗುತ್ತಿದೆ ಎಂದರು.

ಎಸ್. ಡಿ.ಅರ್.ಎಫ್ ನಿಧಿಯಲ್ಲಿ ಸ್ವಲ್ಪ ಅನುದಾನ ನೀಡಿದರೆ ಇರುವ ವ್ಯವಸ್ಥೆ ಗಳನ್ನು ಮಾರ್ಪಾಡು ಮಾಡಿ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ನೀಡಲಾಗುವುದು ಎಂದು ಹೆಚ್.ಡಿ ರೇವಣ್ಣ ಹೇಳಿದರು.

ತಾಲ್ಲೂಕು ನೋಡಲ್ ಅಧಿಕಾರಿಗಳನ್ನು ನೇಮಿಸಿ. ಜಿಲ್ಲಾಧಿಕಾರಿಯವರು ಎರೆಡು ದಿನಕ್ಕೊಮ್ಮೆ ಶಾಸಕರೊಂದಿಗೆ ವಿ.ಸಿ ಮಾಡಿ ಅಹವಾಲು ಆಲಿಸಿ ಸಮಸ್ಯೆ ಬಗೆಹರಿಸಲಿ ಎಂದರು.

ರೈತರಿಗೆ ಕೃಷಿ ಚಟುವಟಿಕೆ ತರಕಾರಿ ಮಾರಾಟಕ್ಕೆ ಅಡ್ಡಿ ಮಾಡಬೇಡಿ .ಗೊಬ್ಬರ ಖರೀದಿಗೆ ಅವಕಾಶ ನೀಡಿ ಒಂದೆರೆಡು ಗಂಟೆ ವಿಸ್ತರಣೆ ಮಾಡಿ ಎಂದು ಶಾಸಕರು ಮನವಿ ಮಾಡಿದರು.

ಎಲ್ಲಾ ಅಧಿಕಾರಿಗಳು ಈ ಸಂದಿಗ್ದ ಪರಿಸ್ಥಿತಿಯಲ್ಲಿ ಒಂದಾಗಿ ಕೆಲಸ ಮಾಡಿ.ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ರೇವಣ್ಣ ತಿಳಿಸಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ತಾಲ್ಲೂಕು ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರ ಎರಡರಲ್ಲೂ ಒಂದೇ ಗುಣಮಟ್ಟದ ಊಟೊಪಚಾರ ನೀಡಿ. ಕೋವಿಡ್ ಕೇರ್ ಕೇಂದ್ರದಲ್ಲಿ ಇರುವವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದರು.

ಗ್ರಾಮ ಪಂಚಾಯಿತಿವಾರು ಟಾಸ್ಕ್ ಫೋರ್ಸ್ ಗಳನ್ನು ಹೆಚ್ಚು ಚುರುಕುಗೊಳಿಸಿ .ಸೋಂಕು ಲಕ್ಷಣ ಇರುವ ಎಲ್ಲಾರನ್ನು ತಪಾಸಣೆಗೆ ಒಳಪಡಿಸಿ ಎಂದು ಆರ್.ಗಿರೀಶ್ ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್, ಎ.ಎಸ್.ಪಿ ನಂದಿನಿ,ಡಿವೈಎಸ್ ಪಿ ಲಕ್ಷ್ಮಣಗೌಡ,ತಹಶಿಲ್ದಾರ್ ಕೃಷ್ಣಮೂರ್ತಿ ,ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here