ಹುಬ್ಬಳ್ಳಿ ನೈರುತ್ಯ ವಲಯ ಅಧಿಕಾರಿಗಳು: ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ಭೇಟಿ;

0
147

ಕೊಟ್ಟೂರು: ಕೊಟ್ಟೂರು ಮಾರ್ಗವಾಗಿ ಕಾರಟಗಿ- ಬೆಂಗಳೂರು ಸೇರಿದಂತೆ ಇನ್ನೂ ಎರಡು ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಹುಬ್ಬಳ್ಳಿ ನೈರುತ್ಯ ವಲಯ ವ್ಯವಸ್ಥಾಪಕ ಸಂಜೀವ್ ಕುಮಾರ್ ಕೊಟ್ಟೂರು ರೈಲು ಹೋರಾಟ ಸಮಿತಿ ಮನವಿ ಮಾಡಿದರು.

ಹೊಸಪೇಟೆ – ದಾವಣಗೆರೆ ರೈಲು ಮಾರ್ಗದ ವಾರ್ಷಿಕ ಪರಿಶೀಲನೆಗೆ ಭಾನುವಾರ ವಿಶೇಷ ರೈಲಿನಲ್ಲಿ ಆಗಮಿಸಿದ ಹುಬ್ಬಳ್ಳಿ ನೈರುತ್ಯ ಅಧಿಕಾರಿ ತಂಡವು ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ಪರಿಶೀಲನೆ ನಡೆಸಿದರು ಈ ಭಾಗದಲ್ಲಿ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರು ಹೆಚ್ಚಿದ್ದು ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ರೈಲು ಸಂಚಾರ ಪ್ರಾರಂಭಿಸುವಂತೆ ಒತ್ತಾಯಿಸಿದರು.

ಕೊಟ್ಟೂರು ರೈಲ್ವೆ ಹೋರಾಟ ಸಮಿತಿಯವರು ಹೈದರಾಬಾದಿಗೆ ಸಂಚರಿಸುವ ರೈಲನ್ನು ಹುಬ್ಬಳ್ಳಿ ದಾವಣಗೆರೆ- ಕೊಟ್ಟೂರು -ಹೊಸಪೇಟೆ ಮಾರ್ಗವಾಗಿ ಸಂಚರಿಸಬೇಕು ಈ ಮಾರ್ಗವಾಗಿ ಸಂಚರಿಸುತ್ತಿದ್ದ ಡಿಮೋ ರೈಲು ಸಂಚಾರ ನಿಲ್ಲಿಸಿದ್ದು ಮರು ಸಂಚಾರ ಪ್ರಾರಂಭಿಸಬೇಕು ಕೊಟ್ಟೂರು ರೈಲ್ವೆ ನಿಲ್ದಾಣದಲ್ಲಿ ಕೆಲ ಮೂಲ ಸಮಸ್ಯೆಗಳು ನಿರ್ವಹಣೆ ಮಾಡಿ ಜನರಿಗೆ ಅನುಕೂಲ ಕಲ್ಪಿಸುವ ಜೊತೆಗೆ ಕೊಟ್ಟೂರು ಪಟ್ಟಣವು ರಾಜ್ಯ ಅಂತ ರಾಜ್ಯಗಳಿಗೆ ಮೆಕ್ಕೆಜೋಳ ಹೋಗುತ್ತದೆ ನಿಲ್ದಾಣದಲ್ಲಿ ರಂಕ್ ಪಾಯಿಂಟ್ (ದಾಸ್ತಾನು ಸಂಗ್ರಹಣ ಮತ್ತು ಸಾಗಾಣಿಕೆ ಕೇಂದ್ರ) ಆಧುನಿಕ ಸೌಲಭ್ಯ ರೀತಿಯಲ್ಲಿ ಸ್ಥಾಪಿಸಬೇಕೆಂದು ರೈಲ್ವೆ ಇಲಾಖೆ ವ್ಯವಸ್ಥಾಪಕರಿಗೆ ಒತ್ತಾಯಿಸಿದರು.

ಹುಬ್ಬಳ್ಳಿ ನೈರುತ್ಯ ವಲಯದ ವ್ಯವಸ್ಥಾಪಕರೊಂದಿಗೆ ಹುಬ್ಬಳ್ಳಿ ವಾಣಿಜ್ಯ ವಲಯದ ವ್ಯವಸ್ಥಾಪಕರಾದ ಸಂತೋಷ್ ಹೆಗಡೆ ಸೇರಿದಂತೆ 50ಕೂ ಹೆಚ್ಚು ರೈಲ್ವೆ ಇಲಾಖೆಯ ಸಿಬ್ಬಂದಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ನೈರುತ್ಯ ಜನರಲ್ ಮ್ಯಾನೇಜರ್ ಸಂಜೀವ್ ಕುಮಾರ್, ವಾಣಿಜ್ಯ ಸಾಗಾಣೆಯ ವ್ಯವಸ್ಥಾಪಕ ಸಂತೋಷ್ ಹೆಗಡೆ ಲೋಕಸಭಾ ಸದಸ್ಯರಾದ ವೈ ದೇವೇಂದ್ರಪ್ಪ, ಶ್ರೀಧರ್ ಶೆಟ್ರು, ಬಿಜೆಪಿ ಮುಖಂಡರಾದ ತಿಂದಪ್ಪ ಹಾಗೂ ಕೊಟ್ಟೂರು ರೈಲು ಹೋರಾಟ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here