ಕಾನೂನು ಗೌರವಿಸಿದರೆ; ಅದು ನಮ್ಮನ್ನು ಗೌರವಿಸುತ್ತದೆ: ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಾಂಗದ ವಿಶ್ವಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಿದೆ: ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಕೆ.ಜಿ.ಶಾಂತಿ.

0
107

ಧಾರವಾಡ: ನ.09:: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಿ, ಜನಸಾಮಾನ್ಯರ ಬದುಕು ಸುಂದರ ಆಗಿಸುವಲ್ಲಿ ಕಾನೂನುಗಳ ಪಾತ್ರ ಮಹತ್ವದ್ದಾಗಿದೆ. ನ್ಯಾಯಾಂಗದ ಸೇವೆಗಳನ್ನು ಅರ್ಹರಿಗೆ, ದುರ್ಬಲರಿಗೆ, ಅಸಹಾಯಕರಿಗೆ ತಲುಪಿಸುವಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇದರ ಕಾರ್ಯಚಟುವಟಿಕೆಗಳಿಂದ ನ್ಯಾಯಾಂಗದ ಮೇಲಿನ ವಿಶ್ವಾಸರ್ಹತೆ ಮತ್ತಷ್ಟು ಹೆಚ್ಚಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಅವರು ಅಭಿಪ್ರಾಯಪಟ್ಟರು. ಅವರು ಇಂದು ಮಧ್ಯಾಹ್ನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ವಿವಿಧ ಇಲಾಖೆಗಳ ಮತ್ತು ಧಾರವಾಡ ವಕೀಲರ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಬೃಹತ್ ಶಿಬಿರ ಉದ್ಘಾಟಿಸಿ, ಮಾತನಾಡಿದರು.

ಕಾನೂನು ಸೇವಾ ಪ್ರಾಧಿಕಾರದ ಮುಖ್ಯ ಉದ್ದೇಶ ಉಚಿತವಾಗಿ ಕಾನೂನು ನೆರವು ನೀಡುವುದು ಮತ್ತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದಾಗಿದೆ. ಎಲ್ಲರಿಗೂ ನ್ಯಾಯ ದೊರಕಿಸುವದಕ್ಕಾಗಿ ಲೋಕ್ ಅದಾಲತ್ ಆರಂಭಿಸಲಾಯಿತು. ಬಡವರಿಗೆ, ಮಹಿಳೆಯರಿಗೆ, ದುರ್ಬಲರಿಗೆ, ಮಕ್ಕಳಿಗೆ ಕಾನೂನು ನೆರವು ನೀಡಲಾಗುತ್ತಿದೆ.

ಉಚಿತವಾಗಿ ಕಾನೂನು ನೆರವು ಕ್ಲಿನಿಕ್ ಗಳನ್ನು ಆರಂಭಿಸಲಾಗಿದೆ. ಮಹಿಳೆಯರನ್ನು ಗೌರವಿಸಿದರೆ ಪ್ರಗತಿ ಹೆಚ್ಚು ಸಾಧ್ಯ. ಮಹಿಳೆಯರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇದರಿಂದ ನಾವು ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ಕಾಣುತ್ತಿದ್ದೇವೆ ಎಂದರು.

ಕಾನೂನು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ. ಕಾನೂನು ಸುವ್ಯವಸ್ಥೆ ಉತ್ತಮ ಸ್ಥಾನದಲ್ಲಿ ಇದ್ದರೆ ಮಾತ್ರ ಪ್ರತಿಯೊಬ್ಬರಿಗೂ ಬದಕು ನೆಮ್ಮದಿಯಿಂದ ಇರುತ್ತದೆ ಎಂದು ಅವರು ಹೇಳಿದರು. ಸರಕಾರದ ಉದ್ದೇಶ ಜನಸಾಮಾನ್ಯರ ಕಲ್ಯಾಣವಾಗಿದೆ. ವಿವಿಧ ಇಲಾಖೆ ಕಾರ್ಯಕ್ರಮಗಳನ್ನು ಅರ್ಹರಿಗೆ, ಜನರಿಗೆ ತಲುಪಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರವೂ ನಿರತವಾಗಿದೆ ಎಂದು ಪಿಡಿಜೆ ಕೆ.ಜಿ.ಶಾಂತಿ ಅವರು ಹೇಳಿದರು.

ಮುಖ್ಯ ಅತಿಥಿಗಳ ಪರವಾಗಿ ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಪೆÇಲೀಸ್ ಪಾಟೀಲ, ಜಿಲ್ಲಾ ಸರ್ಕಾರಿ ವಕೀಲ ಸುನೀಲ ಗುಡಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ.ಸಿ.ಬಸವರಾಜು ವಹಿಸಿದ್ದರು. ಅವರು ಮಾತನಾಡಿ, ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸುವಲ್ಲಿ, ಮನದಟ್ಟು ಮಾಡುವಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಶ್ರಮಿಸುತ್ತಿದೆ. ಅವಿದ್ಯಾವಂತರ, ಬಡವರಿಗೆ, ದುರ್ಬಲರಿಗೆ ಮತ್ತು ಅಸಹಾಯಕರಿಗೆ ಕಾನೂನು ನೆರವು ಸೀಗುವುದು ಸ್ವಾತಂತ್ರ್ಯ ನಂತರದ ಇಷ್ಟು ದಿನಗಳ ನಂತರವೂ ಗಗನ ಕುಸುಮವಾಗುತ್ತಿದೆ. ಈ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಶ್ರೇಷ್ಠ ಕಾರ್ಯವನ್ನು ಮಾಡುತ್ತಿದೆ. ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಜನಸಾಮಾನ್ಯರಿಗೆ ಕಾನೂನು ನೆರವು,ಅರಿವು ನೀಡುವ ಮೂಲಕ ಸಂವಿಧಾನ, ನ್ಯಾಯಾಂಗದ ಶ್ರೇಷ್ಠತೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಂ. ಅವರು ಸ್ವಾಗತಿಸಿದರು. ಮತ್ತು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ವಿವಿಧ ಫಲಾನುಭವಿ ಗುಂಪುಗಳನ್ನು ಗುರುತಿಸಿ, ಸಾವಿರಕ್ಕೂ ಹೆಚ್ಚ ಕಾನೂನು ತಿಳುವಳಿಕೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ.

ಪ್ರತಿಯೊಬ್ಬರ ಮನೆ ಬಾಗಿಲಿಗೆ ಕಾನೂನು ಸೇವೆಗಳ ಪ್ರಾಧಿಕಾರದ ಸೇವೆಗಳನ್ನು ತಲುಪಿಸುವಲ್ಲಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಕಾನೂನು ಕಾರ್ಯಕ್ರಮಗಳ ಅನುμÁ್ಠನದಲ್ಲಿ ಧಾರವಾಡ ಜಿಲ್ಲೆ ತನ್ನದೆ ಆದ ವಿಶೇಷ ಸ್ಥಾನಗಳಿಸಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಲೋಕೇಶ್ ಜಗಲಾಸರ್, ಉಪ ಪೆÇಲೀಸ್ ಆಯುಕ್ತ ಸಾಹೀಲ್ ಬಾಗ್ಲಾ, ಎಸ್.ಪಿ.ಕಚೇರಿ ಕಾನೂನು ಅಧಿಕಾರಿ ಗುರುಶಾಂತಯ್ಯ ಕಲ್ಲಯ್ಯ ಕುರ್ಡಿಕೇರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಟೀಲ ಶಶಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ರೇಖಾ ಡೊಳ್ಳಿನ, ಧಾರವಾಡ ತಹಸಿಲ್ದಾರ ಸಂತೋಷ ಹಿರೇಮಠ,
ಉಪ ನಿರ್ದೇಶಕಿ ಎಚ್.ಎಚ್.ಕೂಕನೂರ ಉಪಸ್ಥಿತರಿದ್ದರು.

ಧಾರವಾಡ ಜಿಲ್ಲಾ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಂಜಯ ಗುಡಗುಡಿ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರುಗಳಾಧ ನಿತೀನರಾವ್, ಮರಿಯಪ್ಪ, ಮಹೇಶ ಹಾಗೂ ಅಮೂಲ ಮತ್ತು ಸಿವಿಲ್ ನ್ಯಾಯಾಧೀಶರಾದ ಗರೀಶ, ನೀಲಂ ರಾವ್, ಮೋಹಿತ, ಇಸ್ಮಾಯಿಲ್, ಕೇಂದ್ರ ಕಾರಾಗೃಹ ಅಧೀಕ್ಷಕ ಎಮ್.ಎ.ಮರಿಗೌಡ, ಶಾಲಾ ಶಿಕ್ಷಣ ಮತ್ತು ಸುಧಾರಣೆ ಇಲಾಖೆಯ ಕ್ಷೇತ್ರಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಗಿರೀಶ ಪದಕಿ ಸೇರಿದಂತೆ ಪ್ಯಾನಲ್ ವಕೀಲರು, ಅರೆ ಕಾನೂನು ಸ್ವಯಂ ಸೇವಕರು, ನ್ಯಾಯವಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯಾಯವಾದಿ ಸೋಮಶೇಖರ್ ಜಾಡರ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಇಲಾಖೆಗಳ ಫಲಾನುಭವಿಗಳು ತಯಾರಿಸಿದ್ದ ವಿವಿಧ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಾಂತಿ ಕೆ.ಜಿ ಅವರು ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕಾನೂನು ಜಾಗೃತಿ ಮೂಡಿಸುವ ನ್ಯಾಯವಾದಿಗಳು ಸ್ವರಚಿತ ಕವನ ವಾಚಿಸಿದರು. ಮತ್ತು ಕಿರುನಾಟಕ ಪ್ರದರ್ಶಿಸಿದರು.

LEAVE A REPLY

Please enter your comment!
Please enter your name here