ಹೊಸಪೇಟೆಯ ಕೆ.ಎಸ್.ಪಿ.ಎಲ್ ಕಾಲೇಜಿನಲ್ಲಿ “ಕಾರ್ಗಿಲ್ ವಿಜಯ್ ದಿವಸ್” ಸಂಭ್ರಮಾಚರಣೆ.

0
368

ಹೊಸಪೇಟೆ:-ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಕೆ.ಎಸ್.ಪಿ.ಎಲ್. ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗ್ಗಿತ್ತು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಹವಾಲ್ದಾರ್ ಶ್ರೀ ಟಿ. ಬಸವರಾಜ್ ಮಾಜಿ ಸೈನಿಕರು (ಯಶವಂತನಗರ)ಇವರನ್ನು ಆಹ್ವಾನಿಸಲಾಗಿತ್ತು

ಅವರು ಮಾತನಾಡಿ 3 ಮೇ 1999 ರಿಂದ 26 ಜೂಲೈ 1999 ವರಿಗೂ ಕಾರ್ಗಿಲ್ ಯುದ್ಧ ನಡೆದಿದೆ ಮೊದಲನೇಯದಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಒಂದು ಒಪ್ಪಂದ ಆಗುತ್ತೆ ಚಳಿಗಾಲ ಮುಗಿಯೋವರಿಗೂ ಯಾರು ಸಹ ಇಲ್ಲಿ ಇರಬಾರದು ಎನ್ನುವ ಒಪ್ಪಂದ ಆಗುತ್ತೆ ಕಾರ್ಗಿಲ್ ಎನ್ನುವ ಪ್ರದೇಶ ಚಳಿಗಾಲದಲ್ಲಿ -40° ಸೆಲ್ಸಿಸ್ ಅಷ್ಟು ಶೀತ ತುಂಬಿರುತ್ತೆ ಎಷ್ಟರ ಮಟ್ಟಿಗೆ ಅಂದರೆ ನಮ್ಮ ತಟ್ಟೆಯಲ್ಲಿ ಇರುವ ಆಹಾರ ಮಂಜುಗಡ್ಡೆ ಆಗಿ ಬದಲಾಗಿ ಬಿಡುತ್ತೆ ಅಷ್ಟರಲ್ಲಿ ಮಟ್ಟಿಗೆ ಶೀತವಾಲಯದ ಪ್ರದೇಶ ಕಾರ್ಗಿಲ್, ಪಾಕಿಸ್ತಾನದ ಸೇನೆ ಭಯೋತ್ಪಾದಕರ ವೇಷದಲ್ಲಿ ಕಾರ್ಗಿಲ್ ಸೆಕ್ಟರ್ ಪ್ರವೇಶಿಸಿ ಒಂದ್ ಒಂದೇ ಪ್ರದೇಶವನ್ನು ಅಕ್ರಮಿಸುತ್ತದೆ ಆದರೆ ಕೊನೆಯದಾಗಿ ನಮ್ಮ ಸೇನೆ ಪಾಕಿಸ್ತಾನ ಸೇನೆಯನ್ನು ಸೋಲಿಸಿ ಟೈಗರ್ ಹಿಲ್ ಎನ್ನುವ ಪ್ರದೇಶವನ್ನು ವಶಪಡೆಸಿಕೊಂಡು ನಮ್ಮ ದೇಶದ ಭಾವುಟವನ್ನು ಹರಿಸಿ ಸಂಭ್ರಮಿಸುತ್ತಾರೆ.

ಇದರಲ್ಲಿ ನಮ್ಮ ದೇಶದ 1363 ಸೈನಿಕರು ಗಾಯಗೊಂಡು,543 ಸೈನಿಕರು ಹುತಾತ್ಮರಾಗಿರುತ್ತಾರೆ. ಕಾರ್ಗಿಲ್ ಯುದ್ಧದ ಹೀರೋಗಳು ಕ್ಯಾಪ್ಟನ್ ವಿಕ್ರಂ ಭಾತ್ರ, ರಿಫಲೆಮ್ಯಾನ್ ಸಂಜಯ ಕುಮಾರ್, ಎಲ್.ಕಾರ್ನಲ್ ಮನೋಜ್ ಕುಮಾರ್ ಪಾಂಡೆ ಮತ್ತು ಮುಂತಾದವರು ಎಂದು ಹೇಳಿ ವಿದ್ಯಾರ್ಥಿಗಳಿಗೆ ಕಾರ್ಗಿಲ್ ಯುದ್ಧದ ಬಗ್ಗೆ ಭೋದನೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳದಂತಹ ಶ್ರೀ ಗಿರೀಶ್ ನಾಯಕ, ಪದವಿ ವಿಭಾಗದ ಪ್ರಾಚಾರ್ಯರಾದಂತಹ ಡಾ.ಮೊಹಮ್ಮದ ಫೈಯಜ್ , ಶಿಕ್ಷಕರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ:-
ಸಿದ್ಧಾರ್ಥ್ ಭಜಂತ್ರಿ

LEAVE A REPLY

Please enter your comment!
Please enter your name here