ಸಂಡೂರು;ಮಲೇರಿಯಾ ಮುಕ್ತ ಮಾಡಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ: ಡಾ.ಕುಶಾಲ್ ರಾಜ್.

0
109

ಸಂಡೂರು ತಾಲ್ಲೂಕಿನಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು, ಪತ್ರಿಕಾ ಮಾಧ್ಯಮ ಮಿತ್ರರಿಗೆ ಆರೋಗ್ಯ ಇಲಾಖೆಯೊಂದಿಗೆ ಇತರೆ ಇಲಾಖೆಗಳ ಸಹಕಾರಗಳನ್ನು ತಿಳಿಯ ಪಡಿಸಲು ಮತ್ತು ಮಲೇರಿಯಾ ನಿಯಂತ್ರಣ ಕುರಿತು ಲೇಖನಗಳನ್ನು ಪ್ರಚಾರ ಮಾಡುವುದು, ಮತ್ತು ಮಲೇರಿಯಾ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಇಲಾಖೆ ಆಯೋಜಿಸಿದ್ದ ವರದಿಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಹೆಚ್ಚು ಜನರಿಗೆ ತಲುಪಿಸುವ ಮೂಲಕ ಮಲೇರಿಯಾ ನಿಯಂತ್ರಣ ಕಾರ್ಯದಲ್ಲಿ ತಾವೂ ಕೈಜೋಡಿಸಬೇಕೆಂದು ಮನವಿ ಮಾಡಿದರು,

ಹಾಗೇ ಮಲೇರಿಯಾ ಪ್ಲಾಸ್ಮೋಡಿಯಂ ಪರವಾಲಂಬಿ ಜೀವಿಯಿಂದ ಸೊಳ್ಳೆಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ, ರಕ್ತ ಲೇಪನಗಳ ಮೂಲಕ ಪತ್ತೆ ಹಚ್ಚಿ ಮಲೇರಿಯಾ ಪ್ರಭೇದಕ್ಕನುಗುಣವಾಗಿ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ , ಮತ್ತು ಇತರರಿಗೆ ಹರಡದಂತೆ ಸೊಳ್ಳೆಗಳ ನಿಯಂತ್ರಣ ಮತ್ತು ಅನುಕೂಲ ಸರಿಸರವನ್ನು ನಿಯಂತ್ರಿಸುವುದು ಎಲ್ಲರ ಜವಾಬ್ದಾರಿ ಯಾಗಿದೆ ಎಂದು ತಿಳಿಸಿದರು,

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ,ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಮತ್ತು ಪಂಚಾಯತಿ ಇಲಾಖೆ, ಶಿಕ್ಷಣ ಇಲಾಖೆ, ಪಶು ಸಂಗೋಪನಾ ಇಲಾಖೆ, ಸಾರಿಗೆ ಇಲಾಖೆ ಮತ್ತು ಪತ್ರಿಕಾ ಮಾಧ್ಯಮದವರು ಆರೋಗ್ಯ ಇಲಾಖೆ ಸಹಕಾರ ನೀಡುತ್ತಿರುವ ಕ್ರಮಗಳನ್ನು ವಿವರಿಸಿದರು,

ಎಮ್.ಟಿ.ಎಸ್ ಸಾಗರ್ ಕುಮಾರ್ ನಮ್ಮ ತಾಲೂಕಿನಲ್ಲಿ ಎರಡು ವರ್ಷಗಳಲ್ಲಿ ಕಂಡು ಬಂದ ಮಲೇರಿಯಾ ಪ್ರಕರಗಳ ವಿವರ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್, ಡಾ.ನವೀನ್ ಕುಮಾರ್,
ಡಾ.ಭರತ್ ಕುಮಾರ್, ಡಾ.ಸಹನಾ ನಾಡಗೌಡರ್, ತಾಲೂಕು ಬಿ.ಹೆಚ್.ಇ.ಓ ಶಿವಪ್ಪ, ತಾಲೂಕು ಮಲೇರಿಯಾ ಮೇಲ್ವಿಚಾರಕ ಸಾಗರ್ ಕುಮಾರ್, ವಿನೋದ್ ಕುಮಾರ್, ಬಂಡೇಗೌಡ, ವಿಜಯಲಕ್ಷ್ಮಿ,ಪಕ್ಕೀರಮ್ಮ, ರೇಣುಕಾ,ಪ್ರಸನ್ನ, ನಾಗಭೂಷಣ, ಕೊಟ್ರೇಶ್, ಯೋಗಿಶ್, ಆಶಾ ಕಾರ್ಯಕರ್ತೆ ಜಲಜಾಕ್ಷಿ, ಚಂದ್ರಮ್ಮ ಇತರರು ಇದ್ದರು

LEAVE A REPLY

Please enter your comment!
Please enter your name here