ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ: ಭೀಮಾ ನಾಯ್ಕ್

0
429

ಕೊಟ್ಟೂರು ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿದ್ದು ಪ್ರಮುಖ ಮುಖ್ಯ ರಸ್ತೆ ಮೇನ್ ಬಜಾರ್ ಉಜ್ಜಿನಿ ರಸ್ತೆ ರೇಣುಕಾ ಟಾಕೀಸ್ ಬಸ್ಟಾಂಡ್ ಹತ್ತಿರವರೆಗೂ ರೋಡ್ ಶೋ ನಲ್ಲಿ ಕಾಂಗ್ರೆಸಿಗೆ ಮತಯಾಚನೆ ಕೊಡಿ ಎನ್ನುವ ಮುಖಾಂತರ ಮೆರವಣಿಗೆ ಮಾಡಲಾಯಿತು.

ಬಿಜೆಪಿಯ ಡಬಲ್ ಇಂಜೀನ್ ಸರ್ಕಾರ ಬಡವರನ್ನು ಬರ್ಬಾದ್ ಮಾಡಿವೆ. ಮುಂದಿನ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ಬಡವರ ಜನಸಾಮಾನ್ಯರ ಬದುಕನ್ನು ಬಂಗಾರ ಮಾಡುವಂತೆ ಯೋಜನೆ ಜಾರಿಗೆ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಅಲ್ಲದೆ ನನ್ನನ್ನು ಈ ಕ್ಷೇತ್ರದಿಂದ ಎರಡು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿ ಸೇವೆ ಮಾಡುವ ಜವಾಬ್ದಾರಿ ನೀಡಿದ್ದೀರಿ ಅದೇರೀತಿ ಈ 2023 ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತ್ತು ಹಿರಿಯ ಮುಖಂಡರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here