ಭಾರತ ರತ್ನ ಪ್ರಶಸ್ತಿ ವಿಜೇತ ಸಿ.ಎನ್.ಆರ್. ರಾವ್ ಹುಟ್ಟು ಹಬ್ಬ..

0
201

ಸಿ.ಎನ್‌.ಆರ್‌ ರಾವ್‌ ಎಂದೇ ಪ್ರಸಿದ್ದರಾಗಿರುವ, ‘ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ (ಜೂನ್ 30, 1934)ವಿಶ್ವವಿಖ‍‍್ಯಾತ ಭಾರತೀಯ ವಿಜ್ಞಾನಿಗಳಲ್ಲೊಬ್ಬರಾಗಿದ್ದಾರೆ. ಪ್ರಸಕ್ತ ಬೆಂಗಳೂರಿನಲ್ಲಿರುವ ಜವಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರಾವ್ ಅವರಿಗೆ 2013 ವರ್ಷದಲ್ಲಿ ಭಾರತದ ಅತ್ಯುನ್ನತ ಗೌರವವಾದ ‘ಭಾರತ ರತ್ನ’ ಪ್ರಶಸ್ತಿ ಸಂದಿದೆ. ಹನುಮಂತ ನಾಗೇಶ್‌ ರಾವ್‌ ಮತ್ತು ನಾಗಮ್ಮ ದಂಪತಿಯ ಮಗನಾದ  ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರರಾವ್ ಅವರು, 1934 ರ ಜೂನ್‌ 30 ರಂದು ಬೆಂಗಳೂರಿನಲ್ಲಿ ಜನಿಸಿದರು. 1951 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿಎಸ್‌ಸಿ ಪದವಿ ಪಡೆದರು. “ನನ್ನ ಮೇಲೆ ಬಹುವಾಗಿ ಪ್ರಭಾವ ಬೀರಿದವರು ಮಹಾನ್‌ ವಿಜ್ಞಾನಿ ಸರ್‌ ಸಿ ವಿ ರಾಮನ್‌ ಅವರು. ನನಗಾಗ 11 ವರ್ಷ. ಬೆಂಗಳೂರಿನಲ್ಲಿ ಕಲಿಯುತ್ತಿದ್ದೆ. ಆಗ ಅವರ ಪ್ರಭಾವಕ್ಕೆ ಒಳಗಾದೆ. ವಿಜ್ಞಾನ ಕಲಿಯಬೇಕು ಎಂಬ ಕನಸು ಮೂಡಿದ್ದು ಅದೇ ಹೊತ್ತಿನಲ್ಲಿ.” ಎನ್ನುತ್ತಾರೆ ಪ್ರೊ. ರಾವ್. ಸ್ನಾತಕೋತ್ತರ ಪದವಿಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ 1953ರಲ್ಲಿ ಪಡೆದರು. 1958ರಲ್ಲಿ ‘ಪರ್ಡ್ಯೂ ವಿಶ್ವವಿದ್ಯಾಲಯ’ದಲ್ಲಿ ಪಿ.ಎಚ್‌.ಡಿ. ಪಡೆದರು. ಅವರು 1959 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ ನಂತರ 1963ರಲ್ಲಿ ಕಾನ್ಪುರದ ಐಐಟಿಗೆ ಸೇರಿದರು. ರಾವ್ ಪ್ರಸ್ತುತ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್‌ಡ್ ರಿಸರ್ಚ್ನಲ್ಲಿ ಪ್ರೊಫೆಸರ್ ಹಾಗೂ ಗೌರವಾಧ್ಯಕ್ಷರಾಗಿದ್ದಾರೆ. ಇವರು ‘ರಸಾಯನ ಶಾಸ್ತ್ರದ ಸಾಲಿಡ್ ಸ್ಟೇಟ್ ಮತ್ತು ಮೇಟಿರಿಯಲ್ ವಿಭಾಗ’ದ ಸಂಶೋಧನೆಗೆ ವಿಶ್ವದಾದ್ಯಂತ ಹೆಸರುಗಳಿಸಿದ್ದಾರೆ. ಪ್ರಧಾನಮಂತ್ರಿಯವರ ವೈಜ್ಞಾನಿಕ ಸಲಾಹ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರೊ.ಸಿ.ಎನ್‌.ಆರ್‌ ರಾವ್‌ ಅವರದು ‘ವಿಜ್ಞಾನ ಕುಟುಂಬ’. ಅವರ ಪತ್ನಿ ಇಂದುಮತಿ ರಾವ್‌ ಈ ಹಿಂದೆ ನಗರದ ಎಂ.ಇ.ಎಸ್‌ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು. ಪ್ರಸ್ತುತ ಅವರು ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ವಿಜ್ಞಾನ ಆಸಕ್ತಿ ಮೂಡಿಸುವ ಕರ‍್ಯದಲ್ಲಿ ತೊಡಗಿದ್ದಾರೆ. ಪುತ್ರ, ಸಂಜಯ್‌ ರಾವ್‌ ಕೂಡ ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುತ್ರಿ, ಸುಚಿತ್ರಾ ರಾವ್‌ ಅವರ ಪತಿ, ಕೆ.ಎನ್‌. ಗಣೇಶ್‌ ಪುಣೆಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ನರ‍್ದೇಶಕರು. ಹಲವಾರು ದ್ವಿಮಿತೀಯ ಕೃತಕ ರಾಸಾಯನಿಕ ವಸ್ತುಗಳನ್ನು ಸಂಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ರಾವ್ ಅತಿವಾಹಕತೆ (ಸೂಪರ್ ಕಂಡಕ್ಟಿವಿಟಿ) ಹಾಗು ನ್ಯಾನೋವಿಜ್ನಾನ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿದ್ದಾರೆ. 42ಕ್ಕೂ ಹೆಚ್ಚು ವೈಜ್ನಾನಿಕ ಪುಸ್ತಕಗಳು ಹಾಗು 1500ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಾವ್ ಬರೆದಿದ್ದಾರೆ. ಇವರ ಜೊತೆ ಕೆಲಸ ಮಾಡಿದ 140ಕ್ಕೂ ಹೆಚ್ಚು ಜನ ಪಿ.ಹೆಚ್.ಡಿ. ಪದವಿ ಗಳಿಸಿದ್ದಾರೆ. ಇವರ ಲೇಖನಗಳನ್ನು ಇದುವರೆಗೂ 40ಸಾವಿರಕ್ಕೂ ಹೆಚ್ಚುಬಾರಿ ಪ್ರಸ್ತಾಪಿಸಲಾಗಿದೆ. ಇವರ ಸಂಶೋಧನಾ ಫಲಿತಾಂಶವನ್ನು ಆಧರಿಸಿ, ಅನೇಕ ರಾಷ್ಟ್ರಗಳು ಹಲವು ಕೈಗಾರಿಕಾ ಉತ್ಪನ್ನಗಳನ್ನು ಪಡೆಯುತ್ತಿವೆ. ರಾವ್ ಅವರು ತಮ್ಮ ಸಂಶೋಧನೆಗೆ ಸ್ವಾಮ್ಯ ಹಕ್ಕುಗಳನ್ನು ಪಡೆಯದೆ ಮುಕ್ತವಾಗಿಟ್ಟಿದ್ದಾರೆ.

ಭಾರತ ಸರ್ಕಾರವು 16 ನವಂಬರ್ 2013 ರಂದು ಇವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಘೋಷಿಸಿತು. ಫೆಬ್ರವರಿ, 4, 2014 ರಂದು ಇವರಿಗೆ ಹಾಗೂ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ರ‍್ಗೆ ರಾಷ್ಟ್ರಪತಿ ಭವನದಲ್ಲಿ ಪ್ರದಾನಮಾಡಲಾಯಿತು.
ಅಮೆರಿಕ ಸಂಯುಕ್ತ ಸಂಸ್ಥಾನ ದ ನ್ಯಾಶನಲ್ ಆಕಾಡೆಮಿ ಆಪ್ ಸೈನ್ಸ್ ಹಾಗು ಅಮೆರಿಕನ್ ಆಕಾಡೆಮಿ ಆಪ್ ರ‍್ಟ್ ಅಂಡ್ ಸೈನ್ಸ್ ನ ಸದಸ್ಯರಾಗದ್ದಾರೆ.
ಲಂಡನ್ನ ರಾಯಲ್ ಸೊಸೈಟಿಯ ಸದಸ್ಯರಾಗಿದ್ದಾರೆ.
ಫ್ರಾನ್ಸ್ ಸರಕಾರದ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಲಾಗಿದೆ.
ಯುನೆಸ್ಕೊ, ಪ್ಯಾರಿಸ್ನಿಂದ ಕೊಡಲಾಗುವ ಆಲ್ಬರ್ಟ್_ಐನ್ಸ್ಟನ್ ಚಿನ್ನದ ಪದಕ ಪಡೆದಿದ್ದಾರೆ.
ಪದ್ಮಶ್ರೀ ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳು ಇವರಿಗೆ ಸಂದಿದೆ.
ಕರ್ನಾಟಕದ ಸರಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನಿತ್ತು ಗೌರವಿಸಿದೆ.
ಇವರಿಗೆ ಈವರೆಗೆ 37 ಗೌರವ ಡಾಕ್ಟರೇಟ್ ನೀಡಲಾಗಿದೆ.

ಗೀತಂ ವಿಶ್ವವಿದ್ಯಾಲಯ ನೀಡುವ ‘ಗೀತಂ ಸಂಸ್ಥಾಪನಾ ಪ್ರಶಸ್ತಿ’ಗೆ ಡಾ.ಸಿ.ಎನ್‌.ಆರ್‌. ರಾವ್‌ ಆಯ್ಕೆಯಾಗಿದ್ದಾರೆ. ಇನ್ನೂ ಅನೇಕ ಪುರಸ್ಕಾರ ಗಳಿಗೆ ಭಾಜನರಾಗಿದ್ದಾರೆ.

ಪುಸ್ತಕಗಳು:

ಅವರು ಅಮೇರಿಕಾಗೆ ಸ್ಥಳಾಂತರಗೊಂಡ ನಂತರ ಪ್ರಕಟಿಸಿದ್ದ ಪುಸ್ತಕಗಳು ಜೆ ಕ್ಲೆಫ್ಫೆ ಜೊತೆ- ವ್ಯತ್ಯಾಸದ ಭಾಗಗಳು ಮತ್ತು ಅದರ ಅನ್ವಯಗಳ ಅಂದಾಜು (1988), ಅಂಕಿಅಂಶ ಮತ್ತು ಸತ್ಯ (1989), ಡಿ ಎನ್ ಶಾನಭಾಗ್ ಜೊತೆ- ಅನ್ವಯಗಳೊಂದಿಗೆ ಸಂಭವನೀಯ ಮಾದರಿಗಳು, ಚೊಕೆಟ್-ಡಿನೈ ರೀತಿಯ ಕ್ರಿಯಾತ್ಮಕ ಸಮೀಕರಣಗಳು ಮತ್ತು ಅದರ ಅನ್ವಯಗಳು (1994), ಎಚ್ ಟೊಟೆಂರ‍್ಗ್ ಜೊತೆ- ಲೀನಿಯರ್ ಮಾದರಿಗಳು, ಕನಿಷ್ಠ ಚೌಕಗಳು ಮತ್ತು ಪರ್ಯಾಯ (1995) ಮತ್ತು ಎಂ ಬಿ ರಾವ್ ಜೊತೆ- ಸಂಖ್ಯಾಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಮ್ಯಾಟ್ರಿಕ್ಸ್ ಬೀಜಗಣಿತದ ಅನ್ವಯಗಳು (1998).

LEAVE A REPLY

Please enter your comment!
Please enter your name here