ಸಂಡೂರು ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ

0
82

ಸಂಡೂರು:ಸೆ:11:ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸೆ.17 ರಂದು ಜರುಗಲಿರುವ ಕಲ್ಯಾಣ ಕರ್ನಾಟಕ ದಿನಾಚರಣೆ, ವಿಶ್ವಕರ್ಮ ಜಯಂತಿ ಹಾಗೂ ಗ್ರಾಮ ವಾಸ್ತವ್ಯದ ಕುಂಡು ಪೂರ್ವಭಾವಿ ಸಭೆ ಜರುಗಿತು.

ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ನಿಜಾಮರ ಅಳ್ವಿಕೆ, ಸೆ.17 ರಂದು ಹೈಕ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಸೇರಿದಂತೆ
ಮಹತ್ವದ ಕ್ಷಣಗಳ ಸ್ಮರಣೆಗಾಗಿ ಕಲ್ಯಾಣ ಕರ್ನಾಟಕ ದಿನವನ್ನು ಆಚರಿಸಲಾಗುತ್ತದೆ. ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ನಿಜಾಮರ ಆಡಳಿತದಲ್ಲಿದ್ದ ಹೈಕ ಭಾಗಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟ ನಿರ್ಧಾರ, ಹೋರಾಟದ ಫಲವಾಗಿ ನಿಜಾಮರ ಆಡಳಿತದಿಂದ ಮುಕ್ತಿ ದೊರೆಯಿತು ಮತ್ತು ಈ ಭಾಗ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿತು ಎಂದರು. ಅ.15 ರ ಸ್ವಾತಂತ್ರ್ಯ ದಿನಾಚರಣೆಯಂತೆ ಕಲ್ಯಾಣ ದಿನಾರಚಣೆಯಂದು / ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ವಿಶ್ವಕರ್ಮ ಜಯಂತಿ ಆಚರಣೆ ಮಾಡಲಾಗುವುದು.
ನಂತರ ತಾಲೂಕಿನ ಸುಶೀಲಾನಗರ ಗ್ರಾ.ಪಂ. ವ್ಯಾಪ್ತಿಯ ವೆಂಕಟಗಿರಿಯಲ್ಲಿ ಗ್ರಾಮ ವಾಸ್ತವ್ಯ ನಡೆಸಲಾಗುತ್ತದೆ. ಈಗಾಗಲೇ ಗ್ರಾಮದಲ್ಲಿ 4 ಜನ ಗ್ರಾಮ ಲೆಕ್ಕಿಗರು ಸಮೀಕ್ಷೆ ನಡೆಸಿ ಸಮಸ್ಯೆಗಳನ್ನು ಪತ್ತೆಹಚ್ಚುತ್ತಿದ್ದಾರೆ ಎಂದರು.

ರೈತ ಸಂಘದ ಶ್ರೀಪಾದ ಸ್ವಾಮಿ ಮಾತನಾಡಿ ರಾಮಗಡದಲ್ಲಿ ಸಾಕಷ್ಟು ಜನ ರೈತರಿದ್ದರೂ ಸರ್ವೇ ಸೆಟ್ಲ್ಮೆಂಟ್ ನಲ್ಲಿ ರೈತರಿಗೆ ಜಮೀನು ಉಳಿಸಿಲ್ಲ ಎಂದು ದೂರಿದರು.

ಕೊರಚರ ಈರಣ್ಣ ಮಾತನಾಡಿ, ಪಟ್ಟಣದ ವೆಂಕಟೇಶ್ವರ ದೇಗುಲ ಸಮೀಪ, ಕೋಳಿ ಫಾರಂ ಸಮೀಪದಲ್ಲಿ ದಶಕಗಳಿಂದ ಉಳುಮೆ ಮಾಡಿದ ರೈತರಿಗೆ ಜಮೀನು ಸಿಕ್ಕಿಲ್ಲ ಎಂದು ಆರೋಪಿಸಿದರು.

ಕಂದಾಯ ಇಲಾಖೆಯ ಡೈಗ್ಲಾಟ್ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ತಿಳಿಸಿದರು. ಸಭೆಗೆ ಗೈರಾದವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದರು.
ಮೈಲೇಶ ಬೇವೂರು, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ, ಸಿಡಿಪಿಒ ಪ್ರೇಮಮೂರ್ತಿ, ಎಡಿಎ ಮಂಜುನಾಥರೆಡ್ಡಿ, ಎಸ್ಟಿ ಇಲಾಖೆಯ ರವಿಕುಮಾರ್, ಪಶುಸಂಗೋಪನೆ ಇಲಾಖೆ ಎಡಿ ಡಾ.ವಲಿಭಾಷಾ, ಡಿವೈಆರ್ ಎಫ್‌ ಒ ರಾಘವೇಂದ್ರ, ರಾ.ಸ.ನ.ಸಂಘದ ಅಧ್ಯಕ್ಷ ಸಿ.ಪರುಶುರಾಮ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು, ವಿಶ್ವಕರ್ಮ ಸಮಾಜದ ಮುಖಂಡರು, ಇತರರು ಇದ್ದರು

LEAVE A REPLY

Please enter your comment!
Please enter your name here