ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ,

0
424

ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಬಾಬಾನಗರದಲ್ಲಿ ಪ್ರತಿ ನವಂಬರ್ ಏಳರಂದು ಮೇಡಮ್ ಕ್ಯೂರಿ ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನಾಚರಣೆ ಕಾರ್ಯಕ್ರಮ ನಡೆಯಿತು,

ಈ ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ನೂರಕ್ಕಿಂತ ಹೆಚ್ಚು ಕ್ಯಾನ್ಸರ್ ಗಳು ಇದ್ದು ಲಂಗ್ ಕ್ಯಾನ್ಸರ್, ಲಿವರ್, ಬ್ರೈನ್, ಬ್ಲಡ್, ಸ್ತನ ಕ್ಯಾನ್ಸರ್, ಗರ್ಭಾಶಯ, ಗುದದ್ವಾರ, ಬ್ಲಾಡರ್, ವೃಷಣ ಕ್ಯಾನ್ಸರ್, ಬಾಯಿ, ಥೈರಾಯ್ಡ್,ಬೋನ್, ಕಿಡ್ನಿ, ಸ್ಪೈನಲ್ ಕಾರ್ಡ್ ಕ್ಯಾನ್ಸರ್ ಹೀಗೆ ಹಲವು ಕ್ಯಾನ್ಸರ್ ಗಳಿದ್ದು, ಕೆಲವು ವಂಶವಾಹಿಗಳ ಮೂಲಕ ಬರುತ್ತವೆ,

ಕೆಲವು ವಿಕಿರಣಗಳ ಮೂಲಕ ಹಾಗೆ ಹಲವಾರು ಕ್ಯಾನ್ಸರ್ ಗಳು ಕೆಟ್ಟ ಜೀವನ ಶೈಲಿಗಳಿಂದ ಬರುತ್ತವೆ, ಉದಾಹರಣೆಗೆ ತಂಬಾಕು ಉತ್ಪನ್ನಗಳನ್ನು ಬಳಸುವುದರಿಂದ, ಮತ್ತು ಹಲವಾರು ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು, ಹಣ್ಣುಗಳು, ಎಲ್ಲಾ ಸಂದರ್ಭದಲ್ಲಿ ಪ್ಲಾಸ್ಟಿಕ್ ಹೆಚ್ಚಾಗಿ ಬಳಸುವುದರಿಂದ, ಉತ್ತಮ ಗುಣಮಟ್ಟದ ಆಹಾರ ವಲ್ಲದ ಬಣ್ಣಗಳ ಬಳಕೆ, ಫಾಸ್ಟ್ ಫುಡ್ ಬಳಸುವುದರಿಂದ ಹಾಗೇ ಕೆಟ್ಟ ಪರಿಸರ, ಹೆಚ್ಚು ಹೆಚ್ಚು ರಾಸಾಯನಿಕಗಳ ಬಳಕೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ,

ಹಲವಾರು ಕ್ಯಾನ್ಸರ್ ಗಳನ್ನು ತಡೆಗಟ್ಟಲು ಜಾಗೃತಿಯು ಅತಿ ಮುಖ್ಯವಾಗಿದೆ ಅದಕ್ಕಾಗಿ ನವಂಬರ್ ಏಳರಂದು ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಗುತ್ತದೆ, ಕ್ಯಾನ್ಸರ್ ‌ಗುಣ ಪಡಿಸಬಹುದಾದ ಕಾಯಿಲೆ ಆದರೂ ಬೇಗ ಪತ್ತೆ ಹಚ್ಚುವಲ್ಲಿ ವಿಳಂಬವಾಗುವ ಕಾರಣಕ್ಕೆ ನಾಲ್ಕನೇ ಹಂತಕ್ಕೆ ತಲುಪಿ ಅಪಾಯಕ್ಕೆ ಸಿಲುಕುವರು, ಕಿಮೋಥೆರಪಿ, ಮತ್ತು ಗುಣಾತ್ಮಕ ಔಷಧದಿಂದ ಹಲವಾರು ಜನರು ಕ್ಯಾನ್ಸರ್ ನಿಂದ ಗುಣವಾಗಿದ್ದಾರೆ, ಕ್ಯಾನ್ಸರ್ ಲಕ್ಷಣಗಳಾದ ದಿಢೀರ್ ತೂಕ ಇಳಿಕೆ, ಆಹಾರ ಸೇವನೆಗೆ ವಿಮುಖ, ತಡೆಯಲಾಗದ ನೋವು ಇಂತಹ ಲಕ್ಷಣಗಳು ಕಂಡ ಕೂಡಲೇ ಪರೀಕ್ಷೆಗೆ ಒಳಪಡಬೇಕು, ಬೇಗ ಪತ್ತೆ ಹಚ್ಚಿ ಬೇಗ ಗುಣ ಪಡಿಸಬಹುದಾದ ಕಾಯಿಲೆಯಾಗಿದ್ದು ಜಾಗೃತಿ ಮೂಡಿಸುವ ಪ್ರಯತ್ನವನ್ನು ಆರೋಗ್ಯ ಇಲಾಖೆಯು ನಿರಂತರ ಮಾಡಲಾಗುತ್ತಿದೆ ಎಂದು ತಿಳಿಸುತ್ತಾ, ಎಲ್ಲರೂ ಅಭಾ ಕಾರ್ಡ್ ಮಾಡಿಸಿ, ಐದು ಲಕ್ಷ ವರೆಗೆ ಉಚಿತ ಆರೋಗ್ಯ ಸೌಲಭ್ಯ ದೊರೆಯಲಿದೆ ಎಂದು ನೆನಪು ಮಾಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರ್.ಕೆ.ಎಸ್.ಕೆ ಕೌನ್ಸಿಲರ್ ಪ್ರಶಾಂತ್ ಕುಮಾರ್, ಆಶಾ ಕಾರ್ಯಕರ್ತೆ ವಿಜಯ ಶಾಂತಿ, ಶ್ರೀದೇವಿ, ಆಶಾ, ಹುಲಿಗೆಮ್ಮ, ಪದ್ಮಾ, ರೇಖಾ, ವಿದ್ಯಾರ್ಥಿಗಳಾದ ಪುಷ್ಪ, ಪ್ರೀತಿ, ರವಿಕುಮಾರ್, ಪವನ್, ಅಪುಬಕರ್, ಲಾಲುಬಾಷ, ಶೈನಾಜ್, ರಷೀನಾ ಬೇಗಂ, ಪಕೃಮಾಭೀ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here