ಕೋವಿಡ್ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಪ್ರತಿನಿತ್ಯ ಉತ್ತಮ ಪೌಷ್ಟಿಕ ಆಹಾರ

0
72

ಮಡಿಕೇರಿ-ಕೋವಿಡ್ 19 ನಿಯಂತ್ರಿಸಲು ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದೆ. ಆ ದಿಸೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ, ಜಿಲ್ಲೆಯಲ್ಲಿಯೂ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದಿಂದ ಹಲವು ನಿಯಮಗಳನ್ನು ಜಾರಿಗೊಳಿಸುವ ಮೂಲಕ ಕೋವಿಡ್ 19 ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತ ಬರುತ್ತಿವೆ.

ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಗಳಾದ ಗಾಳಿಬೀಡು ಬಳಿಯ ನವೋದಯ ಶಾಲೆ, ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮ ಬಳಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆ, ಪೊನ್ನಂಪೇಟೆ ತಾಲ್ಲೂಕಿನ ಬಾಳುಗೋಡು ವಸತಿ ಶಾಲೆ, ಹಾಗೆಯೇ ಕುಶಾಲನಗರ ತಾಲ್ಲೂಕಿನ ಕೂಡಿಗೆ ಬಳಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಒಳ್ಳೆಯ ಬಿಸಿ ಬಿಸಿ ಆಹಾರ ನೀಡಲಾಗುತ್ತಿದೆ.

ಜಿಲ್ಲೆಯ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಬೆಳಗಿನ ವೇಳೆಯಲ್ಲಿ ಪ್ರತಿ ದಿನ ಒಂದೊಂದು ರೀತಿಯ ಉಪಹಾರ ನೀಡಲಾಗುತ್ತಿದೆ. ತರಕಾರಿ ಫಲಾವ್, ಸೌತೆಕಾಯಿ ಮೊಸರು, ಕಾಫಿ, ಇಡ್ಲಿ ಸಾಂಬಾರ್, ಚಟ್ನಿ, ಕಾಫಿ, ಕಡಬು, ಸಾಂಬಾರ್, ಕಡ್ಲೆಕಾಳು, ಆಲೂಗೆಡ್ಡೆ ಪಲ್ಯ ಹಾಗೂ ಕಾಫಿ, ದೋಸೆ, ಚಟ್ನಿ, ಮತ್ತು ಕಾಫಿ, ಸೇವಿಗೆ ಉಪಿಟ್ಟು, ಚಟ್ನಿ, ಮತ್ತು ಕಾಫಿ, ಚೌಚೌಬಾತ್ ಮತ್ತು ಕಾಫಿ, ಟೋಮ್ಯಾಟೋ ಬಾತ್, ಚಟ್ನಿ ಮತ್ತು ಕಾಫಿಯನ್ನು ಬೆಳಗಿನ ಉಪಹಾರದ ವೇಳೆ ನೀಡಲಾಗುತ್ತದೆ.

ಬೆಳಗ್ಗೆ 11 ಗಂಟೆ ವೇಳೆಗೆ ಲಘು ಉಪಹಾರ ನಿಡಲಾಗುತ್ತಿದ್ದು, ಕ್ಯಾರೆಟ್ ಸೂಪ್, ಜೊತೆಗೆ ಕಲ್ಲಂಗಡಿ, ಪಪ್ಪಾಯ ಹಣ್ಣು ನೀಡಲಾಗುತ್ತದೆ. ರವೆ ಗಂಜಿ, ಟೊಮ್ಯಾಟೊ ಸೂಪ್, ರಾಗಿ ಗಂಜಿ ನೀಡಲಾಗುತ್ತದೆ

ನಂತರ ಮಧ್ಯಾಹ್ನದ ಊಟಕ್ಕೆ ಎರಡು ಚಪಾತಿ, ಒಂದು ಮೊಟ್ಟೆ, ಕಾಳು ತರಕಾರಿ ಫಲ್ಯ, ಅನ್ನ, ಸಂಬಾರು ಮತ್ತು ಮಸಾಲೆ ಮಜ್ಜಿಗೆ ನೀಡಲಾಗುತ್ತದೆ.

ಸಂಜೆ 5 ಗಂಟೆ ವೇಳೆಗೆ ಲಘು ಉಪಹಾರ ನೀಡಲಾಗುತ್ತದೆ. ಬಾಳೆಹಣ್ಣು, ಬಿಸ್ಕತ್ತು, ಒಣ ಖರ್ಜೂರ ಹಾಗೂ ಟೀ ನೀಡಲಾಗುತ್ತದೆ. ಹಾಗೆಯೇ ರಾತ್ರಿ ಊಟಕ್ಕೆ ಅನ್ನ, ತರಕಾರಿ ಸಾಂಬೂರು, ಮೊಳಕೆ ಕಾಳು ಫಲ್ಯ, ಹಪ್ಪಳ, ಉಪ್ಪಿನ ಕಾಯಿ, ಮಸಾಲೆ ಮಜ್ಜಿಗೆ ಮತ್ತು ಬಾದಾಮಿ ಹಾಲು. ಹೀಗೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here