ನಂದಿಹಳ್ಳಿ ಪಿಜಿ ಕೇಂದ್ರಕ್ಕೆ ಡಿಸಿ, ಶಾಸಕರ ಭೇಟಿ, ಪರಿಶೀಲನೆ.

0
97

ಸಂಡೂರು ತಾಲೂಕಿನ ನಂದಿಹಳ್ಳಿ ಪಿಜಿ ಕೇಂದ್ರಕ್ಕೆ ದಿನಾಂಕ 26.06.2021 ರಂದು ಜಿಲ್ಲಾಧಿಕಾರಿಗಳಾದ ಪವನ್ ಕುಮಾರ್ ಮಾಲಪಾಟಿ ಹಾಗೂ ಶಾಸಕರು ಭೇಟಿ ನೀಡಿದ್ದು,

ನಂದಿಹಳ್ಳಿ ಪಿಜಿ ಕೇಂದ್ರವು ಸಂಡೂರಿನ ಮಾಜಿ ಮಂತ್ರಿ ದಿವಂಗತ ಎಂ.ವೈ ಘೋರ್ಪಡೆಯವರ ಕನಸಿನಕೂಸಾಗಿತ್ತು, ಸ್ಥಳೀಯರು,ಬಡವರು,ಹಿಂದುಳಿದವರು ಕಡಿಮೆ ಹಣದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪಡೆಯಲಿ ಎಂಬ ಸದುದ್ದೇಶದಿಂದ ಪಿಜಿ ಕೇಂದ್ರವನ್ನು ನಿರ್ಮಾಣ ಮಾಡಿದ್ದರು

ಖಾಸಗಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಲು 40 ರಿಂದ 50 ಸಾವಿರ ರೂಪಾಯಿಗಳವರೆಗೆ ಶುಲ್ಕ ಭರಿಸಬೇಕಾಗುತ್ತದೆ ಆದ್ರೆ ನಂದಿಹಳ್ಳಿ ಪಿಜಿ ಯಲ್ಲಿ ಕಡಿಮೆ ಫೀ ಯಲ್ಲಿ ತರಗತಿಗೆ ಪ್ರವೇಶವನ್ನು ಪಡೆಯಬವುದಾಗಿದೆ

ವಸತಿ ಮತ್ತು ಶೌಚಾಲಯಗಳ ಕೊರತೆ, ಬೀದಿ ದೀಪಗಳ ಸೌಲಭ್ಯ ಇಲ್ಲದಿದ್ದಾಗ ಶಾಸಕರು ತಮ್ಮ ಅನುದಾನದಲ್ಲಿ ನಿರ್ಮಿಸಿಕೊಟ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಹಾಯಕ್ಕೆ ನಿಂತಿದ್ದಾರೆ. ಪ್ರತಿವರ್ಷ ಗ್ರಾಮೀಣ ಭಾಗದಿಂದ ನೂರಾರು ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ಕಲಿಕೆಯನ್ನು ಮುಂದುವರಿಸಿದ್ದಾರೆ.

ಪಿಜಿ ಕೇಂದ್ರಕ್ಕೆ ಸೌಕರ್ಯಗಳಿಗಾಗಿ ಹಮ್ಮಿಕೊಂಡ ಅಭಿವೃದ್ಧಿ ಕಾರ್ಯಗಳಿಗೆ ವಿಸಿ ವಿನಾಕಾರಣ ಕೊಕ್ಕೆಹಾಕಿ ಕುಳಿತ್ತಿದ್ದಾರೆ ಎಂದು ಶಾಸಕ ತುಕಾರಾಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ನಂದಿಹಳ್ಳಿ ಪಿಜಿ ಕೇಂದ್ರದಲ್ಲಿ ಪ್ರಗತಿಯಲ್ಲಿರುವ 4.50 ಕೋಟಿ ವೆಚ್ಚದ ವಿದ್ಯಾರ್ಥಿನಿಯರ ವಸತಿ ನಿಲಯ, 1.ಕೋಟಿ ರೂ ವೆಚ್ಚದ ಅಡಿಟೋರಿಯಂ,1ಕೋಟಿ ರೂ ವೆಚ್ಚದ ಸ್ಮಾರ್ಟ್ ಕ್ಲಾಸ್, 2.50 ಕೋಟಿ ರೂ ವೆಚ್ಚದ ಮಯೂರ ಭವನದ ಪುನಚ್ಚೆತನ, ಉದ್ಯೋಗಸ್ಥ ಮಹಿಳೆಯರ ವಸತಿ ಕಾಮಗಾರಿಗೆ ವಿಸಿ ವಿನಾಕಾರಣ ಕೊಕ್ಕೆ ಹಾಕಿದ್ದಾರೆ, ಕಾಮಗಾರಿ ವೈಜ್ಞಾನಿಕವಾಗಿ ನಡೆದರೂ ಸಲ್ಲದ ನೆಪೆವೊಡ್ಡಿ ಕೆಲಸ ವಿಳಂಭವಾಗಲು ಕಾರಣರಾಗಿದ್ದಾರೆ ಎಂದು ಎಲ್ಲಾ ಕಾಮಗಾರಿಗಳನ್ನು ವೀಕ್ಷಿಸುವಂತೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿಯವರಿಗೆ ಹೇಳಿದರು.

ಇನ್ನು ಇದೇ ಪಿಜಿ ಕೇಂದ್ರದಲ್ಲಿ ನನ್ನ ಉನ್ನತ ಶಿಕ್ಷಣ ಪೂರೈಸಿಕೊಂಡಿದ್ದೇನೆ ಎಂಬ ಹೆಮ್ಮೆಯ ಕಾರಣಕ್ಕೆ ಈ ಹಿಂದೆ ಸರಕಾರದ ಮತ್ತು ವಿಶ್ವವಿದ್ಯಾಲಯದ ಅನುದಾನವಿಲ್ಲದೆ ಪಾಳುಬಿದ್ದಿದ್ದ ಪಿಜಿ ಕೇಂದ್ರದ ಅಭಿವೃದ್ಧಿಗಾಗಿ ಪಣ ತೊಟ್ಟಿರುವೆ, ಕಾಮಗಾರಿಗೆ ವಿಸಿ ಕೊಕ್ಕೆ ಹಾಕಿದ ಕುರಿತು ಉನ್ನತ ಶಿಕ್ಷಣ ಸಚಿವ ಅಶ್ವತನಾರಾಯಣರಿಗೆ ದೂರು ಸಲ್ಲಿಸುವೆ ಎಂದರು.

ಕಾಮಗಾರಿಗಳನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ವಿಸಿ ಯವರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವೆ ಎಂದರು

ಈ ಸಂದರ್ಭದಲ್ಲಿ ಎಸಿ ರಮೇಶ್ ಕೋನರೆಡ್ಡಿ, ತಹಶೀಲ್ದಾರ್ ಎಚ್.ಜೆ.ರಶ್ಮಿ, ಪಿಜಿ ಕೇಂದ್ರದ ನಿರ್ದೇಶಕ ಡಾ.ಬಿ.ರವಿ, ಪಿಡಬ್ಲುಡಿ ಎಇಇ ಪೂಬಾಲನ್, ಎಇ ಕೊಟ್ರೇಶ, ಪಿಎಸ್ಐ ಬಸವರಾಜ್ ಅಡವಿಬಾವಿ, ಗೃಹರಕ್ಷಕ ದಳದ ಘಟಕಾದಿಕಾರಿ ಎನ್. ಮಲ್ಲಿಕಾರ್ಜುನ ಇತರರಿದ್ದರು

LEAVE A REPLY

Please enter your comment!
Please enter your name here