ಕೊಟ್ಟೂರು ತಾಲೂಕು 14 ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಮೀಸಲು ನಿಗದಿ.

0
149

ಕೊಟ್ಟೂರು:ಜೂ:16:ಕೊಟ್ಟೂರು ತಾಲೂಕು 14 ಗ್ರಾಮ ಪಂಚಾಯಿತಿಗಳ 2ನೇ ಅವಧಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ಸಭೆ ವಿಜಯನಗರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ನೇತೃತ್ವದಲ್ಲಿ ಇಲ್ಲಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಡಾ.ಹೆಚ್.ಜಿ.ರಾಜ್ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ನಡೆಯಿತು.

ಗ್ರಾಮ ಪಂಚಾಯಿತಿ ಮೀಸಲಾತಿ ಸೂತ್ರದ ಹಂಚಿಕೆ ಅನುಸಾರವಾಗಿ ತಾಲೂಕಿನ
ಅಲಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ ಮೀಸಲು ನಿಗದಿಗೊಂಡಿತು.

ಕೋಗಳಿ ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ,
ಅಂಬಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಪ್ರವರ್ಗ-ಎ ಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡಕ್ಕೆ ಮೀಸಲು ನಿಗದಿಗೊಂಡಿತು.
ರಾಂಪುರ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆ.
ಉಜ್ಜಯಿನಿ ಅಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ
ನಿಂಬಳಗೆರೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಪ್ರವರ್ಗ-ಎ ಮಹಿಳೆ
ತೂಲಹಳ್ಳಿ ಅಧ್ಯಕ್ಷ ಸ್ಥಾನ ಸಾಮಾನ್ಯ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ
ಕಾಳಾಪುರ ಅಧ್ಯಕ್ಷ ಸ್ಥಾನ ಸಾಮಾನ್ಯ ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡ ಮಹಿಳೆಗೆ
ಕೆ.ಅಯ್ಯನಹಳ್ಳಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪ್ರವರ್ಗ-ಎ
ದೂಪದಹಳ್ಳಿ ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ
ಕಂದಗಲ್ಲು ಅಧ್ಯಕ್ಷ ಸ್ಥಾನ ಸಾಮಾನ್ಯಮಹಿಳೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ
ಹ್ಯಾಳ್ಯಾ ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ
ಚಿರಿಬಿ ಅಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡ ಮಹಿಳೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ
ನಾಗರಕಟ್ಟೆ ಅಧ್ಯಕ್ಷ ಸ್ಥಾನ ಪ್ರವರ್ಗ-ಎ ಮಹಿಳೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ

ಆಕ್ಷೇಪ : ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ನಿಗದಿ ಸಭೆಗೆ ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಆಹ್ವಾನಿಸಲಾಗಿತ್ತು. ರಾಂಪುರ ಗ್ರಾಮ ಪಂಚಾಯಿತಿಯ ಕೆಲವರು ಮೀಸಲಾತಿ ನಿಗದಿಯನ್ನು ಕೇವಲ ಅಧಿಕಾರಿಗಳು ಚೀಟಿಯಲ್ಲಿ ಬರೆದು ಸದಸ್ಯರುಗಳಿಂದ ಎತ್ತಿಸಿದರು. ಇದು ಬಿಟ್ಟರೆ ಬೇರೆ ಯಾವ ಮಾಹಿತಿಯನ್ನು ನೀಡಿಲ್ಲ. ಈ ರೀತಿ ಅಧಿಕಾರಿಗಳು ಸದಸ್ಯರುಗಳನ್ನು ಅಲಕ್ಷಿಸಿ ಬೇಕಾಬಿಟ್ಟಿಯಾಗಿ ಮೀಸಲಾತಿ ನಿಗದಿಗೊಳಿಸಿ ಸಭೆ ಮುಕ್ತಾಯಗೊಳಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಚುನಾವಣಾ ಆಯೋಗದ ಸೂಚನೆಯ ಮಾರ್ಗಸೂಚಿಯಂತೆ ಮೀಸಲಾತಿಯನ್ನು ನಿಗದಿಗೊಳಿಸಿದ್ದೇವೆ ಎಂದು ಸಮಜಾಯಿಸಿದರು. ಇದಕ್ಕೆ ವಿರೋಧಿಸಿದ ಅವರು ಈ ಪ್ರಕ್ರಿಯೆ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಎಚ್ಚರಿಸಿದರು.
ಕೊಟ್ಟೂರು ತಹಶೀಲ್ದಾರ್ ಎಂ.ಕುಮಾರಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಪರಮೇಶ್ವರಪ್ಪ, ಜಿಲ್ಲಾಧಿಕಾರಿ ಕಛೇರಿಯ ಚುನಾವಣಾ ತಹಶೀಲ್ದಾರ್ ಕಾರ್ತಿಕ, ಎನ್.ಐ.ಸಿ ಅಧಿಕಾರಿ ಶಿವಪ್ರಸಾದ್ ವಸ್ತ್ರದ್, ಶಿರಸ್ಥೆದಾರ ಮನೋಜ್ ಲಾಡ್, ಕಂದಾಯ ಪರೀವಿಕ್ಷಕರಾದ ಎಸ್.ಎಂ.ಹಾಲಸ್ವಾಮಿ, ಶಿವಕುಮಾರ ಮತ್ತಿತರರ ಅಧಿಕಾರಿಗಳು ಇದ್ದರು. ಪಿಡಿಓ ಮಾರುತೇಶ ವಂದಿಸಿ ಸಭೆ ಮುಕ್ತಾಯಗೊಳಿಸಿದರು.

LEAVE A REPLY

Please enter your comment!
Please enter your name here