ದಾವಣಗೆರೆ ವಿ.ವಿ. ಆರ್ಥಿಕ ವೇದಿಕೆ ಪದಾಧಿಕಾರಿಗಳ ಆಯ್ಕೆ.

0
108

ದಾವಣಗೆರೆ, ಅ.03:ದಾವಣಗೆರೆ ವಿಶ್ವವಿದ್ಯಾನಿಲಯದ ಆರ್ಥಿಕ ವೇದಿಕೆಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅ. 2ರಂದು ವಿಶ್ವವಿದ್ಯಾಲಯ ಮೌಲ್ಯಮಾಪನ ಕೇಂದ್ರದಲ್ಲಿ ಜರುಗಿದ್ದು, ಗೌರವ ಅಧ್ಯಕ್ಷರಾಗಿ ದಾವಣಗೆರೆ ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುಚಿತ್ರ, ಅಧ್ಯಕ್ಷರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಭೀಮಣ್ಣ ಸುಣಗಾರ, ಕಾರ್ಯದರ್ಶಿಯಾಗಿ ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಪ್ರವೀಣಕುಮಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2017 ರಿಂದ 2021 ರವರೆಗೂ ವೇದಿಕೆ ಅಧ್ಯಕ್ಷರಾಗಿ ಡಾ. ತಿಪ್ಪಾರೆಡ್ಡಿ, ಕಾರ್ಯದರ್ಶಿಯಾಗಿ ಪ್ರೊ. ಭೀಮಣ್ಣ ಸುಣಗಾರ ಕಾರ್ಯನಿರ್ವಹಿಸಿದ್ದರು. ಡಾ. ತಿಪ್ಪಾರೆಡ್ಡಿ ವಯೋಸಹಜ ನಿವೃತ್ತಿ ಹೊಂದಿರುವುದರಿಂದ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಹ ಕಾರ್ಯದರ್ಶಿಯಾಗಿ ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಚಂದ್ರಶೇಖರ್, ಖಜಾಂಚಿಯಾಗಿ ರಾಮಪುರ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಮಂಜಣ್ಣ, ಮಹಿಳಾ ಪ್ರತಿನಿಧಿಯಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಶಾಂತಕುಮಾರಿ, ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಸುನಿತಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ದಾವಣಗೆರೆ ಎಆರ್‍ಎಂ ಪ್ರಥಮ ದರ್ಜೆ ಕಾಲೇಜಿನ ಕಾಡಜ್ಜಿ ಶಿವಪ್ಪ, ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಹನುಮಂತಪ್ಪ, ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೆಳ್ಳುಳ್ಳಿ ಕೊಟ್ರೇಶಿ, ಹಿರಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜನಾರ್ಧನ ಕುಮಾರ್, ಜಗಳೂರು ಪ್ರಥಮ ದರ್ಜೆ ಕಾಲೇಜಿನ ಮಹೇಶ್, ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಅಶ್ವತ್ ಯಾದವ, ಚಳ್ಳಕೆರೆ ಮತ್ತು ಹೊಸದುರ್ಗ ಪ್ರಥಮ ದರ್ಜೆ ಕಾಲೇಜಿನ ಡಾ. ಧನಂಜಯ್, ರಘುನಾಥ್, ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾಕರ್, ಸಂತೆಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಾಗರತ್ನ, ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಯ್ಯದ್, ಇಮ್ರಾನ್ ಆಯ್ಕೆ ಆಗಿದ್ದಾರೆ.
ಅರ್ಥಶಾಸ್ತ್ರ ವೇದಿಕೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಭೀಮಣ್ಣ ಸುಣಗಾರ ಅವರಿಗೆ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಾಹೀರಾಬಾನು ಫರೂಕಿ, ನಿಕಟಪೂರ್ವ ಪ್ರಾಂಶುಪಾಲ ಪ್ರೊ. ಶಂಕರ ಶೀಲಿ, ಸ್ಥಳೀಯ ಅಧ್ಯಾಪಕ ಸಂಘದ ಕಾರ್ಯದರ್ಶಿ ಪ್ರೊ. ಗಿರಿಸ್ವಾಮಿ, ಐಕ್ಯೂಎಸಿ ಸಂಚಾಲಕರಾದ ಪ್ರೊ. ವೀರೇಶ್, ನ್ಯಾಕ್ ಸಂಚಾಲಕರಾದ ಡಾ. ದಿನೇಶ್ ಮತ್ತು ತೂ.ಕ. ಶಂಕರಯ್ಯ, ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಪ್ರೊ. ಡಿ. ಬಸವರಾಜ್, ಸ್ಥಳೀಯ ಅಧ್ಯಾಪಕ ಸಂಘದ ಕಾರ್ಯದರ್ಶಿ ಪ್ರೊ. ಗಿರಿಸ್ವಾಮಿ, ಐಕ್ಯೂಎಸಿ ಸಂಚಾಲಕ ಪ್ರೊ. ವೀರೇಶ್, ನ್ಯಾಕ ಸಂಚಾಲಕ ಡಾ. ದಿನೇಶ್ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here