ಅದ್ದೂರಿಯಾಗಿ ನಡೆದ ರಥೋತ್ಸವ; ಸ್ವಚ್ಛತೆ ಮಾಡುವ ಕೆಲಸ ಮಾಡಿದ ಪೌರಕಾರ್ಮಿಕರು

0
131

ಕೊಟ್ಟೂರು ಪಟ್ಟಣದಲ್ಲಿ ಪಟ್ಟಣದ ಆರಾಧ್ಯ ದೈವ ಕ್ಷೇತ್ರನಾಥ ಶ್ರೀ ಗುರು ಕೊಟ್ಟೂರೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆಯಿತು.

ದೂರದ ಊರುಗಳಿಂದ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಆಗಮಿಸಿ ಶ್ರೀಸ್ವಾಮಿಯ ದರ್ಶನ ಪಡೆದು ಧನ್ಯರಾದರು. ರಥೋತ್ಸವ ಮುಗಿದ ನಂತರ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಗಳು ತುಂಬಿದ್ದವು. ಅವುಗಳನ್ನು ಸ್ವಚ್ಛ ಮಾಡಿದ ಪೌರಕಾರ್ಮಿಕರು ಮಾತ್ರ ತಮ್ಮ ಸ್ವಚ್ಛತೆಯ ಕಾರ್ಯದಲ್ಲಿ ಮಗ್ನರಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.

ಇಡೀ ಪಟ್ಟಣದ ಸ್ವಚ್ಛತೆಯ ಜವಾಬ್ದಾರಿಯನ್ನು ಹೊತ್ತ ಇವರು ಬರೀ ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವುದೇ ತಮ್ಮ ಕೆಲಸವೆಂದು ನಂಬಿರುವುದರಿಂದಲೇ ಜಾತ್ರೆ ನಡೆದರೂ ಸಹ ಪಟ್ಟಣದಲ್ಲಿ ಎಲ್ಲಿಯೂ ಅಸ್ತವ್ಯಸ್ತತೆ ಕಂಡುಬರಲಿಲ್ಲ.

ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಹಾಗೂ ಪ್ರಮುಖ ಬೀದಿ ವಾರ್ಡ್ ಗಳಲ್ಲಿ ಬ್ಲೀಚಿಂಗ್ ಪೌಡರ್ ಹಾಗೂ ಫಾಗಿಂಗ್ ಮಾಡಲಾಯಿತು

ಪಟ್ಟಣದ ಸಾರ್ವಜನಿಕರು ತಮ್ಮ ಮನೆಗಳಿಗೆ ಬಂದ ಸಂಬಂಧಿಕರು ಬಂದ ಸಡಗರದಲ್ಲಿ ಸಂತಸದಲ್ಲಿ ಮುಳುಗಿದ್ದರೆ ಪೌರಕಾರ್ಮಿಕರು ಮಾತ್ರ ಕಸಬರಕೆ ಹಿಡಿದು ಪಟ್ಟಣದ ಸ್ವಚ್ಛತೆ ಕಾರ್ಯ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಅಧಿಕಾರಿಗಳು ಹಾಗೂ ಚಂದ್ರಶೇಖರ್. ಪ್ರಕಾಶ್. ಸಿಬ್ಬಂದಿ ವರ್ಗದವರು ಇವರ ಸೇವೆಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟರು.

■ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉತ್ತಮವಾದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಪಟ್ಟಣದ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here