ಕೆ ಎಸ್ ದಿವಾಕರ್ ಅಸಮಾಧಾನ; ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ

0
560

ಬಿಜೆಪಿ ಹೈ ಕಮಾಂಡ್ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು ಸಂಡೂರಿನಿಂದ ಕೆ.ಎಸ್. ದಿವಾಕರ್ ಅವರ ಹೆಸರು ಅಂತಿಮಗೊಳ್ಳಬಹುದು ಎಂಬ ನಿರೀಕ್ಷೆ ಹೊಂದಲಾಗಿತ್ತು. ಅವರ ಹೆಸರು ಘೋಷಣೆಯಾಗದ ಹಿನ್ನಲೆಯಲ್ಲಿ ದಿವಾಕರ್ ಬೆಂಬಲಿಗರು ಪಕ್ಷದ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಡೂರಿನ ಸ್ಕಂದ ಬಡಾವಣೆಯ
ಅವರ ಕಚೇರಿಯಲ್ಲಿ ಜಮಾಯಿಸಿದ್ದ ಸಾವಿರಾರು ಅಭಿಮಾನಿಗಳು ಪಟ್ಟಣದ ವಿಜಯ ವೃತ್ತಕ್ಕೆ ಆಗಮಿಸಿ ಟೈರ್‌ಗೆ ಬೆಂಕಿ ಹಚ್ಚಿ ಪಕ್ಷದ ಮುಖಂಡರುಗಳಾದ ಕಾರ್ತಿಕೇಯ ಘೋರ್ಪಡೆ, ಶ್ರೀರಾಮುಲು, ನಳಿನ್ ಕುಮಾರ್ ಕಟೀಲ್, ಮುರಾಹರಿಗೌಡ, ಜಿ.ಟಿ ಪಂಪಾಪತಿ ವಿರುದ್ಧ ಘೋಷಣೆ ಕೂಗಿದರು. ನಂತರ ಅಲ್ಲಿಂದ ಮುಖ್ಯರಸ್ತೆಯಲ್ಲಿ ಸಾಗಿ ವಿಶಾಲ್ ಚಿತ್ರಮಂದಿರ ಎದುರುಗಡೆ ಇರುವ ಎಸ್ ಎಲ್ ವಿ ಹಾಲ್‌ನಲ್ಲಿ ಸಭೆ ನಡೆಸಿ ದಿವಾಕರ್ ಅವರಿಗೆ ಪಕ್ಷವು ಟಿಕೆಟ್ ತಪ್ಪಿಸಿದ್ದು, ಇದರಲ್ಲೇನೋ ಒಳ ಸಂಚು ನಡೆದಿದೆ. ಸಂಡೂರಿನಲ್ಲಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ತಮ್ಮ ಬೆಂಬಲಿಗರು ನಡೆಸುತ್ತಿದ್ದ ಸಭೆಗೆ ಆಗಮಿಸಿದ ಕೆ.ಎಸ್ ದಿವಾಕರ್ ಕಾರ್ಯಕರ್ತರನ್ನು ಕುರಿತು
ಮಾತನಾಡುತ್ತಾ ಟಿಕೆಟ್‌ ಕೈ ತಪ್ಪಿದ್ದಕ್ಕೆ ಕಣ್ಣೀರು ಹಾಕಿದರು. ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಕೊಡುವೆ, 2 ದಿನಗಳ ನಂತರ ಕಾರ್ಯಕರ್ತರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವೆ. ಪಕ್ಷೇತರವಾಗಲೀ ಅಥವಾ ಯಾವುದಾದರೂ ಪಕ್ಷದಿಂದಾಗಲಿ ಸ್ಪರ್ಧಿಸುವುದಂತೂ ಖಚಿತ ಕ್ಷೇತ್ರದಲ್ಲಿ 12 ವರ್ಷದಿಂದ ಪಕ್ಷ ಸಂಘಟನೆ ಮಾಡಿರುವೇ ಕಳೆದ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಚುನಾವಣೆ ಪರಿವರ್ತನ ಯಾತ್ರೆ ಸೇರಿದಂತೆ ಅನೇಕ ಜವಬ್ದಾರಿ ಕೆಲಸಗಳನ್ನು ನಿರ್ವಹಿಸಿದ್ದೇನೆ. ಪಕ್ಷದ ಸಂಘಟನೆ ಉದ್ದೇಶಕ್ಕೆ ಮ್ಯಾರಥಾನ್, ಕಬಡ್ಡಿ, ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸಿದ್ದೇನೆ. ಆದಾಗ್ಯೂ ಟಿಕೆಟ್ ಕೈ ತಪ್ಪಿರುವುದು ಬೇಸರ ತಂದಿದೆ ಎಂದು ಅಳಲು ತೋಡಿಕೊಂಡರು.

ನನ್ನನ್ನು ಸಂಡೂರು ಕ್ಷೇತ್ರದಲ್ಲಿ ಹೊರಗಿನವರು ಎಂಬಂತೆ ಬಿಂಬಿಸಲಾಗುತ್ತಿದೆ ನಾನು ಕೂಡಾ ಸ್ಥಳೀಯನೇ ಇದೇ ಜಿಲ್ಲೆಯವನು, ನಾನೇನು ಪಾಕಿಸ್ಥಾನದಿಂದ ಬಂದಿಲ್ಲ ಸಂತೋಷ್ ಲಾಡ್ ಕಲಘಟಗಿಯಲ್ಲಿ, ಅನಿಲ್ ಲಾಡ್ ಬಳ್ಳಾರಿಯಲ್ಲಿ ಸ್ಪರ್ದೆ ಮಾಡಿಲ್ವಾ,? ಹಾಗೇ ನಾನು ಕೂಡಾ ಮಾಡುವೆ. ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡು ಟಿಕೆಟ್ ನ್ನು ಶಿಲ್ಪಾ ರಾಘವೇಂದ್ರ ಅವರಿಗೆ ಕೊಡಲಾಗಿದೆ. ಶಿಲ್ಪಾ ರಾಘವೇಂದ್ರ ಅವರಿಗೆ ಬಿಜೆಪಿಯಲ್ಲಿ ಸದಸ್ಯತ್ವವು ಇಲ್ಲ ಸಿದ್ದಂತಾದ ಪಕ್ಷ ಎಂಬ ಬಿಜೆಪಿಯಿಂದಲೇ ನನಗೆ ಅನ್ಯವಾಗಿದೆ. ಟಿಕೆಟ್ ಮಾರಿಕೊಂಡಿದ್ದಾರೆ ಎಂಬ ಅನುಮಾನ ಬರುತ್ತಿದೆ. ಪಕ್ಷದ ಸರ್ವೆಗಳಲ್ಲಿ ನನ್ನ ಹೆಸರೇ ಬಂದಿದೆಯಾದರು ನನಗೆ ಟಿಕೆಟ್ ಇಲ್ಲ,ಈವರೆಗೆ ಸೌಜನ್ಯಕ್ಕಾದರು ಶ್ರೀರಾಮುಲು ಹಾಗೂ ಇತರ ನಾಯಕರು ನನ್ನನ್ನು ಸಂಪರ್ಕಿಸುವ ಕೆಲಸ ಮಾಡಿಲ್ಲ, ಸಂಡೂರು ಕ್ಷೇತ್ರದ ಜನತೆ ನನ್ನೋದಿಗಿದ್ದು ಜನರೇ ಈ ಬಾರಿ ಉತ್ತರ ಕೊಡಲಿದ್ದಾರೆ ಎಂದರು

ಸಭೆಯಲ್ಲಿ ದಿವಾಕರ್ ಅಭಿಮಾನಿಗಳು ನಿಮ್ಮೊಂದಿಗೆ ನಾವಿದ್ದೇವೆ, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ. ಎಂದು ಬೆಂಬಲ ಸೂಚಿಸಿದರು. ವಿಠಲಾಪುರ ಗ್ರಾಮದ ಸ್ವಾಮಿ ಎಂಬ ಕಾರ್ಯಕರ್ತ ಸಭೆಯಲ್ಲಿಯೇ ಒಂದು ಲಕ್ಷ ರೂಪಾಯಿ ಚೆಕ್‌ ವಿತರಿಸಿ ಚುನಾವಣೆ ವೆಚ್ಚವನ್ನು ದಿವಾಕರ್

ಮುಖಂಡರಾದ ನಾಗರಾಜ್‌, ಅಂಬರೀಶ್, ಹನುಮಂತ ಬಾಳೆಕಾಯಿ ಮಂಜುನಾಥ, ಕುರೆಕುಪ್ಪ ಹನುಮಂತ, ಚೋರನೂರು ಗುರುರಾಜ್, ಯಶವಂತನಗರ ಕಾಶಪ್ಪ ಇದ್ದರು.

LEAVE A REPLY

Please enter your comment!
Please enter your name here