ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣೆಗೆ ಜನರ ಸ್ಪಂದನೆ ಉತ್ತಮ; ಡಾ.ಅಕ್ಷಯ್ ಶಿವಪುರ,

0
394

ತಾಲೂಕಿನ ಚೋರುನೂರು ಹೋಬಳಿಯ ತುಂಬರಗುದ್ದಿ ಗ್ರಾಮದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯಿಂದ ಅಸಾಂಕ್ರಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ, ಅಭಾ ಕಾರ್ಡ್ ನೋಂದಣಿ, ಎಚ್.ಐ.ವಿ ಪರೀಕ್ಷೆ, ಕೋವಿಡ್ ವ್ಯಾಕ್ಸಿನೇಷನ್‌, ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ, ಕ್ಷಯರೋಗ ತಪಾಸಣೆ ಹಾಗೂ ಆರೋಗ್ಯದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು,

ಗ್ರಾಮ ವಾಸ್ತವ್ಯದಲ್ಲಿ ಅಹವಾಲು ಸಲ್ಲಿಸಲು ಮತ್ತು ಕಾರ್ಯಕ್ರಮವನ್ನು ನೋಡಲು ಆಗಮಿಸಿದ ಹಲವಾರು ಸಾರ್ವಜನಿಕರು ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆದರು ದೃಷ್ಟಿ ದೋಷ ಉಳ್ಳವರು ಕನ್ನಡಕಗಳನ್ನು ಪಡೆದುಕೊಂಡರು, ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ಪಡೆದರು, ಇಲಾಖೆಯ ಮಾಹಿತಿಗಳನ್ನು ಪಡೆದು ಕೊಂಡರು, ಸಾರ್ವಜನಿಕರ ಸ್ವಯಂ ಪ್ರೇರಿತರಾಗಿ ಬಂದು ತುಂಬ ವಿನಯದಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದು ನಮಗೆಲ್ಲ ಸಂತಸ ತಂದಿದೆ ಎಂದು ಡಾ.ಅಕ್ಷಯ್ ಶಿವಪುರ ಅವರು ತಿಳಿಸಿದರು,

ಹಾಗೇ ಚೋರುನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರಿ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಭರತ್ ಕುಮಾರ್, ಮತ್ತು ಪ್ರಭಾರಿ ತಾಲೂಕು ಅರೋಗ್ಯಾಧಿಕಾರಿಗಳಾದ ಡಾ.ಕುಶಾಲ್ ರಾಜ್ ಅವರು ನೇತೃತ್ವವನ್ನು ವಹಿಸಿಕೊಂಡು ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದಕ್ಕೆ ಅವರಿಗೆ ವಂದನೆಗಳನ್ನು ಅವರು ತಿಳಿಸಿದರು, ಹಾಗೆ ತಾಲೂಕಿನ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಾಧಿಕಾರಿ ಡಾ.ಇಂದ್ರಾಣಿ, ಮತ್ತು ಜಿಲ್ಲಾ ಆರ್.ಸಿ.ಹೆಚ್ ಕಾರ್ಯಕ್ರಮಾಧಿಕಾರಿ ಡಾ.ಅನಿಲ್ ಕುಮಾರ್, ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಅವರು ಬೇಟಿ ನೀಡಿ ಮೆಚ್ಚುಗೆ ಸೂಚಿಸಿ, ಹೀಗೆ ಮುಂದುವರಿಸಿಕೊಂಡು ಹೋಗಿ ಎಂದಿದ್ದು ಮತ್ತಷ್ಟು ಸಂತಸ ತಂದಿದೆ, ಈ ಎಲ್ಲಾ ಶ್ರೇಯಸ್ಸು ಕೇಂದ್ರದ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಂದಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಪಿ.ಹೆಚ್.ಸಿ.ಒ, ಸಿ.ಹೆಚ್.ಒ,ಹೆಚ್.ಐ.ಒ,ನೇತ್ರಾಧಿಕಾರಿ ಮತ್ತು ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು

LEAVE A REPLY

Please enter your comment!
Please enter your name here