ಡಿವೈಎಫ್ಐ ತೋರಣಗಲ್ಲು ಗ್ರಾಮ ಘಟಕದಿಂದ “ಭಗತ್ ಸಿಂಗ್”ರ ಹುಟ್ಟುಹಬ್ಬದ ಆಚರಣೆ

0
97

ಸಂಡೂರು:ಸೆ: ದಿನಾಂಕ 28- 9-2021 ಸಮಯ ಬೆಳಿಗ್ಗೆ 9 ಗಂಟೆ ಸುಮಾರು DYFI ತೋರಣಗಲ್ಲು ಗ್ರಾಮ ಸಮತಿಯು ಗ್ರಾಮದ ಸೂರಿ ಭವನ ಕಛೇರಿ ಮುಂದೆ ವಿದ್ಯಾರ್ಥಿಗಳು ಮತ್ತು ಯುವಜನರು ಸೇರಿಸಿ ಇಂದು ಕ್ರಾಂತಿಕಾರಿ ಭಗತ್ ಸಿಂಗ್ ರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರವನ್ನು ಉದ್ದೇಶಿಸಿ DYFI ತೋರಣಗಲ್ಲು ಗ್ರಾಮ ಘಟಕದ ಅಧ್ಯಕ್ಷರಾದ ಶಿವುರವರು ಇಂದು ದೇಶಾದ್ಯಂತ ಭಗತ್ ಸಿಂಗರ ಜನ್ಮದಿನಾಚರಣೆ ಆಚರಿಸಲಾಗಿದ್ದು ಬಹಳಷ್ಟು ವಿದ್ಯಾರ್ಥಿಗಳಿಗೆ ಮತ್ತು ಯುವಜನರಿಗೆ ಭಗತ್ ಸಿಂಗ್ ಯಾರು..? ಏನು..? ಅಂತ ಅವರು ಮಾಡಿದ ತ್ಯಾಗ ಬಲಿದಾನ ಹೋರಾಟಗಳು ಗೊತ್ತಿಲ್ಲದೆಯಿರುವುದು ಒಂದು ದುರಂತ. ಕಾರಣ ಶಿಕ್ಷಣದ ಪಠ್ಯಪುಸ್ತಕದಲ್ಲಿ ಅವರ ಬಗ್ಗೆ ವಿಚಾರಗಳು ಕೊಡದೆ ಬೇರೆ ವಿಷಯಗಳಿಗೆ ಆದ್ಯತೆ ನೀಡಿದ್ದು ವಿದ್ಯಾರ್ಥಿಗಳು ಭಗತ್ ಸಿಂಗರ ಬಗ್ಗೆ ತಿಳಿಯದಂತಾಗಿದೆ. ಅತ್ಯಂತ ಸಣ್ಣ 6 ವರ್ಷದ ವಯಸ್ಸಿನಲ್ಲಿ ಜಲಿಯನ್ ವಾಲ್ ಬಾಗ್ ಹತ್ಯಾಕಾಂಡ ಒಂದು ಘಟನೆ ಆದರ್ಶವಾಗಿ ಅಂದಿನಿಂದ ದೇಶಕ್ಕಾಗಿ ಹೋರಡಲು ಮುಂದಾಗಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ಬಲಿಕೊಟ್ಟರು ಎಂದು ಹೇಳುತ್ತಾ ಭಗತ್ ಸಿಂಗರ ಬಗ್ಗೆ ಪರಿಚಯ ಮಾಡಿಕೊಟ್ಟರು

DYFI ತಾಲ್ಲೂಕು ಕಾರ್ಯದರ್ಶಿ ಹೆಚ್.ಸ್ವಾಮಿ ರವರು ಮಾತನಾಡಿ ಭಗತ್ ಸಿಂಗರ ಆದರ್ಶಗಳಂತೆ ಈ ದೇಶದ ಮತ್ತು ನಮ್ಮ ನಾಡಿನಲ್ಲಿ ನಡೆಯುವಂತಹ ಅನ್ಯಾಯ ,ಶೋಷಣೆ ಹಾಗೂ ದೌರ್ಜನ್ಯ ಗಳ ವಿರುದ್ಧ ಸಿಡಿದೆಳುವ ಕಣ್ಮಣಿಗಳಾಗಬೇಕು ಎಂದು ಅವೈಜ್ಞಾನಿಕ ನೀತಿಗಳ ಬದಲಾಗಿ ವೈಚಾರಿಕತೆ ಅರಿತು ವೈಜ್ಞಾನಿಕವಾಗಿ ಈ ನಾಡಿನ ಯುವಜನತೆ ಮತ್ತು ವಿದ್ಯಾರ್ಥಿ ಗಳು ಮುಂದಾಗಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ಘಟಕದ ಕ್ರೀಡಾ ಕಾರ್ಯದರ್ಶಿ
ನಾಗಭೂಷಣರವರು ಘೋಷಣೆಗಳನ್ನು ಕೂಗುವ ಜೋತೆಗೆ ನಿರೂಪಿಸಿದರು , DT.ರಮೇಶ, ವೆಬಕುಮಾರಿ, ಪಾರ್ವತಿ, ರವಿ, ಷಣ್ಮುಖ, ಹುಲಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು…

LEAVE A REPLY

Please enter your comment!
Please enter your name here