ಕೊಟ್ಟೂರು ರಸ್ತೆಯಲ್ಲಿ ವಾಹನ ಸವಾರರ ಪರದಾಟ ಗೋಳು ಕೇಳೋರ್ಯಾರು..!?

0
475

ಕೊಟ್ಟೂರು: ಶ್ರೀ ಕ್ಷೇತ್ರ ಕೊಟ್ಟೂರು ಧಾರ್ಮಿಕ ಶೈಕ್ಷಣಿಕ ಪ್ರಸಿದ್ಧವಾಗಿರುವ ಕೊಟ್ಟೂರು ಕ್ಷೇತ್ರವಾಗಿದೆ. ಆದರೆ ಕೊಟ್ಟೂರಿನ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಪಟ್ಟಣದ ಸಂಪೂರ್ಣ ಹಾಳಾಗಿರುವ ಕೂಡ್ಲಿಗಿ ಹರಪನಹಳ್ಳಿ ರಸ್ತೆ ಕಾಮಗಾರಿಕಾ ಆರಂಭಿಸಲು ಮುಂದಾಗಿರುವ ಗುತ್ತಿಗೆದಾರರು ರಸ್ತೆಯಲ್ಲಿ ಡಾಂಬರ್ ಆಗಿರುವ ಕೆಲಸ ಆರಂಭಿಸಿ ಮರುದಿನವೇ ನಿಲ್ಲಿಸಿರುವುದು ರಸ್ತೆ ಕಾಮಗಾರಿ ಶುರುವಿನ ನಿರೀಕ್ಷೆಯನ್ನು ಹುಸಿ ಮಾಡಿದೆ.

ಕೂಡ್ಲಿಗಿ ರಸ್ತೆ ಅಂಬೇಡ್ಕರ್ ನಗರ ಕಾಲೋನಿ ಇಂದ ಹರಪನಹಳ್ಳಿ ರಸ್ತೆಯ ಪ್ರವಾಸಿ ಮಂದಿರವರೆಗಿನ ಲೋಕೋಪಯೋಗಿ ಇಲಾಖೆ ರಸ್ತೆ ಸಂಪೂರ್ಣ ಅದ್ವಾನವಾಗಿ ಗುಂಡಿಗಳಿಂದ ತುಂಬಿದ್ದು. ಅಲ್ಲದೆ ಒಂದು ವಾಹನ ಸಾಗುತ್ತಿದ್ದಂತೆ ಅದರ ಹಿಂದೆ ದೂಳು ಆವರಿಸಿತ್ತು ಈ ರಸ್ತೆ ಕಾಮಗಾರಿಕೆಗಾಗಿ ಡಿಎಂಎಫ್ ನಿಂದ 5.40 ಕೋಟಿ ರೂ. ಮಂಜುರಾಗಿ ಟೆಂಡರ್ ಸಹ ಪೂರ್ಣಗೊಂಡಿದೆ ನವಂಬರ್ ಐದರಂದು ರಸ್ತೆ ಕಾಮಗಾರಿ ಆರಂಭಿಸುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕೆಲಸ ಪ್ರಾರಂಭಿಸಿದ್ದು ಇದರಿಂದ ಪಟ್ಟಣದ ನಾಗರಿಕರಿಗೆ ಅಂತೂ ರಸ್ತೆ ಕಾಮಗಾರಿಕೆ ಅದೃಷ್ಟ ಬಂತು ಅಂತ ಖುಷಿ ವ್ಯಕ್ತಪಡಿಸುತ್ತಿದ್ದರು.

ಪ್ರವಾಸಿ ಮಂದಿರದಿಂದ ಜೆಸ್ಕಾಂ ಕಚೇರಿವರೆಗೆ ಮಾತ್ರ ರಸ್ತೆ ಅಗೆಯಲಾಗಿತ್ತು. ಆದರೆ ಮರು ದಿನವೇ ಕೆಲಸ ನಿಂತು ಹೋಗಿದ್ದು ಇದುವರೆಗೂ ಆರಂಭವಾಗಿಲ್ಲ ಹೊಸ ರಸ್ತೆ ನಿರ್ಮಾಣದ ಭರವಸೆ ಮತ್ತೆ ಹೂಸಿಯಾಗಿದೆ. ಡಿಸೆಂಬರ್ 12ರಂದು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ವಿದ್ದು ಅಷ್ಟೊತ್ತಿಗೆ ರಸ್ತೆ ನಿರ್ಮಾಣವಾಗಬೇಕಿದೆ. ಆದರೆ ಕೆಲಸ ಆರಂಭಿಸಿ ಮತ್ತೆ ನಿಲ್ಲಿಸಿರುವುದು ಭರವಸೆ ನಿರಾಸೆಗೊಳಿಸಿದೆ.

ಈ ಭಾಗದಲ್ಲಿ ಗೌರಿ ಹಬ್ಬದ ವಿಶೇಷ ವಾಗಿರುವುದರಿಂದ ಕೆಲಸ ತೊಡಗುವ ಕಾರ್ಮಿಕರು ಹಬ್ಬಕ್ಕಾಗಿ ತಮ್ಮ ಊರುಗಳಿಗೆ ಹೋಗಿರುವುದರಿಂದ ಕೆಲಸ ಪ್ರಾರಂಭ ಮಾಡುತ್ತೇವೆ.

-ಖಾಜಾಸಾಬ್
ಲೋಕೋಪಯೋಗಿ ಇಲಾಖೆ ಅಧಿಕಾರಿ.

ಬರೀ ಕುಂಟುನಪವನ್ನೇ ಹೇಳಿಕೊಂಡು ಮುಂದೂಡುತ್ತಿರುವ. ಲೋಕೋಪಯೋಗಿ ಅಧಿಕಾರಿಗೆ ಜನರು ಧೂಳು ಕುಡಿದು ಸಾಕಾಗಿದೆ ಎಂದು ಇಡೀ ಶಾಪ ಹಾಕಿದರು.

-ಕೆ ಪ್ರದೀಪ್ ಕುಮಾರ್
ಸಾರ್ವಜನಿಕರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here