ವಿದ್ಯಾರ್ಥಿಗಳೇ ಸಂಸ್ಕಾರವಂತರಾಗಿ ಬಾಳಿ: ನೇತ್ರ ತಜ್ಞ ಡಾ.ಶ್ರೀನಿವಾಸ ದೇಶಪಾಂಡೆ

0
495

ವಿಜಯನಗರ:ಅ:01:-ಹೊಸಪೇಟೆ ನಗರದ ಸುಂದರ ಪರಿಸರದ ಟಿ.ಬಿ ಡ್ಯಾಂನಲ್ಲಿರುವ “ಶಾಂತಪ್ರಭ ಎಜ್ಯುಕೇಷನಲ್ ಟ್ರಸ್ಟ್” ಅಡಿಯಲ್ಲಿ ಬರುವ ” ಜವಳಿಸ್.ಪ.ಪೂ ಕಾಲೇಜಿನಲ್ಲಿ ” ಫ್ರೆಶರ್ಸ ಡೇ” ಹಮ್ಮಿಕೊಳ್ಳಲಾಗಿತ್ತು .

ಪ್ರಥಮ ಪಿ.ಯು.ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜ್ಯೋತಿಯನ್ನು ಬೆಳಗಿಸುವ ಮೂಲಕ ಈ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು ಜವಳಿಸ್. ಪ.ಪೂ ಕಾಲೇಜಿನ ಟ್ರಸ್ಟನ ಕಾರ್ಯದರ್ಶಿಗಳಾದ ಶ್ರೀ ಲೇಪಾಕ್ಷ. ಎಸ್.ಜವಳಿಯವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು,ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡಲು ಇಂತಹ ಕಾರ್ಯಕ್ರಮ ಅಗತ್ಯವೆಂದು ವಿಧ್ಯಾರ್ಥಿಗಳು ಪ್ರೀತಿ ವಿಶ್ವಾಸದಿಂದ ಬೆರೆತು ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಉತ್ತಮ ಫಲಿತಾಂಶದೊಂದಿಗೆ ಬದುಕನ್ನು ರೂಪಿಸಿಕೊಳ್ಳಲು ತಿಳಿ ಹೇಳಿದರು

ನಂತರ ಮುಖ್ಯ ಆಥಿತಿಗಳಾಗಿ ಆಗಮಿಸಿದ್ದ ನಗರದ ಹೆಸರಾಂತ ಅಶ್ವಿನಿ ಆಸ್ಪತ್ರೆಯ ನೇತ್ರ ತಜ್ಞರು ಹಾಗು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಢಾ.ಶ್ರೀನಿವಾಸ ದೇಶಪಾಂಡೆರವರನ್ನು ಸಂಸ್ಥೆ ಪರವಾಗಿ ಪ್ರೀತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸನ್ಮಾನಿತರು ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ಹೊಂದಿ ಅವರ ತಂದೆ ತಾಯಿಗಳ ಕನಸನ್ನು ಕನಸುಗಳನ್ನು ಈಡಿರೇಸಬೇಕೆಂದು ಮತ್ತು ಉತ್ತಮ ಸಂಸ್ಕಾರವಂತರಾಗಿ ಬಾಳ ಬೇಕೆಂದು ತಿಳಿಸಿದರು.

ನಂತರ ಸಮಾಜದ ಸೇವಕರು ಮತ್ತು ಧಾನಿಗಳಾದ ಶ್ರೀ ಹರ್ಷವರ್ಧನ ಪತ್ತಿಕೊಂಡರವರು ವಿದ್ಯಾರ್ಥಿಗಳು ಯಾವುದೇ ಭಯ ಮತ್ತು ಸಂಕೋಚಗಳಿಲ್ಲದೆ ಉತ್ತಮವಾಗಿ ವಿಧ್ಯಾಭ್ಯಾಸ ಮಾಡಿ ಉಪನ್ಯಾಸಕರ ಮಾರ್ಗ ದರ್ಶನದಿಂದ ನಿಮ್ಮ ಗುರಿ ತಲುಪಿ ಭವಿಷ್ಯ ರೊಪಿಸಿಕೊಳ್ಳಿ ಎಂದು ಹೇಳಿದರು ನಂತರ ಜವಳಿಸ್ ಪ.ಪೂ ಕಾಲೇಜಿನ ಪ್ರಾಚಾರ್ಯರಾದ ಕು.ಸಂಗೀತ ನಟರಾಜನ್ ರವರು
ನಮ್ಮ ಕಾಲೇಜಿನಲ್ಲಿ ಉತ್ತಮ ಕಲಿಕ ಪರಿಸರ ಮತ್ತು ಬೋಧಕ ವರ್ಗವಿದ್ದು ಪ್ರತಿಯೊಬ್ಬರು ತಮ್ಮದೇ ಅದ ಶಕ್ತಿ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ ಈ ಶಕ್ತಿಗೆ ಶಕ್ತಿಯನ್ನು ನಮ್ಮ ಕೆಲಸ ಮತ್ತೆ ಜವಾಬ್ದಾರಿಯಾಗಿದೆ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು

ನಂತರ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಹಾಗೂ ನಿವೃತ್ತ
ಕೆ.ಪಿ.ಟಿ.ಸಿ.ಎಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀ.ಶಾಂತವೀರಪ್ಪನವರು ವಿಧ್ಯಾರ್ಥಿಗಳ ಮುಂದಿನ ಸಮಾಜದ ಭದ್ರ ಬುನಾದಿಗಳೆಂದು ಉತ್ತಮ ಆಚಾರ ವಿಷಯಗಳನ್ನು ರೂಢಿಸಿಕೊಂಡು ಅಧುನಿಕ ತಂತ್ರಜ್ಞಾನ ಜೊತೆಗೆ ಮುನ್ನಡೆಯ ಬೇಕೆಂದು ತಿಳಿಸಿದರು ಉಪನ್ಯಾಸಕರಾದ ಶ್ರೀ ಇಫಾರ್ನ, ಶ್ರೀ ಕುಮಾರ ಸ್ವಾಮಿ ಡಿ. ಶ್ರೀಮತಿ ಪ್ರತಿಭಾ ಕು.ಪ್ರಿಯಾಂಕಾ, ಕು.ಪೈರೋಜ ಬೇಗಂ ಸಂಸ್ಥೆಯ ಸದಸ್ಯರಾದ ಲತಾ.ಎಲ್.ಜವಳಿ
ಉಪಸ್ಥಿತಿಯಲ್ಲಿದ್ದರು
ಕಾಲೇಜಿನ ಹಿರಿಯ ಸಹಾಯಕರಾದ ಜಿ. ಸದ್ಯೋಜಾತಪ್ಪ.ನವರು ವಂದಿಸಿದರು
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜೊತೆಗೆ ಫ್ರೇಶರ್ಸ ಡೇ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು

LEAVE A REPLY

Please enter your comment!
Please enter your name here