ಏಕೀಕರಣಕ್ಕೆ ಶ್ರಮಿಸಿದ ಎಲ್ಲಾ ಮಹನೀಯರ ಸ್ಮರಣೆ ಅಗತ್ಯ: ಶಾಸಕ ಈ. ತುಕಾರಾಮ್

0
104

ಸಂಡೂರು.ನ.01-ಕರ್ನಾಟಕ ಏಕೀಕರಣದ ಸಮಯದಲ್ಲಿ ಹೋರಾಡಿದ ಎಲ್ಲಾ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಹಾಗೂ ಸಿ ಎಲ್ ಪಿ ಕಾರ್ಯದರ್ಶಿ ಈ. ತುಕಾರಾಮ್
ಅವರು ಹೇಳಿದರು.

ಅವರು ಮಂಗಳವಾರ ತಾಲ್ಲೂಕಾಡಳಿತದಿಂದ
ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

ರಾಜ್ಯದ ಎಲ್ಲಾ ಕಡೆ ನಡೆದ ಲಕ್ಷಾಂತರ ಕನ್ನಡಿಗರ ಹೋರಾಟದ ಕಿಚ್ಚು, ಸ್ವಾಭಿಮಾನ, ಅಭಿಮಾನಗಳ ಫಲವೇ ಈ ಏಕೀರಣದ ದಿನವನ್ನು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಹಾಗೇ ತಹಶೀಲ್ದಾರ್ ಕೆಎಂ ಗುರುಬಸವರಾಜ್ ಮಾತನಾಡಿ 1956 ರ ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾದಾಗ ಹಂಪಿಯ ತಾಯಿ ಭುವನೇಶ್ವರಿ ಸನ್ನಿಧಿಯಲ್ಲಿ ಮೊದಲ ರಾಜ್ಯೋತ್ಸವ ನಡೆದ ನೆಲವಾಗಿದ್ದು, 1973 ನವೆಂಬರ್ 1 ರಂದು ಮೈಸೂರು ಕರ್ನಾಟಕವಾದಾಗ ಅಂದಿನ ಮಹಾರಾಜರು ಜಯಚಾಮರಾಜೇಂದ್ರ ಒಡೆಯರ್ ಅವರು ಮೊದಲ ಬಾರಿಗೆ ಕರ್ನಾಟಕ ನಕ್ಷೆಗೆ ಪೂಜೆ ಮಾಡಿ ‘ಕರ್ನಾಟಕ ಜ್ಯೋತಿ’ ಬೆಳಗಿಸಿ, ‘ಕರ್ನಾಟಕ’ವೆಂಬ ನಾಮಕರಣವನ್ನು ಸಾಂಕೇತಿಕವಾಗಿ ಆಚರಿಸಿದ್ದು ಹಂಪಿಯಲ್ಲೇಯೇ ಎಂದು ತಿಳಿಸಿದರು.

ನಂತರ ವಿಜಯ ಸರ್ಕಲ್ ನಲ್ಲಿ ಕನ್ನಡ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬಾಗವಹಿಸಿ ವೀರಗಾಸೆ ಕಲಾವಿದರ ಜೊತೆಗೆ ತಹಶೀಲ್ದಾರ್ ಕೆಎಂ ಗುರುಬಸವರಾಜ್, ವೀರಗಾಸೆ ನೃತ್ಯವನ್ನು ಮಾಡಿದರು ಹಾಗೆ ಡೊಳ್ಳುಕುಣಿತ ಕಲಾವಿದರೊಂದಿಗೆ ಬಿಇಓ ಮೈಲೇಶ್ ಬೇವೂರ್ ಡೊಳ್ಳು ಬಾರಿಸಿದರು ಇವರೆಲ್ಲರೊಂದಿಗೆ ಶಾಸಕ ಈ.ತುಕಾರಾಮ್ ರವರು ಕಂಸಾಳೆಯನ್ನು ಹಾಕುತ್ತಾ ಕುಣಿಯುತ್ತಿರುವ ದೃಶ್ಯ,ಮತ್ತು ವೀರಶೈವ ಸಮಾಜದ ಮಹಿಳಾ ಮಂಡಳಿಯ ಸದಸ್ಯರು ಕನ್ನಡಗೀತೆಗೆ ಕೋಲಾಟ ನೃತ್ಯವನ್ನು ಮಾಡಿದ್ದು ನೋಡುಗರ ಮನ ತಣಿಸುವಂತಿತ್ತು, ಪಟ್ಟಣದ ಶಾಲೆಗಳ ವಿದ್ಯಾರ್ಥಿಗಳು, ಮಕ್ಕಳು ಕಾರ್ಯಕ್ರಮದಲ್ಲಿ ಬಾಗವಹಿಸಿ ಮೆರುಗನ್ನು ತಂದುಕೊಟ್ಟರು

ಹಾಗೇ ಕರ್ನಾಟಕ ರಕ್ಷಣಾ ವೇದಿಕೆಯ ಪಿ.ರಾಜು ಪಾಳೇಗಾರ್ ಹಾಗು ಪದಾಧಿಕಾರಿಗಳು ಶಾಸಕ ಈ.ತುಕಾರಾಮ್ ಅವರಿಗೆ ಪೇಟ, ಶಾಲನ್ನು ಹಾಕಿ ಸನ್ಮಾನಿಸಿದರು, ಹಾಗೇ ಕನ್ನಡಪರ, ರೈತ, ಕಾರ್ಮಿಕ, ಎಲ್ಲಾ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಧರ್ಮಾಪುರ ಹೊರವಲಯದ ಹತ್ತಿರವಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯ ಬಳಿ ಧ್ವಜಾರೋಹಣವನ್ನು ಮಾಡಿ ಕನ್ನಡತನದ ಬಗ್ಗೆ ಗೌರವವನ್ನು ಎತ್ತಿ ಹಿಡಿದರು

ಈ ಸಂಧರ್ಭದಲ್ಲಿ ಶಾಸಕ ತುಕಾರಾಮ್, ತಹಶೀಲ್ದಾರ್ ಕೆಎಂ ಗುರುಬಸವರಾಜ್, ಇಓ ಷಡಕ್ಷರಿ, ಬಿಇಓ ಮೈಲೇಶ್ ಬೇವೂರ್,ಹಾಗೂ ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here