ಕಾಲೇಜ್ ಲೈಫ್: ಜೀವನದಲ್ಲಿ ಎಂದೂ ಮರೆಯಲಾಗದ ಸವಿ ನೆನಪು.! ಕೊಟ್ಟೂರೇಶ್ವರ ಕಾಲೇಜ್

0
534

ಕೊಟ್ಟೂರು:ಜೂನ್:11:-ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ 1967ರ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಡಾ.ಎಚ್.ಜಿ.ರಾಜ್ ಆಡಿಟೋರಿಯಂ ನಲ್ಲಿ ಸ್ನೇಹ ಸಮ್ಮಿಲನ ಸಮಾರಂಭವನ್ನು ಆಯೋಜಿಸಿದ್ದರು.

ಸಭೆ ಉದ್ಘಾಟಿಸಿದ ಕಾಲೇಜು ಆಡಳಿತ ಮಂಡಳಿ ಅದ್ಯಕ್ಷ ಸಿದ್ದರಾಮ ಕಲ್ಮಠ್ ಮಾತನಾಡಿ, ದೇಶ ವಿದೇಶಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಕಾಲೇಜ್ ಹಾಗೂ ಉಪನ್ಯಾಸಕರನ್ನು ಸ್ಮರಿಸಿ, ಸನ್ಮಾನಿಸಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಕ್ಷಣ ಎಂದರು.

ಪ್ರಾಚಾರ್ಯ ಶಾಂತಮೂರ್ತಿ ಬಿ.ಕುಲಕರ್ಣಿ ಮಾತನಾಡಿ, ನಮ್ಮ ಕಾಲೇಜಿನ ಸುವರ್ಣ ಮಹೋತ್ಸವ ಆಚರಿಸುವ ಈ ಸಂದರ್ಭಕ್ಕೆ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹೆಚ್ಚಿನ ಪ್ರೇರಣೆ ದೊರತಂತಾಯಿತು ಎಂದರು.

ಅಮೇರಿಕಾದ ನಿವಾಸಿ ವಿಜ್ಞಾನಿ ಚಂದ್ರಶೇಖರಪ್ಪ ಮಾತನಾಡಿ, ಸ್ಧಾಪಕ ಪ್ರಚಾರ್ಯ ಎಸ್.ಎಂ.ಸಂಗನಬಸಯ್ಯ ಹಾಗೂ ಬೋಧಕ ಬೋಧಕೇತರ ಸಬ್ಬಂದಿಯ ಶ್ರಮ ಹಾಗೂ ಪ್ರೋತ್ಸಾಹಗಳಿಂದ ನಾವು ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಯಿತು ಎಂದು ಭಾವುಕತನದಿಂದ ಸ್ಮರಿಸಿದರು. ಆಂಜಿನೇಯ, ಹರಾಳು ನಂಜಪ್ಪ, ಸಿ.ಎಚ್.ಎಂ.ಕೊಟ್ರೇಶ್ ಹಳೆಯ ನೆನಪುಗಳನ್ನು ಪರಸ್ಪರ ನೆನಪಿಸಿಕೊಂಡರು.

ಬೆಂಗಳೂರಿನ ರಾಮಕೃಷ್ಣ ಆಶ್ರಮದ ರಾಮಕೃಷ್ಣ ಗುರೂಜಿ ಆಶೀರ್ವಚನ ನೀಡಿದರು. ನಿವೃತ್ತ ಉಪನ್ಯಾಸಕರಾದ ಅಂಕದ್, ರಾಜಶೇಖರಪ್ಪ, ಸುರುಕೋಡ್, ಬಸವರಾಜ್ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯರಾದ ಎಸ್.ಎಂ.ಗುರುಪ್ರಸಾದ್, ಅಡಕಿ ಮಂಜುನಾಥ್ ಪಾಲ್ಗೊಂಡಿದ್ದರು.

ವಿರೂಪಾಕ್ಷಯ್ಯ ಸ್ವಾಗತಿಸಿದರು, ಹೊ.ಮ.ಪಂಡಿತಾರಾಧ್ಯ ನಿರೂಪಿಸಿದರು, ಡಾ.ತಿಮ್ಮಪ್ಪ ಪ್ರಸ್ತಾವಿಕ ಮಾತನಾಡಿದರು, ಕೈಲಾಶ್ ನಾಥ್ ವಂದಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here