ಸ್ಮಯೋರ್ ಸಂಸ್ಥೆ ಕೇಂದ್ರದ 2020-21 ರ 5 ಸ್ಟಾರ್ (ಫೈವ್‍ಸ್ಟಾರ್) ರೇಟಿಂಗ್ ಪ್ರಶಸ್ತಿಗೆ ಭಾಜನ

0
148

ಸಂಡೂರು:ಜುಲೈ:20:- ತಾಲೂಕಿನ ಸ್ಮಯೋರ್ ಸಂಸ್ಥೆಯ ಎರಡು ಮೈನಿಂಗ್ ಲೀಜ್‍ಗಳಿಗೆ ಕೇಂದ್ರದ 5 ಸ್ಟಾರ್ (ಫೈವ್‍ಸ್ಟಾರ್) ರೇಟಿಂಗ್ ಪ್ರಶಸ್ತಿಗಳು ಲಭಿಸಿವೆ.

ಜುಲೈ 12 2022 ರಂದು ನವದೆಹಲಿಯ ಡಾ.ಬಿ.ಆರ್ ಅಂಬೆಡ್ಕರ್ ಅಂತಾರ್ರಾಷ್ಟೀಯ ಕೇಂದ್ರದಲ್ಲಿ ಭಾರತ ಸರಕಾರದ ಗಣಿ ಸಚಿವಾಲಯವು ನಡೆಸಿದ ಗಣಿ ಮತ್ತು ಖನಿಜಗಳ 6ನೇ ರಾಷ್ಟ್ರೀಯ ಸಮಾವೇಶದಲ್ಲಿ ಸ್ಮಯೋರ್ ಸಂಸ್ಥೆಯ ಎರಡು ಮೈನಿಂಗ್ ಲೀಜ್‍ಗಳಿಗೆ 2020-21 ರ (ಮೈನಿಂಗ್ ಲೀಜ್ ನಂ. 2678 ಮತ್ತು 2679) ಕೇಂದ್ರ ಸರಕಾರದ ಪ್ರತಿಷ್ಠಿತ ಪ್ರಶಸ್ತಿಯಾದ 5 ಸ್ಟಾರ್ (ಫೈವ್ ಸ್ಟಾರ್ ರೇಟಿಂಗ್ ಅವಾರ್ಡ್)ರೇಟಿಂಗ್ ಅವಾರ್ಡ್‍ನ್ನು ನೀಡಿದ್ದು.

ಕೇಂದ್ರ ಗಣಿ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿಯವರು ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಹಿರ್ಜಿ ಘೋರ್ಪಡೆ ಮತ್ತು ಸ್ಮಯೋರ್ ಸಂಸ್ಥೆಯ ಚೀಫ್ ಫೈನಾನ್ಸಿಯಲ್ ಆಫೀಸರ್ ಉತ್ತಮ್ ಕುಮಾರ್ ಬಗೆರಿಯ (ಮೈನಿಂಗ್ ಲೀಜ್ ನಂ. 2678 ರ ಅವಾರ್ಡ್) ಮತ್ತು ಸ್ಮಯೋರ್ ಸಂಸ್ಥೆಯ ಶ್ರೀ ಮೊಹಮ್ಮದ್ ಅಬ್ದುಲ್ ಸಲೀಂ ಡೈರೆಕ್ಟರ್ (ಮೈನ್ಸ್) ಮತ್ತು ಸ್ಮಯೋರ್ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀ ಶ್ರೀಧರ್ ಪರಮೇಶ್ವರ್ ಹೆಗಡೆ ಅವರುಗಳಿಗೆ (ಮೈನಿಂಗ್ ಲೀಜ್ ನಂ. 2679) ಈ ಪ್ರತಿಷ್ಠಿತ ಫೈವ್ ಸ್ಟಾರ್ ರೇಟಿಂಗ್ ಅವಾರ್ಡ್‍ನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರೂ ಸಹ ಉಪಸ್ಥಿತರಿದ್ದರು.ಈ ಪ್ರಶಸ್ತಿಯನ್ನು ಸ್ಮಯೋರ್ ಸಂಸ್ಥೆಯು ಕಳೆದ ಏಳು ವರುಷಗಳಿಂದ ಸತತವಾಗಿ ಪಡೆಯುತ್ತಿದೆ.
ಕೇಂದ್ರ ಗಣಿ ಸಚಿವಾಲಯವು ಸ್ಮಯೋರ್ ಸಂಸ್ಥೆಯ ಕಾರ್ಯಾಡಳಿತ, ವೈಜ್ಞಾನಿಕ ಗಣಿಗಾರಿಕೆ, ಸಾಮಾಜಿಕ ಕಾಳಜಿ, ಪರಿಸರ ಸ್ನೇಹಿ, ಅಭಿವೃದ್ಧಿ ಕಾರ್ಯಗಳು, ಉದ್ಯೋಗ, ಸಂಸ್ಥೆಯು ಉತ್ತಮ ಮಟ್ಟದಲ್ಲಿ ಗಣಿಯನ್ನು ನಡೆಸಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಸ್ಮಯೋರ್ ಸಂಸ್ಥೆಗೆ ಕೇಂದ್ರ ಸರಕಾರವು ಈ 5 ಸ್ಟಾರ್ (ಪಂಚತಾರಾ ಪ್ರಶಸ್ತಿ) ರೇಟಿಂಗ್ ಅವಾರ್ಡ್‍ನ್ನು ನೀಡಿದೆ.

ಸ್ಮಯೋರ್ ಸಂಸ್ಥೆಯು ಕಳೆದ ಏಳು ವರುಷಗಳಿಂದ ಸತತವಾಗಿ ಪಡೆಯುತ್ತಿದ್ದು. ಈ ಬಾರಿ ಸಂಸ್ಥೆಯ ಎರಡು ಮೈನಿಂಗ್‍ಗಳು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿರುವುದು ಒಂದು ವಿಶೇಷ ಮತ್ತು ಇಂಥ ಪ್ರಶಸ್ತಿಗಳು ಸಂಸ್ಥೆಯ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here