ಉದ್ಘಾಟನೆ ಆಗದೆ ಕೊನೆಗೊಂಡ ವಿಜಯ ಸಂಕಲ್ಪ ಸಮಾವೇಶ.

0
175

ಸಂಡೂರು: ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ವಿಜಯ ಸಂಕಲ್ಪ ಸಮಾವೇಶ ಕಾರ್ಯಕ್ರಮವನ್ನು ಗುರುವಾರ ಸಂಡೂರಿನ ಎಸ್ ಆರ್ ಎಸ್ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟಕರಾಗಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಜ್ಯೋತಿ ಬೆಳಗಿಸುವ ಮೂಲಕ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ ತರಾತುರಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡದೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.ಯಾವುದೆ ಒಂದು ಸಭೆ ಸಂಭ್ರಮ ಪ್ರಾರಂಭವಾಗುವ ಮೊದಲು ದೀಪ ಬೆಳಗಿಸುವ ಮೂಲಕ ಅಥವ ಸಸಿಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಆದರೆ ಈ ಕಾರ್ಯಕ್ರಮದಲ್ಲಿ ಇದ್ಯಾವುದೂ ಕಂಡುಬರಲಿಲ್ಲ

ಬಿಜೆಪಿ ಪಕ್ಷದ ವಿಜಯ ಸಂಕ್ಪಲ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರು ಅಮಿತ್ ಶಾ ಮಾತನಾಡಿ ರಾಜ್ಯದಲ್ಲಿ ಸಂಪೂರ್ಣ ಬಹುಮತದ ಸರ್ಕಾರ ರಚನೆ ಅಗಬೇಕಾದರೆ ನನ್ನ ಜೊತೆ ಕೈ ಜೋಡಿಸಿ, ಸಂಪೂರ್ಣ ಪ್ರಮಾಣದ ಬಹುಮತದ ಸರ್ಕಾರ ಕೊಡಿ, ಈ ಸಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಚನೆ ಆಗಲಿದೆ ಎಂದು ಹೇಳಿದರು.

2008 ರ ಚುನಾವಣೆಯಲ್ಲಿ ಬಿಎಸ್‌ವೈ ನೇತ್ರತ್ವದಲ್ಲಿ ಚುನಾವಣೆಗೆ ಹೋಗಿದ್ದೆವೆ. ಆದ್ರೆ ನಮಗೆ ಸರ್ಕಾರ ರಚನೆ ಮಾಡಲು ಆಗಲಿಲ್ಲಾ, ಆದ್ರೆ ಅಂದು ಕಾಂಗ್ರೆಸ್ ಜೆಡಿಎಸ್ ಸೇರಿ ಸರ್ಕಾರ ರಚನೆ ಮಾಡಿದೆ. ಜೆಡಿಎಸ್‌ಗೆ ನೀವು ಹಾಕುವ ಒಂದೊಂದು ಓಟು ಕಾಂಗ್ರೆಸ್‌ಗೆ ಹೋಗುತ್ತವೆ. ಕಾಂಗ್ರೆಸ್ ಹಾಗು ಜೆಡಿಎಸ್ ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಿವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷ ಒಂದು ತುಕಡೆ ಗ್ಯಾಂಗ್, ಈ ಎರಡು ಪಕ್ಷಕ್ಕೆ ಬಿಟ್ಟು ಓಟ್ ಯಾರಿಗೆ ಹಾಕಬೇಕು. ಬಿಜೆಪಿಗೆ ನೀವು ಓಟ್ ಹಾಕಿದ್ರೆ ಅದು ಮೋದಿ ಶಕ್ತಿ ಮತ್ತಷ್ಟು ಬಲಿಷ್ಠ ಆಗಲಿದೆ. ಮೋದಿ ರಾಮ ಮಂದಿರದ ಶಿಲಾನ್ಯಾಸ ಮಾಡಿದ್ರು. ಪಾಕಿಸ್ತಾನದ ಮನೆ ಒಳಗೆ ಹೋಗಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಶಕ್ತಿ ಇರುವುದು. ನಮ್ಮ ಮೋದಿ ಸರ್ಕಾರಕ್ಕೆ ಮಾತ್ರ ಶಕ್ತಿ ಇದೆ.

ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ಕುರ್ಚಿ ಜಗಳ ಮಾಡುತ್ತಿವೆ. ಒಂದು ಕಡೆ ಡಿಕೆ ಶಿವಕುಮಾರ್ ಮತ್ತೊಂದು ಕಡೆ ಸಿದ್ದರಾಮಯ್ಯ ಜಗಳ ಮಾಡುತ್ತಿದ್ದಾರೆ. ಕರೋನ ಬಂದಾಗ ಪ್ರತಿ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡಿದ್ದು ನಮ್ಮ ಮೋದಿ ಸರ್ಕಾರ ಎಂದರು.

■ಉದ್ಘಾಟನೆ ಭಾಗ್ಯ ಕಾಣದೆ ಕೊನೆಗೊಂಡ ವಿಜಯ ಸಂಕಲ್ಪ ಸಮಾವೇಶ ಕುರಿತು ಕಾರ್ಯಕರ್ತರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ತರಾತುರಿಯಲ್ಲಿ ಕಾರ್ಯಕ್ರಮ ಮಾಡಿದ್ದು ನಮಗೆ ಬೇಸರ ತಂದಿದೆ ಯಾವುದೇ ಒಂದು ಸಭೆ ಸಂಭ್ರಮ ಪ್ರಾರಂಭವಾಗುವ ಮೊದಲು ದೀಪ ಬೆಳಗಿಸುವ ಮೂಲಕ ಅಥವಾ ಸಸಿಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಆದರೆ ಈ ಕಾರ್ಯಕ್ರಮದಲ್ಲಿ ಇದ್ಯಾವುದೂ ಕಂಡುಬರಲಿಲ್ಲ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here