ದೇಶದ ಆರ್ಥಿಕ ಸುಸ್ಥಿರತೆಗೆ ಸಹಕಾರ ಸಂಘಗಳ ಕೊಡುಗೆ ಅಪಾರ: ಉಜ್ಜಯಿನಿ ಪೀಠದ ಜಗದ್ಗುರುಗಳು

0
358

ಕೊಟ್ಟೂರು: ಸಹಕಾರ, ಸಂಘಟನೆ ಹಾಗೂ ಪರಸ್ಪರ ಸಹಬಾಳ್ವೆಯಿಂದ ಸಾಗಿದಾಗ ದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಉಜ್ಜಯಿನಿ ಪೀಠಾಧೀಶರಾದ ಸಿದ್ಧಲಿಂಗಶಿವಾಚಾರ್ಯರು ಹೇಳಿದರು.

ಪಟ್ಟಣದ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ನಾವು ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವ ಮನೋಭಾವದವರಾಗಿದ್ದೇವೆ. ನಾವು ಬದುಕಿ ಇತರರನ್ನೂ ಬದುಕಲು ಬಿಡಬೇಕು ಎನ್ನುವುದು ಸಹಕಾರ ಸಂಘಗಳ ತತ್ವವಾಗಿದ್ದು ಇದರಡಿಯಲ್ಲಿ ಎರಡುವರೆ ಲಕ್ಷಕ್ಕೂ ಹೆಚ್ಚು ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ವಾಣಿಜ್ಯ ಕೇಂದ್ರಕ್ಕೆ ಹೆಸರಾಗಿರುವ ಕೊಟ್ಟೂರಿನಲ್ಲಿ ಕೆ.ಎಸ್.ಈಶ್ವರಗೌಡ ಇವರ ನೇತೃತ್ವದಲ್ಲಿ ಸಮಾರೋಪ ಸಮಾರಂಭ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ಬಿ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ ಮಾತನಾಡಿ ಸಾಮಾಜಿಕ ಹಿನ್ನೆಲೆಯಲ್ಲಿ ಸ್ಥಾಪಿತವಾದ ಸಹಕಾರ ಸಂಘಗಳು ಇಂದು ದೇಶದ ಆರ್ಥಿಕ ಸುಸ್ಥಿರತೆಗೆ ಅಪಾರ ಕೊಡುಗೆ ನೀಡಿವೆ ಎಂದರು.

ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಈಶ್ವರಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್ , ನಿರ್ದೇಶಕರಾದ ಕೆ.ಜಿ.ಗೌರಮ್ಮ, ಶ್ರೀಧರಮೂರ್ತಿ, ಅಳವಂಡಿ ಕೊಟ್ರೇಶ್, ಉಪಾಧ್ಯಕ್ಷ ಎಚ್.ಕೆ.ಕಲ್ಲೇಶಪ್ಪ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಶಂಕರನಾಯಕ, ವ್ಯವಸ್ಥಾಪಕರಾದ ಬಿ.ಮಾನಸ, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಡಿ.ಬಿಂಬಿಕ, ಕ್ಷೇತ್ರಾಧಿಕಾರಿ ಕೊಟ್ರೇಶ್, ಸಂಪನ್ಮೂಲ ವ್ಯಕ್ತಿ ಚೌಡಪ್ಪ, ಅರವಿಂದ ಬಸಾಪುರ ಮುಂತಾದವರು ಪಾಲ್ಗೊಂಡಿದ್ದರು.

ಕೊಟ್ಟೂರಿನಲ್ಲಿ ಭಾನುವಾರ ನಡೆದ 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭವನ್ನು ಉಜ್ಜಯಿನಿ ಪೀಠಾಧೀಶರಾದ ಸಿದ್ಧಲಿಂಗಶಿವಾಚಾರ್ಯರು ಉದ್ಘಾಟಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here