ಸೊಳ್ಳೆ ಕಡಿತ ಚಿಕ್ಕದಾದರೂ ಅಪಾಯ ದೊಡ್ಡದಿದೆ; ಸಂಡೂರು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
193

ಸಂಡೂರು:ಆಗಸ್ಟ್ :21: ಸಂಡೂರು ತಾಲೂಕಿನ ಕುರೇಕುಪ್ಪ ಪುರಸಭೆ ವ್ಯಾಪ್ತಿಯ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ವಿಶ್ವ ಸೊಳ್ಳೆ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರಿಗೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಮೆದುಳು ಜ್ವರ, ಪೈಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಕಾಲಾ ಹಜಾರ್ ನಂತಹ ಆರು ಮಾರಕ ಕಾಯಿಲೆಗಳ ಬಗ್ಗೆ ಮಾಹಿತಿ ನೀಡುತ್ತ..ಮೂರು ಜಾತಿಯ ಸೊಳ್ಳೆಗಳು ಆರು ಕಾಯಿಲೆಗಳನ್ನು ತರುತ್ತವೆ, ಸೊಳ್ಳೆಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಪ್ರತಿವರ್ಷದಂತೆ ಆಗಸ್ಟ್ 20 ರಂದು ವಿಶ್ವ ಸೊಳ್ಳೆ ದಿನಾಚರಣೆ ಆಚರಿಸಿ ಜಾಗೃತಿ ಮೂಡಿಸಲಾಗುತ್ತಿದೆ,

ನಮ್ಮ ದೇಶದಲ್ಲಿ ಮೂರು ಜಾತಿಯ ಸೊಳ್ಳೆಗಳು ಆರು ಕಾಯಿಲೆಗಳು ಹರಡುತ್ತಿವೆ ಅದರಲ್ಲಿ ಅನಾಫೆಸಿಸ್ ಜಾತಿಯ ಸೊಳ್ಳೆ ಮಲೇರಿಯಾ ರೋಗವನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡಿಸುತ್ತೆ, ಕ್ಯುಲೆಕ್ಸ್ ಜಾತಿಯ ಕ್ಯುಲೆಕ್ಸ್ ವಿಷ್ಣುವಿ ಮೆದುಳು ಜ್ವರವನ್ನು, ಅದೇ ಪ್ರಭೇದದ ಕ್ಯುಲೆಕ್ಸ್ ಕ್ವಿಂಕಿಫೀಷಿಯಾ ಪೈಲೇರಿಯಾ (ಆನೆ ಕಾಲು) ರೋಗವನ್ನು, ಈಡೀಸ್ ಈಜಿಪ್ಟೈ ಜಾತಿಯ ಸೊಳ್ಳೆ ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಕಾಲಾ ಹಜಾರ್ ಅನ್ನುವ ಕಾಯಿಲೆಗಳನ್ನು ಹರಡಿಸುತ್ತಿವೆ, ಅನಾಫೆಲಿಸ್ ಹಗಲು ವೇಳೆಯಲ್ಲಿ ಕಚ್ಚಿದರೆ, ಈಡೀಸ್ ಈಜಿಪ್ಟೈ ಸೊಳ್ಳೆ ಹಗಲು ವೇಳೆಯಲ್ಲಿ, ಕ್ಯುಲೆಕ್ಸ್ ಸೊಳ್ಳೆ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಕಚ್ಚುವವು,ಆರು ವಾರಗಳ ಜೀವನ ಇರುವ ಸೊಳ್ಳೆ ಮೊದಲು ಮೊಟ್ಟೆಗಳನ್ನು ನೀರು ಇರುವ ತೊಟ್ಟಿ, ಬ್ಯಾರೆಲ್, ಹೊಂಡ, ಟ್ಯಾಂಕ್, ತೆಂಗಿನ ಚಿಪ್ಪು, ಬಾಟಲ್, ಬಕೆಟ್ ಇತ್ಯಾದಿಗಳಲ್ಲಿ ದಿನಕ್ಕೆ 150- 200 ಮೊಟ್ಟೆಗಳನ್ನು ಇಟ್ಟು, ಎರಡು ದಿನಕ್ಕೆ ಮೊಟ್ಟೆ ಹೊಡೆದು ಲಾರ್ವಾ ಹಂತ, ನಂತರ ನಾಲ್ಕು ದಿನ ಪ್ಯೂಪಾ ಹಂತದ ನಂತರ ವಯಸ್ಕ ಸೊಳ್ಳೆಗಳಾಗಿ ಬೆಳೆಯುತ್ತವೆ, ಸೊಳ್ಳೆಗಳು ಜೀವಿಸಲು ರಕ್ತದ ಅವಶ್ಯಕತೆ ಇದ್ದು ಮಾನವರ ರಕ್ತ ಹೀರುವುದರೊಂದಿಗೆ ಕಾಯಿಲೆಗಳನ್ನು ಹರಡಿಸುತ್ತವೆ, ಬಹುತೇಕ ಹೆಣ್ಣು ಸೊಳ್ಳೆಗಳು ರೊಗಗಳನ್ನು ಹರಡಿಸುತ್ತಿವೆ, ಸೊಳ್ಳೆ ಯಾವುದೇ ಆಗಿರಲಿ ಅದರ ಬಗ್ಗೆ ನಿರ್ಲಕ್ಷ ಮಾಡದೇ ಲಾರ್ವಾ ಹಂತದಲ್ಲಿ ನೀರು ಸ್ವಚ್ಚ ಗೊಳಿಸಿದಾದ ಸುಲಭವಾಗಿ ಸಾಯುತ್ತವೆ, ಸೊಳ್ಳೆಗಲಾದ ಮೇಲೆ ಸಾಯುಸುವುದು ಕಷ್ಟ, ಆಗ ಕೀಟ ನಾಶಕ ಸಿಂಪರಣೆ ಮಾಡುವುದಾಗಲಿ, ಅಥವಾ ಮಸ್ಕಿಟೋ ಬ್ಯಾಟ್ ಬಳಸುವುದು, ಸೊಳ್ಳೆ ಕಚ್ಚದಿರಲು ಒಡೋಮಾಸ್ ನಂತಹ ಕ್ರೀಮ್ ಗಳನ್ನು ಬಳಸಬೇಕಾಗುತ್ತದೆ, ಜೈವಿಕವಾಗಿ ಗಪ್ಪಿ ಮತ್ತು ಗ್ಯಾಂಬೂಸಿಯಾ ಲಾರ್ವಾ ನಾಶಕ ಮೀನುಗಳನ್ನು ನಿಂತ ನೀರಿನಲ್ಲಿ ಬಿಡಲಾಗುತ್ತದೆ. ಹಾಗಾಗಿ..

ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಚಿಕ್ಕ ಚಿಕ್ಕ ಮನೆಗಳಲ್ಲಿ ವಾಸ ಮಾಡುತ್ತಾರೆ ಮನೆಯ ಸುತ್ತಮುತ್ತ ನೀರು ಶೇಖರಣೆ ಮತ್ತು ತ್ಯಾಜ್ಯ ವಸ್ತುಗಳನ್ನು ಬಿಸಾಡಿ ಬಿಟ್ಟರುತ್ತಾರೆ ಅಂತಹ ಜಾಗದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ, ರೋಗಗಳ ಹರಡುತ್ತವೆ, ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡಬೇಕು, ಕಾರ್ಖಾನೆಯಲ್ಲಿ ಸಹಾ ನೀರು ನಿಲ್ಲದಂತೆ ನೋಡಿ ಕೊಳ್ಳಿ, ಸೊಳ್ಳೆ ಕಡಿತದಿಂದ ಒಬ್ಬರಿಂದೊಬ್ಬರಿಗೆ ರೋಗಗಳು ಹರಡುತ್ತವೆ, ಕಾಯಿಲೆ ಬಂದು ಚಿಕಿತ್ಸೆ ಪಡೆಯುವದಕ್ಕಿಂತ ಕಾಯಿಲೆ ಬರದಹಾಗೆ ಜಾಗೃತಿ ವಹಿಸುವುದು ಉತ್ತಮ ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಕುರೇಕುಪ್ಪ ಪುರಸಭೆಯ ಮಾಜಿ ಸದಸ್ಯರಾದ ಎಸ್.ಕೆ ಮೆಹಬೂಬ್ ಭಾಷ, ಜಿಂದಾಲ್ ಸಹರಾ ಕಂಪನಿಯ ಕಾರ್ಮಿಕರು,ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣ ಅಧಿಕಾರಿಗಳಾದ ಭಾಗ್ಯಲಕ್ಷ್ಮಿ, ರಿಚರ್ಡ್, ಗ್ರಾಮದ ನಾಗರೀಕರಾದ ನಾಗರಾಜ್, ಗಣೇಶ್, ಮಹೇಂದ್ರ, ಶೀನಪ್ಪ, ಆಶಾ ಕಾರ್ಯಕರ್ತೆಯರಾದ ವೆಂಕಟಲಕ್ಷ್ಮಿ, ವಿಜಯಶಾಂತಿ, ಶ್ರೀದೇವಿ, ರಾಜೇಶ್ವರಿ, ಆಶಾ, ಹುಲಿಗೆಮ್ಮ,ಕಾವೇರಿ, ಪದ್ಮಾ, ಮಂಜುಳಾ, ತೇಜಾ, ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here