ಏಕೀಕರಣ,ಗೋಕಾಕ್ ಚಳುವಳಿಯ ಆಶಯಗಳನ್ನು ಈಡೇರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ; ಪತ್ರಕರ್ತ ಹುಳ್ಳಿಪ್ರಕಾಶ ಅಭಿಮತ

0
112

ಹಗರಿಬೊಮ್ಮನಹಳ್ಳಿ, ನ,1
ಕರ್ನಾಟಕ ರಾಜ್ಯ ಉದಯವಾಗಿ 66 ವಸಂತಗಳು ಪೂರ್ಣಗೊಂಡರೂ ಈ ತನಕ ರಾಜ್ಯವನ್ನು ಆಳ್ವಿಕೆಮಾಡಿರುವ ಸರ್ಕಾರಗಳು, ಏಕೀಕರಣದ ಮತ್ತು ಗೋಕಾಕ್ ಚಳುವಳಿಯ ಆಶಯಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿವೆ ಎಂದು ಹಿರಿಯ ಪತ್ರಕರ್ತ ಹುಳ್ಳಿಪ್ರಕಾಶ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರಗಳು ಕನ್ನಡದ ಬಗ್ಗೆ ತಾಳಿರುವ ದಿವ್ಯ ನಿರ್ಲಕ್ಷ್ಯ ಧೋರಣೆಗಳು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಬೇಕೆನ್ನುವ ಆರೂವರೇ ಕೋಟಿ ಕನ್ನಡಿಗರ ಆಸೆ,ಆಕಾಂಷೆಗಳು ಇನ್ನೂ ಕೂಡ ಈಡೇರಲು ಸಾಧ್ಯವಾಗ್ತಯಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದಲ್ಲಿ ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ) ವತಿಯಿಂದ ಮಂಗಳವಾರ ಮುಂಜಾನೆ ಹಮ್ಮಿಕೊಂಡಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿ, ಈ ತನಕದ ಆಳುವ ಸರ್ಕಾರಗಳು ಸಮಯ ಸಿಕ್ಕಾಗಲೇಲ್ಲ ಕನ್ನಡದ ಮೇಲೆ ಸವಾರಿ ಮಾಡುತ್ತಾ ಬಂದವೇ ಹೊರತು ಕನ್ನಡವನ್ನು ಮುಗಿಲೇತ್ತರಕ್ಕೆ ಬೆಳೆಸಲು ಮನಸ್ಸು ಕೊಡಲಿಲ್ಲ. ಹೀಗಾಗಿ ತನ್ನ ತಾಯ್ನಾಡಿನಲ್ಲಿಯೇ ಕನ್ನಡಿಗ ಅನಾಥನಾಗುವಂತಹ ಪರಿಸ್ಥಿತಿ ಇವತ್ತು ನಿರ್ಮಾಣಗೊಂಡಿದೆ ಎಂದರು.

ಕ್ಲಬ್ ಅಧ್ಯಕ್ಷ ಹೆಚ್.ಪಿ.ಶಿವಶಂಕರ ಗೌಡ ಮಾತನಾಡಿ, ನಮ್ಮ ನೆಲ,ಜಲ,ನುಡಿ, ಪರಂಪರೆಗೆ ಧಕ್ಕೆ ಆದಾಗ, ಅಪಮಾನಮಾಡಿದಾಗ ನಾವು ಸುಮನೆ ಕುಳಿತುಕೊಳ್ಳದೆಯೇ ಕನ್ನಡದ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಮನೆ,ಮನಗಳಲ್ಲೂ ಕನ್ನಡವೇ ಉಸಿರಾಗಬೇಕು, ಪ್ರಧಾನವಾಗಬೇಕು. ಕನ್ನಡ ನಾಡು,ನುಡಿಯ ಅಭಿವೃದ್ಧಿ, ರಕ್ಷಣೆಗಾಗಿ ನಾವೆಲ್ಲರೂ ಶ್ರಮಿಸಬೇಕೆಂದರು.

ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ) ಅಧ್ಯಕ್ಷ ಹೆಚ್.ಪಿ.ಶಿವಶಂಕರಗೌಡ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಬಾರಿಕರ ಗಂಗಾಧರ, ನಾಮನಿರ್ದೇಶಿತ ಪುರಸಭೆ ಸದಸ್ಯ ಬಡಿಗೆರ್ ಬಸವರಾಜ, ಹಿರಿಯರಾದ ಮ್ಯಾಕನಿಕ್ ಬಾಬು, ಕ್ಲಬ್ ನ ಖಜಾಂಚಿ ಶಿವಕುಮಾರ ಶೆಟ್ಟರು, ಸಹ ಕಾರ್ಯದರ್ಶಿ ಜಿಎಂ.ಶಂಕರ್, ಸದಸ್ಯರಾದ ಸಿಎಂ.ಮಂಜುನಾಥ, ಡ್ರೈವರ್ ಚಂದ್ರು, ಕುದುರಿ ಪ್ರಕಾಶ, ಬಿ. ಸಂದೀಪ್, ಬಿ.ಜಯರಾಂ, ಕೆಎಂ.ಹರ್ಷ, ನೂರಿ, ಸಂತು, ಶೂಟ್ ನಾಗ, ಅಂಬಾಡಿ ಹುಲುಗ, ಮೇದಾರ ಭರ್ಮಜ್ಜ, ಅನುಪಕುಮಾರ, ಬಿ.ವಿರೂಪಾಕ್ಷಿ, ಶಿವು ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಡಿಗೆರ್ ಬಸವರಾಜ ನಿರೂಪಿಸಿದರು.

LEAVE A REPLY

Please enter your comment!
Please enter your name here