ಕಂದಗಲ್ಲು ಗ್ರಾಪಂಯನ್ನು  ಮೂಲ ಸ್ಥಳವಾದ ಗಜಾಪುರಕ್ಕೆ ವರ್ಗಾಯಿಸಲು : ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕೆ.ರೇಣುಕಮ್ಮ ಒತ್ತಾಯ

0
165

ಕೊಟ್ಟೂರು ತಾಲ್ಲೂಕಿನ ಕಂದಗಲ್ಲು ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಹಿಂದೆ ಗಜಾಪುರ ಗ್ರಾಮಕ್ಕೇ ಮಂಜೂರಾಗಿತ್ತು. ಆದರೆ ರಾಜಕೀಯ ಒತ್ತಡದ ಪರಿಣಾಮವಾಗಿ ಕಾರಣಾಂತರಗಳಿಂದ ಕಂದಗಲ್ಲುಗೆ ವರ್ಗಾಯಿಸಿಕೊಂಡಿದ್ದಾರೆ.

ಇದರಿಂದ ಈ ಪಂಚಾಯಿತಿಯ ಸಾರ್ವಜನಿಕರು ಪಂಚಾಯಿತಿಗೆ ಹೋಗಲು ಬಸ್ ಸೌಲಭ್ಯವೇ ಇಲ್ಲದ ಕಂದಗಲ್ಲಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಆದರೆ ಮುಖ್ಯರಸ್ತೆ, ರಾಜ್ಯ ಹೆದ್ದಾರಿಯಲ್ಲಿರುವ ಗಜಾಪುರ ಗ್ರಾಮಕ್ಕೆ ಈ ಪಂಚಾಯಿತಿಯನ್ನು ವರ್ಗಾಯಿಸಿದರೆ ಗ್ರಾಮೀಣ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇದಲ್ಲದೇ ಮೂಲಸ್ಥಳವಾದ ಗಜಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇಲ್ಲಿ ಒಂದು ಗ್ರಂಥಾಲಯ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆಯಾಗಿದೆ,
ಈ ಗ್ರಾಮಕ್ಕೆ ಒಂದು ಗ್ರಂಥಾಲಯ ಮಂಜೂರು ಮಾಡಿ, ಗ್ರಾಮ ಪಂಚಾಯಿತಿಯನ್ನು ಗಜಾಪುರ ಗ್ರಾಮಕ್ಕೆ ವರ್ಗಾಯಿಸಬೇಕೆಂದು ಓದುಗರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪಕ್ಕದ ಕೂಡ್ಲಿಗಿ ತಾಲ್ಲೂಕಿನ ಮಾಕನಡಕು ಮೂಲ ಗ್ರಾಮ ಪಂಚಾಯಿತಿಯಾಗಿದ್ದು, ಪಂಚಾಯಿತಿಯನ್ನು ಚಿಕ್ಕಜೋಗಿಹಳ್ಳಿಗೆ ವರ್ಗಾವಣೆಗೊಂಡಿದೆ. ಮಾಕನಡಕು ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣವಾಗಿದ್ದು, ಈಗ ಅಲ್ಲಿನ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಗ್ರಾಮ ಪಂಚಾಯಿತಿಗೆ ಗ್ರಾಮೀಣ ಪ್ರದೇಶದ ಜನರು ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಅದೇ ರೀತಿ ಇದೂ ಸಹ ಆಗಬಹುದು. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು, ಸಿ.ಇ.ಒ. ಈ ಬಗ್ಗೆ ಗಮನಿಸಿ ಮೂಲ ಸ್ಥಳಕ್ಕೆ ವರ್ಗಾಯಿಸುವಂತೆ ಮತ್ತು ಅಭಿವೃದ್ಧಿಗೆ ಒತ್ತು ಕೊಡುವಂತೆ ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕೆ.ರೇಣುಕಮ್ಮ ಒತ್ತಾಯಿಸಿದರು.

LEAVE A REPLY

Please enter your comment!
Please enter your name here