ಡಣಾಪುರ ಹಾಗೂ ಡಣಾನಾಯಕನಕೆರೆ ಗ್ರಾ.ಪಂ.ಗೆ ಭೇಟಿ ನೀಡಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಶಿಲ್ಪಾನಾಗ್

0
97

ಹೊಸಪೇಟೆ(ವಿಜಯನಗರ).ಡಿ.12: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ 114 ಡಣಾಪುರ ಮತ್ತು ಡಣಾನಾಯಕನಕೆರೆ ಗ್ರಾಮ ಪಂಚಾಯತಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಾದ ಶಿಲ್ಪಾನಾಗ್ ಅವರು ಸೋಮವಾರದಂದು ಭೇಟಿ ನೀಡಿದರು.

ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ವಿಶೇಷಚೇತನ ಕೂಲಿ ಕಾರ್ಮಿಕರಿಗೆ ಉದ್ಯೋಗ ಚೀಟಿಯನ್ನು ವಿತರಣೆ ಮಾತನಾಡಿದರು. ಈ ವೇಳೆ ಮಾತನಾಡಿದ ಅವರು ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ನರೇಗಾ ಯೋಜನೆಯಲ್ಲಿ ಶೇ.50ರಷ್ಟು ಕೆಲಸ, ಆದರೆ ಪೂರ್ಣ ಪ್ರಮಾಣದ ಕೂಲಿ ಸಿಗುವ ಏಕೈಕ ಯೋಜನೆ ಎಂದರೆ ಅದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎಂದು ತಿಳಿಸಿದರು.
ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಒಂದು ದಿನದ ಕೂಲಿಯ ಕುರಿತು ಹಾಗೂ ವೈಯಕ್ತಿಕ ಕಾಮಗಾರಿಗೆ ಒಂದು ಅರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 5ಲಕ್ಷ ರೂ.ಗಳ ತನಕ ವೈಯಕ್ತಿಕ ಕಾಮಗಾರಿಗಳಿಗೆ ನರೇಗಾ ಯೋಜನೆಯಲ್ಲಿ ಅವಕಾಶವಿದೆ ಎಂದು ಹೇಳಿದರು.
ನರೇಗಾ ಯೋಜನೆ ಹಾಗೂ ಎನ್.ಆರ್.ಎಲ್.ಎಂ ಯೋಜನೆಗಳ ವಿವಿಧ ಕಾಮಗಾರಿಗಳನ್ನು ಈ ಸಂದರ್ಭದಲ್ಲಿ ಪರಿಶೀಲಿಸಿದರು.

ನಂತರ ನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡ ಮಣ್ಣಿನ ಇಟ್ಟಿಗಿ ತಯಾರಿಕೆ ಘಟಕಕ್ಕೆ ಭೇಟಿ ನೀಡಿ ಮಣ್ಣಿನ ಇಟ್ಟಿಗೆಗಳ ಗುಣಮಟ್ಟವನ್ನು ಪರಿಶೀಲಿಸಿದ ಆಯುಕ್ತರು ವಿಜಯನಗರ ಜಿಲ್ಲೆಯಲ್ಲಿ ಸಿಇಓ ಅವರ ನೇತೃತ್ವದಲ್ಲಿ ನರೇಗಾ ಯೋಜನೆಯಡಿಯಲ್ಲಿ ಅನೇಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಗುರಿಮೀರಿ ಪ್ರಗತಿ ಸಾಧಿಸಲಾಗುತ್ತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿ.ಪಂ. ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಅವರು ಪೌಷ್ಟಿಕ ಕೈತೋಟದ ಫಲಾನುಭವಿಗಳಿಗೆ ಸಸಿಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಗ್ರಾಮದ ಕೂಲಿ ಕಾರ್ಮಿಕರಿಗೆ ಹಾಗೂ ಸ್ತ್ರೀ ಶಕ್ತಿ ಸಂಘದ ಮಹಿಳಾ ಸದಸ್ಯರಿಗೆ ನರೇಗಾ ಯೋಜನೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಡಣಾನಾಯಕನಕೆರೆಯ ವ್ಯಾಪ್ತಿಯ ಎಕೋ ಪಾರ್ಕ್‍ನಲ್ಲಿ ಪೌಷ್ಟಿಕ ಕೈತೋಟದ ಸಸಿಗಳನ್ನು ಬೇಳೆಸುವುದು ವಿದ್ಯಾಜ್ಯೋತಿ ಸಂಜೀವಿನಿ ಒಕ್ಕೂಟಕ್ಕೆ ನೀಡಿದ್ದು ಈ ಒಕ್ಕೂಟದಲ್ಲಿ 8000 ನುಗ್ಗೆ, 1100 ನಿಂಬೆ, 1100 ಕಾರಿಬೇವು ಸಸಿಗಳನ್ನು ಬೆಳೆಸಿ ಪೌಷ್ಟಿಕ ಕೈತೋಟದ ಫಲಾನುಭವಿಗಳಿಗೆ ಮಾರಾಟ ಮಾಡಲಾಗುವುದು ಎಂದು ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ತಿಮ್ಮಪ್ಪ.ಕೆ, ಹಾಗೂ ಸಹಾಯಕ ಕಾರ್ಯದರ್ಶಿ ಉಮೇಶ್.ಎಂ, ಹೊಸಪೇಟೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ.ವಿ.ರಮೇಶ್, ಹೊಸಪೇಟೆಯ ತಾಲೂಕು ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ಹೆಚ್.ಹನುಮೇಶ್, ಡಾಣಾಪುರ ಗ್ರಾ.ಪಂ ಪಿಡಿಒ, ಗ್ರಾ.ಪಂ. ಅಧ್ಯಕ್ಷೆ ಈಡಿಗರ ಲಕ್ಷ್ಮಿದೇವಿ, ಡಣಾನಾಯಕನಕೆರೆ ಗ್ರಾ.ಪಂ. ಅಧ್ಯಕ್ಷೆ ಅಕ್ಕಮಹಾದೇವಿ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here