ಅಂತಿಮ ವರ್ಷದ ಬಿ.ಎಸ್.ಡಬ್ಲ್ಯೂ.ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ:

0
540

ಕೊಟ್ಟೂರು: ಪಟ್ಟಣದ ಗಂಗೋತ್ರಿ ಬಿ.ಎಸ್.ಡಬ್ಲ್ಯೂ. ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು.. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಡಾ. ಸತೀಶ್ ಪಟೇಲ್ ಸಹಾಯಕ ಪ್ರದ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಗರಿಬೊಮ್ಮನಹಳ್ಳಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ಪೀಳಿಗೆ ಓದುವ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ.. ಪ್ರತಿಯೊಬ್ಬ ಯುವಕ ಭವಿಷ್ಯ ಭಾರತವನ್ನು ನಿರ್ಮಾಣ ಮಾಡುವ ಮೂಲಕ ಶಿಕ್ಷಣವನ್ನು ಮೈಗೂಡಿಸಿಕೊಳ್ಳಬೇಕು, ಇಂದಿನ ಯುವಪೀಳಿಗೆ ಸಮೂಹ ಮಾಧ್ಯಮವನ್ನು ಬಳಸುತ್ತಿದ್ದಾರೆ ಆದರೆ ಹೇಗೆ ಅವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎನ್ನುವ ಅರಿವು ಅವರಲ್ಲಿ ಇಲ್ಲ ಹಾಗೆಯೇ ತಂತ್ರಜ್ಞಾನದ ಶಿಕ್ಷಣವನ್ನು ಪಡೆದುಕೊಂಡ ಉತ್ತಮ ಸಾಕ್ಷರತಾರಾಗಲೂ ಸಾಧ್ಯ. ಗುರು ಶಿಷ್ಯರ ಸಂಬಂಧ ಗುರುವನ್ನು ಮೀರಿಸುವ ಮಟ್ಟಕ್ಕೆ ಬೆಳೆದಾಗ ಗುರುವಿಗೆ ಆಗ ಖುಷಿಯಾಗುತ್ತದೆ. ಶಿಕ್ಷಣವನ್ನು ನಾಲ್ಕು ಗೋಡೆಗಳ ಮದ್ಯ ಕಲಿತ ವಿಷಯವು ನಮ್ಮ ಜೀವನಕ್ಕೆ ಸಹಾಯಕ ಆಗದೆ ಇರಬಹುದು, ಆದರೆ ಲೋಕ ಜ್ಞಾನ ತಿಳಿದುಕೊಳ್ಳಲಿಕ್ಕೆ ಓದಬೇಕು, ಪ್ರತಿಯೊಬ್ಬ ವಿದ್ಯಾರ್ಥಿ ತನ್ನನ್ನ ಸಮಾಜ ಗುರುತಿಸುವ ಮಟ್ಟಕ್ಕೆ ಬೆಳೆದಾಗ ಮಾತ್ರ ಅವನ್ನ ಜೀವನ ಸಾರ್ಥಕ ಎಂದು ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು ಹಾಗೆಯೇ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀಮತಿ ನಿರ್ಮಲಾ ಶಿವನ ಗುತ್ತಿ ಇವರು ಇಂದಿನ ಯುವ ಸಮೂಹ ಶಿಕ್ಷಣ ಪಡೆದುಕೊಂಡು ಉತ್ತಮ ನಾಗರಿಕರಾಗಿ ತಮ್ಮ ಸೇವೆಯನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಡಿ ಎಂದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಚಟ್ರಿಕಿ ಬಸವರಾಜ್ ಅಧ್ಯಕ್ಷರು ಶ್ರೀ ಗುರುಬಸವೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ, ಶ್ರೀಮತಿ ರಚನಾ ರಜತ್ ನಿರ್ದೇಶಕರು, ಶ್ರೀ ಸಿ. ಬಿ. ರಜತ್ ಕಾರ್ಯದರ್ಶಿಗಳು ಶ್ರೀ ಗುರುಬಸವೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಇವರು ಭಾಗಹಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರುಬಸವರಾಜ್ ಎ.ಎಂ.ಎಂ. ವಹಿಸಿದ್ದರು, ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀ ಮರುಳಪ್ಪ ಕೆ, ಪ್ರಫುಲ್ ಚಂದ್ರ ಎಂ.ಎಸ್, ಭರತ್ ಡಿ, ಕೊಟ್ರೇಶ ಪಿ.ಕೆ.ಎಂ, ನಾಗರಾಜ್ ಅವರು ಉಪಸ್ಥಿಸಿ ಇದ್ದರು.ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ಉಪನ್ಯಾಸಕರಾದ ಶ್ರೀ ಶಶಿಕಿರಣ ಕೆ. ನುಡಿದರು, ದ್ವಿತೀಯ ವರ್ಷದ ವಿದ್ಯಾರ್ಥಿನಿ ಚಂದನ ಕೆ.ಜಿ. ನಿರೂಪಿಸಿದರು, ವಿದ್ಯಾರ್ಥಿ ನಾಗರಾಜ ಸ್ವಾಗತಿಸಿದರು,ವಿದ್ಯಾರ್ಥಿನಿ ದಿವ್ಯ ಎಂ. ವಂದಿಸಿದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here