ಅಂಗನವಾಡಿ ನೌಕರರಿಗೆ ಈ ವರ್ಷದ ಬಜೆಟ್ ನಲ್ಲಿ ಅನ್ಯಾಯ..!! ಗೋಳು ಕೇಳುವವರು ಯಾರು.? ಸಂಡೂರು ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ

0
493

ಸಂಡೂರು:-ಸಂಡೂರುನಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳಿಗೆ ಸ್ಪಂದಿಸದಿರುವ ಬಜೆಟ್ ಅನ್ನು ವಿರೋಧಿಸಿ ಹೆಚ್ಚುವರಿ ಕೆಲಸವನ್ನು ಬಹಿಷ್ಕರಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಇವರಿಂದ ಪ್ರತಿಭಟನೆಯನ್ನು ನಡೆಸಲಾಯಿತು.

AITUC ಸಂಡೂರು ತಾಲೂಕು ಅಧ್ಯಕ್ಷರಾದ ಜಿ ನಾಗರತ್ನಮ್ಮ, ಮತ್ತು ಟಿ. ಕವಿತಾ AITUC ಮುಖಂಡರು ಘೋಷಣೆಗಳನ್ನು ಕೂಗುತ್ತಾ ನಮ್ಮ “ಹಾಯ್ ಸಂಡೂರ್” ಪತ್ರಿಕೆ ಯೊಂದಿಗೆ ಮಾತನಾಡುತ್ತ ಈಗೆ ಹೇಳಿದರು

ಬೇಡಿಕೆಗಳು:-
1) ಸೇವಾ ಜೇಷ್ಠತೆ ಆಧಾರದಲ್ಲಿ-153,25 ಕೋಟಿ
2 )ಮಿನಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ನೇಮಕಾತಿ 6,99 ಕೋಟಿ
3) ಅಂಗನವಾಡಿ ಸಹಾಯಕಿಯರಿಗೆ ಸಂಬಳ ದ ವ್ಯತ್ಯಾಸ ಮತ್ತು-131,42 ಕೋಟಿ
4) ನಿವೃತ್ತಿ ಸೌಲಭ್ಯ 47.82 ಕೋಟಿ ಒಟ್ಟು 339:48
ಮೊತ್ತ ಶಿಫಾರಸು ಮಾಡಲಾಗಿತ್ತು ಈ ಮತ ನೀಡಿದ್ದಾರೆ 1.ಲಕ್ಷ 30 ಸಾವಿರ ಕುಟುಂಬಗಳಿಗೆ ಸಹಾಯವಾಗುತ್ತಿತ್ತು ಆದರೆ ರಾಜ್ಯ ಸರಕಾರ ಈ ಮೂರು ಶಿಫಾರಸುಗಳಲ್ಲಿ ಯಾವುದೇ ಒಂದು ಅಂಶವು ಪರಿಗಣನೇ ಮಾಡಿಲ್ಲ.
5)ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಳ ಮಾಡುವುದು, ದೀರ್ಘ ಸೇವೆ ಸಲ್ಲಿಸಿದವರಿಗೆ ಗೋವಾ ರಾಜ್ಯದ ಮಾದರಿಯನ್ನು (ಮಾರ್ಪಾಟುಗಳೊಂದಿಗೆ) ಜಾರಿ ಮಾಡುವುದು, ತಪ್ಪಿದಲ್ಲಿ ಎಲ್ಲರಿಗೂ ಒಪ್ಪುವಂತಹ ಪ್ರತಿ ವರ್ಷ ಸೇವೆಗೆ ಇಂತಿಷ್ಟು ಮೊತ್ತವೆಂದು ನಿಗದಿಪಡಿಸಿದರೇ ಅವರವರ ಸೇವಾವದಿಗನುಗುಣವಾಗಿ ಸೌಲಭ್ಯ ಸಿಗಲಿದೆ

ಮುಂದಿನ ದಿನಗಳಲ್ಲಿ ಸಂಘಟನೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲು ತಿರ್ಮಾನಿಸಿದೆ ಮಾತ್ರವಲ್ಲದೆ ನಾಳೆಯಿಂದ ಹೆಚ್ಚುವರಿ ಕೆಲಸಗಳಾದ ಈ ಸರ್ವೇ ಆರ್ಡಿಪಿ ಆರ್ ನಿಂದ ಕೊಟ್ಟಿರುವ ಸರ್ವೆ ಬಿಪಿಎಲ್ ಕಾರ್ಡ್ ಆರ್ಸಿಎಸ್ ಸರ್ವೆ ಭಾಗ್ಯಲಕ್ಷ್ಮಿ ಮಾತೃವಂದನಾ ಮಾತೃಶ್ರೀ ಸ್ತ್ರೀಶಕ್ತಿ ಚುನಾವಣಾ ಮುಂತಾದ ಕೆಲಸಗಳು ಬಹಿಷ್ಕರಿಸಲು ಸಂಘಟನೆ ಕಾರ್ಯ ಕೊಟ್ಟಿದೆ ಮಾತ್ರವಲ್ಲದೆ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯನ್ನು ಕೊಡುವ ತನಕ ಅಡುಗೆ ಮಾಡುವುದಿಲ್ಲ ಎಂದು ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಪ್ರತಿಭಟನೆಯನ್ನು ಶಿಶು ಅಭಿವೃದ್ಧಿ ಇಲಾಖೆಯಿಂದ ಪ್ರಾರಂಭಿಸಿ ಮೊದಲಿಗೆ ತಾಲೂಕು ಸಿಡಿಪಿಓ ಪ್ರೇಮ್ ಮೂರ್ತಿ
ಅವರಿಗೆ ಮನವಿಯನ್ನು ಸಲ್ಲಿಸಿ
ಪಟ್ಟಣದ ಪ್ರಮುಖ ಮಾರ್ಗಗಳ ಮೂಲಕ ಸಂಚರಿಸಿ ವೃತ್ತಗಳಲ್ಲಿ ಪ್ರತಿಭಟನೆ ಘೋಷವಾಕ್ಯಗಳನ್ನು ಕೂಗುತ್ತಾ ತಾಲೂಕು ಕಚೇರಿಯ ಮುಂಬಾಗದಲ್ಲಿ ಪೆಂಡಾಲ್ ನ್ನು ಹಾಕಿಕೊಂಡು ಕೆಲ ಸಮಯದವರೆಗೆ ಕಾರ್ಯಕರ್ತೆಯರುಮತ್ತು ಸಹಾಯಕಿಯರು ಒಗ್ಗಟ್ಟಾಗಿ ಒಟ್ಟಾಗಿ ಬಿರುಬಿಸಿಲನ್ನು ಲೆಕ್ಕಿಸದೆ ಪ್ರತಿಭಟನೆಗೆ ಕುಳಿತರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಂಡೂರು ತಾಲೂಕು ತಹಶೀಲ್ದಾರ್ ರಶ್ಮಿ.ಹೆಚ್.ಜಿ.
ಅವರಿಗೆ ಹಕ್ಕೋತ್ತಾಯ ಪತ್ರ ನೀಡಲಾಯಿತು.
ಮುಖ್ಯ ಮಂತ್ರಿಗಳಿಗೆ ಮನವಿ‌ ಪತ್ರವನ್ನು ತಹಶಿಲ್ದಾರ್ ಮೂಲಕ ಸಲ್ಲಿಸಿದರು.

ನಂತರ AITUC ಮುಖಂಡರಾದ ಟಿ.ಕವಿತಾ ಮಾತನಾಡುತ್ತಾ..
ಸರ್ಕಾರ ತಮಗೆ ಸೇವಾ ಹಿರಿಮೆ ಆಧಾರಿತ ವೇತನ ಬಡ್ತಿ ನೀಡಬೇಕು ಸೇರಿದಂತೆ,ವಿವಿಧ ಮುಖ್ಯ ಬೇಡಿಕೆಗಳನ್ನು ಸರ್ಕಾರ ಶೀಘ್ರವೇ ಪರಿಗಣಿಸಿ ನಿರ್ಣಯ ತೆಗೆದುಕೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತಿರುವುದಾಗಿ ತಿಳಿಸಿದರು.
ಈ ಕುರಿತು ಸಕಾರಾತ್ಮಕವಾಗಿ ನಿರ್ಣಯ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು,ಸರ್ಕಾರದ ಪ್ರತಿನಿಧಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮತ್ತು ಸಚಿವೆ ಶಶಿಕಲ ಜೊಲ್ಲೆರವರು ಈ ಹಿಂದೆ ನೀಡಿದ್ದು ಬಜೆಟ್ ಮಂಡನೆಯಲ್ಲಿ ಹುಸಿಯಾಗಿಸಿದ್ದಾರೆ ಎಂದರು.

ಸೇವಕಿಯರ ಗೌರವಧನ ಸರ್ಕಾರವೇ ನಿಗದಿಪಡಿಸಿರುವ ಕನಿಷ್ಠ ವೇತನಕ್ಕಿಂತ ಕಡಿಮೆ ಇದ್ದು, ಇದರಿಂದಾಗಿ ಅಂಗನವಾಡಿ ಸೇವಕಿಯರ ಬದುಕು ಅತ್ಯಂತ ದುಸ್ತರವಾಗಿದೆ,ಈ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರಗಳು ಪಾಲಿಸಿರುವ ವಾರ್ಷಿಕ ವೇತನ ಹೆಚ್ಚಳ ನೀಡದೆ, ಬಜೆಟ್‌ನಲ್ಲಿ ನಮ್ಮ ಬೇಡಿಕೆಗಳ ಕುರಿತು ಯಾವುದೇ ರೀತಿಯಲ್ಲಿ ಸ್ಪಂಧನೆ ನೀಡದಿರುವುದು ಖಂಡನೀಯವಾಗಿದ್ದು.ಗೌರವ ಧನ ತುಂಬಾ ಕಡಿಮೆಯಾಗಿದೆ ಕಾರಣ ನಮ್ಮ ದೀರ್ಘಕಾಲದ ಬೇಡಿಕೆಗಳನ್ನು ತಾವುಗಳು ಮಧ್ಯ ಪ್ರವೇಶಿಸಿ,ಶೀಘ್ರವೇ ಸೂಕ್ತ ನಿರ್ಣಯವನ್ನು ಕೈಗೊಳ್ಳುತ್ತೀರೆಂದು ಭರವಸೆ ಹೊಂದಿದ್ದು,ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ರೀತಿ ಪರಿಹಾರ ಒದಗಿಸಬೇಕೆಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷರಾದ ಜಿ.ನಾಗರತ್ನಮ್ಮ, AITUC ಸಂಡೂರು ತಾಲೂಕು ಘಟಕ. ಜಿ.ಈರಮ್ಮ
ಕಾರ್ಯದರ್ಶಿ, AITUC ಸಂಡೂರು ತಾಲೂಕು ಘಟಕ.
ಮುಖಂಡರುಗಳಾದ…
ಟಿ. ಕವಿತಾ. AITUC ಮುಖಂಡರು
ಎಂ. ಚಂದ್ರಕಲಾ, ಪಿ. ವೆಂಕಟಲಕ್ಷ್ಮೀ,
ಜಿ. ಗಂಗಮ್ಮ, ಎಂ. ಶಶಿಕಲಾ, ಬಿ. ಶಾರದಾ, ಎಚ್. ತಾಯಕ್ಕ, ಮಮತಾ, ವಸೂರಮ್ಮ, ಸಾವಿತ್ರಿ, ಭಾರತಿ, ಮಹಾಲಕ್ಷ್ಮಿ, ಬಸಮ್ಮ, ಲಕ್ಷ್ಮಿ, ಬಿ. ಯಲ್ಲಮ್ಮ, ಎ ಎಂ. ಮಲ್ಲಮ್ಮ, ಸಾವಿತ್ರಿ, ಜಯಂತಿ. ಹಾಗೂ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಸಹಾಯಕಿಯರು
ಪೆಡರೇಷನ್ ಮುಖಂಡರ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ನೂರಾರು ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ:- ಗಂಡುಗಲಿ ಗೋಪಾಲ್

LEAVE A REPLY

Please enter your comment!
Please enter your name here