ಶಾಲಾ ಮಕ್ಕಳಿಗೆ ಡೆಂಘೀ, ಚಿಕೂನ್ ಗುನ್ಯಾ ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮ,

0
474

ಸಂಡೂರು:ನ:03:- ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳಾದ ಡೆಂಘೀ, ಚಿಕೂನ್ ಗುನ್ಯಾ ಕಾಯಿಲೆಗಳ ಕುರಿತು ಜಾಗೃತಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು,

ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಇತ್ತೀಚೆಗೆ ನಿರಂತರ ಮಳೆ ಸುರಿದು ನೀರಿನ ಮೂಲಗಳಲ್ಲಿ ನೀರು ಸಂಗ್ರಹ ವಾಗಿದೆ, ಹಾಗಾಗಿ ಸೊಳ್ಳೆಗಳ ಉತ್ಪತ್ತಿಯೂ ಜಾಸ್ತಿಯಾಗುತ್ತಿವೆ, ಡೆಂಘೀ ಚಿಕೂನ್ ಗುನ್ಯಾ ನಿಯಂತ್ರಣ ಮಾಡಲು ಮಕ್ಕಳು ರೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರ ಬೇಕು, ಕಾಯಿಲೆ ಹರಡುವ ವಾಹಕ, ಹರಡುವ ರೀತಿ, ತಡೆಗಟ್ಟುವ ವಿಧಾನಗಳ ಬಗ್ಗೆ ಅರಿಯ ಬೇಕು ಎಂದು ತಿಳಿಸಿದರು, ಮೊದಲು ಮನೆಯ ಮುಂಭಾಗದಲ್ಲಿ ಇಟ್ಟಿರುವ ಕೈಕಾಲು ತೊಳೆಯಲು ಬಳಕೆ ಮಾಡುವ ನೀರನ ತೊಟ್ಟಿ,ಬ್ಯಾರೆಲ್, ಚಿಪ್ಪು,ಬಾಟಲ್ ಗಳಲ್ಲಿ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ, ಸೊಳ್ಳೆಗಳು ಮನುಷ್ಯರಿಗೆ ಕಚ್ಚುವುದರಿಂದ ರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ, ಸೊಳ್ಳೆಗಳ ನಿಯಂತ್ರಿಸಲು ವಾರದಲ್ಲಿ ಎರಡು ಬಾರಿ ನೀರು ಶೇಕರಿಸುವ ಡ್ರಮ್,ಬ್ಯಾರಲ್,ಗಡಿಗೆ, ಸಿಮೆಂಟ್ ತೊಟ್ಟಿಗಳನ್ನು ಸ್ವಚ್ಚವಾಗಿ ತೊಳೆದು ಒಣಗಿದ ನಂತರ ನೀರು ಶೇಕರಿಸಿ ಮುಚ್ಚಳ ಅಥವಾ ಬಟ್ಟೆಗಳಿಂದ ಕಟ್ಟಿ ಸೊಳ್ಳೆ ಮೊಟ್ಟೆಗಳು ಇಡದಂತೆ ಎಚ್ಚರಿಕೆ ವಹಿಸಬೇಕು, ಚರಂಡಿಯಲ್ಲಿ ಕಸಕಡ್ಡಿ ಹಾಕಬಾರದು, ಮಲಗುವಾಗ ಸೊಳ್ಳೆ ಪರದೆಗಳನ್ನು ಕಟ್ಟಿಕೊಂಡು ಮಲಗುವುದು,ಮೈತುಂಬ ಬಟ್ಟೆ ಧರಿಸುವುದು, ಮಸ್ಕಿಟೋ ಕಾಯಿಲ್, ಕ್ರೀಮ್ ಗಳನ್ನು ಬಳಸಿ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು,ಸಂಜೆ ವೇಳೆ ಬಾಗಿಲು ಕಿಟಿಕಿಗಳಿಗೆ ಕರ್ಟನ್ ಹಾಕುವುದು,ಮನೆಯಲ್ಲಿ ಇರುವ ಸೊಳ್ಳೆಗಳ ನಾಶಕ್ಕೆ ಮಸ್ಕಿಟೋ ಬ್ಯಾಟ್ ಬಳಸಿ, ಯಾರಿಗಾದರೂ ಕೀಲು ನೋವು, ವಿಪರೀತ ಜ್ವರ, ವಾಂತಿ, ಬಾಯಿ ವಿಷ, ತಲೆ ನೋವು, ಕಣ್ಣಿನ ಹಿಂಭಾಗ ನೋವು ಇತ್ಯಾದಿ ಕಂಡು ಬಂದರೆ ಸ್ವಯಂ ಚಿಕಿತ್ಸೆ ಮಾಡಿ ಕೊಳ್ಳದೇ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಬೇಕು, ಹಾಗೇ ರಕ್ತ ಪರೀಕ್ಷೆ ಮಾಡಿಸಬೇಕು, ಮತ್ತು ವೈದ್ಯ ರಿಂದಲೇ ಚಿಕಿತ್ಸೆ ಪಡೆಯಬೇಕು ಎಂದು ಮಾಹಿತಿ ನೀಡಿದರು, ಪ್ರತಿ ಶನಿವಾರ ಶಾಲೆಯ ನಂತರ ಮನೆಯಲ್ಲಿ ಕುಟುಂಬದವರೊಂದಿಗೆ ಡೆಂಘೀ ಚಿಕೂನ್ ಗುನ್ಯ ಬಗ್ಗೆ ತಿಳಿಸಿ ಸೊಳ್ಳೆ ಉತ್ಪತ್ತಿ ನಿಲ್ಲಿಸಲು ನೀರು ಶೇಕರಣಾ ತೊಟ್ಟಿ ಸ್ವಚ್ಚ ಗೊಳಿಸಿರಿ ಮತ್ತು ಘನ ತ್ಯಾಜ್ಯವನ್ನು ವಿಲೇವಾರಿ ಮಾಡಿ ಎಂದು ಸೂಚಿಸಿದರು,

ಈ ಸಂದರ್ಭದಲ್ಲಿ ಶಿಕ್ಷಕಿ ರಜನಿಯವರು ಮಾತನಾಡಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಲ್ಲಾ ವಿವರಗಳನ್ನು ತಿಳಿಸಿದ್ದಾರೆ ಅದರಂತೆ ನಡೆದುಕೊಳ್ಳಿ ರೋಗಗಳ ಬಾಧೆಯಿಂದ ರಕ್ಷಿಸಿ ಕೊಳ್ಳಿ ಎಂದು ಸಲಹೆ ನೀಡಿದರು,

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶೇಕ್ ಮೋಹಿದ್ದೀನ್, ರಜನಿ, ಶಶಿಕಲಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಇತರರು ಇದ್ದರು.

LEAVE A REPLY

Please enter your comment!
Please enter your name here