ಸ್ಪರ್ಧಾತ್ಮಕ ಪರೀಕ್ಷೆಗೆ : ಸಿದ್ದತೆ ಕುರಿತು ಸಂವಾದ

0
96

ಹಾಸನ ಜ.21:- ನಗರದ ಕೃಷಿಕ್ ಸರ್ವೋದಯ ಫೌಂಡೇಶನ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಮಾರ್ಗದರ್ಶನ ಸಂವಾದ ಕಾರ್ಯಕ್ರಮದಲ್ಲಿ ಶಿಲ್ಲಾಂಘ್‍ನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಮೂಲತಃ ಹಾಸನ ಜಿಲ್ಲೆಯವರಾದ ಗುಣಾಂಕ ಅವರು ಪಾಲ್ಗೊಂಡಿದ್ದರು.
ಪರೀಕ್ಷಾರ್ಥಿಗಳೊಂದಿಗೆ ಸಂವಾದ ಹಾಗೂ ಸಮಾಲೋಚನೆ ನಡೆಸಿದ ಗುಣಾಂಕ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ,ಓದುವುದು ,ಗ್ರಹಿಕೆ ಮತ್ತು ಪರೀಕ್ಷೆ ಎದುರಿಸಬೇಕಾದ ವಿಧಾನಗಳನ್ನು ವಿವರಿಸಿದರು. ಅವರ ಪತ್ನಿ ನಿಯೋಜನೆ ಮೇಲೆ ಮೇಘಾಲಯದಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ|| ಅಪೂರ್ವ ಅವರು ಸಹ ಪರೀಕ್ಷಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು ಗುಣಾಂಕ ಅವರ ಈ ಹಿಂದೆ ಬೆಂಗಳೂರಿನ ಕೃಷಿಕ್ ಸರ್ವೋದಯ ಫೌಂಡೇಶನ್‍ನಲ್ಲಿ ಕೆಲವು ಕಾಲ ತರಬೇತಿ ಪಡೆದಿದ್ದರು.
ಕಾರ್ಯಕ್ರಮದಲ್ಲಿ ಫೌಂಡೇಶನ್‍ನ ಹಾಸನ ಶಾಖೆಯ ಕಾರ್ಯದರ್ಶಿ ಹೆಚ್.ಪಿ.ಮೋಹನ್, ಮಲೆನಾಡು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಟಿ ದೇವೇಗೌಡ,
ಫೌಂಡೇಶನ್ ನ ಪ್ರಮುಖರಾದ ಹಾಗೂ ನಿವೃತ್ತ ಅಧೀಕ್ಷಕ ಇಂಜಿನಿಯರ್‍ಗಳಾದ ಬಿ ಬೋರೇಗೌಡ, ಹೆಚ್.ಜಿ ಸತ್ಯನಾರಾಯಣ, ನಿವೃತ್ತ ಕಾರ್ಯಪಾಲಕ ಅಭಿಯಂತರರು ಮತ್ತು ಖಜಾಂಚಿ ಟಿ.ಎಂ ಮಂಜುನಾಥ್,ವಿಜಯಶಾಲೆ ಮುಖ್ಯಸ್ಥರಾದ ಶಿವಸ್ವಾಮಿ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here