30 ವರ್ಷ ಮೇಲ್ಪಪಟ್ಟವರು ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಿ : ಡಾ. ಗೋಪಾಲ್ ರಾವ್,

0
18

ಸಂಡೂರು: ನ:13: ತೋರಣಗಲ್ಲು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ 2023 ರ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಅವರು ನಮ್ಮ ದೇಶ ಮಧುಮೇಹದ ರಾಜಧಾನಿಯಾಗುವ ಕಡೆಗೆ ಮುನ್ನುಗ್ಗುತ್ತಿದೆ, ಮಧುಮೇಹ ಟೈಪ್1 ಅನುವಂಶಿಕವಾಗಿ ಮಕ್ಕಳಲ್ಲಿ ಕಂಡು ಬರುತ್ತದೆ ಇವರಿಗೆ ಇನ್ಸುಲಿನ್ ಕಡ್ಡಾಯವಾಗಿ ತೆಗೆದು ಕೊಳ್ಳಬೇಕಾಗುತ್ತದೆ, ಟೈಪ್ 2 ಮೂವತ್ತು ವರ್ಷ ಮೇಲ್ಪಟ್ಟವರಿಗೆ ಕಂಡುಬರುತ್ತದೆ ಇತ್ತಿಚೀನ ದಿನಗಳಲ್ಲಿ ಆರೋಗ್ಯಕರ ಜೀವನ ಶೈಲಿ ಇಲ್ಲದ ಕಾರಣ ಮತ್ತು ಅತೀ ಅಹಾರ ಸೇವನೆ, ಕರಿದ ಪದಾರ್ಥಗಳ ಸೇವನೆ, ಕ್ರಿಯಾತ್ಮಕ ಚಟುವಟಿಕೆ ಇರದೇ ಒಂದೇ ಕಡೆ ಕುಳಿತು ಕೊಳ್ಳುವುದು, ಬೊಜ್ಜು, ಟಿವಿ ನೋಡುತಾ ಊಟ ಮಾಡುವುದು ಇಂತಹ ಅನೇಕ ಕಾರಣಗಳಿಂದ ಮಧುಮೇಹ ಉಂಟಾಗುತ್ತದೆ, ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು, ಹಿಂದೆ 60-70 ವರ್ಷ ವಯಸ್ಸಿನವರಿಗೆ ಕಂಡು ಬರುತ್ತಿದ್ದ ಮಧುಮೇಹ 30 ರ ಅಸುಪಾಸಿಗೆ ಬಂದು ನಿಂತಿದೆ ಎಂದು ತಿಳಿಸಿದರು,

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಮಧುಮೇಹ ಇದೆ ತಿಳಿದ ನಂತರ ನಿರಂತರ ಚಿಕಿತ್ಸೆ ಚಿಕಿತ್ಸೆ ಪಡೆಯಬೇಕು, ಕೆಲವು ದಿನ ಚಿಕಿತ್ಸೆ ಪಡೆದು ಕೊಂಡ ನಂತರ ಸಕ್ಕರೆ ಅಂಶ ನಾರ್ಮಲ್ ಇದೆ ಎಂದು ಚಿಕಿತ್ಸೆ ನಿಲ್ಲಿಸ ಬಾರದು ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಏರುಪೇರಾಗಿ ಇತರೆ ಅಂಗಾಂಗಳಿಗೆ ತೊಂದರೆ ಉಂಟಾಗುತ್ತದೆ ಮಾತ್ರೆಗಳು ಮತ್ತು ಇನ್ಸುಲಿನ್ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ, ಮತ್ತು ಈ ಎಲ್ಲಾ ಮಾಹಿತಿಯನ್ನು ಜನರಿಗೆ ತಲುಪಿಸುವ ಸಲುವಾಗಿ ಪ್ರತಿವರ್ಷ ನವಂಬರ್ 14 ರಂದು ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು, ನಿತ್ಯ ವ್ಯಾಯಾಮ, ಬಿರುಸಿನ ನಡಿಗೆ, ಯುವಕರು ಸೈಕಲ್ ತುಳಿತ, ಕ್ರಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು,

ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ.ಮಣಿಕುಮಾರ್,ಎ.ಎಸ್.ಐ ಯು.ಮಲ್ಲಯ್ಯ,ಸಮಾಲೋಚಕ ಪ್ರಶಾಂತ್ ಕುಮಾರ್,ಅಧಿಕ್ಷಕ ಹರ್ಷ,ಪ್ರಶಾಂತ್, ಅನ್ಸಾರಿ, ಬಾಸ್ಕರ್,ಇಮ್ರಾನ್,ವೆಂಕಪ್ಪ, ರೋಜಾ, ಶಿವಕುಮಾರ್, ರಾಂಬಾಬು, ರತ್ನಮ್ಮ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here